AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hardik Pandya: ಹಾರ್ದಿಕ್ ಪಾಂಡ್ಯ ಟ್ರೋಫಿಯನ್ನು ಪೃಥ್ವಿ ಶಾ ಕೈಗೆ ಕೊಟ್ಟಾಗ ಏನು ಮಾಡಿದ್ರು ನೋಡಿ

India vs New Zealand 3rd T20I: ಶುಭ್​ಮನ್ ಗಿಲ್ ಅವರ ಅಮೋಘ ಚೊಚ್ಚಲ ಶತಕ ಹಾಗೂ ಹಾರ್ದಿಕ್ ಪಾಂಡ್ಯ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ದೊಡ್ಡ ಮೊತ್ತದ ಜಯ ಸಾಧಿಸಿತು. ಟೀಮ್ ಇಂಡಿಯಾ ಗೆದ್ದು ಟ್ರೋಫಿ ಹಿಡಿಯುವ ಸಂದರ್ಭ ವಿಶೇಷ ಘಟನೆಯೊಂದು ನಡೆಯಿತು.

Hardik Pandya: ಹಾರ್ದಿಕ್ ಪಾಂಡ್ಯ ಟ್ರೋಫಿಯನ್ನು ಪೃಥ್ವಿ ಶಾ ಕೈಗೆ ಕೊಟ್ಟಾಗ ಏನು ಮಾಡಿದ್ರು ನೋಡಿ
Team India and Prithvi Shaw
Vinay Bhat
| Edited By: |

Updated on:Feb 02, 2023 | 9:37 AM

Share

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಸಾಧನೆ ಗೈದಿದ್ದ ಭಾರತ (India vs New Zealand) ಇದೀಗ ಟಿ20 ಸರಣಿಯನ್ನೂ ವಶಪಡಿಸಿಕೊಂಡಿದೆ. ಅಹ್ಮದಾಬಾದ್​ನ ನರೆಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ನಿರ್ಣಾಯಕ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಬರೋಬ್ಬರಿ 168 ರನ್​ಗಳ ಅಮೋಘ ಜಯ ಸಾಧಿಸುವ ಮೂಲಕ 2-1 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದೆ. ಶುಭ್​ಮನ್ ಗಿಲ್ (Shubman Gill) ಅವರ ಅಮೋಘ ಚೊಚ್ಚಲ ಶತಕ ಹಾಗೂ ಹಾರ್ದಿಕ್ ಪಾಂಡ್ಯ (Hardik Pandya) ಬೌಲಿಂಗ್ ದಾಳಿಯ ನೆರವಿನಿಂದ ಭಾರತ ದೊಡ್ಡ ಮೊತ್ತದ ಜಯ ಸಾಧಿಸಿತು. ಟೀಮ್ ಇಂಡಿಯಾ ಗೆದ್ದು ಟ್ರೋಫಿ ಹಿಡಿಯುವ ಸಂದರ್ಭ ವಿಶೇಷ ಘಟನೆಯೊಂದು ನಡೆಯಿತು.

ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ನಾಯಕ ಹಾರ್ದಿಕ್ ಪಾಂಡ್ಯ ಕೈಗೆ ಟ್ರೋಫಿ ಸಿಕ್ಕ ತಕ್ಷಣ ಅವರು ನೇರವಾಗಿ ಪೃಥ್ವಿ ಶಾ ಬಳಿ ಹೋಗಿ ಅವರಿಗೆ ಟ್ರೋಫಿಯನ್ನು ಹಸ್ತಾಂತರಿಸಿದರು. ಈ ವೇಳೆ ಶಾಕ್ ಆದ ಶಾ ಟ್ರೋಫಿಯನ್ನು ಎತ್ತಲು ಸಾಧ್ಯವಾಗದೆ ಒಂದು ಕ್ಷಣ ಕಷ್ಟಪಟ್ಟಲು. ಬಳಿಕ ಎಲ್ಲ ಆಟಗಾರರ ಜೊತೆ ಪೃಥ್ವಿ ಟ್ರೋಫಿ ಹಿಡಿದು ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಶೇಷ ಎಂದರೆ ಸುಮಾರು 18 ತಿಂಗಳ ಬಳಿಕ ಭಾರತ ಟಿ20 ತಂಡಕ್ಕೆ ಆಯ್ಕೆಯಾದ ಶಾ ಕಣಕ್ಕಿಳಿಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮೂರೂ ಪಂದ್ಯಗಳಲ್ಲಿ ಗಿಲ್-ಕಿಶನ್ ಓಪನರ್ ಆಗಿ ಆಡಿದ ಕಾರಣ ಪೃಥ್ವಿಗೆ ಅವಕಾಶವೇ ಸಿಗಲಿಲ್ಲ.

ಇದನ್ನೂ ಓದಿ
Image
Team India: ಭರ್ಜರಿ ಜಯದೊಂದಿಗೆ ಪಾಕಿಸ್ತಾನದ ವಿಶ್ವದಾಖಲೆ ಮುರಿದ ಟೀಮ್ ಇಂಡಿಯಾ
Image
ಟಿ20 ಕ್ರಿಕೆಟ್​ನಲ್ಲಿ ಶತಕ ಬಾರಿಸಿದ ಟೀಮ್ ಇಂಡಿಯಾದ 7 ಬ್ಯಾಟ್ಸ್​ಮನ್​ಗಳ ಪಟ್ಟಿ ಇಲ್ಲಿದೆ
Image
Shubman Gill: ಶುಭ್​ಮನ್ ಸಿಡಿಲಬ್ಬರಕ್ಕೆ ಕಿಂಗ್ ಕೊಹ್ಲಿಯ ದಾಖಲೆ ಉಡೀಸ್
Image
India vs New Zealand, 3rd T20I: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿ ಸರಣಿ ಗೆದ್ದ ಟೀಮ್ ಇಂಡಿಯಾ

Hanuma Vihari: ಮೂಳೆ ಮುರಿದರೂ ಎಡಗೈಯಲ್ಲಿ ಬ್ಯಾಟಿಂಗ್ ಮಾಡಿದ ಹನುಮ ವಿಹಾರಿ

ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಮತ್ತೆ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವಿತು. ಇಶನ್​ ಕಿಶನ್​ ದೊಡ್ಡ ಇನ್ನಿಂಗ್ಸ್​ ಕಟ್ಟುವಲ್ಲಿ ಮತ್ತೆ ವಿಫಲರಾದರು. 1 ರನ್​​ಗೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಹಾದಿ ಹಿಡಿದರು. ಕಿಶನ್​ ನಂತರ ಬಂದ ರಾಹುಲ್ ತ್ರಿಪಾಠಿ ಅವರು ಶುಬ್​ಮನ್ ಗಿಲ್​ ಅವರೊಂದಿಗೆ 50 ರನ್​ಗಳ ಉತ್ತಮ ಜೊತೆಯಾಟ ನೀಡಿದರು. ತ್ರಿಪಾಠಿ ಬಿರುಸಿನ ಆಟ ಪ್ರದರ್ಶಿಸಿ ಕೇವಲ 22 ಎಸೆತದಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್​ನಿಂದ 44 ರನ್​ಗಳಿಸಿದರು. ಸೂರ್ಯಕುಮಾರ್​ ಯಾದವ್ 24 ರನ್​ಗಳ ಕೊಡುಗೆ ನೀಡಿದರು.

ನಂತರ ಗಿಲ್​ಗೆ ಸಾಥ್​ ನೀಡಿದ ನಾಯಕ ಹಾರ್ದಿಕ್​ ಪಾಂಡ್ಯ ಅಮೋಘ ಆಟವಾಡಿದರು. ಕಿವೀಸ್ ಬೌಲರ್​ಗಳ ಬೆಂಡೆತ್ತಿದ ಗಿಲ್ ಫೋರ್- ಸಿಕ್ಸರ್​ಗಳ ಮಳೆ ಸುರಿಸಿದರು. 18ನೇ ಓವರ್‌ನಲ್ಲಿ ಭಾರತ 200 ರನ್ ಗಡಿ ದಾಟಿತು. ಪಾಂಡ್ಯ 17 ಎಸೆತಗಳಲ್ಲಿ 30 ರನ್ ಗಳಿಸಿದರು. ಗಿಲ್ ಕೇವಲ 63 ಎಸೆತಗಳಲ್ಲಿ 12 ಫೋರ್, 7 ಸಿಕ್ಸರ್​ನೊಂದಿಗೆ ಅಜೇಯ 126 ರನ್ ಚಚ್ಚಿದರು. ಭಾರತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್​ಗಳ ಸವಾಲಿನ ಮೊತ್ತವನ್ನು ದಾಖಲಿಸಿತು.

235 ರನ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಭಾರತದ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿ 12.1 ಓವರ್ ಗಳಲ್ಲಿ ಕೇವಲ 66 ರನ್ ಗಳಿಗೆ ಆಲೌಟಾಯಿತು. ಡೇರಿಲ್ ಮಿಚೆಲ್ 35 ಮತ್ತು ನಾಯಕ ಸ್ಯಾಂಟ್ನರ್ 13 ರನ್ ಹೊರತು ಪಡಿಸಿ ಉಳಿದ ಯಾವ ಆಟಗಾರನೂ ಒಂದಂಕಿ ದಾಟಲಿಲ್ಲ. ಭಾರತ ಪರ ನಾಯಕ ಹಾರ್ದಿಕ್​ ಪಾಂಡ್ಯ 4 ವಿಕೆಟ್​ ಮತ್ತು ಅರ್ಷದೀಪ್​, ಉಮ್ರಾನ್​ ಮಲಿಕ್​ ಹಾಗೂ ಶಿವಂ ಮಾವಿ ತಲಾ ಎರಡು ವಿಕೆಟ್​ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:19 am, Thu, 2 February 23

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ