ಸಂಜು ಸ್ಯಾಮ್ಸನ್​ಗೆ ಹಂಗೇ ಆಗ್ಬೇಕು, ಆಯ್ಕೆ ಮಾಡಬಾರದು ಎಂದ ಶ್ರೀಶಾಂತ್..!

| Updated By: ಝಾಹಿರ್ ಯೂಸುಫ್

Updated on: Sep 21, 2023 | 3:59 PM

S Sreesanth: ಭಾರತ ತಂಡ ಗೆದ್ದಿರುವ 2 ವಿಶ್ವಕಪ್​ ಫೈನಲ್​ನಲ್ಲೂ ಶ್ರೀಶಾಂತ್ ಕಣಕ್ಕಿಳಿದಿದ್ದರು ಎಂಬುದು ವಿಶೇಷ. 2007 ರಲ್ಲಿ ಟಿ20 ವಿಶ್ವಕಪ್​ನಲ್ಲಿ ಫೈನಲ್​ನಲ್ಲಿ ಕ್ಯಾಚ್ ಹಿಡಿಯುವ ಮೂಲಕ ಶ್ರೀಶಾಂತ್ ಟೀಮ್ ಇಂಡಿಯಾ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ್ದರು. ಹಾಗೆಯೇ 2011ರ ವಿಶ್ವಕಪ್ ಫೈನಲ್​ನಲ್ಲೂ ಕಣಕ್ಕಿಳಿದಿದ್ದರು.

ಸಂಜು ಸ್ಯಾಮ್ಸನ್​ಗೆ ಹಂಗೇ ಆಗ್ಬೇಕು, ಆಯ್ಕೆ ಮಾಡಬಾರದು ಎಂದ ಶ್ರೀಶಾಂತ್..!
Sanju Samson - Sreesanth
Follow us on

ಐಸಿಸಿ ವಿಶ್ವಕಪ್ 2023ರ ತಂಡದಿಂದ ಆಯ್ಕೆಗಾರರು ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿರುವುದು ಸರಿಯಾಗಿದೆ ಎಂದು ಟೀಮ್ ಇಂಡಿಯಾದ ಮಾಜಿ ವೇಗಿ ಎಸ್ ಶ್ರೀಶಾಂತ್ ಹೇಳಿದ್ದಾರೆ. ಸಂಜು ಅವರಿಗೆ ನಾನೇ ಎಲ್ಲಾ ಎಂಬ ಮನೋಭಾವ ಇದೆ. ಹೀಗಾಗಿಯೇ ಆತ ದಿಗ್ಗಜರ ಸಲಹೆಗಳನ್ನು ಕೇಳುವುದಿಲ್ಲ. ಇದರ ಪರಿಣಾಮವೇ ಈಗ ಟೀಮ್ ಇಂಡಿಯಾದಿಂದ ಹೊರಬಿದ್ದಿರುವುದು ಎಂದು ಶ್ರೀಶಾಂತ್ ಹೇಳಿದ್ದಾರೆ.

ಸಂಜು ಸ್ಯಾಮ್ಸನ್​ ಏಕದಿನ ಕ್ರಿಕೆಟ್​ನಲ್ಲಿ ಉತ್ತಮ ಸರಾಸರಿ ಹೊಂದಿದ್ದರೂ, ಏಕದಿನ ವಿಶ್ವಕಪ್​, ಏಷ್ಯನ್ ಗೇಮ್ಸ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿಲ್ಲ. ಇದಕ್ಕೆ ಕಾರಣ ಆತನ ಆ್ಯಟಿಟ್ಯೂಡ್ ಎಂದು ಶ್ರೀಶಾಂತ್ ಹೇಳಿದ್ದಾರೆ.

ನನ್ನ ಪ್ರಕಾರ ಆಯ್ಕೆ ಸಮಿತಿ ತೆಗೆದುಕೊಂಡಿರುವುದು ಸರಿಯಾದ ನಿರ್ಧಾರ. ಏಕೆಂದರೆ ಅನೇಕ ಲೆಜೆಂಡ್ಸ್ ಆಟಗಾರರು ಆತನ ಬ್ಯಾಟಿಂಗ್​ನ ತಪ್ಪುಗಳನ್ನು ಒತ್ತಿ ಹೇಳಿದ್ದಾರೆ. ಆದರೆ ಪಿಚ್‌ಗೆ ಅನುಗುಣವಾಗಿ ಆಡಲು ಹೇಳಿದಾಗ ಅವನು ಎಂದೂ ಕೇಳಿಲ್ಲ ಇದರ ಪರಿಣಾಮ ಈಗ ತಂಡದಿಂದ ಹೊರಬಿದ್ದಿದ್ದಾರೆ ಎಂದು ಶ್ರೀಶಾಂತ್ ಅಭಿಪ್ರಾಯಪಟ್ಟಿದ್ದಾರೆ.

ಸಂಜು ಸ್ಯಾಮ್ಸನ್ ಇನ್ನಾದರೂ​ ತಮ್ಮ ಧೋರಣೆಯನ್ನು ಬದಲಿಸಿಕೊಳ್ಳಬೇಕು. ಆತ ಯಾವಾಗಲೂ ಆಕ್ರಮಣಕಾರಿ ಹೊಡೆತಕ್ಕೆ ಮುಂದಾಗಿ ಔಟ್ ಆಗುತ್ತಾರೆ. ಇದರ ಬದಲಾಗಿ ಕ್ರೀಸ್​ನಲ್ಲಿ ಉಳಿಯಲು ಪ್ರಾಮುಖ್ಯತೆಯನ್ನು ನೀಡಬೇಕು. ಅಂತಹ ಮನಸ್ಥಿತಿಯನ್ನು ರೂಪಿಸಿಕೊಳ್ಳಬೇಕು ಎಂದು ಇದೇ ವೇಳೆ ಶ್ರೀಶಾಂತ್ ಸಲಹೆ ನೀಡಿದರು.

ನಾನೇ ಎಷ್ಟೋ ಬಾರಿ ಸ್ಯಾಮ್ಸನ್​ಗೆ ಕ್ರೀಸ್ ಕಚ್ಚಿ ನಿಲ್ಲಲು ಹೇಳಿದ್ದೇನೆ. ಆದರೆ ಆತ ಯಾರ ಮಾತನ್ನು ಸಹ ಕೇಳುವುದಿಲ್ಲ. ನನ್ನ ಪ್ರಕಾರ ಆತನಿಗೆ ಈಗಾಗಲೇ ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆ. ಇದಾಗ್ಯೂ ಸ್ಥಿರ ಪ್ರದರ್ಶನದ ಕೊರತೆಯಿದೆ ಎಂದು ಎಸ್​ ಶ್ರೀಶಾಂತ್ ಹೇಳಿದ್ದಾರೆ.

ಒಟ್ಟಿನಲ್ಲಿ ಕೇರಳ ಕ್ರಿಕೆಟಿಗನ ಬಗ್ಗೆ ಕೇರಳದವರೇ ಆದ ಎಸ್​. ಶ್ರೀಶಾಂತ್ ಬಹಿರಂಗವಾಗಿ ವಿಮರ್ಶಿಸಿರುವ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿದೆ. ಕೆಲವರು ಶ್ರೀಶಾಂತ್ ಮಾತಿಗೆ ಬೆಂಬಲ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಮಾಜಿ ಕ್ರಿಕೆಟಿಗನ ಸ್ಪಾಟ್​ ಫಿಕ್ಸಿಂಗ್ ಹಗರಣಗಳ ಬಗ್ಗೆ ಪ್ರಸ್ತಾಪಿಸಿ ವ್ಯಂಗ್ಯವಾಡಿದ್ದಾರೆ.

ವಿಶ್ವಕಪ್​ನಲ್ಲಿ ಶ್ರೀರಕ್ಷೆ:

ಭಾರತ ತಂಡ ಗೆದ್ದಿರುವ 2 ವಿಶ್ವಕಪ್​ ಫೈನಲ್​ನಲ್ಲೂ ಶ್ರೀಶಾಂತ್ ಕಣಕ್ಕಿಳಿದಿದ್ದರು ಎಂಬುದು ವಿಶೇಷ. 2007 ರಲ್ಲಿ ಟಿ20 ವಿಶ್ವಕಪ್​ನಲ್ಲಿ ಫೈನಲ್​ನಲ್ಲಿ ಕ್ಯಾಚ್ ಹಿಡಿಯುವ ಮೂಲಕ ಶ್ರೀಶಾಂತ್ ಟೀಮ್ ಇಂಡಿಯಾ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ್ದರು. ಹಾಗೆಯೇ 2011ರ ವಿಶ್ವಕಪ್ ಫೈನಲ್​ನಲ್ಲೂ ಕಣಕ್ಕಿಳಿದಿದ್ದರು.

ಇದನ್ನೂ ಓದಿ: ಸರ್ವಶ್ರೇಷ್ಠ ಸಾಧನೆ: ಮೊಹಮ್ಮದ್ ಸಿರಾಜ್ ಈಗ ವಿಶ್ವದ ನಂಬರ್ 1 ಬೌಲರ್

ಇನ್ನು ಭಾರತದ ಪರ 27 ಟೆಸ್ಟ್ ಆಡಿರುವ ಶ್ರೀಶಾಂತ್ ಒಟ್ಟು 87 ವಿಕೆಟ್ ಪಡೆದಿದ್ದಾರೆ. ಹಾಗೆಯೇ 53 ಏಕದಿನ ಪಂದ್ಯಗಳಿಂದ 75 ವಿಕೆಟ್​ಗಳು, 10 ಟಿ20 ಪಂದ್ಯಗಳಿಂದ 7 ವಿಕೆಟ್​ಗಳನ್ನು ಕಬಳಿಸಿದ್ದಾರೆ.