ಮೈದಾನಕ್ಕೆ ಡ್ರಿಂಕ್ಸ್ ತಂದು ತಾನೇ ಕುಡಿದ ಇಶಾನ್ ಕಿಶನ್..!
ICC World Cup 2023: ಈ ಬಾರಿಯ ವಿಶ್ವಕಪ್ನಲ್ಲಿ ಇಶಾನ್ ಕಿಶನ್ 2ನೇ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಆಯ್ಕೆಯಾಗಿದ್ದರು. ಇತ್ತ ಕೆಎಲ್ ರಾಹುಲ್ ತಂಡದಲ್ಲಿರುವ ಕಾರಣ ಕಿಶನ್ಗೆ ಅವಕಾಶ ದೊರೆತಿರಲಿಲ್ಲ. ಇದಾಗ್ಯೂ ಡೆಂಘಿ ಕಾರಣ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ಶುಭ್ಮನ್ ಗಿಲ್ ಬದಲಿಯಾಗಿ 2 ಮ್ಯಾಚ್ನಲ್ಲಿ ಇಶಾನ್ ಕಿಶನ್ ಕಣಕ್ಕಿಳಿದಿದ್ದರು.
ಏಕದಿನ ವಿಶ್ವಕಪ್ 2023 ರ ಅಂತಿಮ ಲೀಗ್ ಪಂದ್ಯದಲ್ಲಿ ಭಾರತವು ನೆದರ್ಲೆಂಡ್ಸ್ ಅನ್ನು 160 ರನ್‌ಗಳಿಂದ ಸೋಲಿಸುವ ಮೂಲಕ ದಾಖಲೆಯ ಒಂಬತ್ತನೇ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 4 ವಿಕೆಟ್ ಕಳೆದುಕೊಂಡು 410 ರನ್‌ಗಳ ಬೃಹತ್ ಸ್ಕೋರ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಬ್ಯಾಟ್ ಬೀಸಿದ ನೆದರ್ಲೆಂಡ್ಸ್ ತಂಡವು 47.5 ಓವರ್‌ಗಳಲ್ಲಿ 250 ರನ್‌ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು.
ಈ ಪಂದ್ಯದಲ್ಲಿ ಭಾರತದ ಅಗ್ರ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದ್ದರು. ನಾಯಕ ರೋಹಿತ್ ಶರ್ಮಾ (61) ಹಾಗೂ ಶುಭ್ಮನ್ ಗಿಲ್ (51) ಉತ್ತಮ ಆರಂಭ ಒದಗಿಸಿದ್ದರೆ, ಆ ಬಳಿಕ ಬಂದ ವಿರಾಟ್ ಕೊಹ್ಲಿ (51) ಕೂಡ ಅರ್ಧಶತಕದ ಕೊಡುಗೆ ನೀಡಿದರು.
ಇದಾದ ಬಳಿಕ ಜೊತೆಗೂಡಿದ ಶ್ರೇಯಸ್ ಅಯ್ಯರ್ (128) ಹಾಗೂ ಕೆಎಲ್ ರಾಹುಲ್ (102) ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದರು. ಈ ಭರ್ಜರಿ ಬ್ಯಾಟಿಂಗ್ ನಡುವೆ ಎಲ್ಲರ ಗಮನ ಸೆಳೆದಿದ್ದು ಇಶಾನ್ ಕಿಶನ್.
ಭಾರತೀಯ ಬ್ಯಾಟಿಂಗ್ ಸಮಯದಲ್ಲಿ ಡ್ರಿಂಕ್ಸ್ ಬ್ರೇಕ್ ಇದ್ದಾಗ, ಇಶಾನ್ ಕಿಶನ್ ವಿರಾಟ್ ಕೊಹ್ಲಿಗಾಗಿ ಮೈದಾನದಲ್ಲಿ ಡ್ರಿಂಕ್ಸ್ ತಂದಿದ್ದರು. ಆದರೆ ವಿರಾಟ್ ಕೊಹ್ಲಿಗೆ ಪಾನೀಯ ನೀಡುವ ಬದಲು ಇಶಾನ್ ಕಿಶನ್ ಸ್ವತಃ ಎನರ್ಜಿ ಡ್ರಿಂಕ್ ಅನ್ನು ಕುಡಿಯುತ್ತಿರುವುದು ಕಂಡುಬಂದಿದೆ.
18ನೇ ಓವರ್ ವೇಳೆ ಕಂಡು ಬಂದ ಈ ದೃಶ್ಯದ ಫೋಟೋಗಳು ಇದೀಗ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ಫೋಟೋದಲ್ಲಿ ಇಶಾನ್ ಕಿಶನ್ ವಿರಾಟ್ ಕೊಹ್ಲಿ ಬಳಿ ನಿಂತು ಮೈದಾನದಲ್ಲಿಯೇ ಎನರ್ಜಿ ಡ್ರಿಂಕ್ ಕುಡಿಯುತ್ತಿರುವುದು ಕಾಣಬಹುದು.
“ Pyaas sabko lagti hai.. Gala sabka sukhta hai..” – Ishan Kishan pic.twitter.com/AVhQjvTbkS
— N I T I N (@theNitinWalke) November 12, 2023
ಈ ಚಿತ್ರಕ್ಕೆ ಇದೀಗ ನಾನಾ ರೀತಿಯ ಕಾಮೆಂಟ್ಗಳು ಬರುತ್ತಿದ್ದು, ಡ್ರಿಂಕ್ಸ್ ಬ್ರೇಕ್ ವೇಳೆ ಮೈದಾನಕ್ಕೆ ಬಂದು ಡ್ರಿಂಕ್ಸ್ ಮಾಡಿ ಹೋದ ಮೊದಲ ಆಟಗಾರ ಎಂಬ ದಾಖಲೆ ಇಶಾನ್ ಕಿಶನ್ ಪಾಲಾಗಿದೆ ಎಂದು ಕೆಲವರು ಕಾಲೆಳೆದಿದ್ದಾರೆ.
ಇದನ್ನೂ ಓದಿ: Virat Kohli: ಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆ ಸರಿಗಟ್ಟಿದ ಕಿಂಗ್ ಕೊಹ್ಲಿ
ಇಶಾನ್ಗೆ ಇಲ್ಲ ಚಾನ್ಸ್:
ಈ ಬಾರಿಯ ವಿಶ್ವಕಪ್ನಲ್ಲಿ ಇಶಾನ್ ಕಿಶನ್ 2ನೇ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಆಯ್ಕೆಯಾಗಿದ್ದರು. ಇತ್ತ ಕೆಎಲ್ ರಾಹುಲ್ ತಂಡದಲ್ಲಿರುವ ಕಾರಣ ಕಿಶನ್ಗೆ ಅವಕಾಶ ದೊರೆತಿರಲಿಲ್ಲ. ಇದಾಗ್ಯೂ ಡೆಂಘಿ ಕಾರಣ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ಶುಭ್ಮನ್ ಗಿಲ್ ಬದಲಿಯಾಗಿ 2 ಮ್ಯಾಚ್ನಲ್ಲಿ ಇಶಾನ್ ಕಿಶನ್ ಕಣಕ್ಕಿಳಿದಿದ್ದರು. ಇತ್ತ ಗಿಲ್ ರಿ ಎಂಟ್ರಿಯೊಂದಿಗೆ ಯುವ ಎಡಗೈ ದಾಂಡಿಗ ಇದೀಗ ಟೀಮ್ ಇಂಡಿಯಾ ಆಟಗಾರರಿಗೆ ಡ್ರಿಂಕ್ಸ್ ಒಯ್ಯುವ ಜವಾಬ್ದಾರಿ ಹೊತ್ತಿದ್ದಾರೆ.