Shubman Gill: ಶುಭ್​ಮನ್ ಗಿಲ್ ಶತಕ ಸಿಡಿಸಿದಾಗ ವಿರಾಟ್ ಕೊಹ್ಲಿ ಇನ್​ಸ್ಟಾದಲ್ಲಿ ಶೇರ್ ಮಾಡಿದ ಸ್ಟೇಟಸ್ ಏನು ಗೊತ್ತೇ?

India vs New Zealand 3rd T20I: ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಶುಭ್​ಮನ್ ಗಿಲ್ ಶತಕ ಸಿಡಿಸಿದ ಬಳಿಕ ವಿರಾಟ್ ಕೊಹ್ಲಿ ಅವರು ತನ್ನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ಕ್ಯಾಪ್ಷನ್​ನೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ.

Shubman Gill: ಶುಭ್​ಮನ್ ಗಿಲ್ ಶತಕ ಸಿಡಿಸಿದಾಗ ವಿರಾಟ್ ಕೊಹ್ಲಿ ಇನ್​ಸ್ಟಾದಲ್ಲಿ ಶೇರ್ ಮಾಡಿದ ಸ್ಟೇಟಸ್ ಏನು ಗೊತ್ತೇ?
Shubman Gill and Virat Kohli
Follow us
|

Updated on:Feb 02, 2023 | 10:52 AM

ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ (India vs New Zealand) ರನ್ ಮಳೆಯನ್ನೇ ಸುರಿಸಿತು. ಮುಖ್ಯವಾಗಿ ಟೀಮ್ ಇಂಡಿಯಾ ಓಪನರ್ ಶುಭ್​ಮನ್ ಗಿಲ್ (Shubman Gill) ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆಕರ್ಷಕ ಚೊಚ್ಚಲ ಶತಕ ಸಿಡಿಸಿ ಮಿಂಚಿದರು. ಭಾರತ 126 ರನ್​ಗಳ ದೊಡ್ಡ ಮೊತ್ತದ ಗೆಲುವು ಕಾಣಲು ಗಿಲ್ ಶತಕ ಪ್ರಮುಖ ಪಾತ್ರವಹಿಸಿತು. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್​ಗೆ ಮಾತ್ರ ಫಿಟ್ ಎಂದಿದ್ದ ಅನೇಕರಿಗೆ ಗಿಲ್ ಒಂದೇ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ವೈಭವ ತೋರಿಸಿ ಬಾಯಿ ಮುಚ್ಚಿಸಿದರು. ಈ ಶತಕದ ಮೂಲಕ ಗಿಲ್ ಅನೇಲ ದಾಖಲೆಯನ್ನೂ ಸೃಷ್ಟಿಸಿದರು. ಗಿಲ್ ಅವರ ಆಟವನ್ನು ಕಂಡು ಅನೇಕರು ಇವರನ್ನು ಮುಂದಿನ ಕೊಹ್ಲಿ ಎಂದು ಹೇಳುತ್ತಿದ್ದಾರೆ. ಇದರ ನಡುವೆ ಗಿಲ್ ಶತಕ ಸಿಡಿಸಿದ ಸಂದರ್ಭ ವಿರಾಟ್ (Virat Kohli) ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ಸ್ಟೇಟಸ್ ಹಂಚಿಕೊಂಡಿದ್ದಾರೆ.

ಶುಭ್​ಮನ್ ಗಿಲ್ ಶತಕ ಸಿಡಿಸಿದ ಬಳಿಕ ವಿರಾಟ್ ಕೊಹ್ಲಿ ಅವರು ತನ್ನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ಕ್ಯಾಪ್ಷನ್​ನೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ. ಗಿಲ್ ಅವರು ತನ್ನನ್ನು ಅಪ್ಪಿಕೊಳ್ಳುತ್ತಿರುವ ಫೋಟೋವನ್ನು ಕೊಹ್ಲಿ ಶೇರ್ ಮಾಡಿಕೊಂಡಿದ್ದು, ಸ್ಟಾರ್, ಭವಿಷ್ಯದ ಆಟಗಾರ ಇಲ್ಲಿದ್ದಾನೆ ಎಂಬರ್ಥದಲ್ಲಿ ಬರೆದು ಸ್ಟೇಟಸ್ ಹಂಚಿಕೊಂಡಿದ್ದಾರೆ. ಕೊಹ್ಲಿಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ. ಕೊಹ್ಲಿಯ ಸ್ಟೇಟಸ್ ಅನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡು ಕ್ರಿಕೆಟ್ ಅಭಿಮಾನಿಯೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ
Image
Hardik Pandya: ಹಾರ್ದಿಕ್ ಪಾಂಡ್ಯ ಟ್ರೋಫಿಯನ್ನು ಪೃಥ್ವಿ ಶಾ ಕೈಗೆ ಕೊಟ್ಟಾಗ ಏನು ಮಾಡಿದ್ರು ನೋಡಿ
Image
Team India: ಭರ್ಜರಿ ಜಯದೊಂದಿಗೆ ಪಾಕಿಸ್ತಾನದ ವಿಶ್ವದಾಖಲೆ ಮುರಿದ ಟೀಮ್ ಇಂಡಿಯಾ
Image
ಟಿ20 ಕ್ರಿಕೆಟ್​ನಲ್ಲಿ ಶತಕ ಬಾರಿಸಿದ ಟೀಮ್ ಇಂಡಿಯಾದ 7 ಬ್ಯಾಟ್ಸ್​ಮನ್​ಗಳ ಪಟ್ಟಿ ಇಲ್ಲಿದೆ
Image
Shubman Gill: ಶುಭ್​ಮನ್ ಸಿಡಿಲಬ್ಬರಕ್ಕೆ ಕಿಂಗ್ ಕೊಹ್ಲಿಯ ದಾಖಲೆ ಉಡೀಸ್

ಕೊಹ್ಲಿಯ ದಾಖಲೆ ಉಡೀಸ್ ಮಾಡಿದ ಗಿಲ್:

ಕೇವಲ 63 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 12 ಫೋರ್​ನೊಂದಿಗೆ ಅಜೇಯ 126 ರನ್​ ಬಾರಿಸಿದ ಗಿಲ್ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಮುರಿದಿದ್ದಾರೆ. ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಸ್ಕೋರ್​ಗಳಿಸಿದ ಬ್ಯಾಟ್ಸ್​ಮನ್​ ಎಂಬ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. ಕೊಹ್ಲಿ 2022ರ ಏಷ್ಯಾಕಪ್​ನಲ್ಲಿ ಅಫ್ಘಾನಿಸ್ತಾನ್ ವಿರುದ್ಧ 122 ರನ್ ಬಾರಿಸಿ ದಾಖಲೆ ಬರೆದಿದ್ದರು. ಇದು ಟಿ20 ಕ್ರಿಕೆಟ್​ನಲ್ಲಿ ಭಾರತೀಯ ಆಟಗಾರ ಕಲೆಹಾಕಿದ ಅತ್ಯಧಿಕ ಸ್ಕೋರ್ ಆಗಿತ್ತು. ಇದೀಗ ಗಿಲ್ 126 ರನ್​ ಕಲೆಹಾಕಿ ವಿರಾಟ್ ಕೊಹ್ಲಿ ನಿರ್ಮಿಸಿದ್ದ ದಾಖಲೆಯನ್ನು ಉಡೀಸ್ ಮಾಡಿದ್ದಾರೆ.

ICC T20 Rankings: ಐಸಿಸಿ ಟಿ20 ರ‍್ಯಾಂಕಿಂಗ್ ಪ್ರಕಟ: ಹೊಸ ವಿಶ್ವ ದಾಖಲೆಯತ್ತ ಸೂರ್ಯಕುಮಾರ್ ಯಾದವ್

ಇದರ ಜೊತೆಗೆ ಮೂರೂ ಮಾದರಿಯ ಕ್ರಿಕೆಟ್​ನಲ್ಲಿ ಶತಕವನ್ನು ಸಿಡಿಸಿದ ಭಾರತೀಯ ಆಟಗಾರರ ಪಟ್ಟಿಗೆ ಗಿಲ್ ಸೇರಿಕೊಂಡಿದ್ದಾರೆ. ಇದಕ್ಕೂ ಮುನ್ನ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಹಾಗೂ ಸುರೇಶ್ ರೈನಾ ಮಾತ್ರವೇ ಈ ಸಾಧನೆ ಮಾಡಿದ್ದರು.

ತೃತೀಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಆರಂಭದಲ್ಲಿ ಇಶಾನ್ ಕಿಶನ್​ ವಿಕೆಟ್ ಕಳೆದುಕೊಂಡರೂ ರಾಹುಲ್ ತ್ರಿಪಾಠಿ (44) ಅವರು ಶುಬ್​ಮನ್ ಗಿಲ್​ ಅವರೊಂದಿಗೆ 50 ರನ್​ಗಳ ಉತ್ತಮ ಜೊತೆಯಾಟ ನೀಡಿದರು. ಸೂರ್ಯಕುಮಾರ್​ ಯಾದವ್ 24 ರನ್​ಗಳ ಕೊಡುಗೆ ನೀಡಿದರು. ನಂತರ ಗಿಲ್​ಗೆ ಸಾಥ್​ ನೀಡಿದ ನಾಯಕ ಹಾರ್ದಿಕ್​ ಪಾಂಡ್ಯ ಅಮೋಘ ಆಟವಾಡಿದರು. ಕಿವೀಸ್ ಬೌಲರ್​ಗಳ ಬೆಂಡೆತ್ತಿದ ಗಿಲ್ ಫೋರ್- ಸಿಕ್ಸರ್​ಗಳ ಮಳೆ ಸುರಿಸಿದರು. ಪಾಂಡ್ಯ 30 ರನ್ ಗಳಿಸಿದರು. ಗಿಲ್ ಅಜೇಯ 126 ರನ್ ಚಚ್ಚಿದರು. ಭಾರತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್​ಗಳ ಸವಾಲಿನ ಮೊತ್ತವನ್ನು ದಾಖಲಿಸಿತು.

235 ರನ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಭಾರತದ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿ 12.1 ಓವರ್ ಗಳಲ್ಲಿ ಕೇವಲ 66 ರನ್ ಗಳಿಗೆ ಆಲೌಟಾಯಿತು. ಡೇರಿಲ್ ಮಿಚೆಲ್ 35 ಮತ್ತು ನಾಯಕ ಸ್ಯಾಂಟ್ನರ್ 13 ರನ್ ಹೊರತು ಪಡಿಸಿ ಉಳಿದ ಯಾವ ಆಟಗಾರನೂ ಒಂದಂಕಿ ದಾಟಲಿಲ್ಲ. ಭಾರತ ಪರ ನಾಯಕ ಹಾರ್ದಿಕ್​ ಪಾಂಡ್ಯ 4 ವಿಕೆಟ್​ ಮತ್ತು ಅರ್ಷದೀಪ್​, ಉಮ್ರಾನ್​ ಮಲಿಕ್​ ಹಾಗೂ ಶಿವಂ ಮಾವಿ ತಲಾ ಎರಡು ವಿಕೆಟ್​ ಪಡೆದರು. ಗಿಲ್ ಪಂದ್ಯಶ್ರೇಷ್ಠ ಹಾಗೂ ಹಾರ್ದಿಕ್ ಸರಣಿಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:52 am, Thu, 2 February 23