Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಕ್ಲಬ್ ಪರ ಕಣಕ್ಕಿಳಿಯಲಿದ್ದಾರೆ ಖ್ಯಾತ ಫುಟ್​ಬಾಲ್ ತಾರೆ ನೇಮರ್

Neymar Jr: 2017 ರಲ್ಲಿ ಸ್ಪೇನ್​ನ ಖ್ಯಾತ ಫುಟ್​ಬಾಲ್ ಕ್ಲಬ್ ಬಾರ್ಸಿಲೋನಾ ನೇಮರ್ ಜೂನಿಯರ್ ಅವರನ್ನು ಸಾರ್ವಕಾಲಿಕ ದಾಖಲೆಯ ಮೊತ್ತಕ್ಕೆ ಪ್ಯಾರಿಸ್ ಸೇಂಟ್-ಜರ್ಮೈನ್ ತಂಡಕ್ಕೆ ವರ್ಗಾವಣೆ ಮಾಡಿಕೊಂಡಿತ್ತು. ಅದರಂತೆ 6 ವರ್ಷಗಳ ಕಾಲ ಪಿಎಸ್​ಜಿ ಪರ ಕಣಕ್ಕಿಳಿದಿದ್ದ ನೇಮರ್ 173 ಪಂದ್ಯಗಳಲ್ಲಿ 118 ಗೋಲುಗಳನ್ನು ಬಾರಿಸಿದ್ದರು.

ಹೊಸ ಕ್ಲಬ್ ಪರ ಕಣಕ್ಕಿಳಿಯಲಿದ್ದಾರೆ ಖ್ಯಾತ ಫುಟ್​ಬಾಲ್ ತಾರೆ ನೇಮರ್
Neymar Jr
Follow us
TV9 Web
| Updated By: ಝಾಹಿರ್ ಯೂಸುಫ್

Updated on:Aug 14, 2023 | 8:00 PM

ಬ್ರೆಝಿಲ್​ನ ಖ್ಯಾತ ಫುಟ್​ಬಾಲ್ ತಾರೆ ನೇಮರ್ ಜೂನಿಯರ್ (Neymar Jr) ಅಲ್ ಹಿಲಾಲ್ (Al Hilal) ಕ್ಲಬ್ ಪರ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಪ್ರಸ್ತುತ ಕ್ಲಬ್ ಪ್ಯಾರಿಸ್ ಸೇಂಟ್-ಜರ್ಮೈನ್ (PSG) ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸಲು ನೇಮರ್ ನಿರ್ಧರಿಸಿದ್ದು, ಇದರ ಬೆನ್ನಲ್ಲೇ ಸ್ಟಾರ್ ಆಟಗಾರನನ್ನು ಟ್ರಾನ್ಸ್​ಫರ್​ ಮಾಡಲು ಪಿಎಸ್​ಜಿ ಮುಂದಾಗಿದೆ. ಅದರಂತೆ ಇದೀಗ ಸೌದಿ ಅರೇಬಿಯಾದ ಖ್ಯಾತ ಕ್ಲಬ್ ಅಲ್ ಹಿಲಾಲ್ ಜೊತೆ ಪಿಎಸ್‌ಜಿ ವರ್ಗಾವಣೆ ಒಪ್ಪಂದ ಮಾಡಿಕೊಂಡಿದೆ ಎಂದು ವರದಿಯಾಗಿದೆ.

2017 ರಲ್ಲಿ ಸ್ಪೇನ್​ನ ಖ್ಯಾತ ಫುಟ್​ಬಾಲ್ ಕ್ಲಬ್ ಬಾರ್ಸಿಲೋನಾ ನೇಮರ್ ಜೂನಿಯರ್ ಅವರನ್ನು ಸಾರ್ವಕಾಲಿಕ ದಾಖಲೆಯ ಮೊತ್ತಕ್ಕೆ ಪ್ಯಾರಿಸ್ ಸೇಂಟ್-ಜರ್ಮೈನ್ ತಂಡಕ್ಕೆ ವರ್ಗಾವಣೆ ಮಾಡಿಕೊಂಡಿತ್ತು. ಅದರಂತೆ 6 ವರ್ಷಗಳ ಕಾಲ ಪಿಎಸ್​ಜಿ ಪರ ಕಣಕ್ಕಿಳಿದಿದ್ದ ನೇಮರ್ 173 ಪಂದ್ಯಗಳಲ್ಲಿ 118 ಗೋಲುಗಳನ್ನು ಬಾರಿಸಿದ್ದರು.

ಇದೀಗ ಆರು ವರ್ಷಗಳ ಬಳಿಕ ಯುರೋಪ್ ಫುಟ್​ಬಾಲ್ ಅಂಗಳವನ್ನು ತೊರೆಯಲು ನೇಮರ್ ನಿರ್ಧರಿಸಿದ್ದಾರೆ. ಈ ನಿರ್ಧಾರದ ಬೆನ್ನಲ್ಲೇ ಸೌದಿ ಅರೇಬಿಯಾ ಕ್ಲಬ್ ಬ್ರೆಝಿಲ್ ಸೂಪರ್ ಸ್ಟಾರ್​ನನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ನೇಮರ್ ವರ್ಗಾವಣೆ ಮುಖ್ಯಾಂಶಗಳು:

  • ಈಗಾಗಲೇ ಪ್ಯಾರಿಸ್ ಸೇಂಟ್-ಜರ್ಮೈನ್ ಹಾಗೂ ಅಲ್ ಹಿಲಾಲ್ ನಡುವೆ ಒಪ್ಪಂದಕ್ಕೆ ಸಹಿ
  • ನೇಮರ್ ಜೊತೆ ಎರಡು ವರ್ಷಗಳ ಒಪ್ಪಂದ ಮಾಡಿಕೊಂಡ ಅಲ್​ ಹಿಲಾಲ್
  • ಅಲ್ ಹಿಲಾಲ್ ಪರ ಕೂಡ 10 ನಂಬರ್​ನ ಜೆರ್ಸಿಯಲ್ಲಿ  ಕಣಕ್ಕಿಳಿಯಲಿರುವ ನೇಮರ್
  • ವರ್ಗಾವಣೆಗಾಗಿ 100 ಮಿಲಿಯನ್ ಯುರೋಗಿಂತ ಕಡಿಮೆ ಮೊತ್ತ ಪಡೆಯಲಿರುವ ಪ್ಯಾರಿಸ್ ಸೇಂಟ್-ಜರ್ಮೈನ್ ಕ್ಲಬ್
  • ಈ ವಾರ ಸೌದಿಗೆ ಪ್ರಯಾಣಿಸಲಿರುವ ನೇಮರ್ ಜೂನಿಯರ್

ನೇಮರ್ ಜೊತೆ ಅಲ್ ಹಿಲಾಲ್ ಡೀಲ್:

ಅಲ್ ಹಿಲಾಲ್ ಕ್ಲಬ್ ಹಾಗೂ ನೇಮರ್ ಜೊತೆಗಿನ ಒಪ್ಪಂದ ಮೊತ್ತ ಇನ್ನೂ ಬಹಿರಂಗಪಡಿಸಲಾಗಿಲ್ಲ. ಇದಾಗ್ಯೂ ಫ್ರಾನ್ಸ್‌ನ ಪ್ರಮುಖ ಕ್ರೀಡಾ ಪತ್ರಿಕೆ L’Equipe , ಅಲ್​ ಹಿಲಾಲ್ ನೇಮರ್​ಗೆ ಒಟ್ಟು 160 ಮಿಲಿಯನ್ ಯುರೋಗಳನ್ನು ಪಾತಿಸಲಿದೆ ಎಂದು ವರದಿ ಮಾಡಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 1450 ಕೋಟಿ ರೂ.

ಪಿಎಸ್​ಜಿ ನೀಡುವ ವೇತನ ಎಷ್ಟು?

ಕಳೆದ ಆರು ವರ್ಷಗಳಿಂದ ಫ್ರಾನ್ಸ್​ನ ಪ್ಯಾರಿಸ್ ಸೇಂಟ್-ಜರ್ಮೈನ್ ಕ್ಲಬ್​ ಪರ ಆಡುತ್ತಿರುವ ನೇಮರ್ ಜೂನಿಯರ್ ವಾರ್ಷಿಕವಾಗಿ 71 ಮಿಲಿಯನ್ ಯೂರೋ ವೇತನ ಪಡೆಯುತ್ತಿದ್ದಾರೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 643 ಕೋಟಿ ರೂ. ಇದೀಗ ಇದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಪಾವತಿಸಲು ಅಲ್ ಹಿಲಾಲ್ ಕ್ಲಬ್ ಮುಂದಾಗಿದೆ.

ಸೌದಿ ಅರೇಬಿಯಾದಲ್ಲಿ ರೊನಾಲ್ಡೊ ಕಿಂಗ್:

ಸೌದಿ ಪ್ರೊ ಲೀಗ್​ನಲ್ಲಿ ಅಲ್​ ನಾಸ್ರ್ ಪರ ಆಡುತ್ತಿರುವ ಕ್ರಿಸ್ಟಿಯಾನೊ ರೊನಾಲ್ಡೊ ವಾರ್ಷಿಕ ವೇತನವಾಗಿ 1,770 ಕೋಟಿ ರೂ. ಪಡೆಯುತ್ತಿದ್ದಾರೆ. ಇತ್ತ ರೊನಾಲ್ಡೊ ಬೆನ್ನಲ್ಲೇ ಸ್ಯಾಡಿಯೊ ಮಾನೆ, ಕರೀಮ್ ಬೆನ್​ಝೆಮಾ ಸೇರಿದಂತೆ ಯುರೋಪ್​ ಲೀಗ್​ನಲ್ಲಿ ಮಿಂಚಿದ್ದ ಸ್ಟಾರ್ ಆಟಗಾರರು ಸೌದಿ ಅರೇಬಿಯಾ ಕ್ಲಬ್​ನತ್ತ ಮುಖ ಮಾಡಿದ್ದರು.

ಇದನ್ನೂ ಓದಿ: Cristiano Ronaldo: ದಿನಕ್ಕೆ 4.8 ಕೋಟಿ ರೂ: 5ನೇ ಕ್ಲಬ್ ಪರ ಕಣಕ್ಕಿಳಿಯಲಿರುವ ಕ್ರಿಸ್ಟಿಯಾನೊ ರೊನಾಲ್ಡೊ

ಇದೀಗ ನೇಮರ್ ಜೂನಿಯರ್ ಕೂಡ ಸೌದಿ ಕ್ಲಬ್ ಪರ ಕಣಕ್ಕಿಳಿಯಲು ಮುಂದಾಗಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಸೌದಿ ಪ್ರೊ ಲೀಗ್ ಫುಟ್​ಬಾಲ್ ಅಂಗಳದ ಹೊಸ ರಣರಂಗವಾಗಿ ಮಾರ್ಪಟ್ಟರೂ ಅಚ್ಚರಿಪಡಬೇಕಿಲ್ಲ.

Published On - 7:50 pm, Mon, 14 August 23

ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
Babar Azam: 0, 1, 2... ಬಂದ ಬಾಬರ್, ಹೋದ ಬಾಬರ್
Babar Azam: 0, 1, 2... ಬಂದ ಬಾಬರ್, ಹೋದ ಬಾಬರ್
ಕುಟುಂಬದ ಜೊತೆ ಉಡುಪಿಗೆ ಬಂದ ಸುನೀಲ್ ಶೆಟ್ಟಿ; ಮಾರಿಗುಡಿಗೆ ಭೇಟಿ
ಕುಟುಂಬದ ಜೊತೆ ಉಡುಪಿಗೆ ಬಂದ ಸುನೀಲ್ ಶೆಟ್ಟಿ; ಮಾರಿಗುಡಿಗೆ ಭೇಟಿ
ಜೀಪ್​ ಅಡ್ಡಗಟ್ಟಿದ ಹುಲಿರಾಯ: ಆತಂಕದಿಂದ ಚಿರಾಡಿದ ಪ್ರವಾಸಿಗರು!
ಜೀಪ್​ ಅಡ್ಡಗಟ್ಟಿದ ಹುಲಿರಾಯ: ಆತಂಕದಿಂದ ಚಿರಾಡಿದ ಪ್ರವಾಸಿಗರು!
ಕಾರಿನ ಮೇಲೆ ಕಾಡಾನೆ ದಾಳಿ ಯತ್ನ, ಎದೆ ಝಲ್​ ಎನ್ನಿಸುವ ವಿಡಿಯೋ ವೈರಲ್
ಕಾರಿನ ಮೇಲೆ ಕಾಡಾನೆ ದಾಳಿ ಯತ್ನ, ಎದೆ ಝಲ್​ ಎನ್ನಿಸುವ ವಿಡಿಯೋ ವೈರಲ್
ಮದುವೆ ಯಾಕಾಗಬೇಕು? ರವಿಚಂದ್ರನ್ ಮಾತಿಗೆ ಚಪ್ಪಾಳೆಯ ಸುರಿಮಳೆ
ಮದುವೆ ಯಾಕಾಗಬೇಕು? ರವಿಚಂದ್ರನ್ ಮಾತಿಗೆ ಚಪ್ಪಾಳೆಯ ಸುರಿಮಳೆ