ಇಶಾನ್ ಕಿಶನ್ – ಹಾರ್ದಿಕ್ ಪಾಂಡ್ಯ ಅಬ್ಬರಕ್ಕೆ ಹಲವು ದಾಖಲೆಗಳು ನಿರ್ನಾಮ

| Updated By: ಝಾಹಿರ್ ಯೂಸುಫ್

Updated on: Sep 02, 2023 | 10:55 PM

Ishan Kishan-Hardik Pandya: ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಪರ 5ನೇ ವಿಕೆಟ್​ಗೆ ಬರೋಬ್ಬರಿ 138 ರನ್​ಗಳ ಜೊತೆಯಾಟವಾಡಿದರು. ಈ ಜೊತೆಯಾಟದೊಂದಿಗೆ ಈ ಜೋಡಿಯು ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಇಶಾನ್ ಕಿಶನ್ - ಹಾರ್ದಿಕ್ ಪಾಂಡ್ಯ ಅಬ್ಬರಕ್ಕೆ ಹಲವು ದಾಖಲೆಗಳು ನಿರ್ನಾಮ
Hardik Pandya-Ishan Kishan
Follow us on

ಏಷ್ಯಾಕಪ್​ನ ಮೂರನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಇಶಾನ್ ಕಿಶನ್ (Ishan Kishan) ಹಾಗೂ ಹಾರ್ದಿಕ್ ಪಾಂಡ್ಯ (Hardik Pandya) ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಪಾಕಿಸ್ತಾನ್ ವಿರುದ್ಧದ ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್ 81 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ 82 ರನ್ ಬಾರಿಸಿದ್ದರು. ಇನ್ನು 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ 90 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 87 ರನ್​ ಚಚ್ಚಿದರು.

ಈ ಮೂಲಕ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಪರ 5ನೇ ವಿಕೆಟ್​ಗೆ ಬರೋಬ್ಬರಿ 138 ರನ್​ಗಳ ಜೊತೆಯಾಟವಾಡಿದರು. ಈ ಜೊತೆಯಾಟದೊಂದಿಗೆ ಈ ಜೋಡಿಯು ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

  • ಈ ಪಂದ್ಯದಲ್ಲಿ 82 ರನ್​ ಬಾರಿಸುವ ಮೂಲಕ ಏಷ್ಯಾಕಪ್​ನಲ್ಲಿ ಪಾಕಿಸ್ತಾನ್ ವಿರುದ್ಧ ಅತ್ಯಧಿಕ ರನ್ ಬಾರಿಸಿದ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಎಂಬ ದಾಖಲೆ ಇಶಾನ್ ಕಿಶನ್ ಪಾಲಾಗಲಿದೆ. ಇದಕ್ಕೂ ಮುನ್ನ ಈ ದಾಖಲೆ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿತ್ತು. ಧೋನಿ 2008 ರ ಏಷ್ಯಾಕಪ್​ನಲ್ಲಿ ಪಾಕ್ ವಿರುದ್ಧ 72 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.
  • 138 ರನ್​ಗಳ ಜೊತೆಯಾಟದೊಂದಿಗೆ ಏಷ್ಯಾಕಪ್ ಇತಿಹಾಸದಲ್ಲೇ ಭಾರತದ ಪರ 5ನೇ ವಿಕೆಟ್​ಗೆ ಗರಿಷ್ಠ ರನ್ ಪೇರಿಸಿದ ಜೋಡಿ ಎಂಬ ದಾಖಲೆ ಹಾರ್ದಿಕ್ ಪಾಂಡ್ಯ-ಇಶಾನ್ ಕಿಶನ್ ಪಾಲಾಗಿದೆ. 2004 ರಲ್ಲಿ ಶ್ರೀಲಂಕಾ ವಿರುದ್ಧ ರಾಹುಲ್ ದ್ರಾವಿಡ್ – ಯುವರಾಜ್ ಸಿಂಗ್ 133 ರನ್​ಗಳ ಜೊತೆಯಾಟವಾಡಿರುವುದು ಇದುವರೆಗಿನ ದಾಖಲೆಯಾಗಿತ್ತು.
  • ಈ ಪಂದ್ಯದಲ್ಲಿ ಅರ್ಧಶತಕ ಪೂರೈಸುವ ಮೂಲಕ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್​ನಲ್ಲಿ ಸತತ 4 ಹಾಫ್ ಸೆಂಚುರಿ ಸಿಡಿಸಿದ 2ನೇ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ಇಶಾನ್ ಕಿಶನ್ ತಮ್ಮದಾಗಿಸಿಕೊಂಡಿದ್ದರು. ಇದಕ್ಕೂ ಮುನ್ನ 2011 ರಲ್ಲಿ ಧೋನಿ ಈ ಸಾಧನೆ ಮಾಡಿದ್ದರು.
  • ಪಾಕಿಸ್ತಾನ್ ವಿರುದ್ಧ ಐದನೇ ವಿಕೆಟ್​ಗೆ ಅತ್ಯಧಿಕ ರನ್​ಗಳ ಜೊತೆಯಾಟವಾಡಿದ ದಾಖಲೆ ಕೂಡ ಇದೀಗ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಪಾಲಾಗಿದೆ. 2005 ರಲ್ಲಿ ರಾಹುಲ್ ದ್ರಾವಿಡ್ ಹಾಗೂ ಮೊಹಮ್ಮದ್ ಕೈಫ್ ಪಾಕ್ ವಿರುದ್ದ 5ನೇ ವಿಕೆಟ್​ಗೆ 135 ರನ್ ಪೇರಿಸಿದ್ದರು. ಇದೀಗ 138 ರನ್​ಗಳ ಜೊತೆಯಾಟದೊಂದಿಗೆ ಪಾಂಡ್ಯ-ಕಿಶನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಏಷ್ಯಾಕಪ್​ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1

  • ಈ ಪಂದ್ಯದಲ್ಲಿ 81 ರನ್​ ಬಾರಿಸುವ ಮೂಲಕ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್​ನಲ್ಲಿ ಸತತ 4 ಅರ್ಧಶತಕಗಳನ್ನು ಬಾರಿಸಿದ ಭಾರತದ ಅತ್ಯಂತ ಕಿರಿಯ ವಿಕೆಟ್ ಕೀಪರ್ ಎಂಬ ದಾಖಲೆಯನ್ನೂ ಕೂಡ ಇಶಾನ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ 30ನೇ ವಯಸ್ಸಿನಲ್ಲಿ ಸತತ 4 ಅರ್ಧಶತಕ ಬಾರಿಸಿದ ಧೋನಿ ಹೆಸರಿನಲ್ಲಿತ್ತು. ಇದೀಗ 25 ವರ್ಷದ ಇಶಾನ್ ಕಿಶನ್ ಸತತ ನಾಲ್ಕು ಹಾಫ್ ಸೆಂಚುರಿಸಿ ಹೊಸನ ಇತಿಹಾಸ ನಿರ್ಮಿಸಿದ್ದಾರೆ. ಇಶಾನ್ ಕಿಶನ್ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಹ್ಯಾಟ್ರಿಕ್ ಹಾಫ್ ಸೆಂಚುರಿ ಸಿಡಿಸಿದ್ದರು. ಇದೀಗ ಏಷ್ಯಾಕಪ್​ನಲ್ಲೂ ಅರ್ಧಶತಕ ಬಾರಿಸಿ ಈ ವಿಶೇಷ ಸಾಧನೆ ಮಾಡಿದ್ದಾರೆ.

 

 

Published On - 10:52 pm, Sat, 2 September 23