
ರಣಜಿ ಟೂರ್ನಿಯ (Ranji Trophy 2025) ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ (Ishan Kishan) ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಕೊಯಬಂತ್ತೂರಿನ ಶ್ರೀ ರಾಮಕೃಷ್ಣ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ತಮಿಳುನಾಡು ಹಾಗೂ ಜಾರ್ಖಂಡ್ ತಂಡಗಳು ಮುಖಾಮುಖಿಯಾಗಿವೆ. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಜಾರ್ಖಂಡ್ ತಂಡದ ನಾಯಕ ಇಶಾನ್ ಕಿಶನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಪ್ರಥಮ ಇನಿಂಗ್ಸ್ ಆರಂಭಿಸಿದ ಜಾರ್ಖಂಡ್ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಶಿಖರ್ ಮೋಹನ್ ಕೇವಲ 10 ರನ್ಗಳಿಸಿ ಔಟಾಗಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕುಮಾರ್ ಸೂರಜ್ 3 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ವಿರಾಟ್ ಸಿಂಗ್ 28 ರನ್ಗಳಿಸಲಷ್ಟೇ ಶಕ್ತರಾದರು.
ಈ ಹಂತದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ ಕಿಶನ್, ಆ ಬಳಿಕ ತಮಿಳುನಾಡು ಬೌಲರ್ಗಳನ್ನು ದಂಡಿಸಲು ಪ್ರಾರಂಭಿಸಿದರು.
ಪರಿಣಾಮ ಇಶಾನ್ ಕಿಶನ್ ಬ್ಯಾಟ್ನಿಂದ ಭರ್ಜರಿ ಶತಕ ಮೂಡಿಬಂತು. ಶತಕದ ಬಳಿಕ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದ ಇಶಾನ್ 183 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ ಅಜೇಯ 125 ರನ್ ಬಾರಿಸಿದರು.
ಈ ಭರ್ಜರಿ ಶತಕದ ನೆರವಿನೊಂದಿಗೆ ಜಾರ್ಖಂಡ್ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 307 ರನ್ಗಳಿಸಿದೆ. ದ್ವಿತೀಯ ದಿನದಾಟದಲ್ಲಿ ಇಶಾನ್ ಕಿಶನ್ (125) ಹಾಗೂ ಸಾಹಿಲ್ ರಾಜ್ (64) ಬ್ಯಾಟಿಂಗ್ ಮುಂದುವರೆಸಲಿದ್ದಾರೆ.
ತಮಿಳುನಾಡು ಪ್ಲೇಯಿಂಗ್ 11: ಎನ್ ಜಗದೀಸನ್ (ನಾಯಕ) , ಪ್ರದೋಶ್ ರಂಜನ್ ಪಾಲ್ , ಶಾರುಖ್ ಖಾನ್ , ಬಾಬಾ ಇಂದ್ರಜಿತ್ , ಬಾಲಸುಬ್ರಮಣ್ಯಂ ಸಚಿನ್ , ಆಂಡ್ರೆ ಸಿದ್ದಾರ್ಥ್ ಸಿ , ಆರ್ ಎಸ್ ಅಂಬ್ರಿಶ್ , ಡಿ ಟಿ ಚಂದ್ರಶೇಖರ್ , ಸಂದೀಪ್ ವಾರಿಯರ್ , ಗುರ್ಜಪ್ನೀತ್ ಸಿಂಗ್ , ಹೇಮಚೂಡೇಶನ್ ಜೆ.
ಇದನ್ನೂ ಓದಿ: T20 World Cup 2026: ಟಿ20 ವಿಶ್ವಕಪ್ಗೆ 19 ತಂಡಗಳು ಫೈನಲ್
ಜಾರ್ಖಂಡ್ ಪ್ಲೇಯಿಂಗ್ 11: ಶಿಖರ್ ಮೋಹನ್ , ಶರಣದೀಪ್ ಸಿಂಗ್ , ಕುಮಾರ್ ಕುಶಾಗ್ರಾ , ಇಶಾನ್ ಕಿಶನ್ (ನಾಯಕ) , ಸಾಹಿಲ್ ರಾಜ್ , ರಿಷವ್ ರಾಜ್ , ಜತಿನ್ ಪಾಂಡೆ , ವಿಕಾಶ್ ಸಿಂಗ್ , ಕುಮಾರ್ ಸೂರಜ್ , ಅನುಕುಲ್ ರಾಯ್ , ವಿರಾಟ್ ಸಿಂಗ್.