Shubman Gill: 1 ಶತಕದೊಂದಿಗೆ 10 ದಾಖಲೆಗಳನ್ನು ನಿರ್ಮಿಸಿದ ಶುಭ್​ಮನ್ ಗಿಲ್

Shubman Gill Records: ಇದರೊಂದಿಗೆ ಹಲವು ಟಿ20 ದಾಖಲೆಗಳು ಯುವ ದಾಂಡಿಗನ ಪಾಲಾಯಿತು. ಹಾಗಿದ್ರೆ ಅಬ್ಬರ ಶತಕದೊಂದಿಗೆ ಗಿಲ್ ಸೃಷ್ಟಿಸಿದ ದಾಖಲೆಗಳಾವುವು ಎಂದು ತಿಳಿಯೋಣ....

TV9 Web
| Updated By: ಝಾಹಿರ್ ಯೂಸುಫ್

Updated on: Feb 02, 2023 | 3:58 PM

ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭರ್ಜರಿ ಸೆಂಚುರಿಸಿ ಸಿಡಿಸಿದ ಶುಭ್​ಮನ್ ಗಿಲ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ 63 ಎಸೆತಗಳನ್ನು ಎದುರಿಸಿದ ಗಿಲ್ 7 ಸಿಕ್ಸ್ ಹಾಗೂ 12 ಫೋರ್​ನೊಂದಿಗೆ ಅಜೇಯ 126 ರನ್​ ಚಚ್ಚಿದರು. ಇದರೊಂದಿಗೆ ಹಲವು ಟಿ20 ದಾಖಲೆಗಳು ಯುವ ದಾಂಡಿಗನ ಪಾಲಾಯಿತು. ಹಾಗಿದ್ರೆ ಅಬ್ಬರ ಶತಕದೊಂದಿಗೆ ಗಿಲ್ ಸೃಷ್ಟಿಸಿದ ದಾಖಲೆಗಳಾವುವು ಎಂದು ತಿಳಿಯೋಣ....

1 / 11
1- ಅಹಮದಾಬಾದ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಶತಕ ಪೂರೈಸುವುದರೊಂದಿಗೆ ಶುಭ್​ಮನ್ ಗಿಲ್ ಟೀಮ್ ಇಂಡಿಯಾ ಪರ ಮೂರು ಮಾದರಿ ಕ್ರಿಕೆಟ್​ನಲ್ಲಿ ಶತಕ ಬಾರಿಸಿದ 5ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು.

2 / 11
2- ಅಜೇಯ 126 ರನ್​ ಬಾರಿಸಿದ ಶುಭ್​ಮನ್ ಗಿಲ್ ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಸ್ಕೋರ್​ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಅಫ್ಘಾನಿಸ್ತಾನ್ ವಿರುದ್ಧ ಅಜೇಯ 122 ರನ್​ ಬಾರಿಸಿದ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು.

3 / 11
3- ಶುಭಮನ್ ಗಿಲ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಶತಕ ಸಿಡಿಸಿದ ಭಾರತದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಗಿಲ್ 23 ವರ್ಷ 146 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಸುರೇಶ್ ರೈನಾ (23 ವರ್ಷ, 156 ದಿನಗಳು) ಹೆಸರಿನಲ್ಲಿತ್ತು.

4 / 11
4- ಟಿ20 ಕ್ರಿಕೆಟ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್ ಎಂಬ ದಾಖಲೆ ಕೂಡ ಶುಭ್​ಮನ್ ಗಿಲ್ ಪಾಲಾಗಿದೆ. ಇದಕ್ಕೂ ಮುನ್ನ ಈ ರೆಕಾರ್ಡ್ ಸೌತ್ ಆಫ್ರಿಕಾದ ರಿಚರ್ಡ್ ಲೆವಿ (ಅಜೇಯ 117) ಅವರ ಹೆಸರಿನಲ್ಲಿತ್ತು.

5 / 11
5- ಟಿ20 ಕ್ರಿಕೆಟ್​ನಲ್ಲಿ ಶತಕ ಬಾರಿಸಿದ ಭಾರತದ 7ನೇ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೂ ಶುಭ್​ಮನ್ ಗಿಲ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಸುರೇಶ್ ರೈನಾ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ಸಾಧನೆ ಮಾಡಿದ್ದರು.

6 / 11
6- ಡಿಸೆಂಬರ್​ನಿಂದ ಜನವರಿಯೊಳಗೆ ಮೂರು ಸ್ವರೂಪಗಳಲ್ಲಿ ಶುಭ್​ಮನ್ ಗಿಲ್ ಒಟ್ಟು 5 ಶತಕ ಬಾರಿಸಿದ್ದಾರೆ. ಕಡಿಮೆ ಅವಧಿಯಲ್ಲಿ ಇಷ್ಟೊಂದು ಶತಕ ಬಾರಿಸಿರುವುದು ಕೂಡ ದಾಖಲೆಯಾಗಿದೆ.

7 / 11
7- ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ದ್ವಿಶತಕ ಹಾಗೂ ಶತಕ ಬಾರಿಸಿದ ವಿಶೇಷ ಸಾಧಕರ ಪಟ್ಟಿಗೂ ಶುಭ್​ಮನ್ ಗಿಲ್ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧವೇ ಏಕದಿನ ಕ್ರಿಕೆಟ್​ನಲ್ಲಿ ಶುಭ್​ಮನ್ ಗಿಲ್ 208 ರನ್​ ಬಾರಿಸಿದ್ದರು.

8 / 11
8- ನ್ಯೂಜಿಲೆಂಡ್ ವಿರುದ್ಧ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ ಬಾರಿಸಿದ ದಾಖಲೆ ಕೂಡ ಶುಭ್​ಮನ್ ಗಿಲ್ ಪಾಲಾಗಿದೆ. ಏಕದಿನ ಕ್ರಿಕೆಟ್​ನಲ್ಲಿ 208 ಹಾಗೂ ಟಿ20 ಕ್ರಿಕೆಟ್​ನಲ್ಲಿ 126 ರನ್ ಬಾರಿಸುವ ಮೂಲಕ ಯುವ ದಾಂಡಿಗ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

9 / 11
9- ಟೀಮ್ ಇಂಡಿಯಾ ಪರ ಏಕದಿನ ದ್ವಿಶತಕ ಹಾಗೂ ಟಿ20 ಶತಕ ಬಾರಿಸಿದ 2ನೇ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ಕೂಡ ಶುಭ್​ಮನ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿ ಮಾತ್ರವಿತ್ತು.

10 / 11
10- ಟೀಮ್ ಇಂಡಿಯಾ ಪರ ಮೂರು ಮಾದರಿ ಕ್ರಿಕೆಟ್​ನಲ್ಲೂ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಕೂಡ ಶುಭ್​ಮನ್ ಪಾಲಾಗಿದೆ. ಗಿಲ್ ಕೇವಲ 23ನೇ ವಯಸ್ಸಿನಲ್ಲಿ ಟೆಸ್ಟ್, ಏಕದಿನ ಹಾಗೂ ಟಿ20 ಸೆಂಚುರಿ ಸಿಡಿಸಿ ಸಾಧನೆ ಮಾಡಿದ್ದಾರೆ.

11 / 11
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ