T20 World Cup 2022: ‘ಕೊಹ್ಲಿ ಮಾಡಿದ್ದು ನೂರಕ್ಕೆ ನೂರರಷ್ಟು ಫೇಕ್ ಫೀಲ್ಡಿಂಗ್’; ಮಾಜಿ ಟೀಂ ಇಂಡಿಯಾ ಆಟಗಾರ

| Updated By: ಪೃಥ್ವಿಶಂಕರ

Updated on: Nov 04, 2022 | 3:38 PM

T20 World Cup 2022: ಇದು ನೂರಕ್ಕೆ ನೂರರಷ್ಟು ಫೇಕ್ ಫೀಲ್ಡಿಂಗ್, ಕೊಹ್ಲಿ ಥ್ರೋ ಎಸೆಯುವಂತೆ ಆ್ಯಕ್ಷನ್ ಮಾಡಿರುವುದು ಸ್ಪಷ್ಟವಾಗಿದೆ. ಇದನ್ನು ಅಂಪೈರ್ ನೋಡಿದ್ದರೆ, ಭಾರತಕ್ಕೆ ಐದು ರನ್ ದಂಡ ವಿಧಿಸಲಾಗುತ್ತಿತ್ತು.

T20 World Cup 2022: ‘ಕೊಹ್ಲಿ ಮಾಡಿದ್ದು ನೂರಕ್ಕೆ ನೂರರಷ್ಟು ಫೇಕ್ ಫೀಲ್ಡಿಂಗ್’; ಮಾಜಿ ಟೀಂ ಇಂಡಿಯಾ ಆಟಗಾರ
ವಿರಾಟ್ ಕೊಹ್ಲಿ
Follow us on

ಟಿ20 ವಿಶ್ವಕಪ್‌ನಲ್ಲಿ (T20 World Cup 2022) ವಿರಾಟ್ ಕೊಹ್ಲಿ (Virat Kohli) ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ತಮ್ಮ ಅಸಾಧಾರಣ ಫಾರ್ಮ್ ಮುಂದುವರೆಸುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ಅವರ ಬ್ಯಾಟ್‌ನಿಂದ ರನ್‌ಗಳ ಮಳೆ ಸುರಿಯುತ್ತಿದೆ. ಇದರ ಫಲವಾಗಿ ಆಡಿರುವ 4 ಪಂದ್ಯಗಳಲ್ಲಿ ಬರೋಬ್ಬರಿ 3 ಅಜೇಯ ಅರ್ಧಶತಕಗಳು ದಾಖಲಾಗಿವೆ. ಆದರೆ, ಬಾಂಗ್ಲಾದೇಶ ವಿರುದ್ಧದ ಪಂದ್ಯದ ನಂತರ ವಿರಾಟ್ ಹೊಸ ವಿವಾದ ಒಂದರಲ್ಲಿ ಸಿಲುಕಿದ್ದಾರೆ. ಪಂದ್ಯದ ವೇಳೆ ಕೊಹ್ಲಿ ನಕಲಿ ಫೀಲ್ಡಿಂಗ್ ಮಾಡಿದ್ದಾರೆ ಎಂದು ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ನೂರುಲ್ ಹಸನ್ (Nurul Hasan) ಆರೋಪ ಮಾಡಿದ್ದರು. ಅಂದಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದೆ. ಈಗ ಈ ಘಟನೆಯ ಬಗ್ಗೆ ಭಾರತದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ (Akash Chopra) ಕೂಡ ತಮ್ಮ ಅಭಿಪ್ರಾಯ ಹೊರಹಾಕಿದ್ದು, ಕೊಹ್ಲಿ ಮಾಡಿರುವುದು ಪಕ್ಕಾ ಫೇಕ್ ಫೀಲ್ಡಿಂಗ್ ಎಂದಿದ್ದಾರೆ.

ಟ್ವಿಟ್ಟರ್​ನಲ್ಲಿ ಮೊದಲು ತಮ್ಮ ಅಭಿಮಾನಿಗಳಿಗೆ ಫೇಕ್ ಫೀಲ್ಡಿಂಗ್ ನಿಯಮಗಳನ್ನು ವಿವರಿಸಿರುವ ಆಕಾಶ್ ಚೋಪ್ರಾ, ಇದರ ನಂತರ, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಸಂಪೂರ್ಣ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಚೋಪ್ರಾ, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಫೇಕ್ ಫೀಲ್ಡಿಂಗ್ ಮಾಡಿರುವುದು ನಿಜ. ಆದರೆ ಕೊಹ್ಲಿಯ ಈ ನಕಲಿ ಫೀಲ್ಡಿಂಗನ್ನು ಪತ್ತೆ ಹಚ್ಚಿ ದಂಡ ವಿಧಿಸುವುದ ಅಂಪೈರ್‌ನ ಕೆಲಸ. ಆದರೆ ಇಲ್ಲಿ ಅದು ಆಗಿಲ್ಲ. ಅಂಪೈರ್‌ಗಳಿಗೆ ಈ ಘಟನೆ ಅರಿವಿಗೆ ಬಂದಿಲ್ಲ ಹಾಗಾಗಿ ಅವರು ಶಿಕ್ಷಿಸಿಲ್ಲ. ಆದ್ದರಿಂದ ಈಗ ಆ ಘಟನೆಯ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: T20 World Cup 2022: ಸೆಮಿಫೈನಲ್​ಗೆ ನ್ಯೂಜಿಲೆಂಡ್; ಭಾರತ ಈಗ ಜಿಂಬಾಬ್ವೆ ವಿರುದ್ಧ ಗೆಲ್ಲಲೇಬೇಕು! ಏಕೆ ಗೊತ್ತಾ?

ಕೊಹ್ಲಿ ನಕಲಿ ಫೀಲ್ಡಿಂಗ್ ಮಾಡಿದ್ದಾರೆ

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ ,‘ಇದು ನೂರಕ್ಕೆ ನೂರರಷ್ಟು ಫೇಕ್ ಫೀಲ್ಡಿಂಗ್, ಕೊಹ್ಲಿ ಥ್ರೋ ಎಸೆಯುವಂತೆ ಆ್ಯಕ್ಷನ್ ಮಾಡಿರುವುದು ಸ್ಪಷ್ಟವಾಗಿದೆ. ಇದನ್ನು ಅಂಪೈರ್ ನೋಡಿದ್ದರೆ, ಭಾರತಕ್ಕೆ ಐದು ರನ್ ದಂಡ ವಿಧಿಸಲಾಗುತ್ತಿತ್ತು. ಆದರೆ ಅಂಪೈರ್​ಗೆ ಇದು ಗಮನಕ್ಕೆ ಬರಲಿಲ್ಲ. ಹಾಗೆಯೇ ಯಾರೂ ಸಹ ಇದನ್ನು ಗಮನಿಸಲಿಲ್ಲ. ಆದ್ದರಿಂದ ಈಗ ಎಲ್ಲ ಮುಗಿದು ಹೋದ ಮೇಲೆ ಅದರ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ ಎಂದಿದ್ದಾರೆ.

ಏನಿದು ಪ್ರಸಂಗ?

ವಾಸ್ತವವಾಗಿ ಬಾಂಗ್ಲಾ ಇನ್ನಿಂಗ್ಸ್​ನ 7ನೇ ಓವರ್​ನಲ್ಲಿ ಈ ಘಟನೆ ನಡೆದಿದ್ದು, ಈ ಹಂತದಲ್ಲಿ ಬಾಂಗ್ಲಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಲಿಟನ್ ದಾಸ್ ಭಾರತೀಯ ಬೌಲರ್​ಗಳನ್ನು ಮನಬಂದಂತೆ ದಂಡಿಸುತ್ತಿದ್ದರು. ಈ ಹಂತದಲ್ಲಿ 7ನೇ ಓವರ್ ಎಸೆಯಲು ಬಂದ ಅಕ್ಷರ್ ಪಟೇಲ್ ಅವರ ಎಸೆತವನ್ನು ಡೀಪ್ ಆಫ್ ಕಡೆಗೆ ಆಡಿದರು. ಈ ವೇಳೆ ತನ್ನತ್ತ ಬಂದ ಬಾಲನ್ನು ಹಿಡಿದು ವಿಕೆಟ್ ಕೀಪರ್ ಕಡೆಗೆ ಅರ್ಷದೀಪ್​ ಸಿಂಗ್ ಎಸೆದರು. ಆದರೆ ಚೆಂಡು ಕೀಪರ್​ ಕೈಗೆ ಸೇರುವ ಮೊದಲು ಕೊಹ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಪಾಯಿಂಟ್ ದಿಕ್ಕಿನಿಂದ ಹಾದು ಹೋಯಿತು. ಆಗ ಕೊಹ್ಲಿ ಚೆಂಡನ್ನು ಹಿಡಿದು ಎಸೆದವರಂತೆ ಆ್ಯಕ್ಷನ್ ಮಾಡಿದರು. ಕೊಹ್ಲಿಯ ಈ ಕೃತ್ಯವನ್ನು ಫೀಲ್ಡ್ ಅಂಪೈರ್​ಗಳು ಸರಿಯಾಗಿ ಗಮನಿಸಿದ್ದರೆ, ನಿಯಮಗಳ ಪ್ರಕಾರ ಕೊಹ್ಲಿ ಮಾಡಿದ್ದು ಕಾನೂನು ಬಾಹೀರವಾಗಿದ್ದರಿಂದ ಇದಕ್ಕೆ ದಂಡವಾಗಿ ಎದುರಾಳಿ ತಂಡಕ್ಕೆ 5 ರನ್​ಗಳನ್ನು ನೀಡುತ್ತಿದ್ದರು. ಆದರೆ ಈ ಘಟನೆ ಅಂಪೈರ್​ಗಳ ಗಮನಕ್ಕೆ ಬರದಿರುವ ಕಾರಣ ಟೀಂ ಇಂಡಿಯಾ ದಂಡದಿಂದ ಪಾರಾಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:38 pm, Fri, 4 November 22