Ranji Trophy 2022-23: 4 ಅರ್ಧಶತಕ, 1 ಭರ್ಜರಿ ಶತಕ: ಬೃಹತ್ ಮೊತ್ತ ಪೇರಿಸಿದ ಕರ್ನಾಟಕ

Karnataka vs Uttarakhand: ಆ ಬಳಿಕ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ನಾಯಕ ಮಯಾಂಕ್ ಅಗರ್ವಾಲ್ (83) ಹಾಗೂ ರವಿಕುಮಾರ್ ಸಮರ್ಥ್ (82) ಉತ್ತಮ ಆರಂಭ ಒದಗಿಸಿದ್ದರು.

Ranji Trophy 2022-23: 4 ಅರ್ಧಶತಕ, 1 ಭರ್ಜರಿ ಶತಕ: ಬೃಹತ್ ಮೊತ್ತ ಪೇರಿಸಿದ ಕರ್ನಾಟಕ
Shreyas Gopal
Follow us
TV9 Web
| Updated By: ಝಾಹಿರ್ ಯೂಸುಫ್

Updated on:Feb 02, 2023 | 7:24 PM

Ranji Trophy 2022-23: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ 3ನೇ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ಬೃಹತ್ ಮೊತ್ತ ಪೇರಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಉತ್ತರಾಖಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಯುವ ವೇಗಿ ವೆಂಕಟೇಶ್ ದಾಳಿಗೆ ತತ್ತರಿಸಿತು. ಕರಾರುವಾಕ್ ಬೌಲಿಂಗ್ ನಡೆಸಿದ್ದ ಎಂ. ವೆಂಕಟೇಶ್ 36 ರನ್​ಗಳಿಗೆ 5 ವಿಕೆಟ್ ಕಬಳಿಸಿದ್ದರು. ಪರಿಣಾಮ ಉತ್ತರಾಖಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 116 ರನ್​ಗಳಿಗೆ ಆಲೌಟ್ ಆಗಿತ್ತು.

ಆ ಬಳಿಕ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ನಾಯಕ ಮಯಾಂಕ್ ಅಗರ್ವಾಲ್ (83) ಹಾಗೂ ರವಿಕುಮಾರ್ ಸಮರ್ಥ್ (82) ಉತ್ತಮ ಆರಂಭ ಒದಗಿಸಿದ್ದರು. ಆ ಬಳಿಕ ಬಂದ ದೇವದತ್ ಪಡಿಕ್ಕಲ್ 69 ರನ್​ಗಳ ಅಮೂಲ್ಯ ಕೊಡುಗೆ ನೀಡಿದರು. ಇನ್ನು ನಿಕಿನ್ ಜೋಸ್ 62 ರನ್ ಬಾರಿಸಿದರು. ಪರಿಣಾಮ ಕರ್ನಾಟಕ ತಂಡದ ಮೊತ್ತವು 3 ವಿಕೆಟ್ ನಷ್ಟಕ್ಕೆ 300 ರ ಗಡಿದಾಟಿತು.

ಈ ನಾಲ್ಕು ಅರ್ಧಶತಕಗಳ ಬಳಿಕ ಮನೀಷ್ ಪಾಂಡೆ 39 ರನ್ ಬಾರಿಸಿ ಔಟಾದರೆ, ಶ್ರೇಯಸ್ ಗೋಪಾಲ್ ಅತ್ಯಾದ್ಭುತ ಇನಿಂಗ್ಸ್​ ಆಡಿದರು. ಉತ್ತರಾಖಂಡ್ ಬೌಲರ್​ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ಶ್ರೇಯಸ್ ಭರ್ಜರಿ ಶತಕ ಸಿಡಿಸಿದರು. ಅಷ್ಟೇ ಅಲ್ಲದೆ ಕೆಳಕ್ರಮಾಂಕದ ಆಟಗಾರರ ಜೊತೆಗೂಡಿ ರನ್​ ಕಲೆಹಾಕುತ್ತಾ ಸಾಗಿದರು. ಶ್ರೇಯಸ್ ಗೋಪಾಲ್ ಅವರ ಈ ಅತ್ಯುತ್ತಮ ಆಟದ ಫಲವಾಗಿ ಕರ್ನಾಟಕ ತಂಡದ ಸ್ಕೋರ್ 600 ರನ್​ಗಳನ್ನು ದಾಟಿತು.

ಇದನ್ನೂ ಓದಿ
Image
ICC Rankings: ಐಸಿಸಿ ರ‍್ಯಾಂಕಿಂಗ್​ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ ಭಾರತದ 6 ಬೌಲರ್​ಗಳು ಇವರೇ
Image
ವಿದೇಶದಲ್ಲಿ ಪಂದ್ಯವಾಡುತ್ತಿದ್ದ ಆಟಗಾರನನ್ನು ಕ್ರೀಡಾ ಸಚಿವನಾಗಿ ಆಯ್ಕೆ ಮಾಡಿದ ಪಾಕ್ ಸರ್ಕಾರ
Image
Shubman Gill: ಕಿಂಗ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಶುಭ್​ಮನ್ ಗಿಲ್
Image
WIPL 2023: ಮಹಿಳಾ ಐಪಿಎಲ್ 5 ತಂಡಗಳ ಘೋಷಣೆ

ಇದನ್ನೂ ಓದಿ: Shubman Gill: 1 ಶತಕದೊಂದಿಗೆ 10 ದಾಖಲೆಗಳನ್ನು ನಿರ್ಮಿಸಿದ ಶುಭ್​ಮನ್ ಗಿಲ್

ಆದರೆ ಈ ಹಂತದಲ್ಲಿ ವಿಧ್ವತ್ ಕಾವೇರಪ್ಪ ಹಾಗೂ ವಿಜಯ್​ಕುಮಾರ್ ವೈಶಾಖ್ ಬೇಗನೆ ಔಟಾದರು. ಪರಿಣಾಮ ಕರ್ನಾಟಕ ತಂಡವು 606 ರನ್​ಗಳಿಗೆ ಆಲೌಟ್ ಆಯಿತು. ಇನ್ನು ಕೊನೆಯವರೆಗೂ ಕ್ರೀಸ್ ಕಚ್ಚಿ ನಿಂತಿದ್ದ ಶ್ರೇಯಸ್ ಗೋಪಾಲ್ 288 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 16 ಫೋರ್​ನೊಂದಿಗೆ ಅಜೇಯ 161 ರನ್​ ಬಾರಿಸಿ ಮಿಂಚಿದರು.

ಇದೀಗ 490 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಆರಂಭಿಸಿರುವ ಉತ್ತರಾಖಂಡ್ ತಂಡವು 3ನೇ ದಿನದಾಟದ ಅಂತ್ಯಕ್ಕೆ 103 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಸದ್ಯ 384 ರನ್​ಗಳ ಹಿನ್ನಡೆಯಲ್ಲಿರುವ ಉತ್ತರಾಖಂಡ್ ತಂಡವು ಸೋಲಿನ ಭೀತಿಯಲ್ಲಿದ್ದು, ಇದರೊಳಗೆ ಕರ್ನಾಟಕ ತಂಡವು 7 ವಿಕೆಟ್​ ಪಡೆದರೆ ಇನಿಂಗ್ಸ್​ ಜಯ ಸಾಧಿಸಬಹುದು.

ಕರ್ನಾಟಕ ಪ್ಲೇಯಿಂಗ್ ಇಲೆವೆನ್: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ (ನಾಯಕ) , ದೇವದತ್ ಪಡಿಕ್ಕಲ್ , ನಿಕಿನ್ ಜೋಸ್ , ಮನೀಶ್ ಪಾಂಡೆ , ಮುರಳೀಧರ ವೆಂಕಟೇಶ್ , ಶರತ್ ಬಿಆರ್​ ( ವಿಕೆಟ್ ಕೀಪರ್ ) , ಕೃಷ್ಣಪ್ಪ ಗೌತಮ್ , ಶ್ರೇಯಸ್ ಗೋಪಾಲ್ , ವಿಜಯ್ ಕುಮಾರ್ ವೈಶಾಕ್ , ವಿಧ್ವತ್ ಕಾವೇರಪ್ಪ.

ಉತ್ತರಾಖಂಡ್ ಪ್ಲೇಯಿಂಗ್ ಇಲೆವೆನ್: ಆದಿತ್ಯ ತಾರೆ (ವಿಕೆಟ್ ಕೀಪರ್) , ಜೀವನ್​ಜೋತ್ ಸಿಂಗ್ (ನಾಯಕ) , ಕುನಾಲ್ ಚಂಡೇಲಾ , ಅಖಿಲ್ ರಾವತ್ , ಅವನೀಶ್ ಸುಧಾ , ಅಭಯ್ ನೇಗಿ , ಸ್ವಪ್ನಿಲ್ ಸಿಂಗ್ , ದಿಕ್ಷಾಂಶು ನೇಗಿ , ಮಯಾಂಕ್ ಮಿಶ್ರಾ , ದೀಪಕ್ ಧಪೋಲಾ , ನಿಖಿಲ್ ಕೊಹ್ಲಿ.

Published On - 7:23 pm, Thu, 2 February 23

ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್
ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!