ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡುವ ಹಬ್ಬ ಎಂದೇ ಹೆಸರುವಾಸಿಯಾದ ಐಪಿಎಲ್ ಇಂದಿನಿಂದ ಆರಂಭವಾಗುತ್ತಿದೆ. ಕೆಲ ವರ್ಷಗಳ ಹಿಂದೆ ಟಿವಿ ಮುಂದೆ ಕುಳಿತು ಕ್ರಿಕೆಟ್ ನೋಡುವುದೇ ದೊಡ್ಡ ಸಂಭ್ರಮವಾಗಿತ್ತು. ಆದರೆ, ಇಂಟರ್ನೆಟ್ ಕ್ರಾಂತಿ ಆದ ನಂತರ ಈಗಂತೂ ಎಲ್ಲರೂ ಮೊಬೈಲ್ನಲ್ಲಿಯೇ, ತಾವಿದ್ದ ಜಾಗದಲ್ಲೇ ಪಂದ್ಯಾವಳಿಗಳನ್ನು ವೀಕ್ಷಿಸಿ ಆನಂದಿಸುತ್ತಾರೆ. ಇಂತಹ ಕ್ರಿಕೆಟ್ ಪ್ರೇಮಿಗಳಿಗಾಗಿಯೇ ಟೆಲಿಕಾಂ ಕ್ಷೇತ್ರದ ದೈತ್ಯ ರಿಲಯನ್ಸ್ ಜಿಯೋ ಕಂಪೆನಿ ಹೊಸ ಯೋಜನೆಗಳನ್ನು ಜಾರಿಗೊಳಿಸಿದೆ
ಐಪಿಎಲ್ 2021 ಪಂದ್ಯಗಳನ್ನು ವೀಕ್ಷಿಸಲು ಜಿಯೋ ತನ್ನ ಗ್ರಾಹಕರಿಗೆ ರೀಚಾರ್ಜ್ ಮೇಲೆ ಹೆಚ್ಚುವರಿಯಾಗಿ ಉಚಿತ 10 ಜಿಬಿ ಡೇಟಾ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ನೀಡಲಿದೆ. ಇದು ಆಯ್ದ ಕೆಲ ಜಿಯೋ ಪ್ರೀಪೇಯ್ಡ್ ಪ್ಲಾನ್ಗಳಿಗೆ ಮಾತ್ರ ಅನ್ವಯವಾಗಲಿದೆ. ಇದರೊಂದಿಗೆ ಜಿಯೋ ಕ್ರಿಕೆಟ್ ಆ್ಯಪ್ ಎಂಬ ಹೊಸ ಆ್ಯಪ್ ಕೂಡಾ ಬಿಡುಗಡೆಯಾಗಿದ್ದು, ಜಿಯೋ ಫೋನ್ ಬಳಸುವ ಎಲ್ಲಾ ಗ್ರಾಹಕರಿಗೂ ಇದು ಲಭ್ಯವಿರಲಿದೆ. ಇದರಲ್ಲಿ ಕ್ರಿಕೆಟ್ ಸ್ಕೋರ್ ನೋಡುವ ಜೊತೆಗೆ, ಕೆಲ ಸ್ಪರ್ಧೆಗಳಲ್ಲಿ ಭಾಗವಹಿಸಲು ಗ್ರಾಹಕರಿಗೆ ಅವಕಾಶವನ್ನೂ ನೀಡಲಾಗಿದೆ. ಐಪಿಎಲ್ ಸಂದರ್ಭದಲ್ಲಿ ಜಿಯೋ ಜಾರಿಗೊಳಿಸಿದ ಯೋಜನೆಗಳು ಯಾವುವು? ಅವುಗಳಿಂದ ಬಳಕೆದಾರರಿಗೆ ಸಿಗುವ ಲಾಭಗಳೇನು? ಎಷ್ಟು ಹಣ ಪಾವತಿಸಿದರೆ ಉತ್ತಮ? ಯಾವುದು ಒಳ್ಳೆಯ ಯೋಜನೆ? ಎಂಬೆಲ್ಲಾ ಗೊಂದಲಗಳು ನಿಮಗಿದ್ದರೆ ಜಿಯೋ ಚಾಲ್ತಿಯಲ್ಲಿಟ್ಟಿರುವ ಕೆಲ ಯೋಜನೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಐಪಿಎಲ್ ವೀಕ್ಷಿಸಲು ಜಿಯೋ ಯೋಜನೆಗಳು (ಬೆಲೆ ₹401ರಿಂದ ಪ್ರಾರಂಭ)
ಜಿಯೋ ಬಳಕೆದಾರರು ಐಪಿಎಲ್ 2021 ಪಂದ್ಯಗಳನ್ನು ಆನ್‌ಲೈನ್‌ನಲ್ಲಿ ₹401, ₹598 ಮತ್ತು ₹2,599 ರೀಚಾರ್ಜ್ ಮೂಲಕ ಹಾಗೂ ₹499 ರಿಂದ ಪ್ರಾರಂಭವಾಗುವ ಆಡ್-ಆನ್ ರೀಚಾರ್ಜ್ಗಳಲ್ಲಿ ಉಚಿತವಾಗಿ ವೀಕ್ಷಿಸಬಹುದು. ಈ ಜಿಯೋ ರೀಚಾರ್ಜ್ ಪ್ಯಾಕ್‌ಗಳು ಡಿಸ್ನಿ + ಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆ ಹೊಂದಿವೆ.
ಪ್ರಿಪೇಯ್ಡ್ ಗ್ರಾಹಕರಿಗಾಗಿ ಜಿಯೋ ಯೋಜನೆಗಳ ಸಂಪೂರ್ಣ ವಿವರಗಳು ಇಲ್ಲಿವೆ
ಜಿಯೋ ₹401 ರೀಚಾರ್ಜ್ ಯೋಜನೆ
ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ
28 ದಿನಗಳ ಮಾನ್ಯತೆ
ದಿನಕ್ಕೆ 3 ಜಿಬಿ ಡೇಟಾ + ಉಚಿತ 6 ಜಿಬಿ ಡೇಟಾ
ಉಚಿತ ಕರೆ ಸೌಲಭ್ಯ, ದಿನಕ್ಕೆ 100 ಎಸ್‌ಎಂಎಸ್
ಜಿಯೋ ₹598 ರೀಚಾರ್ಜ್ ಯೋಜನೆ
ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ
56 ದಿನಗಳ ಮಾನ್ಯತೆ
112 ಜಿಬಿ ಡೇಟಾ
ಉಚಿತ ಕರೆ ಸೌಲಭ್ಯ, ದಿನಕ್ಕೆ 100 ಎಸ್‌ಎಂಎಸ್
ಜಿಯೋ ₹2,599 ರೀಚಾರ್ಜ್ ಯೋಜನೆ
ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ
365 ದಿನಗಳ ಮಾನ್ಯತೆ
ದಿನಕ್ಕೆ 2 ಜಿಬಿ ಡೇಟಾ + ಉಚಿತ 10 ಜಿಬಿ ಡೇಟಾ
ಉಚಿತ ಕರೆ ಸೌಲಭ್ಯ, ದಿನಕ್ಕೆ 100 ಎಸ್‌ಎಂಎಸ್
ಜಿಯೋ ₹612 ಆಡ್-ಆನ್ ರೀಚಾರ್ಜ್ ಯೋಜನೆ
ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ
72 ಜಿಬಿ ಡೇಟಾ
6,000 ನಿಮಿಷಗಳ ಜಿಯೋ ಕರೆಗಳು
ಪ್ರಾಥಮಿಕ ಪ್ಯಾಕ್‌ನ ಸಿಂಧುತ್ವದವರೆಗೆ ಇರುತ್ತದೆ
ಜಿಯೋ ₹1,004 ಆಡ್-ಆನ್ ರೀಚಾರ್ಜ್ ಯೋಜನೆ
ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ
120 ದಿನಗಳ ಸಿಂಧುತ್ವ
200 ಜಿಬಿ ಡೇಟಾ
ಜಿಯೋ ₹1,206 ಆಡ್-ಆನ್ ರೀಚಾರ್ಜ್ ಯೋಜನೆ
ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ
180 ದಿನಗಳ ಮಾನ್ಯತೆ
240 ಜಿಬಿ ಡೇಟಾ
ಇದನ್ನೂ ಓದಿ:
Ishan Kishan IPL 2021 MI Team Player: ದ್ರಾವಿಡ್ ಪಟ್ಟಾ ಶಿಷ್ಯ ಕಿಶನ್.. ಈ ಬಾರಿಯ ಐಪಿಎಲ್ನ ಪ್ರಮುಖ ಕೇಂದ್ರ ಬಿಂದು!
Reliance Jio fiber schemes: ಜಿಯೋ ಫೈಬರ್ನಿಂದ 14 ಅದ್ಭುತ ಪ್ಲ್ಯಾನ್ಗಳು, ಹೆಚ್ಚುವರಿ ವ್ಯಾಲಿಡಿಟಿ
(Jio offers upto 10 GB Free Data on Disney Plus Hotstar pack for IPL 2021)