- Kannada News Photo gallery Cricket photos Team India's 3 Players T20I Career Can Come To An End Kannada News zp
Team India: ಟೀಮ್ ಇಂಡಿಯಾದ ಈ ಮೂವರ ಟಿ20 ಕೆರಿಯರ್ ಬಹುತೇಕ ಅಂತ್ಯ..!
Team India: 2024 ರ ಟಿ20 ವಿಶ್ವಕಪ್ಗಾಗಿ ಈಗಲೇ ಹೊಸ ತಂಡವನ್ನು ರೂಪಿಸಲು ಯೋಜನೆಗಳನ್ನು ರೂಪಿಸಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ. ಅದರಂತೆ ತಂಡದಲ್ಲಿರುವ ಕೆಲ ಹಿರಿಯ ಆಟಗಾರರನ್ನು ಚುಟುಕು ಕ್ರಿಕೆಟ್ ಸ್ವರೂಪದಿಂದ ಕೈ ಬಿಡಲಿದ್ದಾರೆ.
Updated on: Nov 24, 2022 | 10:04 PM

ಟಿ20 ವಿಶ್ವಕಪ್ನಲ್ಲಿನ ಹೀನಾಯ ಪ್ರದರ್ಶನದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಬದಲಾವಣೆಗಳ ಗಾಳಿ ಬೀಸಲಾರಂಭಿಸಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಈಗಾಗಲೇ ಬಿಸಿಸಿಐ ಆಯ್ಕೆ ಸಮಿತಿಯನ್ನು ವಿಸರ್ಜಿಸಲಾಗಿದೆ.

ಅಷ್ಟೇ ಅಲ್ಲದೆ ನಾಯಕತ್ವ ಬದಲಾವಣೆ ಬಗ್ಗೆ ಕೂಡ ಚರ್ಚಿಸಲಾಗಿದೆ. ಅದರಂತೆ ಮುಂಬರುವ ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಏಕದಿನ, ಟಿ20 ತಂಡಗಳಿಗೆ ಬೇರೆ ಬೇರೆ ನಾಯಕರುಗಳನ್ನು ಆಯ್ಕೆ ಮಾಡಲು ಚಿಂತಿಸಲಾಗಿದೆ.

ಮತ್ತೊಂದೆಡೆ 2024 ರ ಟಿ20 ವಿಶ್ವಕಪ್ಗಾಗಿ ಈಗಲೇ ಹೊಸ ತಂಡವನ್ನು ರೂಪಿಸಲು ಯೋಜನೆಗಳನ್ನು ರೂಪಿಸಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ. ಅದರಂತೆ ತಂಡದಲ್ಲಿರುವ ಕೆಲ ಹಿರಿಯ ಆಟಗಾರರನ್ನು ಚುಟುಕು ಕ್ರಿಕೆಟ್ ಸ್ವರೂಪದಿಂದ ಕೈ ಬಿಡುವ ನಿರ್ಧಾರವನ್ನು ಕೈಗೊಳ್ಳಲಿದೆ.

ಈ ಪಟ್ಟಿಯಲ್ಲಿ ಈ ಬಾರಿ ಟಿ20 ವಿಶ್ವಕಪ್ ಆಡಿರುವ ಮೂವರು ಹಿರಿಯ ಆಟಗಾರರು ಇರುವುದು ಬಹುತೇಕ ಖಚಿತವಾಗಿದೆ. ಅವರೆಂದರೆ...

ರವಿಚಂದ್ರನ್ ಅಶ್ವಿನ್: ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಅಶ್ವಿನ್ ಎಲ್ಲಾ ಪಂದ್ಯಗಳನ್ನು ಆಡಿದ್ದರು. ಇದಾಗ್ಯೂ ಪಡೆದಿದ್ದು ಕೇವಲ 6 ವಿಕೆಟ್ ಮಾತ್ರ. ಮತ್ತೊಂದೆಡೆ 36 ವರ್ಷ ಅಶ್ವಿನ್ಗೆ ಅವಕಾಶ ನೀಡಿದ ಪರಿಣಾಮ ಯುಜ್ವೇಂದ್ರ ಚಹಾಲ್ ಇಡೀ ಟೂರ್ನಿಯಲ್ಲಿ ಬೆಂಚ್ ಕಾಯಬೇಕಾಯಿತು. ಇತ್ತ 2024 ರಲ್ಲಿ ಅಶ್ವಿನ್ ಅವರನ್ನು ಟಿ20 ವಿಶ್ವಕಪ್ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಹೀಗಾಗಿ ಈಗಲೇ ಅವರನ್ನು ತಂಡದಿಂದ ಕೈ ಬಿಟ್ಟು, ಏಕದಿನ ಹಾಗೂ ಟೆಸ್ಟ್ ತಂಡದ ಆಯ್ಕೆಗೆ ಮಾತ್ರ ಪರಿಗಣಿಸಲಿದೆ.

ಮೊಹಮ್ಮದ್ ಶಮಿ: ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರನ್ನು 2021 ರ ಟಿ20 ವಿಶ್ವಕಪ್ ಬಳಿಕ ಟಿ20 ತಂಡದಿಂದ ಕೈ ಬಿಡಲಾಗಿತ್ತು. ಆದರೆ ಈ ಬಾರಿ ಜಸ್ಪ್ರೀತ್ ಬುಮ್ರಾ ಅವರ ಅಲಭ್ಯತೆಯ ಕಾರಣ ಮತ್ತೆ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಸಿಕ್ಕ ಅವಕಾಶದಲ್ಲಿ ಶಮಿ ಪಡೆದಿದ್ದು ಕೇವಲ 6 ವಿಕೆಟ್ ಮಾತ್ರ. ಹೀಗಾಗಿ ಮತ್ತೆ ಮೊಹಮ್ಮದ್ ಶಮಿಯನ್ನು ಟಿ20 ತಂಡಕ್ಕೆ ಪರಿಗಣಿಸುವುದಿಲ್ಲ ಎಂದೇ ಹೇಳಬಹುದು.

ದಿನೇಶ್ ಕಾರ್ತಿಕ್: 2019 ರ ಬಳಿಕ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ದಿನೇಶ್ ಕಾರ್ತಿಕ್ ಅಚ್ಚರಿ ಎಂಬಂತೆ ಕಂಬ್ಯಾಕ್ ಮಾಡಿದ್ದರು. ಐಪಿಎಲ್ನಲ್ಲಿ ಆರ್ಸಿಬಿ ಪರ ಅಬ್ಬರಿಸುವ ಮೂಲಕ ಟೀಮ್ ಇಂಡಿಯಾದಲ್ಲಿ ಫಿನಿಶರ್ ಸ್ಥಾನದಲ್ಲಿ ಅವಕಾಶ ಪಡೆದರು. ಆದರೆ ಟಿ20 ವಿಶ್ವಕಪ್ನಲ್ಲಿ 4 ಪಂದ್ಯವಾಡಿದ್ದ ಡಿಕೆ ಕಲೆಹಾಕಿದ್ದು ಕೇವಲ 14 ರನ್ ಮಾತ್ರ. ಹೀಗಾಗಿ ದಿನೇಶ್ ಕಾರ್ತಿಕ್ ಅವರ ಟಿ20 ಕೆರಿಯರ್ ಕೂಡ ಇದರೊಂದಿಗೆ ಅಂತ್ಯವಾಗಿದೆ ಎನ್ನಲಾಗುತ್ತಿದೆ.

ಏಕೆಂದರೆ ಅತ್ತ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸ್ಥಾನಕ್ಕಾಗಿ ರಿಷಭ್ ಪಂತ್, ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ನಡುವೆ ಭರ್ಜರಿ ಪೈಪೋಟಿ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ 37 ವರ್ಷದ ಡಿಕೆಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗುವುದಿಲ್ಲ ಎಂದೇ ಹೇಳಬಹುದು.



















