Sign In

By signing in or creating an account, you agree with Associated Broadcasting Company's Terms & Conditions and Privacy Policy.

PAK vs AFG, ICC World Cup: ಪಾಕ್​ಗೆ ಮಣ್ಣುಮುಕ್ಕಿಸಿದ ಅಫ್ಘಾನ್: ಖುಷಿಯಲ್ಲಿ ಮೈದಾನದಲ್ಲೇ ರಶೀದ್ ಜೊತೆ ಪಠಾಣ್ ಡ್ಯಾನ್ಸ್

Rashid Khan’s Dance With Irfan Pathan: ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನ ಐತಿಹಾಸಿಕ ಜಯ ಸಾಧಿಸಿದ ಬಳಿಕ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ರಶೀದ್ ಖಾನ್ ಅವರೊಂದಿಗೆ ಮೈದಾನದಲ್ಲಿ ನೃತ್ಯ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

PAK vs AFG, ICC World Cup: ಪಾಕ್​ಗೆ ಮಣ್ಣುಮುಕ್ಕಿಸಿದ ಅಫ್ಘಾನ್: ಖುಷಿಯಲ್ಲಿ ಮೈದಾನದಲ್ಲೇ ರಶೀದ್ ಜೊತೆ ಪಠಾಣ್ ಡ್ಯಾನ್ಸ್
Rashid Khan-Irfan Pathan Dance
Follow us
Vinay Bhat
|

Updated on: Oct 24, 2023 | 7:36 AM

ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಪಾಕಿಸ್ತಾನವನ್ನು (Pakistan vs Afghanistan) ಎಂಟು ವಿಕೆಟ್‌ಗಳಿಂದ ಸೋಲಿಸಿ ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಬಾಬರ್ ಪಡೆಗೆ ಸತತ ಮೂರನೇ ಸೋಲು ನೀಡಿತು. 283 ರನ್​ಗಳ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ, ರಹಮಾನುಲ್ಲಾ ಗುರ್ಬಾಜ್ (65), ಇಬ್ರಾಹಿಂ ಜದ್ರಾನ್ (87) ಮತ್ತು ರಹಮತ್ ಶಾ (77) ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಐತಿಹಾಸಿಕ ಗೆಲುವು ಕಂಡಿತು. ಇದು ಏಕದಿನದಲ್ಲಿ ಅಫ್ಘಾನಿಸ್ತಾನಕ್ಕೆ ಪಾಕಿಸ್ತಾನದ ವಿರುದ್ಧ ಮೊದಲ ಜಯವಾಗಿದೆ. ಈ ಗೆಲುವಿನ ಮೂಲಕ ಅಫ್ಘಾನಿಸ್ತಾನ ಕೂಡ ವಿಶ್ವಕಪ್​ನಲ್ಲಿ ತನ್ನ ಅಭಿಯಾನವನ್ನು ಪುನರುಜ್ಜೀವನಗೊಳಿಸಿತು.

ಏತನ್ಮಧ್ಯೆ, ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ಅಫ್ಘಾನಿಸ್ತಾನದ ಐತಿಹಾಸಿಕ ಗೆಲುವಿನ ನಂತರ ರಶೀದ್ ಖಾನ್ ಅವರೊಂದಿಗೆ ಮೈದಾನದಲ್ಲಿ ನೃತ್ಯ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಪಠಾಣ್ ಅವರು ಬಾಬರ್ ಅಝಂ ನಾಯಕತ್ವವನ್ನು ಟೀಕಿಸಿದ್ದಾರೆ. “ಬಾಬರ್ ಅವರ ನಾಯಕತ್ವವು ವಿಶ್ವಕಪ್​ನಲ್ಲಿ ಅದ್ಭುತ ಎಂಬಂತಿಲ್ಲ” ಎಂದು ಇರ್ಫಾನ್ ಪಠಾಣ್ ಎಕ್ಸ್ ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ
Image
ವಿಶ್ವಕಪ್​ನಲ್ಲಿಂದು ದ. ಆಫ್ರಿಕಾ-ಬಾಂಗ್ಲಾದೇಶ ಮುಖಾಮುಖಿ
Image
PAK vs AFG: ಪಾಕಿಸ್ತಾನ್​ಗೆ ಮಣ್ಣು ಮುಕ್ಕಿಸಿದ ಅಫ್ಘಾನಿಸ್ತಾನ್
Image
Virat Kohli: ಕಿಂಗ್ ಕೊಹ್ಲಿಯ ಅಬ್ಬರಕ್ಕೆ ಸಚಿನ್ ವಿಶ್ವ ದಾಖಲೆ ಉಡೀಸ್
Image
Bishan Singh Bedi: ಭಾರತದ ಲೆಜೆಂಡರಿ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ನಿಧನ

ರಶೀದ್ ಖಾನ್ ಹಾಗೂ ಇರ್ಫಾನ್ ಪಠಾಣ್ ನೃತ್ಯದ ವಿಡಿಯೋ:

ವಿಶ್ವಕಪ್ 2023 ಅನ್ನು ಅಧಿಕೃತ ಪ್ರಸಾರ ಮಾಡುವ ಸ್ಟಾರ್ ಸ್ಪೋರ್ಟ್ಸ್‌ಗಾಗಿ ಇರ್ಫಾನ್ ಪಠಾಣ್ ಪಂದ್ಯದ ನಂತರದ ವಿಶ್ಲೇಷಣೆಯನ್ನು ನೀಡುತ್ತಿದ್ದ ವೇಳೆ ಅಫ್ಘಾನಿಸ್ತಾನ ಆಲ್‌ರೌಂಡರ್ ರಶೀದ್ ಖಾನ್ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಭಾರತದ ಮಾಜಿ ಆಲ್‌ರೌಂಡರ್ ಪಠಾಣ್ ಪಾಕಿಸ್ತಾನ ಸೋಲನ್ನು ಮತ್ತು ಅಫ್ಘಾನ್​ನ ಐತಿಹಾಸಿಕ ಗೆಲುವನ್ನು ಈರೀತಿಯಾಗಿ ವಿಶೇಷವಾಗಿ ಆಚರಿಸಿದರು. ರಶೀದ್ ಖಾನ್, ಮೊಹಮ್ಮದ್ ನಬಿ, ಅಫ್ಘಾನ್ ನಾಯಕ ಸೇರಿದಂತೆ ತಂಡದ ಎಲ್ಲ ಆಟಗಾರರು ಇಡೀ ಮೈದಾನಕ್ಕೆ ಸುತ್ತು ಬಂದು ಚೆಪಾಕ್ ಅಭಿಮಾನಿಗಳಿಗೆ ಧನ್ಯವಾದ ಕೂಡ ತಿಳಿಸಿದರು.

PAK vs AFG ICC World Cup 2023: ಪಾಕ್ ಪಡೆಗೆ ಸೋಲುಣಿಸಿದ ಅಫ್ಘಾನಿಸ್ತಾನ್

ಸೋಲಿನ ಬಳಿಕ ಮಾತನಾಡಿದ ಬಾಬರ್ ಅಝಂ “ಇದು ನಮಗೆ ನೋವುಂಟು ಮಾಡಿದೆ. ನಾವು ಉತ್ತಮ ಮೊತ್ತವನ್ನು ಕಲೆಹಾಕಿದ್ದೆವು. ಆದರೆ, ಬೌಲಿಂಗ್​ನಲ್ಲಿ ಎಡವಿದೆವು, ಮಧ್ಯಮ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ನೀವು ಒಂದು ವಿಭಾಗದಲ್ಲಿ ಉತ್ತಮವಾಗಿಲ್ಲದಿದ್ದರೆ, ಪಂದ್ಯವನ್ನು ಕಳೆದುಕೊಳ್ಳುತ್ತೀರಿ. ನಾವು ಎದುರಾಳಿಯ ರನ್​ಗೆ ಕಡಿವಾಣ ಹಾಕಲಿಲ್ಲ, ಅದು ನಮಗೆ ಹಿನ್ನಡೆಯಾಯಿತು. ಅಫ್ಘಾನ್ನರು ಮೂರು ವಿಭಾಗದಲ್ಲಿ ಆಡಿದ ರೀತಿ ಚೆನ್ನಾಗಿತ್ತು. ಅವರಿಗೆ ಎಲ್ಲಾ ಕ್ರೆಡಿಟ್ ಸಲ್ಲಬೇಕು. ನಾವು ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಉತ್ತಮ ಕ್ರಿಕೆಟ್ ಆಡಲಿಲ್ಲ. ಮುಂದಿನ ಪಂದ್ಯದಲ್ಲಿ ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತೇವೆ,” ಎಂದು ಬಾಬರ್ ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ