Rohit Sharma: ಫಿಟ್​ನೆಸ್​ಗಾಗಿ ಕಸರತ್ತು ಆರಂಭಿಸಿದ ರೋಹಿತ್ ಶರ್ಮಾ

Rohit Sharma: ಈ ಮೂಲಕ ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ಭರ್ಜರಿಯಾಗಿ ಕಂಬ್ಯಾಕ್ ಮಾಡುವ ಇರಾದೆಯಲ್ಲಿದ್ದಾರೆ. ಮತ್ತೊಂದಡೆ ಟೀಮ್ ಇಂಡಿಯಾದ ನಾಯಕತ್ವದ ಬದಲಾವಣೆಯ ಚರ್ಚೆಗಳು ಶುರುವಾಗಿದೆ.

Nov 24, 2022 | 11:09 PM
TV9kannada Web Team

| Edited By: Zahir PY

Nov 24, 2022 | 11:09 PM

ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲನುಭವಿಸಿದ ಬಳಿಕ ಹಿರಿಯ ಆಟಗಾರರು ವಿಶ್ರಾಂತಿ ಪಡೆದಿದ್ದರು. ಅದರಲ್ಲೂ ಕಳಪೆ ಬ್ಯಾಟಿಂಗ್ ಪ್ರದರ್ಶನದ ಕಾರಣಕ್ಕೆ ಟೀಕೆಗೆ ಗುರಿಯಾಗಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು.

1 / 6
ಇದೀಗ ಬಾಂಗ್ಲಾದೇಶ್ ವಿರುದ್ಧದ ಏಕದಿನ ಸರಣಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಈ ಸರಣಿಯ ಮೂಲಕ ನಾಯಕ ರೋಹಿತ್ ಶರ್ಮಾ ಕೂಡ ಮತ್ತೆ ತಂಡದ ಸಾರಥ್ಯವಹಿಸಿಕೊಳ್ಳಲಿದ್ದಾರೆ.

2 / 6
ಆದರೆ ಅದಕ್ಕೂ ಮುನ್ನ ವಿಶ್ರಾಂತಿ ಸಮಯದಲ್ಲಿ ಹಿಟ್​ಮ್ಯಾನ್ ಜಿಮ್​ನತ್ತ ಮುಖ ಮಾಡಿದ್ದಾರೆ. ಒಂದೆಡೆ ಕಳಪೆ ಬ್ಯಾಟಿಂಗ್ ಮತ್ತೊಂದಡೆ ಫಿಟ್​ನೆಸ್ ಕುರಿತು ಕೇಳಿ ಬಂದ ಟೀಕೆಗಳಿಗೆ ಉತ್ತರ ನೀಡಲು ಇದೀಗ ರೋಹಿತ್ ಶರ್ಮಾ ಜಿಮ್​ನಲ್ಲಿ ಬೆವರಿಳಿಸುತ್ತಿದ್ದಾರೆ.

3 / 6
ಈ ಮೂಲಕ ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ಭರ್ಜರಿಯಾಗಿ ಕಂಬ್ಯಾಕ್ ಮಾಡುವ ಇರಾದೆಯಲ್ಲಿದ್ದಾರೆ. ಮತ್ತೊಂದಡೆ ಟೀಮ್ ಇಂಡಿಯಾದ ನಾಯಕತ್ವದ ಬದಲಾವಣೆಯ ಚರ್ಚೆಗಳು ಶುರುವಾಗಿದೆ.

4 / 6
ಟೀಮ್ ಇಂಡಿಯಾ ಟಿ20 ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡುವುದು ಸೂಕ್ತ ಎಂಬ ಮಾತುಗಳು ಕೇಳಿ ಬರುತ್ತಿದೆ. ಒಂದು ವೇಳೆ ಪಾಂಡ್ಯ ಟಿ20 ತಂಡದ ನಾಯಕರಾದರೆ ಕಳಪೆ ಫಾರ್ಮ್​ನಲ್ಲಿರುವ ರೋಹಿತ್ ಶರ್ಮಾ ಟೀಮ್​ನಿಂದ ಹೊರಬೀಳಬಹುದು.

5 / 6
ಹೀಗಾಗಿ ಬಾಂಗ್ಲಾದೇಶ್ ವಿರುದ್ಧದ ಸರಣಿಗೂ ಮುನ್ನ ಸಂಪೂರ್ಣ ಫಿಟ್​ನೆಸ್​ನತ್ತ ಗಮನಹರಿಸಲು ಹಿಟ್​ಮ್ಯಾನ್ ಮುಂದಾಗಿದ್ದಾರೆ ಎಂಬ ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿದೆ.

6 / 6

Follow us on

Most Read Stories

Click on your DTH Provider to Add TV9 Kannada