ವರ್ಷಕ್ಕೆ 1,248 ಕೋಟಿ ರೂ: ಅಲ್​ ಹಿಲಾಲ್ ಕ್ಲಬ್​ ಜೊತೆ ನೇಮರ್ ಒಪ್ಪಂದ

Neymar Jr: 2017 ರಲ್ಲಿ ಸ್ಪೇನ್​ನ ಖ್ಯಾತ ಫುಟ್​ಬಾಲ್ ಕ್ಲಬ್ ಬಾರ್ಸಿಲೋನಾ ತಂಡದಲ್ಲಿದ್ದ ನೇಮರ್ ಅವರನ್ನು ಟ್ರಾನ್ಸ್​ಫರ್ ಆಯ್ಕೆಯ ಮೂಲಕ ಪ್ಯಾರಿಸ್ ಸೇಂಟ್-ಜರ್ಮೈನ್ ಖರೀದಿಸಿತ್ತು. ಆ ಬಳಿಕ 6 ವರ್ಷಗಳ ಕಾಲ ಪಿಎಸ್​ಜಿ ಗೆಲುವಿನಲ್ಲಿ ಬ್ರೆಝಿಲ್ ತಾರೆ ಪ್ರಮುಖ ಪಾತ್ರವಹಿಸಿದ್ದರು. ಈ ವೇಳೆ ಆಡಿದ್ದ 173 ಪಂದ್ಯಗಳಲ್ಲಿ 118 ಗೋಲುಗಳನ್ನು ಬಾರಿಸಿದ್ದಲ್ಲದೆ, 77 ಬಾರಿ ಇತರೆ ಆಟಗಾರರು ಗೋಲುಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ವರ್ಷಕ್ಕೆ 1,248 ಕೋಟಿ ರೂ: ಅಲ್​ ಹಿಲಾಲ್ ಕ್ಲಬ್​ ಜೊತೆ ನೇಮರ್ ಒಪ್ಪಂದ
Neymar Jr
Follow us
TV9 Web
| Updated By: ಝಾಹಿರ್ ಯೂಸುಫ್

Updated on:Aug 16, 2023 | 7:41 PM

ಬ್ರೆಝಿಲ್​ನ ಖ್ಯಾತ ಫುಟ್​ಬಾಲ್ ಆಟಗಾರ ನೇಮರ್ ಜೂನಿಯರ್ ಸೌದಿ ಅರೇಬಿಯಾದ ಅಲ್​ ಹಿಲಾಲ್ ಕ್ಲಬ್​ ಪರ ಕಣಕ್ಕಿಳಿಯುವುದು ಖಚಿತವಾಗಿದೆ. ಮಂಗಳವಾರ ನೇಮರ್ ಹಾಗೂ ಕ್ಲಬ್ ಜೊತೆ ಒಪ್ಪಂದವಾಗಿದ್ದು, ಅದರಂತೆ ಮುಂದಿನ 2 ವರ್ಷಗಳ ಕಾಲ ಬ್ರೆಝಿಲ್ ತಾರೆ ಅಲ್ ಹಿಲಾಲ್ ಪರ ಕಣಕ್ಕಿಳಿಯಲಿದ್ದಾರೆ.

ಈ ಹಿಂದೆ ನೇಮರ್​ ಫ್ರಾನ್ಸ್​ನ ಪ್ಯಾರಿಸ್ ಸೇಂಟ್-ಜರ್ಮೈನ್ (PSG) ಪರ ಕಣಕ್ಕಿಳಿಯುತ್ತಿದ್ದರು. ಆದರೆ ಈ ಬಾರಿ ಪಿಎಸ್​ಜಿ ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸಲು ಅವರು ನಿರ್ಧರಿಸಿದ್ದರು. ಹೀಗಾಗಿ ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್ ಅವರನ್ನು ಟ್ರಾನ್ಸ್​ಫರ್ ಮಾಡಲು ನಿರ್ಧರಿಸಿತ್ತು.

ಅದರಂತೆ ಇದೀಗ ಸೌದಿ ಅರೇಬಿಯಾದ ಅಲ್ ಹಿಲಾಲ್ ಹಾಗೂ ಪ್ಯಾರಿಸ್ ಸೇಂಟ್-ಜರ್ಮೈನ್ ನಡುವೆ ವರ್ಗಾವಣೆ ಡೀಲ್ ಕುದುರಿದೆ. ಅಲ್ಲದೆ ವರ್ಗಾವಣೆ ಮೊತ್ತವಾಗಿ ಪಿಎಸ್​ಜಿಗೆ ಅಲ್​ ಹಿಲಾಲ್ ಕ್ಲಬ್​ ಸುಮಾರು 100 ಮಿಲಿಯನ್ ಯುರೋ ನೀಡಲಿದೆ ಎಂದು ವರದಿಯಾಗಿದೆ.

2497 ಕೋಟಿ ರೂ.ಗೆ ನೇಮರ್ ಡೀಲ್:

ಹೊಸ ಒಪ್ಪಂದಂತೆ ನೇಮರ್ ಮುಂದಿನ 2 ವರ್ಷಗಳ ಕಾಲ ಅಲ್ ಹಿಲಾಲ್ ಪರ ಕಣಕ್ಕಿಳಿಯಲಿದ್ದಾರೆ. ಇದಕ್ಕಾಗಿ ಬ್ರೆಝಿಲ್ ತಾರೆ ಜೊತೆ ಅಲ್ ಹಿಲಾಲ್ ಕ್ಲಬ್​ 300 ಮಿಲಿಯನ್ ಡಾಲರ್​ನ ಒಪ್ಪಂದ ಮಾಡಿಕೊಂಡಿದೆ. ಅಂದರೆ ಭಾರತೀಯ ಮೌಲ್ಯ ಸುಮಾರು 24,970,496,700 ರೂ.

ವಾರ್ಷಿಕ ಮೊತ್ತದ ಜೊತೆ ಬೋನಸ್:

ಅಲ್​ ಹಿಲಾಲ್ ಜೊತೆಗಿನ ಒಪ್ಪಂದ ಪ್ರಕಾರ, ನೇಮರ್ ವರ್ಷಕ್ಕೆ 1248+ ಕೋಟಿ ರೂ. ಪಡೆಯಲಿದ್ದಾರೆ. ಇದರ ಜೊತೆಗೆ ಇತರೆ ಜಾಹೀರಾತು ಹಾಗೂ ವಾಣಿಜ್ಯ ವ್ಯವಹಾರಗಳಿಂದ ಗಳಿಸುವ ಆದಾಯದಿಂದ ಕ್ಲಬ್​ ಬೋನಸ್ ಮೊತ್ತವನ್ನು ಸಹ ನೀಡಲಿದೆ.

ಅಂದರೆ ನೇಮರ್ ಇನ್ನೆರಡು ವರ್ಷಗಳ ಕಾಲ ಅಲ್ ಹಿಲಾಲ್ ಕ್ಲಬ್​ನಿಂದ ಪ್ರತಿ ತಿಂಗಳು 104 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಆದರೆ ಇದು ಕ್ರಿಸ್ಟಿಯಾನೊ ರೊನಾಲ್ಡೊಗಿಂತ ಕಡಿಮೆ ಎಂಬುದು ಇಲ್ಲಿ ಉಲ್ಲೇಖಾರ್ಹ.

ಕೋಟಿಗಳಿಸುತ್ತಿರುವ ಕ್ರಿಸ್ಟಿಯಾನೊ:

ಸೌದಿ ಅರೇಬಿಯಾದ ಅಲ್​ ನಾಸ್ರ್ ಪರ ಆಡುತ್ತಿರುವ ಪೋರ್ಚುಗಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಪಡೆಯುತ್ತಿರುವ ವಾರ್ಷಿಕ ವೇತನ ಬರೋಬ್ಬರಿ 1,770 ಕೋಟಿ ರೂ. ಅಂದರೆ CR7 ಅವರ ಪ್ರತಿ ತಿಂಗಳ ಸಂಭಾವನೆ 147 ಕೋಟಿ ರೂ.

ಪಿಎಸ್​ಜಿ ಪರ ಮಿಂಚಿದ್ದ ನೇಮರ್:

2017 ರಲ್ಲಿ ಸ್ಪೇನ್​ನ ಖ್ಯಾತ ಫುಟ್​ಬಾಲ್ ಕ್ಲಬ್ ಬಾರ್ಸಿಲೋನಾ ತಂಡದಲ್ಲಿದ್ದ ನೇಮರ್ ಅವರನ್ನು ಟ್ರಾನ್ಸ್​ಫರ್ ಆಯ್ಕೆಯ ಮೂಲಕ ಪ್ಯಾರಿಸ್ ಸೇಂಟ್-ಜರ್ಮೈನ್ ಖರೀದಿಸಿತ್ತು. ಆ ಬಳಿಕ 6 ವರ್ಷಗಳ ಕಾಲ ಪಿಎಸ್​ಜಿ ಗೆಲುವಿನಲ್ಲಿ ಬ್ರೆಝಿಲ್ ತಾರೆ ಪ್ರಮುಖ ಪಾತ್ರವಹಿಸಿದ್ದರು. ಈ ವೇಳೆ ಆಡಿದ್ದ 173 ಪಂದ್ಯಗಳಲ್ಲಿ 118 ಗೋಲುಗಳನ್ನು ಬಾರಿಸಿದ್ದಲ್ಲದೆ, 77 ಬಾರಿ ಇತರೆ ಆಟಗಾರರು ಗೋಲುಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇದನ್ನೂ ಓದಿ: ಭಾರತ ವಿಶ್ವಕಪ್ ತಂಡದಿಂದ 7 ಆಟಗಾರರು ಔಟ್..!

ಇದಕ್ಕೂ ಮುನ್ನ ಬಾರ್ಸಿಲೋನಾ ಪರ 186 ಪಂದ್ಯಗಳಲ್ಲಿ 105 ಗೋಲುಗಳಿಸಿದ್ದರು. ಹಾಗೆಯೇ 76 ಬಾರಿ ಅಸಿಸ್ಟ್ ಮಾಡಿದ್ದರು. ಇದೀಗ ತಮ್ಮ 31ನೇ ವಯಸ್ಸಿನಲ್ಲಿ ಸೌದಿ ಅರೇಬಿಯಾ ಕ್ಲಬ್​ನತ್ತ ಮುಖ ಮಾಡಿರುವ ನೇಮರ್ ಅರಬ್ಬರ ನಾಡಿನಲ್ಲಿ ಮೋಡಿ ಮಾಡುವ ವಿಶ್ವಾಸದಲ್ಲಿದ್ದಾರೆ.

Published On - 7:39 pm, Wed, 16 August 23

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ