ಕೊವಿಡ್19 ಕಾರಣದಿಂದ ಚೀನಾದಲ್ಲಿ ನಡೆಯಬೇಕಿದ್ದ ಫುಟ್ಬಾಲ್ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಗಳು ದುಬೈಗೆ ಸ್ಥಳಾಂತರ
ಈವರೆಗಿನ ಪಂದ್ಯಗಳ ಅನುಸಾರ ಅಂಕಪಟ್ಟಿಯಲ್ಲಿ ಚೀನಾ ಎರಡನೇ ಸ್ಥಾನದಲ್ಲಿದೆ. ಸಿರಿಯಾ ತಂಡ ಮೊದಲ ಸ್ಥಾನದಲ್ಲಿದೆ. ಫುಟ್ಬಾಲ್ ವಿಶ್ವಕಪ್ ಕನಸು ನನಸಾಗಿಸಲು ಉಭಯ ತಂಡಗಳು ಬಿರುಸಿನ ಕಾದಾಟದಲ್ಲಿ ತೊಡಗಿವೆ.
ಚೀನಾದಲ್ಲಿ ನಡೆಯಬೇಕಾಗಿದ್ದ ಫುಟ್ಬಾಲ್ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಗಳು ಕೊರೊನಾ ಸೋಂಕಿನ ಕಾರಣದಿಂದ ದುಬೈಗೆ ಸ್ಥಳಾಂತರಗೊಂಡಿವೆ. ಸಿರಿಯಾ ಹಾಗೂ ಮಾಲ್ಡೀವ್ಸ್ ತಂಡಗಳಲ್ಲಿ ಕೊವಿಡ್-19 ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿಯೂ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಇಂದು (ಮೇ 31) ಚೈನೀಸ್ ಫುಟ್ಬಾಲ್ ಅಸೋಸಿಯೇಷನ್ ಹೇಳಿಕೆ ನೀಡಿದೆ.
ಗ್ರೂಪ್ ಎ ಫಿಕ್ಸ್ಚರ್ಸ್ನ ಚೀನಾ, ಸಿರಿಯಾ, ಮಾಲ್ಡೀವ್ಸ್, ಫಿಲಿಫೈನ್ಸ್ ಹಾಗೂ ಗುಆಮ್ ತಂಡಗಳು ಕೊರೊನಾ ಸೋಂಕಿನ ಪರಿಣಾಮಕ್ಕೆ ಒಳಪಟ್ಟಿವೆ. ಮಾಲ್ಡೀವ್ಸ್ ಹಾಗೂ ಸಿರಿಯಾ ರಾಷ್ಟ್ರೀಯ ಫುಟ್ಬಾಲ್ ತಂಡದಲ್ಲಿ ಕೊವಿಡ್ ಪ್ರಕರಣಗಳು ಕಂಡುಬಂದ ಕಾರಣ ತಂಡದ ಆಟಗಾರರು ಕಠಿಣ ಕ್ವಾರಂಟೈನ್ ನಿಯಮಗಳನ್ನು ಪಾಲಿಸಬೇಕು. ಹಾಗೂ ಈಗಿನ ಶೆಡ್ಯೂಲ್ ಪ್ರಕಾರ ಆಟ ನಡೆಯಲು ಸಾಧ್ಯವಿಲ್ಲ ಎಂದು ಚೀನಾ ಫುಟ್ಬಾಲ್ ಅಸೋಸಿಯೇಷನ್ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಏಷಿಯನ್ ಫುಟ್ಬಾಲ್ ಕಾನ್ಫೆಡರೇಷನ್ ಸಲಹೆಯಂತೆ, ಚೈನೀಸ್ ಫುಟ್ಬಾಲ್ ಅಸೋಸಿಯೇಷನ್ ಇನ್ನುಳಿದ ಪಂದ್ಯಗಳನ್ನು ಚೀನಾದ ಬದಲಾಗಿ ದುಬೈನಲ್ಲಿ ನಡೆಸಲು ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ. ಎಲ್ಲಾ ಅಂದುಕೊಂಡಂತೆ, ಈ ಮೊದಲು ನಿಗದಿಯಾದಂತೆ ಆಗುತ್ತಿದ್ದರೆ ಚೀನಾದ ನಗರ ಸುಜೋವುನಲ್ಲಿ ಮುಂದಿನ ಪಂದ್ಯ ನಡೆಯಬೇಕಿತ್ತು.
ಇದೀಗ ಕೊರೊನಾ ಸೋಂಕಿನ ಕಾರಣದಿಂದ ಮುಂದಿನ ಪಂದ್ಯಗಳು ದುಬೈನಲ್ಲಿ ನಡೆಯುವುದು ಖಚಿತವಾಗಿದ್ದು, ಪಂದ್ಯ ನಡೆಯುವ ಸ್ಥಳದ ಬಗ್ಗೆ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ. ಈ ಮೊದಲು ಮಾಲ್ಡೀವ್ಸ್ ತಂಡದ ಸ್ಟ್ರೈಕರ್ ಅಲಿ ಅಶ್ಫಕ್ ಟ್ವೀಟ್ ಮಾಡಿ, ತಾನು ಕೊವಿಡ್ ಪಾಸಿಟಿವ್ ಆಗಿರುವುದನ್ನು ತಿಳಿಸಿದ್ದರು. ಜೊತೆಗೆ, ಕ್ವಾಲಿಫೈಯರ್ ಪಂದ್ಯಗಳಲ್ಲಿ ಆಡುತ್ತಿಲ್ಲ ಎಂಬುದನ್ನೂ ಖಚಿತಪಡಿಸಿದ್ದರು.
ಭಾನುವಾರ ನಡೆದ ಪಂದ್ಯದಲ್ಲಿ ಚೀನಾ ತಂಡ ಗುಆಮ್ ತಂಡವನ್ನು 7-0 ಅಂತರದಿಂದ ಸೋಲಿಸಿತ್ತು. ಹಾಗೂ ಚೀನಾ ತಂಡವು ಗುರುವಾರ ಮಾಲ್ಡೀವ್ಸ್ ತಂಡದ ವಿರುದ್ಧ ಆಡಬೇಕಿತ್ತು. ಸಿರಿಯಾ ಮತ್ತು ಮಾಲ್ಡೀವ್ಸ್ ತಂಡಗಳು ಜೂನ್ 7ರಂದು ಎದುರಾಗಬೇಕಿತ್ತು.
ಈವರೆಗಿನ ಪಂದ್ಯಗಳ ಅನುಸಾರ ಅಂಕಪಟ್ಟಿಯಲ್ಲಿ ಚೀನಾ ಎರಡನೇ ಸ್ಥಾನದಲ್ಲಿದೆ. ಸಿರಿಯಾ ತಂಡ ಮೊದಲ ಸ್ಥಾನದಲ್ಲಿದೆ. ಫುಟ್ಬಾಲ್ ವಿಶ್ವಕಪ್ ಕನಸು ನನಸಾಗಿಸಲು ಉಭಯ ತಂಡಗಳು ಬಿರುಸಿನ ಕಾದಾಟದಲ್ಲಿ ತೊಡಗಿವೆ.
ಇದನ್ನೂ ಓದಿ: ನಿಮಗೆ ಕನ್ನಡ ಬರುತ್ತಾ? ನೆಟ್ಟಿಗರು ಕೇಳಿದ ವಿಭಿನ್ನ ಪ್ರಶ್ನೆಗಳಿಗೆ ನಯವಾಗಿಯೇ ಉತ್ತರಿಸಿದ ಕೊಹ್ಲಿ; ನೀವೂ ಓದಿ
KL Rahul: ರಾಹುಲ್ ಫಿಟ್ನೆಸ್ಗೆ ಅಥಿಯಾ ಶೆಟ್ಟಿ ಫಿದಾ; ಪ್ರಣಯ ಪಕ್ಷಿಗಳ ಪ್ರೀತಿಗೆ ಮತ್ತೊಂದು ಸಾಕ್ಷಿ
Published On - 11:29 pm, Mon, 31 May 21