ಖ್ಯಾತ ಫುಟ್ಬಾಲ್ ಆಟಗಾರ ನೇಮರ್​ ಮೇಲೆ ಮುಗಿಬಿದ್ದು ಶೂ ಕದ್ದೊಯ್ದ ಹುಚ್ಚು ಅಭಿಮಾನಿ; ವಿಡಿಯೋ ನೋಡಿ

ಖ್ಯಾತ ಫುಟ್ಬಾಲ್ ಆಟಗಾರ ನೇಮರ್​ ಮೇಲೆ ಮುಗಿಬಿದ್ದು ಶೂ ಕದ್ದೊಯ್ದ ಹುಚ್ಚು ಅಭಿಮಾನಿ; ವಿಡಿಯೋ ನೋಡಿ
ನೇಮರ್​ ಮೇಲೆ ಮುಗಿಬಿದ್ದು ಶೂ ಕದ್ದೊಯ್ದ ಹುಚ್ಚು ಅಭಿಮಾನಿ

ನೇಮರ್ ಕೂಡ ಬಸ್‌ನಿಂದ ಇಳಿದು ಎರಡು ಹೆಜ್ಜೆ ಇಟ್ಟ ಕೂಡಲೇ ಇದ್ದಕ್ಕಿದ್ದಂತೆ ಅವರ ಇಬ್ಬರು ಅಭಿಮಾನಿಗಳು ಓಡಿ ಬಂದು ಬಲವಂತವಾಗಿ ಅವರ ಮೇಲೆ ಮುಗಿಬಿದ್ದರು.

pruthvi Shankar

| Edited By: Skanda

Jun 05, 2021 | 8:53 AM

ನೇಮರ್. ಈ ಹೆಸರು ಫುಟ್ಬಾಲ್ ಜಗತ್ತಿನಲ್ಲಿ ಪ್ರಸಿದ್ಧವಾಗಿದೆ. ಪ್ರಪಂಚದಾದ್ಯಂತ ನೇಮರ್ ಆಟಕ್ಕೆ ಅನೇಕ ಅಭಿಮಾನಿಗಳು ಇದ್ದಾರೆ. ಪಿಎಸ್ಜಿ ಕ್ಲಬ್‌ನ ಈ ಸ್ಟಾರ್ ಫಾರ್ವರ್ಡ್ ಪ್ರಸ್ತುತ ಫುಟ್ಬಾಲ್ ಜಗತ್ತಿನ ಪ್ರಖ್ಯಾತ ಫುಟ್‌ಬಾಲ್ ಆಟಗಾರರಲ್ಲಿ ಒಬ್ಬರು. ಅವರ ಜನಪ್ರಿಯತೆಯೂ ತುಂಬಾ ಹೆಚ್ಚಾಗಲು ಇದು ಕಾರಣವಾಗಿದೆ. ಇದು ತಮ್ಮದೇ ದೇಶವಾದ ಬ್ರೆಜಿಲ್‌ನಲ್ಲಿ ನೇಮರ್ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ, ಕೆಲವೊಮ್ಮೆ ಅಭಿಮಾನ ತಾರಕಕ್ಕೇರಿ ನೇಮರ್​ಗೆ ಇನ್ನಿಲ್ಲದ ತೊಂದರೆ ನೀಡುತ್ತದೆ. ಜತೆಗೆ ಮುಜುಗರವನ್ನು ಸಹ ಉಂಟು ಮಾಡುತ್ತದೆ. ಈಗ ಅಂತಹದ್ದೇ ಘಟನೆಯೊಂದು ನಡೆದಿದೆ.

2022 ರ ವಿಶ್ವಕಪ್ ಅರ್ಹತಾ ಪಂದ್ಯಗಳಿಗಾಗಿ ಈಕ್ವೆಡಾರ್ ವಿರುದ್ಧದ ಪಂದ್ಯದ ಮೊದಲು ಈ ಘಟನೆ ನಡೆದಿದೆ. ನೇಮರ್ ತಮ್ಮ ದೇಶದ ತಂಡ ಬ್ರೆಜಿಲ್ ಜೊತೆ ಅಭ್ಯಾಸ ಮಾಡಿದ ನಂತರ ಆಟಗಾರರ ಜತೆ ಬಸ್ ಮೂಲಕ ಹೋಟೆಲ್ ತಲುಪಿದ್ದರು. ತಂಡದ ಆಟಗಾರರು ಒಬ್ಬೊಬ್ಬರಾಗಿ ಬಸ್ ಇಳಿದು ಹೋಟೆಲ್ ಒಳಗೆ ಹೋಗುತ್ತಿದ್ದರು. ಆದರೆ, ಈ ಸಮಯದಲ್ಲಿ ನೇಮರ್‌ಗೆ ಏನಾಯಿತು ಎಂಬುದು ಸಂಪೂರ್ಣವಾಗಿ ಆಘಾತಕಾರಿಯಾಗಿದೆ. ಹೋಟೆಲ್ ಪ್ರದೇಶದಲ್ಲಿ ಈ ರೀತಿಯ ಘಟನೆ ನಡೆಯುತ್ತದೆ ಎಂದು ನೇಮರ್ ಕೂಡ ಯೋಚಿಸಿರಲಿಲ್ಲ.

ನೇಮರ್‌ ಶೂ ಕದ್ದೊಯ್ದ ಅಭಿಮಾನಿ ನೇಮರ್ ಬಸ್‌ನಿಂದ ಇಳಿದು ಎರಡು ಹೆಜ್ಜೆ ಇಟ್ಟ ಕೂಡಲೇ ಇದ್ದಕ್ಕಿದ್ದಂತೆ ಅವರ ಇಬ್ಬರು ಅಭಿಮಾನಿಗಳು ಓಡಿ ಬಂದು ಬಲವಂತವಾಗಿ ಅವರ ಮೇಲೆ ಮುಗಿಬಿದ್ದರು. ಅಭಿಮಾನಿಗಳು ನೇಮರ್‌ ಮೇಲೆ ಮುಗಿಬಿದ್ದಿದ್ದನ್ನು ನೋಡಿ, ಸೆಕ್ಯುರಿಟಿ ಗಾರ್ಡ್‌ಗಳು ಕೂಡಲೇ ನೇಮರ್​ ಬಳಿಗೆ ಧಾವಿಸಿದರು, ಆದರೆ ಆ ಹೊತ್ತಿಗೆ ಆ ಅಭಿಮಾನಿ ನೇಮರ್‌ನ ಶೂ ಒಂದನ್ನು ಕದಿಯುವಲ್ಲಿ ಯಶಸ್ವಿಯಾದರು. ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಬ್ರೆಜಿಲ್ ಅಗ್ರಸ್ಥಾನ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಬ್ರೆಜಿಲ್ ಪ್ರಸ್ತುತ ದಕ್ಷಿಣ ಅಮೆರಿಕದ ಪಾಯಿಂಟ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಈಕ್ವೆಡಾರ್ ವಿರುದ್ಧದ ಪಂದ್ಯವನ್ನು ಆಡಿದ ನಂತರ, ಬ್ರೆಜಿಲ್ ತಂಡವು ಪರಾಗ್ವೆ ವಿರುದ್ಧ ಆಡಲಿದೆ. ಅದರ ನಂತರ ಈ ತಂಡವು ಕೋಪಾ ಅಮೇರಿಕಾ ಕಪ್‌ಗೆ ತಯಾರಿ ಆರಂಭಿಸಲಿದ್ದು, ಅಲ್ಲಿ ಮೊದಲ ಪಂದ್ಯದಲ್ಲಿ ವೆನೆಜುವೆಲಾವನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: ಕೊವಿಡ್19 ಕಾರಣದಿಂದ ಚೀನಾದಲ್ಲಿ ನಡೆಯಬೇಕಿದ್ದ ಫುಟ್​ಬಾಲ್ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಗಳು ದುಬೈಗೆ ಸ್ಥಳಾಂತರ

Follow us on

Most Read Stories

Click on your DTH Provider to Add TV9 Kannada