Virat Kohli: ಬಾಂಗ್ಲಾ ವಿರುದ್ಧದ ಸರಣಿಗೆ ಕೊಹ್ಲಿ ಈಗಿನಿಂದಲೇ ಅಭ್ಯಾಸ: ಏನು ಮಾಡುತ್ತಿದ್ದಾರೆ ನೋಡಿ

India vs Bangladesh: ಬಾಂಗ್ಲಾದೇಶ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಜಿಮ್​​​ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ಬೆವರು ಸುರಿಸುತ್ತಿದ್ದಾರೆ. ವೇಟ್‌ಲಿಫ್ಟಿಂಗ್, ರನ್ನಿಂಗ್ ಕೌಶಲ್ಯ ಪ್ರದರ್ಶಿಸಿ ಇನ್ನಷ್ಟು ಫಿಟ್ ಆಗುತ್ತಿದ್ದಾರೆ.

Virat Kohli: ಬಾಂಗ್ಲಾ ವಿರುದ್ಧದ ಸರಣಿಗೆ ಕೊಹ್ಲಿ ಈಗಿನಿಂದಲೇ ಅಭ್ಯಾಸ: ಏನು ಮಾಡುತ್ತಿದ್ದಾರೆ ನೋಡಿ
Virat Kohli
TV9kannada Web Team

| Edited By: Vinay Bhat

Nov 25, 2022 | 9:32 AM

ಭಾರತ ಕ್ರಿಕೆಟ್ ತಂಡ ಸದ್ಯ ಕಿವೀಸ್ ನಾಡಲ್ಲಿ ನ್ಯೂಜಿಲೆಂಡ್ (India vs New Zealand) ವಿರುದ್ಧ ಏಕದಿನ ಸರಣಿಯನ್ನು ಆಡುತ್ತಿದೆ. ಈ ಸರಣಿಯಿಂದ ಪ್ರಮುಖ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (Virat Kohli), ಕೆಎಲ್ ರಾಹುಲ್ ಅವರು ಸ್ಥಾನ ಪಡೆದುಕೊಂಡಿಲ್ಲ. ಆದರೆ, ಈ ಪ್ರವಾಸ ಮುಕ್ತಾಯದ ಬಳಿಕ ಟೀಮ್ ಇಂಡಿಯಾ ಬಾಂಗ್ಲಾದೇಶಕ್ಕೆ ತೆರಳಲಿದ್ದು, ವಿರಾಮ ನೀಡಿದ್ದ ಪ್ಲೇಯರ್ಸ್​ಗೆ ಮಣೆ ಹಾಕಲಾಗಿದೆ. ಡಿಸೆಂಬರ್ 4 ರಿಂದ ಭಾರತ-ಬಾಂಗ್ಲಾದೇಶ (India vs Bangladesh) ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ. ಬಳಿಕ ಎರಡು ಟೆಸ್ಟ್ ಪಂದ್ಯ ಆಯೋಜಿಸಲಾಗಿದೆ. ಇದೀಗ ಈ ಸರಣಿಗಾಗಿ ವಿರಾಟ್ ಕೊಹ್ಲಿ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಜಿಮ್​​​ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ಬೆವರು ಸುರಿಸುತ್ತಿದ್ದಾರೆ. ವೇಟ್‌ಲಿಫ್ಟಿಂಗ್, ರನ್ನಿಂಗ್ ಕೌಶಲ್ಯ ಪ್ರದರ್ಶಿಸಿ ಇನ್ನಷ್ಟು ಫಿಟ್ ಆಗುತ್ತಿದ್ದಾರೆ. ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಕೊಹ್ಲಿ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ದಂಗಾಗಿ ಹೋಗಿದ್ದಾರೆ. ಟಿ20 ವಿಶ್ವಕಪ್​ನಲ್ಲಿ ರನ್ ಮಳೆ ಸುರಿಸಿ ಭರ್ಜರಿ ಫಾರ್ಮ್​ನಲ್ಲಿರುವ ಕೊಹ್ಲಿ ಎರಡು ವಾರಗಳ ಮುಂಚಿತವಾಗೇ ಸಮರಾಭ್ಯಾಸ ಆರಂಭಿಸಿರುವುದು ಭಾರತಕ್ಕೂ ಶುಭ ಸೂಚಕವಾಗಿದೆ. ಇಲ್ಲಿದೆ ನೋಡಿ ಕೊಹ್ಲಿಯ ವರ್ಕೌಟ್ ವಿಡಿಯೋ.

View this post on Instagram

A post shared by Virat Kohli (@virat.kohli)

ಭಾರತ-ಬಾಂಗ್ಲಾ ಸರಣಿ ಯಾವಾಗ?:

ಬಾಂಗ್ಲಾದೇಶ ವಿರುದ್ಧ ಭಾರತ ಮೂರು ಪಂದ್ಯಗಳ ಏಕದಿನ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಡಿಸೆಂಬರ್ 4 ರಂದು ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಡಿ. 7 ರಂದು ದ್ವಿತೀಯ ಏಕದಿನ ಮತ್ತು ತೃತೀಯ ಪಂದ್ಯ ಡಿಸೆಂಬರ್ 10ಕ್ಕೆ ಆಯೋಜಿಸಲಾಗಿದೆ. ಈ ಮೂರೂ ಪಂದ್ಯ ಢಾಕಾದ ಬಾಂಗ್ಲಾ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ. ಬಳಿಕ ಚಿತ್ತಗಾಂಗ್​ನಲ್ಲಿ ಜರುಗಲಿರುವ ಮೊದಲ ಟೆಸ್ಟ್ ಡಿಸೆಂಬರ್ 14-18ರ ವರೆಗೆ ಇರಲಿದೆ. ನಂತರ ಡಿಸೆಂಬರ್ 22-26 ಎರಡನೇ ಟೆಸ್ಟ್ ಇದ್ದು ಢಾಕಾದಲ್ಲಿ ಆಯೋಜಿಸಲಾಗಿದೆ.

ಏಕದಿನ ಸರಣಿಗೆ ಈಗಾಗಲೇ ಉಭಯ ತಂಡಗಳು ಪ್ರಕಟವಾಗಿದೆ. ರೋಹಿತ್, ಕೆಎಲ್. ರಾಹುಲ್, ವಿರಾಟ್ ಕೊಹ್ಲಿ ಜೊತೆ ಶಿಖರ್ ಧವನ್ ಕೂಡ ಇದ್ದಾರೆ. ಆಲ್‌ರೌಂಡರ್ ಜಡೇಜ ಅವರಿಗೆ ಕೆಲವು ತಿಂಗಳುಗಳ ಹಿಂದೆ ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅವರಿನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಬಿಸಿಸಿಐ ಹೇಳಿದ್ದು ಈ ಕಾರಣಕ್ಕಾಗಿ ಜಡೇಜಾರನ್ನು ಆಯ್ಕೆಗೆ ಪರಿಗಣಿಸಿಲ್ಲವಂತೆ. ಉಳಿದಂತೆ ರಜತ್ ಪಟಿದಾರ್, ರಾಹುಲ್ ತ್ರಿಪಾಠಿ, ಕುಲ್ದೀಪ್ ಸೇನ್ ಹೊಸ ಮುಖಗಳಾಗಿದೆ. ಇತ್ತ ಬಾಂಗ್ಲಾ ಪರ ಮೊಹಮ್ಮದುಲ್ಲ ರಿಯಾದ್ ಮತ್ತು ಮುಷ್ಫೀಕುರ್ ರಹೀಮ್ ರಾಷ್ಟ್ರೀಯ ತಂಡಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ. ಅನಾಮುಲ್ ಹಖ್ ಬಿಜೋಯ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ತಮಿಮ್ ಇಖ್ಬಾಲ್ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪ ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೆಟ್‌ ಕೀಪರ್), ಇಶಾನ್ ಕಿಶನ್, ಶಹ್ಬಾಜ್ ಅಹಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಕುಲದೀಪ್ ಸೇನ್.

ಇದನ್ನೂ ಓದಿ

ಬಾಂಗ್ಲಾದೇಶ ತಂಡ: ತಮೀಮ್ ಇಕ್ಬಾಲ್ (ನಾಯಕ), ಲಿಟನ್ ದಾಸ್, ಅನಾಮುಲ್ ಹಕ್ ಬಿಜೋಯ್, ಶಕಿಬ್ ಅಲ್ ಹಸನ್, ಮುಷ್ಫೀಕುರ್ ರಹೀಮ್, ಅಫೀಫ್ ಹುಸೇನ್, ಯಾಸಿರ್ ಅಲಿ, ಮೆಹಿದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಎಬಾಡೋತ್ ಹುಸೇನ್, ನಸ್ಮದ್, ನಸ್ಮದ್, ನಸ್ಮದ್ ಶಾಂತೋ, ನೂರುಲ್ ಹಸನ್ ಸೋಹನ್.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada