ಕೊನೆಯ ಎಸೆತದಲ್ಲಿ ಗೆಲುವಿನ ಸಿಕ್ಸ್ ಬಾರಿಸಿ ತಂಡವನ್ನು ಫೈನಲ್ಗೇರಿಸಿದ ಜಿತೇಶ್ ಶರ್ಮಾ
Vidarbha Pro T20 League: ವಿದರ್ಭ ಪ್ರೊ ಟಿ20 ಲೀಗ್‌ನಲ್ಲಿ NECO ಮಾಸ್ಟರ್ ಬ್ಲಾಸ್ಟರ್ ತಂಡ ಭಾರತ್ ರೇಂಜರ್ಸ್ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ. ನಾಯಕ ಜಿತೇಶ್ ಶರ್ಮಾ 46 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತ್ ರೇಂಜರ್ಸ್ ಪರ ಅಥರ್ವ ಟೇಡ್ 94 ರನ್ ಗಳಿಸಿದರೂ,ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. ಇದೀಗ ಜೂನ್ 15ರಂದು ಫೈನಲ್ ಪಂದ್ಯ ನಡೆಯಲಿದೆ.

ಭಾರತದಲ್ಲಿ ಐಪಿಎಲ್ (IPL 2025) ಮುಗಿಯುತ್ತಿದ್ದಂತೆ ರಾಜ್ಯ ಟಿ20 ಲೀಗ್ಗಳು ಆರಂಭವಾಗಿವೆ. ಅದರಲ್ಲಿ ಒಂದಾಂದ ವಿದರ್ಭ ಪ್ರೊ ಟಿ20 ಲೀಗ್ ಕೂಡ ಇದೀಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ಅದರಂತೆ ಭಾರತ್ ರೇಂಜರ್ಸ್ ಹಾಗೂ NECO ಮಾಸ್ಟರ್ ಬ್ಲಾಸ್ಟರ್ ತಂಡಗಳ ನಡುವೆ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಜಿತೇಶ್ ಶರ್ಮಾ (Jitesh Sharma) ನಾಯಕತ್ವದ NECO ಮಾಸ್ಟರ್ ಬ್ಲಾಸ್ಟರ್ ತಂಡವು ಭಾರತ್ ರೇಂಜರ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಪಂದ್ಯದಲ್ಲಿ, ಜಿತೇಶ್ 46 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈಗ ಫೈನಲ್‌ನಲ್ಲಿ, NECO ಮಾಸ್ಟರ್ ಬ್ಲಾಸ್ಟರ್ ಜೂನ್ 15 ರಂದು ಪಗೇರಿಯಾ ಸ್ಟ್ರೈಕರ್ಸ್ ತಂಡವನ್ನು ಎದುರಿಸಲಿದೆ.
ಬ್ಯಾಟ್ಸ್‌ಮನ್‌ಗಳ ಉತ್ತಮ ಪ್ರದರ್ಶನ
ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ್ ರೇಂಜರ್ಸ್ ತಂಡ 204 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ NECO ಮಾಸ್ಟರ್ ಬ್ಲಾಸ್ಟರ್ ತಂಡವು ಸುಲಭವಾಗಿ ಜಯ ಸಾಧಿಸಿತು. ಮಾಸ್ಟರ್ ಬ್ಲಾಸ್ಟರ್ ಪರ ಅಧ್ಯಾಯನ್ ಡಾಗಾ, ಆರ್ಯನ್ ಮೆಶ್ರಾಮ್ ಮತ್ತು ಜಿತೇಶ್ ಶರ್ಮಾ ಅದ್ಭುತ ಬ್ಯಾಟಿಂಗ್ ಮಾಡಿದರು. ಅಧ್ಯಾಯನ್ 38 ಎಸೆತಗಳಲ್ಲಿ ಐದು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 66 ರನ್ ಗಳಿಸಿದರೆ, ಮೆಶ್ರಾಮ್ 49 ರನ್‌ಗಳ ಕೊಡುಗೆ ನೀಡಿದರು. ಈ ಬ್ಯಾಟ್ಸ್‌ಮನ್‌ಗಳ ಮುಂದೆ ಭಾರತ್ ರೇಂಜರ್ಸ್ ಬೌಲರ್‌ಗಳು ವಿಶೇಷವಾಗಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ.
ಗೆಲುವಿನ ಸಿಕ್ಸರ್ ಬಾರಿಸಿದ ಜಿತೇಶ್ ಶರ್ಮಾ
ಈ ಪಂದ್ಯದಲ್ಲಿ ನಾಯಕನ ಇನ್ನಿಂಗ್ಸ್ ಆಡಿದ ಜಿತೇಶ್ ಶರ್ಮಾ 22 ಎಸೆತಗಳಲ್ಲಿ 46 ರನ್ ಗಳಿಸಿದರು, ಇದರಲ್ಲಿ ಒಂದು ಬೌಂಡರಿ ಮತ್ತು 6 ಸಿಕ್ಸರ್‌ಗಳು ಸೇರಿದ್ದವು. ಕೊನೆಯ ಓವರ್‌ನಲ್ಲಿ, NECO ಮಾಸ್ಟರ್ ಬ್ಲಾಸ್ಟರ್ ಗೆಲ್ಲಲು 11 ರನ್‌ಗಳು ಬೇಕಾಗಿದ್ದವು. ನಾಯಕ ಜಿತೇಶ್ ಕ್ರೀಸ್ನಲ್ಲಿದ್ದರು. ಕೊನೆಯ ಎಸೆತದಲ್ಲಿ ತಂಡಕ್ಕೆ ಐದು ರನ್‌ಗಳು ಬೇಕಾಗಿದ್ದವು, ಈ ವೇಳೆ ಸ್ಟ್ರೈಕ್ನಲ್ಲಿದ್ದ ಜಿತೇಶ್ ಸಿಕ್ಸ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
IPL 2025: ಜಿತೇಶ್ ಗೆಲುವಿನ ಸಿಕ್ಸರ್ ಬಾರಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಕೊಹ್ಲಿ; ವಿಡಿಯೋ ನೋಡಿ
ಶತಕ ವಂಚಿತ ಅಥರ್ವ ಟೇಡ್
ಇದಕ್ಕೂ ಮೊದಲು ಭಾರತ್ ರೇಂಜರ್ಸ್ ತಂಡದ ಪರ ಅಥರ್ವ ಟೇಡ್ 94 ರನ್‌ಗಳ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರ ಇನ್ನಿಂಗ್ಸ್ನಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್‌ಗಳು ಸೇರಿದ್ದವು. ಅವರಲ್ಲದೆ, ವರುಣ್ ಬಿಶ್ತ್ 50 ರನ್‌ಗಳ ಕಾಣಿಕೆ ನೀಡಿದರು. ಈ ಇಬ್ಬರ ಉತ್ತಮ ಇನ್ನಿಂಗ್ಸ್‌ನಿಂದಾಗಿ, ಭಾರತ್ ರೇಂಜರ್ಸ್ 204 ರನ್ ಗಳಿಸಿತು. NECO ಮಾಸ್ಟರ್ ಬ್ಲಾಸ್ಟರ್ ಪರ ಅನ್ಮಯ್ ಜೈಸ್ವಾಲ್ ಗರಿಷ್ಠ ಎರಡು ವಿಕೆಟ್‌ಗಳನ್ನು ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:26 pm, Sat, 14 June 25
