AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿನ್​ರ ಈ ವಿಶ್ವ ದಾಖಲೆ ಕೊಹ್ಲಿ ಮುರಿಯುವುದು ಅಸಾಧ್ಯ: ಸಂಜಯ್ ಮಂಜ್ರೇಕರ್

Virat Kohli: ಏಕದಿನ ಕ್ರಿಕೆಟ್​ನಲ್ಲಿ ಸಚಿನ್ ತೆಂಡೂಲ್ಕರ್ ಒಟ್ಟು 49 ಶತಕಗಳನ್ನು ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಕೇವಲ 3 ಶತಕಗಳ ಅವಶ್ಯಕತೆಯಿದೆ. ಅಂದರೆ ಸದ್ಯ 47 ಸೆಂಚುರಿಗಳನ್ನು ಸಿಡಿಸಿರುವ ಕೊಹ್ಲಿ ಇನ್ನೆರಡು ಶತಕ ಬಾರಿಸಿ ಈ ದಾಖಲೆ ಸರಿಗಟ್ಟಬಹುದು. ಅಲ್ಲದೆ ಮೂರು ಶತಕ ಸಿಡಿಸಿದರೆ ಹೊಸ ವಿಶ್ವ ದಾಖಲೆ ನಿರ್ಮಾಣವಾಗಲಿದೆ.

ಸಚಿನ್​ರ ಈ ವಿಶ್ವ ದಾಖಲೆ ಕೊಹ್ಲಿ ಮುರಿಯುವುದು ಅಸಾಧ್ಯ: ಸಂಜಯ್ ಮಂಜ್ರೇಕರ್
Sachin - Virat Kohli
TV9 Web
| Edited By: |

Updated on: Sep 21, 2023 | 5:23 PM

Share

ವಿರಾಟ್ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಇದೀಗ ಸಚಿನ್ ಅವರ ಸರ್ವಶ್ರೇಷ್ಠ ದಾಖಲೆಗಳಲ್ಲಿ ಒಂದಾಗಿರುವ ಅತ್ಯಧಿಕ ಏಕದಿನ ಶತಕಗಳ ದಾಖಲೆ ಮುರಿಯಲು ಕೊಹ್ಲಿಗೆ 3 ಸೆಂಚುರಿಗಳ ಅವಶ್ಯಕತೆಯಿದೆ. ಅಂದರೆ ಮುಂಬರುವ ಏಕದಿನ ವಿಶ್ವಕಪ್​ನಲ್ಲಿ ವಿರಾಟ್ ಕೊಹ್ಲಿ ಬ್ಯಾಟ್​ನಿಂದ ಮೂರು ಶತಕಗಳು ಮೂಡಿಬಂದರೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ 49 ಏಕದಿನ ಶತಕಗಳ ದಾಖಲೆ ಇತಿಹಾಸ ಪುಟ ಸೇರಲಿದೆ. ಇದಾಗ್ಯೂ ಸಚಿನ್ ಅವರ ಟೆಸ್ಟ್ ಶತಕಗಳ ದಾಖಲೆಯನ್ನು ಕೊಹ್ಲಿಗೆ ಮುರಿಯಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್.

ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ನಡುವೆ ಕೆಲವು ಸಾಮ್ಯತೆಗಳಿವೆ. ಇಬ್ಬರೂ ಕೂಡ ಕ್ರಿಕೆಟ್ ಆಡುವುದನ್ನು ಆನಂದಿಸುತ್ತಾರೆ. ಇಲ್ಲಿ ವಿರಾಟ್‌ ಕೊಹ್ಲಿಗೆ ಅಧಿಕಾರ ಅಥವಾ ನಾಯಕತ್ವ ಬೇಕಾಗಿಲ್ಲ. ಒಬ್ಬ ಆಟಗಾರನಾಗಿ ಮೈದಾನದಲ್ಲಿದ್ದರೆ ಸಾಕು. ಅಂತಹ ಮನಸ್ಥಿತಿಯ ಆಟಗಾರ ವಿರಾಟ್ ಕೊಹ್ಲಿ ಸಂಜಯ್ ಮಂಜ್ರೇಕರ್ ಹೊಗಳಿದ್ದಾರೆ.

ಪ್ರಸ್ತುತ ಸನ್ನಿವೇಶದಲ್ಲಿ ವಿರಾಟ್ ಕೊಹ್ಲಿ ಸಾಧಿಸಲು ಉಳಿದಿರುವುದು ಏನೂ ಇಲ್ಲ. ಈಗಾಗಲೇ ಅದ್ಭುತ ದಾಖಲೆಗಳ ಮೂಲಕ ತಮ್ಮನ್ನು ನಿರೂಪಿಸಿಕೊಂಡಿದ್ದಾರೆ. ಇದರಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳನ್ನು ಸರಿಗಟ್ಟಿದ್ದಾರೆ. ಹಾಗೆಯೇ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ಇದಾಗ್ಯೂ ಕಿಂಗ್ ಕೊಹ್ಲಿಗೆ ಅತ್ಯಧಿಕ ಟೆಸ್ಟ್​ ಶತಕಗಳ ದಾಖಲೆ ಮುರಿಯಲು ಸಾಧ್ಯವಾಗುವುದಿಲ್ಲ. ಏಕೆಂದರೆ ಸಚಿನ್ ತೆಂಡೂಲ್ಕರ್ ಒಟ್ಟು 51 ಟೆಸ್ಟ್ ಸೆಂಚುರಿಗಳನ್ನು ಸಿಡಿಸಿದ್ದಾರೆ. ಸದ್ಯ ಕೊಹ್ಲಿ ಕೇವಲ 29 ಟೆಸ್ಟ್ ಶತಕಗಳನ್ನು ಮಾತ್ರ ಬಾರಿಸಿದ್ದಾರೆ. ಹೀಗಾಗಿ ಸಚಿನ್ ಅವರ ಟೆಸ್ಟ್ ಶತಕಗಳನ್ನು ದಾಖಲೆಯನ್ನು ವಿರಾಟ್ ಕೊಹ್ಲಿಯಿಂದ ಮುರಿಯಲು ಸಾಧ್ಯವಿಲ್ಲ ಎಂದು ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

ಸಚಿನ್ ತೆಂಡೂಲ್ಕರ್ ಒಟ್ಟು 51 ಟೆಸ್ಟ್​ ಶತಕಗಳನ್ನು ಬಾರಿಸಿದ್ದಾರೆ. ಈ ದಾಖಲೆ ಮುರಿಯಲು ಕೊಹ್ಲಿಗೆ ಇನ್ನೂ 23 ಶತಕಗಳ ಅವಶ್ಯಕತೆಯಿದೆ. ಹೀಗಾಗಿಯೇ ವಿರಾಟ್​ ಕೊಹ್ಲಿಗೆ 51 ಟೆಸ್ಟ್ ಶತಕಗಳನ್ನು ತಲುಪಲು ಸಾಧ್ಯವಾಗುವುದಿಲ್ಲ ಎಂದು ನಾನು ನಂಬುತ್ತೇನೆ ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

ದಾಖಲೆಯ ಹೊಸ್ತಿಲಲ್ಲಿ ಕಿಂಗ್ ಕೊಹ್ಲಿ:

ಏಕದಿನ ಕ್ರಿಕೆಟ್​ನಲ್ಲಿ ಸಚಿನ್ ತೆಂಡೂಲ್ಕರ್ ಒಟ್ಟು 49 ಶತಕಗಳನ್ನು ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಕೇವಲ 3 ಶತಕಗಳ ಅವಶ್ಯಕತೆಯಿದೆ. ಅಂದರೆ ಸದ್ಯ 47 ಸೆಂಚುರಿಗಳನ್ನು ಸಿಡಿಸಿರುವ ಕೊಹ್ಲಿ ಇನ್ನೆರಡು ಶತಕ ಬಾರಿಸಿ ಈ ದಾಖಲೆ ಸರಿಗಟ್ಟಬಹುದು. ಅಲ್ಲದೆ ಮೂರು ಶತಕ ಸಿಡಿಸಿದರೆ ಹೊಸ ವಿಶ್ವ ದಾಖಲೆ ನಿರ್ಮಾಣವಾಗಲಿದೆ.

ಇದನ್ನೂ ಓದಿ: ಗೆದ್ದ ಟೀಮ್ ಇಂಡಿಯಾ: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ

ಅತ್ತ ಏಕದಿನ ವಿಶ್ವಕಪ್​ನ ಮೊದಲ ಸುತ್ತಿನಲ್ಲಿ ಟೀಮ್ ಇಂಡಿಯಾ ಒಟ್ಟು 9 ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ 3 ಸೆಂಚುರಿ ಸಿಡಿಸಿದರೆ ಏಕದಿನ ಕ್ರಿಕೆಟ್​ನ ಶತಕದ ಸರದಾರ ಎನಿಸಿಕೊಳ್ಳಲಿದ್ದಾರೆ.

Follow Us
Web contact
Web contact

TV9 Kannada

Read More
ದರ್ಶನ್ ತಂಡದ ನೊಟೀಸ್​​ ಬಗ್ಗೆ ‘ಬಾಸ್’ ಸಿನಿಮಾ ತಂಡ ಮಾತು
ದರ್ಶನ್ ತಂಡದ ನೊಟೀಸ್​​ ಬಗ್ಗೆ ‘ಬಾಸ್’ ಸಿನಿಮಾ ತಂಡ ಮಾತು
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಸಿಎಂ ಆದ 2ನೇ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಡಿಕೆ ಶಿವಕುಮಾರ್!
ಸಿಎಂ ಆದ 2ನೇ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಡಿಕೆ ಶಿವಕುಮಾರ್!
ಪಾರದರ್ಶಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಡಿಕೆಶಿ ಖಡಕ್ ಸೂಚನೆ​​
ಪಾರದರ್ಶಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಡಿಕೆಶಿ ಖಡಕ್ ಸೂಚನೆ​​
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್