IPL 2023: CSK ತಂಡ ಕೈಬಿಟ್ಟ ಬೆನ್ನಲ್ಲೇ ಅಬ್ಬರಿಸಿದ ಚೆನ್ನೈ ಆಟಗಾರರು..!

IPL 2023: ಡಿಸೆಂಬರ್ 23 ರಂದು ಐಪಿಎಲ್ ಮಿನಿ ಹರಾಜು ನಡೆಯಲಿದ್ದು, ಅದಕ್ಕೂ ಮುನ್ನ ನಾರಾಯಣ್ ಜಗದೀಸನ್ ಹಾಗೂ ಸಾಯಿ ಸುದರ್ಶನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಮ್ಮ ಫಾರ್ಮ್​ ಅನ್ನು ಸಾಬೀತುಪಡಿಸಿದ್ದಾರೆ.

Nov 24, 2022 | 10:54 PM
TV9kannada Web Team

| Edited By: Zahir PY

Nov 24, 2022 | 10:54 PM

ಐಪಿಎಲ್ ಸೀಸನ್ 16 ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್​ ತಂಡವು 8 ಆಟಗಾರರನ್ನು ರಿಲೀಸ್ ಮಾಡಿದೆ. ಈ ಎಂಟು ಆಟಗಾರರಲ್ಲಿ ತಮಿಳುನಾಡು ಮೂಲದ ನಾರಾಯಣ್ ಜಗದೀಸನ್ ಕೂಡ ಒಬ್ಬರು.

1 / 6
ಆದರೆ ಇತ್ತ ಸಿಎಸ್​ಕೆ ತಂಡವು ಕೈ ಬಿಟ್ಟ ಬೆನ್ನಲ್ಲೇ ಇತ್ತ ದೇಶೀಯ ಅಂಗಳದಲ್ಲಿ ಜಗದೀಸನ್ ಅಬ್ಬರ ಶುರುವಾಗಿದೆ. ಅದು ಕೂಡ ಸತತ ಶತಕಗಳೊಂದಿಗೆ ಎಂಬುದು ವಿಶೇಷ.

2 / 6
ಹೌದು, ವಿಜಯ್ ಹಜಾರೆ ಟ್ರೋಫಿ 2022 ರಲ್ಲಿ  ಸತತ 5 ಶತಕಗಳನ್ನು ಬಾರಿಸುವ ಮೂಲಕ ಜಗದೀಸನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇದರಲ್ಲಿ ಒಂದು ವಿಶ್ವ ದಾಖಲೆಯ ದ್ವಿಶತಕ ಕೂಡ ಇರುವುದು ಮತ್ತೊಂದು ವಿಶೇಷ.

3 / 6
ವಿಜಯ್ ಹಜಾರೆ ಟೂರ್ನಿಯಲ್ಲಿ ಇದುವರೆಗೆ ಜಗದೀಸನ್ 7 ಪಂದ್ಯಗಳಲ್ಲಿ 5 ಭರ್ಜರಿ ಶತಕ ಸಹಿತ 822 ರನ್ ಕಲೆಹಾಕಿದ್ದಾರೆ. ಈ ಮೂಲಕ ಅದ್ಭುತ ಫಾರ್ಮ್​ ಪ್ರದರ್ಶಿಸಿ ಐಪಿಎಲ್ ಮಿನಿ ಹರಾಜಿಗಾಗಿ ಸಕಲ ರೀತಿಯಲ್ಲೂ ಸಿದ್ಧರಾಗಿದ್ದಾರೆ.

4 / 6
ಮತ್ತೊಂದೆಡೆ ತಮಿಳುನಾಡು ಮೂಲದ ಮತ್ತೋರ್ವ ಆಟಗಾರ ಸಾಯಿ ಸುದರ್ಶನ್ ಕೂಡ ವಿಜಯ್ ಹಜಾರೆ ಟೂರ್ನಿಯಲ್ಲಿ ಅಬ್ಬರಿಸುತ್ತಿದ್ದಾರೆ. 7 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಸುದರ್ಶನ್ 3 ಸ್ಪೋಟಕ ಶತಕಗಳೊಂದಿಗೆ ಒಟ್ಟು 586 ರನ್​ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್​ ಹರಾಜಿಗೂ ಮುನ್ನ ತಂಡದಿಂದ ಕೈಬಿಟ್ಟ ಗುಜರಾತ್ ಟೈಟಾನ್ಸ್​ಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ.

5 / 6
ಡಿಸೆಂಬರ್ 23 ರಂದು ಐಪಿಎಲ್ ಮಿನಿ ಹರಾಜು ನಡೆಯಲಿದ್ದು, ಅದಕ್ಕೂ ಮುನ್ನ ನಾರಾಯಣ್ ಜಗದೀಸನ್ ಹಾಗೂ ಸಾಯಿ ಸುದರ್ಶನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಮ್ಮ ಫಾರ್ಮ್​ ಅನ್ನು ಸಾಬೀತುಪಡಿಸಿದ್ದಾರೆ. ಹೀಗಾಗಿ ಸಿಎಸ್​ಕೆ ತಂಡವೇ ಜಗದೀಸನ್ ಅವರನ್ನು ಮತ್ತೆ ಖರೀದಿಸಿದರೂ ಅಚ್ಚರಿಪಡಬೇಕಿಲ್ಲ.

6 / 6

Follow us on

Most Read Stories

Click on your DTH Provider to Add TV9 Kannada