Shubman Gill: ಮೂರನೇ ಟಿ20 ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಶುಭ್‌ಮನ್ ಗಿಲ್ ಕೆನ್ನೆಗೆ ಬಾರಿಸಿದ ಇಶಾನ್ ಕಿಶನ್: ವಿಡಿಯೋ
India vs New Zealand: ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಬಳಿಕ ಶುಭ್‌ಮನ್ ಗಿಲ್ ಡ್ರೆಸ್ಸಿಂಗ್ ರೂಮ್ನಲ್ಲಿ ವಿಡಿಯೋವೊಂದನ್ನು ಮಾಡಿದ್ದಾರೆ. ಈ ವೀಡಿಯೊದಲ್ಲಿ ಇಶಾನ್ ಕಿಶನ್ ''ನೀವು ಚುರುಕಾಗಿರಬೇಕು ಮತ್ತು ಉತ್ಸಾಹದಿಂದ ಇರಬೇಕು'' ಎಂದು ಗಿಲ್‌ಗೆ ಕೋಪದಿಂದ ಹೇಳುತ್ತಾರೆ.
ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಟಿ20 ಸರಣಿ ಮುಕ್ತಾಯಗೊಂಡಿದೆ. 2-1 ಅಂಕಗಳ ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡ ಟೀಮ್ ಇಂಡಿಯಾ ವಿಶೇಷ ಸಾಧನೆ ಮಾಡಿತು. ಅಹ್ಮದಾಬಾದ್ನಲ್ಲಿ ನಡೆದ ನಿರ್ಣಾಯಕ ಮೂರನೇ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಡೆಯಿಂದ ರನ್ ಮಳೆಯೇ ಸುರಿಯಿತು. ಶುಭ್‌ಮನ್ ಗಿಲ್ (Shubman Gill) ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ರಾಹುಲ್ ತ್ರಿಪಾಠಿ ಹಾಗೂ ಹಾರ್ದಿಕ್ ಪಾಂಡ್ಯ ಕೂಡ ಬ್ಯಾಟಿಂಗ್ನಲ್ಲಿ ಉತ್ತಮ ಕೊಡುಗೆ ನೀಡಿದರು. ಪರಿಣಾಮ ಟೀಮ್ ಇಂಡಿಯಾ 168 ರನ್ಗಳ ಅಂತರದಲ್ಲಿ ಅಮೋಘ ಗೆಲುವು ಕಂಡಿತು. ಪಂದ್ಯ ಮುಗಿದ ಬಳಿಕ ಭಾರತದ ಡ್ರೆಸ್ಸಿಂಗ್ ರೂಮ್ನಲ್ಲಿ ವಿಶೇಷ ಘಟನೆಯೊಂದು ನಡೆದಿದೆ. ಶುಭ್‌ಮನ್ ಗಿಲ್, ಇಶಾನ್ ಕಿಶನ್ (Ishan Kishan) ಹಾಗೂ ಯುಜ್ವೇಂದ್ರ ಚಹಲ್ ವಿಡಿಯೋವೊಂದು ಮಾಡಿದ್ದು, ಇದರಲ್ಲಿ ಕಿಶನ್ ಅವರು ಗಿಲ್‌ಗೆ ಕಪಾಳಮೋಕ್ಷ ಮಾಡಿದ್ದಾರೆ.
ಗಿಲ್ ಮೂರನೇ ಟಿ20 ಪಂದ್ಯದಲ್ಲಿ ಎಲ್ಲರ ಗಮನ ಸೆಳೆದರು. ಮೂರೂ ಫಾರ್ಮೆಟ್ನಲ್ಲಿ ಶತಕ ಸಿಡಿಸಿದ ಆಟಗಾರ ಎಂಬ ಸಾಧನೆ ಮಾಡಿದರು. ಕೇವಲ 63 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 12 ಫೋರ್ನೊಂದಿಗೆ ಅಜೇಯ 126 ರನ್ ಬಾರಿಸಿದ ಗಿಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಚಿಕೊಂಡರು. ಇದಾದ ಬಳಿಕ ಗಿಲ್ ಡ್ರೆಸ್ಸಿಂಗ್ ರೂಮ್ನಲ್ಲಿ ವಿಡಿಯೋವೊಂದನ್ನು ಮಾಡಿದ್ದಾರೆ.
ಈ ವೀಡಿಯೊದಲ್ಲಿ ಕಿಶನ್ ಅವರು ”ನೀವು ಚುರುಕಾಗಿರಬೇಕು ಮತ್ತು ಉತ್ಸಾಹದಿಂದ ಇರಬೇಕು” ಎಂದು ಗಿಲ್‌ಗೆ ಕೋಪದಿಂದ ಹೇಳುತ್ತಾರೆ. ಇದಕ್ಕೆ ಉತ್ತರಿಸಿದ ಗಿಲ್, ”ನಾನು ಚುರುಕಾಗಿದ್ದೇನೆ ಮತ್ತು ಉತ್ಸಾಹ ಕೂಡ ನನ್ನಲ್ಲಿದೆ” ಎನ್ನುತ್ತಾರೆ. ನಂತರ, ಕಿಶನ್ ಬೂಟು ಕಾಲಲ್ಲೇ ಗಿಲ್ ಮೇಲೆ ಜಿಗಿದು ಬೆಡ್ ಮೇಲೆ ನಿಂತು ಕುಣಿದಾಡುತ್ತಾರೆ. ಅಲ್ಲಿಂದ, ಗೊರಿಲ್ಲದ ಹಾಗೆ, ಬಾಯಿಯಿಂದ ಶಬ್ದ ಮಾಡುತ್ತಾ ಬೆಡ್ ಮೇಲಿಂದ ಕೆಳೆಗೆ ಇಳಿದು ಗಿಲ್‌ಗೆ ನಿನಗೆ ನೀನೆ ಕಪಾಳಕ್ಕೆ ಹೊಡೆದುಕೋ ಎಂದು ಹೇಳುತ್ತಾನೆ. ಆಗ ಗಿಲ್ ತನ್ನ ಕಪಾಳಕ್ಕೆ ಹೊಡೆದುಕೊಳ್ಳುತ್ತಾರೆ.
Ranji Trophy 2022-23: 4 ಅರ್ಧಶತಕ, 1 ಭರ್ಜರಿ ಶತಕ: ಬೃಹತ್ ಮೊತ್ತ ಪೇರಿಸಿದ ಕರ್ನಾಟಕ
ಇಲ್ಲಿಗೆ ನಿಲ್ಲದ ಕಿಶನ್ ನೇರವಾಗಿ ಶುಭ್‌ಮನ್ ಗಿಲ್‌ಗೆ ಕಪಾಳಕ್ಕೆ ಹೊಡೆಯುತ್ತಾರೆ. ಯುಜ್ವೇಂದ್ರ ಚಹಲ್ ಕೂಡ ಈ ವಿಡಿಯೋದಲ್ಲಿ ಇದ್ದು ಇವರಿಬ್ಬರ ಜಗಳವನ್ನು ನೋಡುತ್ತಾ ಕುಳಿತಿದ್ದಾರೆ. ಅಷ್ಟಕ್ಕೂ ಇದು ನಿಜ ಘಟನೆಯಲ್ಲ. ಇನ್‌ಸ್ಟಾಗ್ರಾಮ್ ರೀಲ್ಸ್ಗಾಗಿ ಈ ಮೂವರು ಆಟಗಾರರು ಮಾಡಿರುವ ಶಾರ್ಟ್ ವಿಡಿಯೋ ಇದು. ಈ ವಿಡಿಯೋವನ್ನು ಗಿಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಎಮ್ಟಿವಿಯ ಪ್ರಸಿದ್ಧ ರಿಯಾಲಿಟಿ ಶೋ ಆಗಿರುವ ರೋಡಿಸ್ನ ಒಂದು ತುಣುಕಾಗಿದೆ. ”ರೋಡಿಸ್ ರಿಲೋಡೆಡ್, ನಮ್ಮ ನೆಚ್ಚಿನ ಕ್ಷಣವನ್ನು ಮರುಸೃಷ್ಟಿಸಿದ್ದೇವೆ”, ಎಂದು ಗಿಲ್ ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
View this post on Instagram
ಭಾರತದ ಮುಂದಿನ ಸರಣಿ ಆಸ್ಟ್ರೇಲಿಯಾ ವಿರುದ್ಧ:
ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿ ವಶಪಡಿಸಿಕೊಂಡ ಭಾರತ ಇದೀಗ ತವರಿನಲ್ಲಿ ಮತ್ತೊಂದು ಮಹತ್ವದ ಸರಣಿಗೆ ಸಜ್ಜಾಗುತ್ತಿದೆ. ಫೆಬ್ರವರಿ 9 ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಶುರುವಾಗಲಿದೆ. ಈಗಾಗಲೇ ಭಾರತಕ್ಕೆ ಬಂದಿಳಿದಿರುವ ಕಾಂಗರೂ ಪಡೆ ಬೆಂಗಳೂರಿನ ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿರುವ ಸ್ಪಿನ್ ಪಿಚ್‌ಗಳಲ್ಲಿ ಕಸರತ್ತು ನಡೆಸುತ್ತಿದೆ. ಭಾರತ ತಂಡದ ಕೂಡ ಇನ್ನೆರಡು ದಿನಗಳಲ್ಲಿ ಪ್ರ್ಯಾಕ್ಟೀಸ್ ಶುರು ಮಾಡಲಿದೆ. ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ನಾಗ್ಪುರಕ್ಕೆ ತಲುಪಿದ್ದಾರೆ.
ಫೆಬ್ರವರಿ 9 ರಿಂದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಚಾಲನೆ ಸಿಗಲಿದೆ. ಬಳಿಕ ಮಾರ್ಚ್ 17 ರಿಂದ ಏಕದಿನ ಸರಣಿ ನಡೆಯಲಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ನಾಗ್ಪುರದ ವಿಧರ್ಭ ಕ್ರಿಕೆಟ್ ಸ್ಟೇಡಿಯಂ, ದೆಹಲಿ ಅರುಣ್ ಜೇಟ್ಲಿ ಸ್ಟೇಡಿಯಂ, ಧರ್ಮಶಾಲದ ಹಿಮಾಚಲ್ ಪ್ರದೇಶ್ ಕ್ರಿಕೆಟ್ ಸ್ಟೇಡಿಯಂ ಹಾಗೂ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಇನ್ನು ಏಕದಿನ ಪಂದ್ಯಗಳು ಮುಂಬೈ, ವಿಶಾಖಪಟ್ಟಣಂ ಹಾಗೂ ಚೆನ್ನೈನಲ್ಲಿ ನಡೆಯಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ