Ishan Kishan: ‘ನನ್ನನ್ನು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ..’; ಕೊನೆಗೂ ಮೌನ ಮುರಿದ ಇಶಾನ್ ಕಿಶನ್

Ishan Kishan: ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಹೊರಬಿದ್ದಿರುವ ಇಶಾನ್ ಕಿಶನ್, ಬಹಳ ದಿನಗಳ ನಂತರ ಇದೀಗ ತಾನು ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂದಿರುಗಿದ್ಯಾಕೆ? ಆ ನಂತರ ತಾನು ಎದುರಿಸಿದ ಸವಾಲುಗಳೇನು ಎಂಬುದರ ಬಗ್ಗೆ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

Ishan Kishan: ‘ನನ್ನನ್ನು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ..'; ಕೊನೆಗೂ ಮೌನ ಮುರಿದ ಇಶಾನ್ ಕಿಶನ್
ಇಶಾನ್ ಕಿಶನ್
Follow us
|

Updated on:Jul 08, 2024 | 7:41 PM

ದಕ್ಷಿಣ ಆಫ್ರಿಕಾ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಭಾರತಕ್ಕೆ ವಾಪಸ್ಸಾಗಿದ್ದ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಇಶಾನ್ ಕಿಶನ್ ಸದ್ಯ ಟೀಂ ಇಂಡಿಯಾದಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. 2023-24ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾದ ತಂಡದಲ್ಲಿ ಕಾಣಿಸಿಕೊಂಡಿದ್ದ ಇಶಾನ್ ಕಿಶನ್ ಇದೀಗ ತಾನು ಮಾಡಿಕೊಂಡ ಎಡವಟ್ಟಿನಿಂದ ತಂಡದಲ್ಲಿ ಅವಕಾಶ ಸಿಗುವ ಅನುಮಾನದಲ್ಲೇ ದಿನಗಳನ್ನು ದೂಡುತ್ತಿದ್ದಾರೆ. ಒಂದು ಸಮಯದಲ್ಲಿ ಭಾರತ ತಂಡದ ಭವಿಷ್ಯದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದ ಇಶಾನ್ ಕಿಶನ್, ಬಿಸಿಸಿಐ ನೀಡಿದ ಸೂಚನೆಗೂ ಬೆಲೆ ಕೂಡಲಿಲ್ಲ. ಇತ್ತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನೀಡಿದ ಸಲಹೆಯನ್ನು ಪರಿಗಣಿಸಲಿಲ್ಲ. ಪರಿಣಾಮವಾಗಿ ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಹೊರಬಿದ್ದಿರುವ ಇಶಾನ್ ಕಿಶನ್, ಬಹಳ ದಿನಗಳ ನಂತರ ಇದೀಗ ತಾನು ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂದುರುಗಿದ್ಯಾಕೆ? ಆ ನಂತರ ತಾನು ಎದುರಿಸಿದ ಸವಾಲುಗಳೇನು ಎಂಬುದರ ಬಗ್ಗೆ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ದೇಶೀ ಕ್ರಿಕೆಟ್ ಆಡದ ಕಿಶನ್

ವಾಸ್ತವವಾಗಿ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಇಶಾನ್ ಕಿಶನ್ ಅವರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಆದರೆ ಕಿಶನ್ ಇದ್ದಕ್ಕಿದ್ದಂತೆ ತಂಡವನ್ನು ತೊರೆದು ತವರಿಗೆ ವಾಪಸ್ಸಾಗಿದ್ದರು. ಆ ಬಳಿಕ ಈ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ನಂತರ ಕಿಶನ್ ಮತ್ತೆ ಟೀಂ ಇಂಡಿಯಾವನ್ನು ಸೇರಲು ಬಯಸಿದರೆ ಅವರು ದೇಶೀ ಕ್ರಿಕೆಟ್ ಆಡಬೇಕೆಂದು ಆಗಿನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದರು. ಹಾಗೆಯೇ ಬಿಸಿಸಿಐ ಕೂಡ ಕಿಶನ್, ಮಂಡಳಿಯ ನಿಯಮಗಳನ್ನು ಪಾಲಿಸಬೇಕು ಎಂಬ ಎಚ್ಚರಿಕೆ ನೀಡಿತ್ತು. ಆದರೆ ಕಿಶನ್ ದೇಶೀ ಕ್ರಿಕೆಟ್​ನೂ ಆಡಲಿಲ್ಲ. ಇತ್ತ ಬಿಸಿಸಿಐ ಸೂಚನೆಯನ್ನು ಪಾಲಿಸಲಿಲ್ಲ. ಪರಿಣಾಮವಾಗಿ ಅವರನ್ನು ಕೇಂದ್ರ ಗುತ್ತಿಗೆಯ ಜೊತೆಗೆ ಟೀಂ ಇಂಡಿಯಾದಿಂದಲೂ ಹೊರಗಿಡಲಾಯಿತು.

ಅದರಲ್ಲಿ ಯಾವುದೇ ಅರ್ಥವಿರಲಿಲ್ಲ

ಇದೀಗ ಅಂದಿನ ಘಟನೆಯ ಬಗ್ಗೆ ಮೌನಮುರಿದಿರುವ ಕಿಶನ್, ‘ಹೌದು ನಾನು ವಿರಾಮ ತೆಗೆದುಕೊಂಡೆ. ಅದು ಕ್ರಿಕೆಟ್​ನಲ್ಲಿ ಸರ್ವೆ ಸಾಮಾನ್ಯ ಎಂದು ನಾನು ಭಾವಿಸುತ್ತೇನೆ. ತಂಡದಲ್ಲಿ ಪುನರಾಗಮನ ಮಾಡಬೇಕಾದರೆ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕೆಂಬುದು ನಿಯಮ. ದೇಶೀಯ ಕ್ರಿಕೆಟ್ ಆಡುವುದು ನನಗೆ ತುಂಬಾ ವಿಭಿನ್ನವಾಗಿತ್ತು ಏಕೆಂದರೆ ಅದರಲ್ಲಿ ಯಾವುದೇ ಅರ್ಥವಿರಲಿಲ್ಲ. ಏಕೆಂದರೆ ನಾನು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿ ನನಗೆ ಆಡಲು ಇಷ್ಟವಿರಲಿಲ್ಲ.

ನನಗೆ ಹುಷಾರಿರಲಿಲ್ಲ

ಇನ್ನು ಭಾರತ ತಂಡದಿಂದ ಕೈಬಿಡಲಾಗಿರುವ ಬಗ್ಗೆ ಮತ್ತು ಕೇಂದ್ರ ಒಪ್ಪಂದದಿಂದ ಹೊರಗಿಟ್ಟಿರುವ ಬಗ್ಗೆ ಮಾತನಾಡಿರುವ ಇಶಾನ್, ‘ಇದು ನನಗೆ ತುಂಬಾ ನಿರಾಶಾದಾಯಕವಾಗಿದೆ. ಎಲ್ಲವೂ ಚೆನ್ನಾಗಿದೆ ಎಂದು ನಾನು ಹೇಳಲು ಬಯಸುವುದಿಲ್ಲ. ಆ ಸಮಯ ನನಗೆ ಒಳ್ಳೆಯದಾಗಿರಲಿಲ್ಲ. ನನಗೇಕೆ ಹೀಗಾಯಿತು? ಏನಾಯಿತು ಎಂಬುದು ನನ್ನ ಮನಸ್ಸಿನಲ್ಲಿ ಸದಾ ಓಡುತ್ತಿತ್ತು. ಅದರಲ್ಲೂ ನಾನು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವಾಗ ಇದೆಲ್ಲವೂ ಸಂಭವಿಸಿತು ಎಂಬುದು ಬೇಸರದ ಸಂಗತಿ. ಪ್ರಯಾಣದ ಸಮಯದಲ್ಲಿ ನನಗೆ ಆಯಾಸವಾಗುತ್ತಿತ್ತು. ನನಗೆ ಹುಷಾರಿರಲಿಲ್ಲ. ಅದಕ್ಕಾಗಿ ನಾನು ದಕ್ಷಿಣ ಆಫ್ರಿಕಾ ಪ್ರವಾಸದಿಂದ ಬ್ರೇಕ್ ಪಡೆದು ಭಾರತಕ್ಕೆ ವಾಪಸ್ಸಾದೆ. ಆದರೆ ನನ್ನ ಕುಟುಂಬ ಮತ್ತು ಆಪ್ತರನ್ನು ಹೊರತುಪಡಿಸಿ ಯಾರೂ ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ನನಗೆ ಬೇಸರವಾಗಿದೆ.

ಕುಟುಂಬ ನನಗೆ ಬೆಂಬಲವಾಗಿ ನಿಂತಿತು

ಆದರೆ ನಾನು ವಿರಾಮ ಪಡೆದುಕೊಂಡಾಗ ನನ್ನ ಕುಟುಂಬ ನನಗೆ ಬೆಂಬಲವಾಗಿ ನಿಂತಿತು. ಹೊರಗಿನವರು ಹೇಳುವ ವಿಷಯಗಳನ್ನು ಆಟಗಾರನಾಗಿ ನಿಭಾಯಿಸಬಲ್ಲೆ. ಆದರೆ ನಿಮ್ಮ ಪೋಷಕರು ಅದನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದು ನಿಮಗೆ ಒತ್ತು ನೀಡುತ್ತದೆ. ಆದರೆ ಆ ಸಮಯದಲ್ಲಿ ನನ್ನ ಕುಟುಂಬ ಸದಸ್ಯರು ನನಗೆ ತುಂಬಾ ಬೆಂಬಲ ನೀಡಿದರು. ಅವರು ನನ್ನನ್ನು ಮತ್ತು ನನ್ನ ನಿರ್ಧಾರಗಳನ್ನು ಬೆಂಬಲಿಸಿದರು. ನನಗೆ ಹುಷಾರಿಲ್ಲ ಎಂದು ಅವರಿಗೆ ಅರ್ಥವಾಯಿತು. ಅವರು ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದರು. ಹೀಗಾಗಿ ಅವರು ನನ್ನ ನಿರ್ಧಾರವನ್ನು ಎಂದಿಗೂ ಪ್ರಶ್ನಿಸಲಿಲ್ಲ ಮತ್ತು ನನ್ನನ್ನು ಒಂಟಿಯಾಗಿ ಬಿಡಲಿಲ್ಲ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:39 pm, Mon, 8 July 24

ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು