AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rohit Sharma: ಕೊಹ್ಲಿ ಬೆನ್ನಲ್ಲೇ ಅಭ್ಯಾಸಕ್ಕಿಳಿದ ರೋಹಿತ್ ಶರ್ಮಾ: ನೆಟ್​​​ನಲ್ಲಿ ಹಿಟ್​ಮ್ಯಾನ್ ಅಬ್ಬರ

India vs Bangladesh: ನ್ಯೂಜಿಲೆಂಡ್ ಸರಣಿಯಿಂದ ವಿಶ್ರಾಂತಿಯಲ್ಲಿರುವ ಭಾರತದ ಆಟಗಾರರು ಬಾಂಗ್ಲಾದೇಶ ವಿರುದ್ಧದ ಸರಣಿಗೆ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಬಳಿಕ ನಾಯಕ ರೋಹಿತ್ ಶರ್ಮಾ ಕೂಡ ಪ್ಯಾಡ್ ಕಟ್ಟಿ ಬ್ಯಾಟಿಂಗ್ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ.

Rohit Sharma: ಕೊಹ್ಲಿ ಬೆನ್ನಲ್ಲೇ ಅಭ್ಯಾಸಕ್ಕಿಳಿದ ರೋಹಿತ್ ಶರ್ಮಾ: ನೆಟ್​​​ನಲ್ಲಿ ಹಿಟ್​ಮ್ಯಾನ್ ಅಬ್ಬರ
Rohit Sharma Practice
TV9 Web
| Edited By: |

Updated on: Nov 26, 2022 | 11:11 AM

Share

ಭಾರತ ಕ್ರಿಕೆಟ್ ತಂಡ ಸದ್ಯ ಕಿವೀಸ್ ನಾಡಲ್ಲಿ ನ್ಯೂಜಿಲೆಂಡ್ (India vs New Zealand) ವಿರುದ್ಧ ಏಕದಿನ ಸರಣಿಯನ್ನು ಆಡುತ್ತಿದೆ. ಮೊದಲ ಪಂದ್ಯದಲ್ಲಿ ಧವನ್ ಪಡೆ ಸೋಲು ಕಂಡಿದ್ದು ಸತಣಿ ವಶಪಡಿಸಿಕೊಳ್ಳ ಬೇಕಾದರೆ ಉಳಿದ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಈ ಸರಣಿಯಿಂದ ಪ್ರಮುಖ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅವರು ಸ್ಥಾನ ಪಡೆದುಕೊಂಡಿಲ್ಲ. ಆದರೆ, ಈ ಪ್ರವಾಸ ಮುಕ್ತಾಯದ ಬಳಿಕ ಟೀಮ್ ಇಂಡಿಯಾ ಬಾಂಗ್ಲಾದೇಶಕ್ಕೆ ತೆರಳಲಿದ್ದು, ವಿರಾಮ ನೀಡಿದ್ದ ಪ್ಲೇಯರ್ಸ್​ಗೆ ಮಣೆ ಹಾಕಲಾಗಿದೆ. ಡಿಸೆಂಬರ್ 4 ರಿಂದ ಭಾರತ-ಬಾಂಗ್ಲಾದೇಶ (India vs Bangladesh) ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ. ಬಳಿಕ ಎರಡು ಟೆಸ್ಟ್ ಪಂದ್ಯ ಆಯೋಜಿಸಲಾಗಿದೆ.

ಇದೀಗ ವಿಶ್ರಾಂತಿಯಲ್ಲಿರುವ ಆಟಗಾರರು ಬಾಂಗ್ಲಾದೇಶ ವಿರುದ್ಧದ ಸರಣಿಗೆ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ. ಈಗಾಗಲೇ ವಿರಾಟ್ ಕೊಹ್ಲಿ ಜಿಮ್​ನಲ್ಲಿ ಬೆವರು ಹರಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ ಕೂಡ ಪ್ಯಾಡ್ ಕಟ್ಟಿ ಬ್ಯಾಟಿಂಗ್ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಖಾತೆಯಲ್ಲಿ ನೆಟ್ ಒಳಗಡೆ ಬ್ಯಾಟಿಂಗ್ ಪ್ರ್ಯಾಕ್ಟೀಸ್ ನಡೆಸುತ್ತಿರುವ ಫೋಟೋವನ್ನು ಹಿಟ್​ಮ್ಯಾನ್ ಹಂಚಿಕೊಂಡಿದ್ದಾರೆ. ಸದ್ಯ ಫಾರ್ಮ್​ನಲ್ಲಿ ಇಲ್ಲದ ರೋಹಿತ್​ಗೆ ಮುಂಬರುವ ಬಾಂಗ್ಲಾ ವಿರುದ್ಧ ಸರಣಿ ಮುಖ್ಯವಾಗಿದೆ.

ಇದನ್ನೂ ಓದಿ
Image
‘ವಿಶ್ವಕಪ್ ಗೆಲ್ಲಬೇಕಾದರೆ ಐಪಿಎಲ್ ಆಡಬೇಡಿ’; ಭಾರತ ತಂಡಕ್ಕೆ ಕೋಚ್ ಎಚ್ಚರಿಕೆ
Image
KAR vs JHKD: ವಿಜಯ್ ಹಜಾರೆ ಟ್ರೋಫಿ ಪ್ರಿ ಕ್ವಾರ್ಟರ್ ಫೈನಲ್: ಟಾಸ್ ಗೆದ್ದ ಕರ್ನಾಟಕ: ಮಯಾಂಕ್ ಪಡೆಯ ಬಲಿಷ್ಠ ಪ್ಲೇಯಿಂಗ್ XI ಇಲ್ಲಿದೆ
Image
IND vs NZ 2nd ODI: ಸೋಲಿನ ಆಘಾತದ ನಡುವೆ ಹ್ಯಾಮಿಲ್ಟನ್​ಗೆ ಬಂದ ಭಾರತ: ಎರಡನೇ ಏಕದಿನಕ್ಕೆ ತಯಾರಿ
Image
India vs New Zealand: ಸರಣಿ ಸಮಬಲಕ್ಕೆ ಭಾರತ ಮಾಸ್ಟರ್ ಪ್ಲಾನ್: ದ್ವಿತೀಯ ಏಕದಿನ ಪಂದ್ಯ ಯಾವಾಗ?

ಭಾರತ-ಬಾಂಗ್ಲಾ ಸರಣಿ ಯಾವಾಗ?:

ಬಾಂಗ್ಲಾದೇಶ ವಿರುದ್ಧ ಭಾರತ ಮೂರು ಪಂದ್ಯಗಳ ಏಕದಿನ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಡಿಸೆಂಬರ್ 4 ರಂದು ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಡಿ. 7 ರಂದು ದ್ವಿತೀಯ ಏಕದಿನ ಮತ್ತು ತೃತೀಯ ಪಂದ್ಯ ಡಿಸೆಂಬರ್ 10ಕ್ಕೆ ಆಯೋಜಿಸಲಾಗಿದೆ. ಈ ಮೂರೂ ಪಂದ್ಯ ಢಾಕಾದ ಬಾಂಗ್ಲಾ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ. ಬಳಿಕ ಚಿತ್ತಗಾಂಗ್​ನಲ್ಲಿ ಜರುಗಲಿರುವ ಮೊದಲ ಟೆಸ್ಟ್ ಡಿಸೆಂಬರ್ 14-18ರ ವರೆಗೆ ಇರಲಿದೆ. ನಂತರ ಡಿಸೆಂಬರ್ 22-26 ಎರಡನೇ ಟೆಸ್ಟ್ ಇದ್ದು ಢಾಕಾದಲ್ಲಿ ಆಯೋಜಿಸಲಾಗಿದೆ.

ಏಕದಿನ ಸರಣಿಗೆ ಈಗಾಗಲೇ ಉಭಯ ತಂಡಗಳು ಪ್ರಕಟವಾಗಿದೆ. ರೋಹಿತ್, ಕೆಎಲ್. ರಾಹುಲ್, ವಿರಾಟ್ ಕೊಹ್ಲಿ ಜೊತೆ ಶಿಖರ್ ಧವನ್ ಕೂಡ ಇದ್ದಾರೆ. ಆಲ್‌ರೌಂಡರ್ ಜಡೇಜ ಅವರಿಗೆ ಕೆಲವು ತಿಂಗಳುಗಳ ಹಿಂದೆ ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅವರಿನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಬಿಸಿಸಿಐ ಹೇಳಿದ್ದು ಈ ಕಾರಣಕ್ಕಾಗಿ ಜಡೇಜಾರನ್ನು ಆಯ್ಕೆಗೆ ಪರಿಗಣಿಸಿಲ್ಲವಂತೆ. ಉಳಿದಂತೆ ರಜತ್ ಪಟಿದಾರ್, ರಾಹುಲ್ ತ್ರಿಪಾಠಿ, ಕುಲ್ದೀಪ್ ಸೇನ್ ಹೊಸ ಮುಖಗಳಾಗಿದೆ. ಇತ್ತ ಬಾಂಗ್ಲಾ ಪರ ಮೊಹಮ್ಮದುಲ್ಲ ರಿಯಾದ್ ಮತ್ತು ಮುಷ್ಫೀಕುರ್ ರಹೀಮ್ ರಾಷ್ಟ್ರೀಯ ತಂಡಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ. ಅನಾಮುಲ್ ಹಖ್ ಬಿಜೋಯ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ತಮಿಮ್ ಇಖ್ಬಾಲ್ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪ ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೆಟ್‌ ಕೀಪರ್), ಇಶಾನ್ ಕಿಶನ್, ಶಹ್ಬಾಜ್ ಅಹಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಕುಲದೀಪ್ ಸೇನ್.

Follow Us
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!