Shreyas Iyer: ಕಳೆದ 8 ಇನ್ನಿಂಗ್ಸ್​ಗಳಲ್ಲಿ ಬರೋಬ್ಬರಿ 512 ರನ್; ಏಕದಿನ ಮಾದರಿಯಲ್ಲಿ ಶ್ರೇಯಸ್​ಗಿಲ್ಲ ಸರಿಸಾಟಿ..!

Shreyas Iyer: ಶ್ರೇಯಸ್ ಕೊನೆಯ 8 ಇನ್ನಿಂಗ್ಸ್‌ಗಳಲ್ಲಿ 512 ರನ್ ಗಳಿಸಿದ್ದು, ಇದರಲ್ಲಿ 5 ಅರ್ಧಶತಕ ಹಾಗೂ 1 ಶತಕವಿದೆ. ಅಲ್ಲದೆ ಅಯ್ಯರ್ ಎರಡು ಬಾರಿ ಅಜೇಯರಾಗಿ ಉಳಿದಿರುವುದು ಕೂಡ ಗಮನಾರ್ಹ.

Shreyas Iyer: ಕಳೆದ 8 ಇನ್ನಿಂಗ್ಸ್​ಗಳಲ್ಲಿ ಬರೋಬ್ಬರಿ 512 ರನ್; ಏಕದಿನ ಮಾದರಿಯಲ್ಲಿ ಶ್ರೇಯಸ್​ಗಿಲ್ಲ ಸರಿಸಾಟಿ..!
Shreyas Iyer
Follow us
TV9 Web
| Updated By: ಪೃಥ್ವಿಶಂಕರ

Updated on:Nov 26, 2022 | 12:08 PM

ಆಕ್ಲೆಂಡ್​ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕಿವೀಸ್ ವಿರುದ್ಧ ಟೀಂ ಇಂಡಿಯಾ (Team India) ಸೋತಿರಬಹುದು. ಆದರೆ ತಂಡದ ಬ್ಯಾಟ್ಸ್​ಮನ್​ಗಳು ಮಾತ್ರ ಅತ್ಯುತ್ತಮ ಪ್ರದರ್ಶನ ನೀಡಿದರು. ಧವನ್, ಗಿಲ್, ಸುಂದರ್, ಸ್ಯಾಮ್ಸನ್, ಶ್ರೇಯಸ್ ಅಯ್ಯರ್ (Shreyas Iyer), ಬ್ಯಾಟಿಂಗ್​ನಲ್ಲಿ ಅಬ್ಬರಿಸುವ ಮೂಲಕ ಕಠಿಣ ಪಿಚ್‌ನಲ್ಲಿ 306 ರನ್ ಟಾರ್ಗೆಟ್ ಸೆಟ್ ಮಾಡಿದರು. ಈ ಪಂದ್ಯದಲ್ಲಿ ಭಾರತ ತಂಡದಿಂದ ಮೂರು ಅರ್ಧಶತಕಗಳು ಬಂದವು. ಅದರಲ್ಲೂ ಏಕದಿನ ಕ್ರಿಕೆಟ್‌ನಲ್ಲಿ ರನ್ ಹೊಳೆ ಹರಿಸುತ್ತಿರುವ ಶ್ರೇಯಸ್ ಅಯ್ಯರ್ ಈ ಪಂದ್ಯದಲ್ಲಿ 76 ಎಸೆತಗಳನ್ನು ಎದುರಿಸಿ 4 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 80 ರನ್ ಗಳಿಸಿದರು. ಅಲ್ಲದೆ, ಸಂಜು ಸ್ಯಾಮ್ಸನ್ ಮತ್ತು ವಾಷಿಂಗ್ಟನ್ ಸುಂದರ್ (Sanju Samson and Washington Sundar) ಅವರೊಂದಿಗೆ ಎರಡು ಪ್ರಮುಖ ಪಾಲುದಾರಿಕೆಗಳನ್ನು ಸಹ ಹಂಚಿಕೊಂಡರು. ಇದರೊಂದಿಗೆ ಟೀಂ ಇಂಡಿಯಾ ನಿಗದಿತ ಓವರ್​ಗಳಲ್ಲಿ 300 ರನ್ ಗಡಿ ದಾಟಲು ಸಾಧ್ಯವಾಯಿತು. ಈ ಪಂದ್ಯದಲ್ಲಿ ಮಾತ್ರವಲ್ಲದೆ ಕಳೆದ 8 ಏಕದಿನ ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ಸ್ಥಿರ ಪ್ರದರ್ಶನ ನೀಡಿದ್ದಾರೆ. ಈ 8 ಇನ್ನಿಂಗ್ಸ್​ಗಳಲ್ಲಿ ಶ್ರೇಯಸ್, 5 ಅರ್ಧಶತಕ ಮತ್ತು 1 ಶತಕದೊಂದಿಗೆ 512 ರನ್ ಕಲೆಹಾಕಿದ್ದಾರೆ.

ಏಕದಿನದಲ್ಲಿ ಶ್ರೇಯಸ್ ಬೆಸ್ಟ್

ಟಿ20 ಮಾದರಿಯಲ್ಲಿ ಶ್ರೇಯಸ್ ಅಯ್ಯರ್​ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದಿರಬಹುದು. ಆದರೆ ಏಕದಿನದಲ್ಲಿ ಈ ಆಟಗಾರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಈ 50 ಓವರ್‌ಗಳ ಮಾದರಿಯಲ್ಲಿ ನಿರಂತರವಾಗಿ ರನ್ ಗಳಿಸುತ್ತಿದ್ದಾರೆ. ಈ ಬಲಗೈ ಬ್ಯಾಟ್ಸ್‌ಮನ್ ಕೊನೆಯ 8 ಇನ್ನಿಂಗ್ಸ್‌ಗಳಲ್ಲಿ 512 ರನ್ ಗಳಿಸಿದ್ದು, ಇದರಲ್ಲಿ 5 ಅರ್ಧಶತಕ ಹಾಗೂ 1 ಶತಕವಿದೆ. ಅಲ್ಲದೆ ಅಯ್ಯರ್ ಎರಡು ಬಾರಿ ಅಜೇಯರಾಗಿ ಉಳಿದಿರುವುದು ಕೂಡ ಗಮನಾರ್ಹ. ಹೀಗಾಗಿ ಏಕದಿನ ಮಾದರಿಯಲ್ಲಿ ಟೀಂ ಇಂಡಿಯಾದಲ್ಲಿದ್ದ ಮೂರು ಮತ್ತು ನಾಲ್ಕನೇ ಸ್ಥಾನದ ಸಮಸ್ಯೆಯನ್ನು ಶ್ರೇಯಸ್ ನೀಗಿಸಿದ್ದಾರೆ ಎಂದೇ ಹೇಳಬಹುದು.

ನ್ಯೂಜಿಲೆಂಡ್‌ ವಿರುದ್ಧ ಅಯ್ಯರ್ ಅಬ್ಬರ

ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್‌ನಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಈ ಬಲಗೈ ಬ್ಯಾಟ್ಸ್‌ಮನ್ ಕಳೆದ ನ್ಯೂಜಿಲೆಂಡ್ ಪ್ರವಾಸದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಪರ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಆ ಪ್ರವಾಸದಲ್ಲಿ ಅಯ್ಯರ್ 72 ಕ್ಕೂ ಹೆಚ್ಚು ಸರಾಸರಿಯಲ್ಲಿ 217 ರನ್ ಗಳಿಸಿದ್ದರು. ಈಗ ಮತ್ತೊಮ್ಮೆ ಅವರು ಕಿವೀಸ್ ವಿರುದ್ಧ ಉತ್ತಮ ಆರಂಭ ಮಾಡಿದ್ದಾರೆ.

ಇದನ್ನೂ ಓದಿ: Rohit Sharma: ಕೊಹ್ಲಿ ಬೆನ್ನಲ್ಲೇ ಅಭ್ಯಾಸಕ್ಕಿಳಿದ ರೋಹಿತ್ ಶರ್ಮಾ: ನೆಟ್​​​ನಲ್ಲಿ ಹಿಟ್​ಮ್ಯಾನ್ ಅಬ್ಬರ 

ಶಾರ್ಟ್ ಬಾಲ್ ಸಮಸ್ಯೆಗೆ ಪರಿಹಾರ ಕಂಡುಕೊಂಡ ಅಯ್ಯರ್

ಶ್ರೇಯಸ್ ಅಯ್ಯರ್​ಗೆ ಶಾರ್ಟ್ ಬಾಲ್ ದೌರ್ಬಲ್ಯ ಇದೆ ಎಂಬುದು ಹಲವು ಮಾಜಿ ಆಟಗಾರರ ಅಭಿಪ್ರಾಯ. ಇದಕ್ಕೆ ಕಾರಣ ಕಳೆದ ಕೆಲವು ಪಂದ್ಯಗಳಲ್ಲಿ ಶ್ರೇಯಸ್ ಶಾರ್ಟ್ ಬಾಲ್​ಗೆ ಹೆಚ್ಚು ಸಲ ಔಟಾಗಿರುವುದು. ಆದರೆ ಕಿವೀಸ್ ವಿರುದ್ಧ ಆರಂಭವಾಗಿರುವ ಏಕದಿನ ಸರಣೀಯಲ್ಲಿ ಅಯ್ಯರ್ ಈ ದೌರ್ಬಲ್ಯವನ್ನು ಪರಿಣಾಮಕಾರಿಯಾಗಿ ನಿಭಾಯಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:01 pm, Sat, 26 November 22

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ