ಏಷ್ಯಾಕಪ್​ಗೆ ಬಿಸಿಸಿಐ ಟೀಮ್ ಇಂಡಿಯಾವನ್ನು ಯಾಕಿನ್ನೂ ಪ್ರಕಟಿಸಿಲ್ಲ ಗೊತ್ತೇ?: ಕಾರಣ ಬಹಿರಂಗ

India Squad for Asia Cup: ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿ ಆಗಸ್ಟ್ 30 ರಂದು ಆರಂಭವಾಗಲಿದೆ. ಈ ಟೂರ್ನಿಗೆ ಬಹುತೇಕ ಎಲ್ಲ ತಂಡಗಳು ಪ್ರಕಟವಾಗಿದೆ. ಆದರೆ, ಬಿಸಿಸಿಐ ಟೀಮ್ ಇಂಡಿಯಾವನ್ನು ಮಾತ್ರ ಇನ್ನೂ ಹೆಸರಿಸಿಲ್ಲ. ಇದೀಗ ಬಿಸಿಸಿಐ ಭಾರತ ತಂಡವನ್ನು ಹೆಸರಿಸಲು ತಡಮಾಡುತ್ತಿರುವುದು ಏಕೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಏಷ್ಯಾಕಪ್​ಗೆ ಬಿಸಿಸಿಐ ಟೀಮ್ ಇಂಡಿಯಾವನ್ನು ಯಾಕಿನ್ನೂ ಪ್ರಕಟಿಸಿಲ್ಲ ಗೊತ್ತೇ?: ಕಾರಣ ಬಹಿರಂಗ
Team India and BCCI
Follow us
Vinay Bhat
|

Updated on: Aug 17, 2023 | 6:42 AM

ಬಹುನಿರೀಕ್ಷಿತ ಏಷ್ಯಾಕಪ್ 2023 (Asia Cup 2023) ಟೂರ್ನಿಗೆ ದಿನಗಣನೆ ಶುರುವಾಗಿದೆ. ಆಗಸ್ಟ್ 30 ರಂದು ಈ ಮಹತ್ವದ ಟೂರ್ನಿಗೆ ಚಾಲನೆ ಸಿಗಲಿದೆ. ಆದರೆ, ಏಷ್ಯಾಕಪ್​ಗೆ ಭಾರತ ತಂಡ ಮಾತ್ರ ಇನ್ನೂ ಪ್ರಕಟವಾಗಿಲ್ಲ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟೀಮ್ ಇಂಡಿಯಾ ಪ್ಲೇಯರ್ಸ್ ಅನ್ನು ಹೆಸರಿಸಿಲ್ಲ. ಅಭಿಮಾನಿಗಳಂತು ಇದಕ್ಕಾಗಿ ಕಾದುಕುಳಿತಿದ್ದಾರೆ. ಆದರೀಗ ಭಾರತ ತಂಡದ ಆಯ್ಕೆಗೆ ಬಿಸಿಸಿಐ ಯಾಕಿಷ್ಟು ತಡ ಮಾಡುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ.

ಈ ವಾರದ ಆರಂಭದಲ್ಲಿ ಭಾರತ ತಂಡದ ಘೋಷಣೆಗೆ ಬಿಸಿಸಿಐ ಸಭೆ ನಡೆಸಲು ನಿರ್ಧರ ಮಾಡಲಾಗಿತ್ತು. ಆದರೆ ಇದೀಗ ಪ್ರಮುಖ ಕಾರಣದಿಂದ ಆಯ್ಕೆ ಸಭೆಯನ್ನು ಮುಂದೂಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಕೆಲ ದಿನ ಕಾದು ಈ ವಾರದ ಅಂತ್ಯದಲ್ಲಿ ಸಭೆ ನಡೆಸಿ ತಂಡವನ್ನು ಪ್ರಕಟ ಮಾಡಲಿದೆಯಂತೆ. ಇಷ್ಟಕ್ಕೂ ಆಯ್ಕೆ ಸಮಿತಿ ಕಾಯುತ್ತಿರುವುದು ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಫಿಟ್ನೆಸ್​ಗಾಗಿ.

ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಅಭ್ಯಾಸ ಪಂದ್ಯಗಳನ್ನು ಆಡಲು ಪ್ರಾರಂಭಿಸಿದ್ದಾರೆ. ಸಂಪೂರ್ಣ ಚೇತರಿಕೆಯತ್ತ ಮುಖಮಾಡಿದ್ದಾರೆ. ಶೇ. 100 ರಷ್ಟು ಫಿಟ್ ಆಗಿದ್ದರೆ, ಇಬ್ಬರೂ ಆಟಗಾರರು ಏಷ್ಯಾಕಪ್​ಗೆ ಆಯ್ಕೆಯಾಗುತ್ತಾರೆ. ಹೀಗಾಗಿ ಇವರಿಬ್ಬರ ಫಿಟ್ನೆಸ್ ಟೆಸ್ಟ್ ನಡೆಸಬೇಕಿದೆ. ಬಳಿಕ ಸಭೆ ನಡೆಸಿ ಬಿಸಿಸಿಐ ಆಯ್ಕೆ ಸಮಿತಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

ಇದನ್ನೂ ಓದಿ
Image
VIDEO: ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್ ಭರ್ಜರಿ ಬ್ಯಾಟಿಂಗ್
Image
ಏಕದಿನ ವಿಶ್ವಕಪ್​ಗೆ ಆಸ್ಟ್ರೇಲಿಯಾ, ಇಂಗ್ಲೆಂಡ್ ಸಂಭಾವ್ಯ ತಂಡಗಳು ಪ್ರಕಟ
Image
ಜಸ್​ಪ್ರೀತ್ ಬುಮ್ರಾ ಟಿ20 ತಂಡದ 11ನೇ ನಾಯಕ: ಉಳಿದ 10 ಕ್ಯಾಪ್ಟನ್​ಗಳ ಪಟ್ಟಿ ಇಲ್ಲಿದೆ
Image
ವರ್ಷಕ್ಕೆ 1,248 ಕೋಟಿ ರೂ: ಅಲ್​ ಹಿಲಾಲ್ ಕ್ಲಬ್​ ಜೊತೆ ನೇಮರ್ ಒಪ್ಪಂದ

ಒನ್​ ಡೇ ಕಪ್ ಟೂರ್ನಿಯಿಂದ ಪೃಥ್ವಿ ಶಾ ಔಟ್

ರಾಹುಲ್ ಅವರು ಏಕದಿನ ಕ್ರಿಕೆಟ್​ನಲ್ಲಿ ಭಾರತದ ಪ್ರಮುಖ ವಿಕೆಟ್‌ಕೀಪರ್ ಆಗಿದ್ದು, ವಿಶ್ವಕಪ್‌ನಲ್ಲಿ ಕಣಕ್ಕಿಳಿಯಬೇಕಿದೆ. 4ನೇ ಕ್ರಮಾಂಕದಲ್ಲಿ ತೊಂದರೆ ಅನುಭವಿಸುತ್ತಿರುವ ಟೀಮ್ ಇಂಡಿಯಾಕ್ಕೆ ಅಯ್ಯರ್‌ ಅಗತ್ಯತೆ ತುಂಬಾ ಇದೆ. ಹೀಗಾಗಿ ಇವರಿಬ್ಬರು ಫಿಟ್ ಆಗಿ ತಂಡಕ್ಕೆ ಮರಳುವುದು ಮುಖ್ಯವಾಗಿದೆ.

ಐಪಿಎಲ್ 2023 ರ ಸಂದರ್ಭದಲ್ಲಿ ಫೀಲ್ಡಿಂಗ್ ಮಾಡುವಾಗ ರಾಹುಲ್ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಕೆಎಲ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರನಡೆಯಬೇಕಾಯಿತು. ಅತ್ತ ಅಯ್ಯರ್ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ಬೆನ್ನುನೋವಿಗೆ ತುತ್ತಾಗಿದ್ದರು. ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಐಪಿಎಲ್ 2023 ರಿಂದ ಹೊರನಡೆಯಬೇಕಾಯಿತು.

ಏಷ್ಯಾಕಪ್ 2023 ರಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ನಾಯಕನಾಗಿ ಮುನ್ನಡೆಸಲಿದ್ದಾರೆ. ಹಾರ್ದಿಕ್ ಪಾಂಡ್ಯ ಉಪ ನಾಯಕನಾಗಿದ್ದಾರೆ. ಆಗಸ್ಟ್ 30 ರಂದು ಏಷ್ಯಾಕಪ್​ಗೆ ಚಾಲನೆ ಸಿಗಲಿದೆ. ಸೆಪ್ಟೆಂಬರ್ 2 ರಂದು ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ಏಷ್ಯಾಕಪ್ ಬಳಿಕ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ನಡೆಯಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್