Ishan Kishan: 12 ಬೌಂಡರಿ,1 ಸಿಕ್ಸ್; ಇಂಗ್ಲೆಂಡ್‌ನಲ್ಲಿ ಅಬ್ಬರಿಸಿದ ಇಶಾನ್ ಕಿಶನ್
Ishan Kishan Blasts 87 in County Championship: ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರು ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ತಂಡಕ್ಕಾಗಿ ಆಡುತ್ತಿದ್ದಾರೆ. ತಮ್ಮ ಚೊಚ್ಚಲ ಪಂದ್ಯದಲ್ಲೇ ಯಾರ್ಕ್‌ಷೈರ್ ವಿರುದ್ಧ ಅದ್ಭುತವಾದ 87 ರನ್ ಗಳಿಸಿದ್ದಾರೆ. ಈ ಪ್ರದರ್ಶನವು ಭಾರತೀಯ ತಂಡಕ್ಕೆ ಮರಳಲು ಅವರಿಗೆ ಅವಕಾಶ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ (Ishan Kishan) ಬಹಳ ಸಮಯದಿಂದ ಟೀಂ ಇಂಡಿಯಾ ಪರ ಆಡಿಲ್ಲ. 2023 ರಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದ ಕಿಶನ್ಗೆ, ಭಾರತ ಎ ತಂಡದ ಇತ್ತೀಚಿನ ಇಂಗ್ಲೆಂಡ್ ಪ್ರವಾಸದಲ್ಲೂ ಆಡುವ 11 ರ ಬಳಗದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ತಂಡದ ಪರ ಆಡುತ್ತಿದ್ದು, ಎರಡು ಪಂದ್ಯಗಳನ್ನು ಆಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅದರಂತೆ ಯಾರ್ಕ್‌ಷೈರ್ ವಿರುದ್ಧ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿಯೇ ಕಿಶನ್ ಅದ್ಭುತ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾಗಿದ್ದಾರೆ.
ಚೊಚ್ಚಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ
ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಇಶಾನ್ ಕಿಶನ್ ತಮ್ಮ ಮೊದಲ ಪಂದ್ಯದಲ್ಲಿಯೇ ಅದ್ಭುತ ಪ್ರದರ್ಶನ ನೀಡಿದರು. 26 ವರ್ಷದ ಇಶಾನ್ ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಕೌಂಟಿ ಕ್ರಿಕೆಟ್ ಆಡುತ್ತಿದ್ದು, ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 98 ಎಸೆತಗಳನ್ನು ಎದುರಿಸಿ 12 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 87 ರನ್‌ಗಳ ಬಲವಾದ ಇನ್ನಿಂಗ್ಸ್ ಆಡಿದರು. ದಕ್ಷಿಣ ಆಫ್ರಿಕಾದ ಕೈಲ್ ವಾರೆನ್ ಬದಲಿಗೆ ನಾಟಿಂಗ್‌ಹ್ಯಾಮ್‌ಶೈರ್ ತಂಡವನ್ನು ಸೇರಿಕೊಂಡಿರುವ ಇಶಾನ್ ಕಿಶನ್, ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡು ಯಾರ್ಕ್‌ಷೈರ್ ತಂಡದ ಬೌಲರ್‌ಗಳ ಬೆವರಿಳಿಸಿದರು.
📹 That is colossal.
Ishan Kishan dispatches an almighty straight six to bring up his and Liam Patterson-White's fifty partnership.
He moves to 82, LPW has 21, and Nottinghamshire are 347-6 midway through the morning.#NOTvYOR | 📺 https://t.co/odtZgMvjZm pic.twitter.com/FvD9uEpiLr
— Notts Outlaws (@TrentBridge) June 23, 2025
ಒಂದೇ ಓವರ್‌ನಲ್ಲಿ ಮೂರು ಬೌಂಡರಿ
ಪಂದ್ಯದ ಮೊದಲ ದಿನದಂದು, ನಾಟಿಂಗ್‌ಹ್ಯಾಮ್‌ಶೈರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 225 ರನ್ ಬಾರಿಸಿದ್ದಾಗ ಕಿಶನ್ 6 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಆರಂಭದಿಂದಲೂ ಆಕ್ರಮಣಕಾರಿ ವಿಧಾನವನ್ನು ಅಳವಡಿಸಿಕೊಂಡ ಕಿಶನ್, ಯಾರ್ಕ್‌ಷೈರ್ ವೇಗಿ ಜಾರ್ಜ್ ಹಿಲ್ ಅವರ ಒಂದೇ ಓವರ್‌ನಲ್ಲಿ ಮೂರು ಬೌಂಡರಿಗಳನ್ನು ಬಾರಿಸುವ ಮೂಲಕ ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸಿದರು. ಲಿಯಾಮ್ ಪ್ಯಾಟರ್ಸನ್-ವೈಟ್ ಅವರೊಂದಿಗೆ ಇಶಾನ್ ಪ್ರಮುಖ ಪಾಲುದಾರಿಕೆಯನ್ನು ಹಂಚಿಕೊಂಡರು, ಇದು ನಾಟಿಂಗ್‌ಹ್ಯಾಮ್‌ಶೈರ್ 300 ರನ್‌ಗಳ ಗಡಿ ದಾಟಲು ಸಹಾಯ ಮಾಡಿತು.
IPL 2025: ಔಟಿಲ್ಲದಿದ್ದರೂ ಪೆವಿಲಿಯನ್ ಸೇರಿದ ಇಶಾನ್ ಕಿಶನ್; ವಿಡಿಯೋ ನೋಡಿ
ಇಶಾನ್ ಕಿಶನ್ ಪಾಲಿಗೆ ಮಹತ್ವದ ಪಂದ್ಯ
ಈ ಎರಡು ಪಂದ್ಯಗಳು ಇಶಾನ್ ಕಿಶನ್ ಅವರಿಗೆ ಬಹಳ ಮುಖ್ಯ. ಈ ಎರಡು ಪಂದ್ಯಗಳಲ್ಲಿ ಗರಿಷ್ಠ ರನ್ ಗಳಿಸುವ ಮತ್ತು ಆಯ್ಕೆದಾರರ ಗಮನ ಸೆಳೆಯುವುದು ಕಿಶನ್ ಉದ್ದೇಶವಾಗಿದೆ. ಇದರಿಂದ ಅವರು ಭಾರತೀಯ ಕ್ರಿಕೆಟ್ ತಂಡದಲ್ಲಿ ಮತ್ತೆ ಸ್ಥಾನ ಪಡೆಯಬಹುದು. ಇಶಾನ್ ಇಲ್ಲಿಯವರೆಗೆ ಭಾರತ ಪರ 2 ಟೆಸ್ಟ್, 27 ಏಕದಿನ ಮತ್ತು 32 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆದರೆ ನವೆಂಬರ್ 2023 ರ ನಂತರ ಅವರು ಭಾರತ ಪರ ಯಾವುದೇ ಪಂದ್ಯವನ್ನು ಆಡಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:46 pm, Mon, 23 June 25
