- Kannada News Photo gallery Cricket photos Jofra Archer wildcard signing for s MI Cape Town Kannada News
MI Cape Town: ಮುಂಬೈ ಇಂಡಿಯನ್ಸ್ನ ಹೊಸ ತಂಡಕ್ಕೆ ಸ್ಟಾರ್ ಆಟಗಾರರು ಆಯ್ಕೆ
SA20 MI Cape Town: ಡೆವಾಲ್ಡ್ ಬ್ರೇವಿಸ್, ರಾಸ್ಸೀ ವ್ಯಾನ್ ಡೆರ್ ಡಸ್ಸೆನ್, ಸ್ಯಾಮ್ ಕರನ್, ರಶೀದ್ ಖಾನ್, ಜೋಫ್ರಾ ಆರ್ಚರ್, ಲಿಯಾಮ್ ಲಿವಿಂಗ್ಸ್ಟೋನ್, ಕಗಿಸೊ ರಬಾಡ, ಜಿಯಾದ್ ಅಬ್ರಹಾಮ್ಸ್.
Updated on: Nov 24, 2022 | 8:31 PM

ಜನವರಿ 10, 2023 ರಿಂದ ಶುರುವಾಗಲಿರುವ ಸೌತ್ ಆಫ್ರಿಕಾ ಟಿ20 ಲೀಗ್ (SA T20 League) ಗಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತನ್ನ ತಂಡವನ್ನು ಘೋಷಿಸಿದೆ. ಎಂಐ ಕೇಪ್ಟೌನ್ ಹೆಸರಿನಲ್ಲಿರುವ ಕಣಕ್ಕಿಳಿಯಲಿರುವ ಈ ತಂಡದಲ್ಲಿ ಒಟ್ಟು 17 ಆಟಗಾರರು ಸ್ಥಾನ ಪಡೆದಿದ್ದರು. ಇದಾಗ್ಯೂ ಅಂತಿಮ ಕ್ಷಣದ ಅವಕಾಶಕ್ಕಾಗಿ ವೈಲ್ ಕಾರ್ಡ್ ಎಂಟ್ರಿಯ ಆಯ್ಕೆ ನೀಡಲಾಗಿತ್ತು.

ಅದರಂತೆ ಇದೀಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತನ್ನ ವೈಲ್ಡ್ ಕಾರ್ಡ್ ಆಯ್ಕೆಯ ಮೂಲಕ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಇದೀಗ 18 ಸದಸ್ಯರ ಎಂಐ ಕೇಪ್ಟೌನ್ ತಂಡ ಪೂರ್ಣಗೊಂಡಿದೆ.

ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಪ್ರತಿ ತಂಡಗಳಿಗೆ 10 ದಕ್ಷಿಣ ಆಫ್ರಿಕಾ ಮತ್ತು 8 ವಿದೇಶಿ ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗಿತ್ತು. ಹಾಗೆಯೇ ಪ್ಲೇಯಿಂಗ್ 11 ನಲ್ಲಿ 7 ದಕ್ಷಿಣ ಆಫ್ರಿಕಾದ ಆಟಗಾರರು ಮತ್ತು 4 ವಿದೇಶಿ ಆಟಗಾರರಿಗೆ ಅವಕಾಶ ಇರಲಿದೆ.

ಸದ್ಯ 18 ಸದಸ್ಯರನ್ನು ಹೊಂದಿರುವ ಎಂಐ ಕೇಪ್ಟೌನ್ ತಂಡದಲ್ಲಿ 6 ಬಲಿಷ್ಠ ಆಟಗಾರರು ಇರುವುದು ವಿಶೇಷ. ಅವರೆಂದರೆ...

ಕಗಿಸೋ ರಬಾಡ (ಸೌತ್ ಆಫ್ರಿಕಾ)

ರಶೀದ್ ಖಾನ್ (ಅಫ್ಘಾನಿಸ್ತಾನ್)

ಲಿಯಾಮ್ ಲಿವಿಂಗ್ಸ್ಟೋನ್ (ಇಂಗ್ಲೆಂಡ್)

ಸ್ಯಾಮ್ ಕರನ್ (ಇಂಗ್ಲೆಂಡ್)

ಡೆವಾಲ್ಡ್ ಬ್ರೇವಿಸ್ (ಸೌತ್ ಆಫ್ರಿಕಾ)

ಜೋಫ್ರಾ ಆರ್ಚರ್ (ಇಂಗ್ಲೆಂಡ್)

ಈ ಹೊಸ ಲೀಗ್ನಲ್ಲಿ ಒಟ್ಟು 6 ತಂಡಗಳಿದ್ದು, ಈ ಎಲ್ಲಾ ತಂಡಗಳನ್ನು ಐಪಿಎಲ್ನಲ್ಲಿ ತಂಡಗಳ ಮಾಲೀಕತ್ವವನ್ನು ಹೊಂದಿರುವ ಫ್ರಾಂಚೈಸಿಗಳೇ ಖರೀದಿಸಿರುವುದು ವಿಶೇಷ. ಅದರಂತೆ ಕೇಪ್ ಟೌನ್ ತಂಡವನ್ನು ಮುಂಬೈ ಇಂಡಿಯನ್ಸ್ ಖರೀದಿಸಿದರೆ , ಜೋಹಾನ್ಸ್ ಬರ್ಗ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದೆ. ಇನ್ನು ಡರ್ಬನ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ಒಡೆತನದಲ್ಲಿದ್ದರೆ, ಪೋರ್ಟ್ ಎಲಿಜಬೆತ್ ತಂಡವನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿಸಿದೆ. ಹಾಗೆಯೇ ಪ್ರಿಟೋರಿಯಾ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರೆ, ಪರ್ಲ್ ತಂಡವನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಖರೀದಿಸಿದೆ. ಹೀಗಾಗಿಯೇ ಸೌತ್ ಆಫ್ರಿಕಾ ಟಿ20 ಲೀಗ್ ಅನ್ನು ಮಿನಿ ಐಪಿಎಲ್ ಎಂದೇ ವರ್ಣಿಸಲಾಗುತ್ತಿದೆ.

ಎಂಐ ಕೇಪ್ಟೌನ್ ತಂಡ ಹೀಗಿದೆ: ಡೆವಾಲ್ಡ್ ಬ್ರೇವಿಸ್, ರಾಸ್ಸೀ ವ್ಯಾನ್ ಡೆರ್ ಡಸ್ಸೆನ್, ಸ್ಯಾಮ್ ಕರನ್, ರಶೀದ್ ಖಾನ್, ಜೋಫ್ರಾ ಆರ್ಚರ್, ಲಿಯಾಮ್ ಲಿವಿಂಗ್ಸ್ಟೋನ್, ಕಗಿಸೊ ರಬಾಡ, ಜಿಯಾದ್ ಅಬ್ರಹಾಮ್ಸ್, ಬ್ಯೂರಾನ್ ಹೆಂಡ್ರಿಕ್ಸ್, ಡುವಾನ್ ಜಾನ್ಸೆನ್, ಜಾರ್ಜ್ ಲಿಂಡೆ, ವೆಸ್ಲಿ ಮಾರ್ಷಲ್, ಡೆಲಾನೊ ಪಾಟ್‌ಗೀಟರ್, ರಯಾನ್ ರಿಕೆಲ್ಟನ್, ಗ್ರಾಂಟ್ ರೊಲೊಫ್ಸೆನ್, ವಾಕರ್ ಸಲಾಮ್ಖೈಲ್, ಓಡಿಯನ್ ಸ್ಮಿತ್, ಒಲಿ ಸ್ಟೋನ್.
























