Jasprit Bumrah: ಅಖಾಡಕ್ಕೆ ಎಂಟ್ರಿಕೊಡಲು ಸಮರಾಭ್ಯಾಸ ಶುರು ಮಾಡಿದ ಯಾರ್ಕರ್ ಕಿಂಗ್; ವಿಡಿಯೋ ನೋಡಿ

| Updated By: ಪೃಥ್ವಿಶಂಕರ

Updated on: Nov 26, 2022 | 1:24 PM

Jasprit Bumrah: ಜಸ್ಪ್ರೀತ್ ಬುಮ್ರಾ ಕೊನೆಯ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಸೆಪ್ಟೆಂಬರ್ 25 ರಂದು ಟಿ20 ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಆ ಪಂದ್ಯದಲ್ಲಿ ಬುಮ್ರಾ 4 ಓವರ್‌ಗಳ ಬೌಲಿಂಗ್‌ನಲ್ಲಿ 50 ರನ್ ನೀಡಿದಲ್ಲದೆ ಯಾವುದೇ ವಿಕೆಟ್ ಕೂಡ ಪಡೆದಿರಲಿಲ್ಲ.

Jasprit Bumrah: ಅಖಾಡಕ್ಕೆ ಎಂಟ್ರಿಕೊಡಲು ಸಮರಾಭ್ಯಾಸ ಶುರು ಮಾಡಿದ ಯಾರ್ಕರ್ ಕಿಂಗ್; ವಿಡಿಯೋ ನೋಡಿ
Jasprit Bumrah
Follow us on

ಇಂಜುರಿಯಿಂದಾಗಿ ಟಿ20 ವಿಶ್ವಕಪ್​ನಿಂದ (T20 World Cup) ಹೊರಗುಳಿದಿದ್ದ ಟೀಂ ಇಂಡಿಯಾ (Team India) ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅಖಾಡಕ್ಕೆ ಮರಳಲು ತಯಾರಿ ಆರಂಭಿಸಿದ್ದಾರೆ. ಬೆನ್ನುನೋವಿನ ಕಾರಣ 2022ರ ಟಿ20 ವಿಶ್ವಕಪ್‌ನಲ್ಲಿ ಬುಮ್ರಾ ಆಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಟೀಂ ಇಂಡಿಯಾ ವೇಗದ ಬೌಲಿಂಗ್​ನಲ್ಲಿ ಈ ಅನುಭವಿಯ ಕೊರೆತೆಯನ್ನು ಎದುರಿಸಿತ್ತು. ಭಾರತದ ಅತ್ಯುತ್ತಮ ಅಸ್ತ್ರಗಳಲ್ಲಿ ಒಂದಾದ ಬುಮ್ರಾಗೆ ಟಿ20 ವಿಶ್ವಕಪ್‌ ಜೊತೆಗೆ ಏಷ್ಯಾಕಪ್‌ನಲ್ಲೂ ಆಡಲು ಸಾಧ್ಯವಾಗಲಿಲ್ಲ. ಈಗ ಇಂಜುರಿಯಿಂದ ಚೇತರಿಸಿಕೊಂಡಿರುವ ಬುಮ್ರಾ ಜಿಮ್ ಮತ್ತು ಮೈದಾನದಲ್ಲಿ ತಮ್ಮ ಸಮರಾಭ್ಯಾಸವನ್ನು ಆರಂಭಿಸಿದ್ದಾರೆ. ಅಭ್ಯಾಸದಲ್ಲಿ ತೊಡುಗಿರುವ ವಿಡಿಯೋವೊಂದನ್ನು ಬುಮ್ರಾ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ಆಟಕ್ಕೆ ಹಿಂದಿರುಗುವ ಸೂಚನೆ ನೀಡಿದ್ದಾರೆ.

ಸೆಪ್ಟೆಂಬರ್ ಅಂತ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ವೇಳೆ ಬುಮ್ರಾ ಗಾಯಗೊಂಡಿದ್ದರು. ಆ ಸರಣಿಯಲ್ಲಿ ಅವರ ಬದಲಿಗೆ ಮೊಹಮ್ಮದ್ ಸಿರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆ ಸರಣಿಯ ನಂತರ, ಜಸ್ಪ್ರೀತ್ ಬುಮ್ರಾ ಅವರನ್ನು ಟಿ20 ವಿಶ್ವಕಪ್‌ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಆದರೆ ಅವರು ವಿಶ್ವಕಪ್‌ನಲ್ಲಿ ಆಡುವಷ್ಟು ಫಿಟ್‌ ಇಲ್ಲದ ಕಾರಣ, ಬಿಸಿಸಿಐ ಅವರ ಬದಲಿಗೆ ಮೊಹಮ್ಮದ್ ಶಮಿ ಅವರನ್ನು ಆಡಿಸಬೇಕಾಯಿತು.

ಆಸ್ಟ್ರೇಲಿಯಾ ವಿರುದ್ಧ ದುಬಾರಿಯಾಗಿದ್ದ ಬುಮ್ರಾ

ಜಸ್ಪ್ರೀತ್ ಬುಮ್ರಾ ಕೊನೆಯ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಸೆಪ್ಟೆಂಬರ್ 25 ರಂದು ಟಿ20 ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಆ ಪಂದ್ಯದಲ್ಲಿ ಬುಮ್ರಾ 4 ಓವರ್‌ಗಳ ಬೌಲಿಂಗ್‌ನಲ್ಲಿ 50 ರನ್ ನೀಡಿದಲ್ಲದೆ ಯಾವುದೇ ವಿಕೆಟ್ ಕೂಡ ಪಡೆದಿರಲಿಲ್ಲ. ಈ ಬಾರಿ ಗಾಯದಿಂದ ಚೇತರಿಸಿಕೊಂಡಿರುವ ಯಾರ್ಕರ್ ಕಿಂಗ್ ಮೈದಾನಕ್ಕೆ ಮರಳಲು ಹೋರಾಟ ಆರಂಭಿಸಿದ್ದಾರೆ.

ಇದನ್ನೂ ಓದಿ: ‘ನೀವು ಬರದಿದ್ದರೆ ನಾವು ಕೂಡ ಬರುವುದಿಲ್ಲ’; ಬಿಸಿಸಿಐ ಎದುರು ಗುಡುಗಿದ ಪಾಕ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ!

ಸದ್ಯ ಟೀಂ ಇಂಡಿಯಾ ನ್ಯೂಜಿಲೆಂಡ್ ಸರಣಿಯಲ್ಲಿ ಬ್ಯುಸಿಯಾಗಿದೆ. ಇದಾದ ಬಳಿಕ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿ ಆಡಲಿದೆ. ಗಾಯದಿಂದ ಚೇತರಿಸಿಕೊಂಡಿದ್ದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಆ ಸರಣಿಯಲ್ಲಿ ಆಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಬಿಸಿಸಿಐ ಪ್ರಕಟಿಸಿದ ತಂಡದಲ್ಲಿ ಜಡೇಜಾ ಹೆಸರಿಲ್ಲ. ಏಷ್ಯಾಕಪ್‌ ವೇಳೆ ಗಾಯಗೊಂಡಿದ್ದರಿಂದ ಜಡೇಜಾ ಅರ್ಧಕ್ಕೆ ಟೂರ್ನಿಯಿಂದ ಹೊರಬಿದ್ದಿದ್ದರು. ಇಂಜುರಿಯಿಂದಾಗಿ ಅವರು ಟಿ20 ವಿಶ್ವಕಪ್‌ನಿಂದಲೂ ಹೊರಗಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:21 pm, Sat, 26 November 22