
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 49ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮಾಡಿದ ಫೀಲ್ಡಿಂಗ್ ಪ್ರಮಾದಗಳು ತಂಡಕ್ಕೆ ಭಾರೀ ಹೊಡೆತ ನೀಡಿವೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಓಪನರ್ ಇಶಾನ್ ಕಿಶನ್ ಅವರಿಗೆ ನೀಡಿದ ಸರಣಿ ಜೀವದಾನಗಳು ಪಂದ್ಯದ ಗತಿಯನ್ನೇ ಬದಲಿಸಿದವು. ಅಷ್ಟೇ ಅಲ್ಲದೆ, ಈ ಘಟನೆಯನ್ನು ಹಾಸ್ಯಮಯವಾಗಿ ಬಳಸಿಕೊಂಡ ಕಿಶನ್, ಸಾಮಾಜಿಕ ಜಾಲತಾಣದಲ್ಲಿ ಪರೋಕ್ಷವಾಗಿ ಪಂಜಾಬ್ ತಂಡದ ಕಾಲೆಳೆದಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಬ್ಯಾಟರ್ ಇಶಾನ್ ಕಿಶನ್ ಈ ಪಂದ್ಯದಲ್ಲಿ ಕೇವಲ 32 ಎಸೆತಗಳಲ್ಲಿ 55 ರನ್ ಚಚ್ಚಿದರು. ಆದರೆ ಈ ಇನ್ನಿಂಗ್ಸ್‌ನಲ್ಲಿ ಕಿಶನ್ ಅವರಿಗೆ ಪಂಜಾಬ್ ಕಿಂಗ್ಸ್ ಫೀಲ್ಡರ್‌ಗಳು ಬರೋಬ್ಬರಿ ಮೂರು ಬಾರಿ ಜೀವದಾನ ನೀಡಿದ್ದರು ಎಂಬುದು ವಿಶೇಷ.
ಹೀಗೆ ಮೂರು ಜೀವದಾನ ಪಡೆದ ಇಶಾನ್ ಕಿಶನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ ಕೇವಲ 32 ಎಸೆತಗಳಲ್ಲಿ 55 ರನ್ ಚಚ್ಚಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ಪಂದ್ಯ ಮುಗಿದ ನಂತರ ಇಶಾನ್ ಕಿಶನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪಂದ್ಯದ ಕೆಲವು ಫೋಟೋಗಳನ್ನು ಹಂಚಿಕೊಂಡು, “Catch me, if you can” (ಸಾಧ್ಯವಾದರೆ ನನ್ನನ್ನು ಹಿಡಿಯಿರಿ) ಎಂದು ಕ್ಯಾಪ್ಷನ್ ನೀಡಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಮುಖಭಂಗ: IPL ಆಡ್ತೀವಿ ಎಂದ ಆಸ್ಟ್ರೇಲಿಯಾ ಆಟಗಾರರು!
ಇದು ಪರೋಕ್ಷವಾಗಿ ಪಂಜಾಬ್ ಕಿಂಗ್ಸ್ ತಂಡದವರು ಕೈಬಿಟ್ಟ ಕ್ಯಾಚ್‌ಗಳನ್ನು ಲೇವಡಿ ಮಾಡಿದಂತಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಅಂದರೆ ಇಶಾನ್ ಕಿಶನ್ ಇಲ್ಲಿ ಕ್ಯಾಚ್ ಮಿ ಇಫ್ ಯು ಕ್ಯಾನ್ ಡೈಲಾಗ್ ಬಳಸಿರುವುದು ಕ್ಯಾಚ್ ಬಿಟ್ಟಿರುವುದನ್ನು ಉಲ್ಲೇಖಿಸಿ ಎಂದು ಅಭಿಮಾನಿಗಳು ಪಂಜಾಬ್ ಕಿಂಗ್ಸ್ ತಂಡವನ್ನು ಟ್ರೋಲ್ ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ, ಪಂಜಾಬ್ ಕಿಂಗ್ಸ್ ತಂಡದ ಈ ಫೀಲ್ಡಿಂಗ್ ಪ್ರಮಾದಗಳು ಟಿ20 ಕ್ರಿಕೆಟ್‌ನಲ್ಲಿ ‘ಕ್ಯಾಚಸ್ ವಿನ್ ಮ್ಯಾಚಸ್’ ಎಂಬ ಹಳೆಯ ಮಾತನ್ನು ಮತ್ತೊಮ್ಮೆ ಸಾಬೀತುಪಡಿಸಿವೆ. ಇಶಾನ್ ಕಿಶನ್ ಅವರಿಗೆ ಸಿಕ್ಕ ಜೀವದಾನಗಳು ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದವು. ಮುಂಬರುವ ಪಂದ್ಯಗಳಲ್ಲಿ ಪಂಜಾಬ್ ಈ ತಪ್ಪುಗಳಿಂದ ಪಾಠ ಕಲಿಯುತ್ತದೆಯೇ ಅಥವಾ ಇಂತಹ ಪ್ರಮಾದಗಳು ತಂಡದ ಪ್ಲೇ-ಆಫ್ ಹಾದಿಗೆ ಅಡ್ಡಿಯಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.