AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

17ನೇ ವಯಸ್ಸಿನಲ್ಲಿ ಸಚಿನ್ ಬರೆದ ವಿಶ್ವ ದಾಖಲೆ ಮುರಿದದ್ದು ಬಾಂಗ್ಲಾ ಬ್ಯಾಟರ್

Sachin Tendulkar: ಈ ಐತಿಹಾಸಿಕ ಶತಕಕ್ಕೆ ಇಂದು 33 ವರ್ಷಗಳು. 1990 ರಲ್ಲಿ ಶತಕಕ್ಕೆ ನಾಂದಿಯಾಡಿದ್ದ ಸಚಿನ್ ನಿವೃತ್ತಿ ವೇಳೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಶತಕಗಳಲ್ಲಿಯೇ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಂದರೆ ಸಚಿನ್ ಹೆಸರಿನಲ್ಲಿ 49 ಏಕದಿನ ಶತಕ ಹಾಗೂ 51 ಟೆಸ್ಟ್ ಶತಕಗಳಿವೆ.

17ನೇ ವಯಸ್ಸಿನಲ್ಲಿ ಸಚಿನ್ ಬರೆದ ವಿಶ್ವ ದಾಖಲೆ ಮುರಿದದ್ದು ಬಾಂಗ್ಲಾ ಬ್ಯಾಟರ್
Sachin Tendulkar
Follow us
TV9 Web
| Updated By: ಝಾಹಿರ್ ಯೂಸುಫ್

Updated on:Aug 14, 2023 | 6:07 PM

ಆಗಸ್ಟ್ 14, 1990…ಮ್ಯಾಂಚೆಸ್ಟರ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಸಚಿನ್ ತೆಂಡೂಲ್ಕರ್ (Sachin Tendulkar) ಶತಕ ಸಿಡಿಸಿ ಮಿಂಚಿದ್ದರು. ಇದು ಸಚಿನ್ ಅವರ ಬ್ಯಾಟ್​ನಿಂದ ಮೂಡಿಬಂದಂತಹ ಮೊದಲ ಅಂತಾರಾಷ್ಟ್ರೀಯ ಶತಕ ಎಂಬುದು ವಿಶೇಷ. ಅಂದರೆ 17ನೇ ವಯಸ್ಸಿನಲ್ಲೇ ಚೊಚ್ಚಲ ಸೆಂಚುರಿ ಸಿಡಿಸಿ ಯುವ ದಾಂಡಿಗ ಹೊಸ ಇತಿಹಾಸ ನಿರ್ಮಿಸಿದ್ದರು.

ಅಂದು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸಚಿನ್ ತೆಂಡೂಲ್ಕರ್ 189 ಎಸೆತಗಳನ್ನು ಎದುರಿಸಿ 17 ಫೋರ್​ಗಳೊಂದಿಗೆ ಅಜೇಯ 119 ರನ್ ಬಾರಿಸಿದ್ದರು. ಹೀಗೆ ನಾಟೌಟ್ ಆಗಿ ಹಿಂತಿರುಗಿದ್ದ ಸಚಿನ್ ಅವರನ್ನು ಇಂಗ್ಲೆಂಡ್ ಕ್ರಿಕೆಟ್ ಪ್ರೇಮಿಗಳು ಚಪ್ಪಾಳೆಯೊಂದಿಗೆ ಸ್ವಾಗತಿಸಿದ್ದರು.

ಈ ಐತಿಹಾಸಿಕ ಶತಕಕ್ಕೆ ಇಂದು 33 ವರ್ಷಗಳು. 1990 ರಲ್ಲಿ ಶತಕಕ್ಕೆ ನಾಂದಿಯಾಡಿದ್ದ ಸಚಿನ್ ನಿವೃತ್ತಿ ವೇಳೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಶತಕಗಳಲ್ಲಿಯೇ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಂದರೆ ಸಚಿನ್ ಹೆಸರಿನಲ್ಲಿ 49 ಏಕದಿನ ಶತಕ ಹಾಗೂ 51 ಟೆಸ್ಟ್ ಶತಕಗಳಿವೆ. ಈ ದಾಖಲೆಯು ಕ್ರಿಕೆಟ್ ಇತಿಹಾಸದ ಸರ್ವಶ್ರೇಷ್ಠ ದಾಖಲೆಯಾಗಿಯೇ ಉಳಿದಿದೆ.

ಸಚಿನ್ ದಾಖಲೆ ಮುರಿದ ಬಾಂಗ್ಲಾ ಬ್ಯಾಟರ್:

ಸಚಿನ್ ತೆಂಡೂಲ್ಕರ್ ತಮ್ಮ 17ನೇ ವಯಸ್ಸಿನಲ್ಲಿ ಚೊಚ್ಚಲ ಶತಕ ಸಿಡಿಸಿ ಟೆಸ್ಟ್ ಕ್ರಿಕೆಟ್​ನಲ್ಲಿ ಶತಕ ಬಾರಿಸಿದ 2ನೇ ಕಿರಿಯ ಆಟಗಾರ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದರು. ಇದಾದ 11 ವರ್ಷಗಳ ಬಳಿಕ ಈ ವಿಶ್ವ ದಾಖಲೆಯನ್ನು ಬಾಂಗ್ಲಾದೇಶ್ ತಂಡದ ಮೊಹಮ್ಮದ್ ಅಶ್ರಫುಲ್ ಮುರಿದಿರುವುದು ವಿಶೇಷ.

2001 ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಅಶ್ರಫುಲ್ 114 ರನ್ ಬಾರಿಸಿ ಮಿಂಚಿದ್ದರು. ಅಂದು ಅಶ್ರಫುಲ್ ಅವರ ವಯಸ್ಸು 17 ವರ್ಷ, 61 ದಿನಗಳು ಮಾತ್ರ. ಇದರೊಂದಿಗೆ ಸಚಿನ್ ತೆಂಡೂಲ್ಕರ್ (17 ವರ್ಷ, 107 ದಿನಗಳು) ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಮುರಿದು ಬಾಂಗ್ಲಾ ಬ್ಯಾಟರ್ ಹೊಸ ಇತಿಹಾಸ ನಿರ್ಮಿಸಿದರು. ಈ ದಾಖಲೆ ಈಗಲೂ ಮೊಹಮ್ಮದ್ ಅಶ್ರಫುಲ್ ಹೆಸರಿನಲ್ಲಿರುವುದು ವಿಶೇಷ.

Published On - 6:06 pm, Mon, 14 August 23