ಡಬ್ಲಿನ್ ತಲುಪಿದ ಟೀಮ್ ಇಂಡಿಯಾ ಆಟಗಾರರು: ಬುಮ್ರಾ ಅಭ್ಯಾಸ ಹೇಗಿದೆ ನೋಡಿ

|

Updated on: Aug 17, 2023 | 6:59 AM

Team India reach Dublin: ಜಸ್​ಪ್ರಿತ್ ಬುಮ್ರಾ ನೇತೃತ್ವದ ಟೀಮ್ ಇಂಡಿಯಾ ಆಟಗಾರರು ಐರ್ಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಡಬ್ಲಿನ್ ತಲುಪಿದ್ದಾರೆ. ತಲುಪಿದ ತಕ್ಷಣ ಸಮಯ ವ್ಯರ್ಥ ಮಾಡದೆ ಮೊದಲ ದಿನದಿಂದಲೇ ತಮ್ಮ ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಬಿಸಿಸಿಐ ಈ ಕುರಿತು ಫೋಟೋಗಳನ್ನು ಹಂಚಿಕೊಂಡಿದೆ.

ಡಬ್ಲಿನ್ ತಲುಪಿದ ಟೀಮ್ ಇಂಡಿಯಾ ಆಟಗಾರರು: ಬುಮ್ರಾ ಅಭ್ಯಾಸ ಹೇಗಿದೆ ನೋಡಿ
Team India
Follow us on

ಜಸ್​ಪ್ರಿತ್ ಬುಮ್ರಾ ನೇತೃತ್ವದ ಟೀಮ್ ಇಂಡಿಯಾ ಆಗಸ್ಟ್ 18 ರಿಂದ ಪ್ರಾರಂಭವಾಗುವ ಐರ್ಲೆಂಡ್ (India vs Ireland) ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗಾಗಿ ಡಬ್ಲಿನ್ ತಲುಪಿದೆ. ಮಂಗಳವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಐರ್ಲೆಂಡ್‌ಗೆ ತೆರಳುತ್ತಿರುವ ಭಾರತ ತಂಡದ ಚಿತ್ರಗಳನ್ನು ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿತ್ತು. ಇದೀಗ ಡಬ್ಲಿನ್ ತಲುಪಿ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿ ತಿಳಿಸಿದೆ. ಟೀಮ್ ಇಂಡಿಯಾ ಡಬ್ಲಿನ್‌ಗೆ ಬಂದಿಳಿದ ನಂತರ ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳದೆ ಅಭ್ಯಾಸಕ್ಕೆ ಕಣಕ್ಕಿಳಿದಿದ್ದು ವಿಶೇಷ.

ಟೀಮ್ ಇಂಡಿಯಾ ಆಟಗಾರರು ಸಮಯ ವ್ಯರ್ಥ ಮಾಡದೆ ಮೊದಲ ದಿನದಿಂದಲೇ ತಮ್ಮ ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಬಿಸಿಸಿಐ ತರಬೇತಿ ಅವಧಿಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದ ಒಟ್ಟಾಗಿ ನಿಂತಿರುವ ಫೋಟೋಗಳನ್ನು ಹಂಚಿಕೊಂಡಿದೆ. “ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಡಬ್ಲಿನ್‌ನಲ್ಲಿ ನಾವು ನಮ್ಮ ಸಿದ್ಧತೆಗಳನ್ನು ಪ್ರಾರಂಭಿಸಿದ್ದೇವೆ,” ಎಂದು ಬಿಸಿಸಿಐ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.

ಇದನ್ನೂ ಓದಿ
ಏಷ್ಯಾಕಪ್​ಗೆ ಬಿಸಿಸಿಐ ಟೀಮ್ ಇಂಡಿಯಾವನ್ನು ಯಾಕಿನ್ನೂ ಪ್ರಕಟಿಸಿಲ್ಲ ಗೊತ್ತೇ?: ಕಾರಣ ಬಹಿರಂಗ
Fifa Women World Cup 2023: ಮುಗ್ಗರಿಸಿದ ಆಸೀಸ್; ಇಂಗ್ಲೆಂಡ್- ಸ್ಪೇನ್‌ ನಡುವೆ ಫೈನಲ್ ಫೈಟ್
VIDEO: ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್ ಭರ್ಜರಿ ಬ್ಯಾಟಿಂಗ್
ಏಕದಿನ ವಿಶ್ವಕಪ್​ಗೆ ಆಸ್ಟ್ರೇಲಿಯಾ, ಇಂಗ್ಲೆಂಡ್ ಸಂಭಾವ್ಯ ತಂಡಗಳು ಪ್ರಕಟ

ಭಾರತದ ಆಟಗಾರರು ಅಭ್ಯಾಸಕ್ಕೆ ಸಿದ್ದತೆ ನಡೆಸುತ್ತಿರುವ ಫೋಟೋ-ವಿಡಿಯೋ:

 

 

ಐರ್ಲೆಂಡ್ ವಿರುದ್ಧ ಭಾರತ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಇದು ಕೆಲವೇ ದಿನಗಳ ಪಂದ್ಯ ಆಗಿರುವುದರಿಂದ ಹಿರಿಯ ಆಟಗಾರರ ಜೊತೆ ಕೋಚಿಂಗ್ ಸಿಬ್ಬಂದಿಗಳಿಗೂ ವಿಶ್ರಾಂತಿ ನೀಡಲಾಗಿದೆ. ಗಾಯದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಸಜ್ಜಾಗಿರುವ ಜಸ್​ಪ್ರಿತ್ ಬುಮ್ರಾ ಮೇಲೆ ಎಲ್ಲರ ಕಣ್ಣಿದೆ. ಬುಮ್ರಾ ಜೊತೆಗೆ ವೇಗಿ ಪ್ರಸಿದ್ಧ್ ಕೃಷ್ಣ ಕೂಡ ಗಾಯದಿಂದ ಚೇತರಿಸಿಕೊಂಡು ತಂಡದಲ್ಲಿದ್ದಾರೆ. ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತದ ಪುರುಷರ ಕ್ರಿಕೆಟ್ ತಂಡವನ್ನು ಮುನ್ನಡೆಸಲಿರುವ ರುತುರಾಜ್ ಗಾಯಕ್ವಾಡ್ ಅವರನ್ನು ಐರ್ಲೆಂಡ್ ಸರಣಿಗೆ ಉಪನಾಯಕರನ್ನಾಗಿ ನೇಮಿಸಲಾಗಿದೆ.

ಜಸ್​ಪ್ರೀತ್ ಬುಮ್ರಾ ಟಿ20 ತಂಡದ 11ನೇ ನಾಯಕ: ಉಳಿದ 10 ಕ್ಯಾಪ್ಟನ್​ಗಳ ಪಟ್ಟಿ ಇಲ್ಲಿದೆ

ಚೊಚ್ಚಲ ಕೆರಿಬಿಯನ್ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸಂಜು ಸ್ಯಾಮ್ಸನ್ ಅವರನ್ನು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಹೆಸರಿಸಲಾಗಿದ್ದು, ಜಿತೇಶ್ ಶರ್ಮಾ ಅವರನ್ನು ಬ್ಯಾಕಪ್ ಆಗಿ ಸೇರಿಸಲಾಗಿದೆ. ಇನ್ನು ಫೆಬ್ರವರಿ 2022 ರಲ್ಲಿ ಭಾರತ ಪರ ಕೊನೆಯ ಬಾರಿಗೆ ಟಿ20 ಪಂದ್ಯ ಆಡಿದ್ದ ಶಿವಂ ದುಬೆ ಅವರೊಂದಿಗೆ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ