AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ರೂಲ್ಸ್ ಪರಿಚಯಿಸಿದ ಐಸಿಸಿ: ಈ ನಿಯಮ ಅರ್ಥವಾಗಲು ಈ ವಿಡಿಯೋ ನೋಡ್ಲೇಬೇಕು

ICC New Catch Rule: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಹೊಸ ನಿಯಮ ಪರಿಚಯಿಸಲು ಮುಂದಾಗಿದೆ. ಈ ಹಿಂದಿನ ಐಸಿಸಿ ಕ್ಯಾಚ್ ನಿಯಮದಲ್ಲಿ ಎಂಸಿಸಿ ಮಹತ್ವದ ಬದಲಾವಣೆ ಮಾಡಿದ್ದು, ಅದರಂತೆ ಹೊಸ ನಿಯಮವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ 2027ರ ಸರಣಿಯ ಆರಂಭದೊಂದಿಗೆ ಜಾರಿಗೊಳ್ಳಲಿದೆ.

ಹೊಸ ರೂಲ್ಸ್ ಪರಿಚಯಿಸಿದ ಐಸಿಸಿ: ಈ ನಿಯಮ ಅರ್ಥವಾಗಲು ಈ ವಿಡಿಯೋ ನೋಡ್ಲೇಬೇಕು
ICC
ಝಾಹಿರ್ ಯೂಸುಫ್
|

Updated on:Jun 14, 2025 | 1:20 PM

Share

ಕ್ರಿಕೆಟ್ ಕ್ಯಾಚ್ ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ಐಸಿಸಿ ಮುಂದಾಗಿದೆ. ಈಗಾಗಲೇ ಹೊಸ ಕ್ಯಾಚ್ ನಿಯಮವನ್ನು ಮೇರಿಲೆಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಂದಿಟ್ಟಿದ್ದು, ಈ ನಿಯಮ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯೊಂದಿಗೆ ಪ್ರಾರಂಭವಾಗಲಿದೆ.

ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಬನ್ನಿ ಹಾಪ್ ಕ್ಯಾಚ್​ಗಳನ್ನು ಔಟ್ ಎಂದು ಪರಿಗಣಿಸುವುದಿಲ್ಲ. ಅಂದರೆ ಬೌಂಡರಿ ಲೈನ್ ದಾಟಿ ಚೆಂಡನ್ನು ತಡೆದು ಕ್ಯಾಚ್ ಹಿಡಿಯಲು ಪ್ರಯತ್ನಿಸಿದಾಗ, ಫೀಲ್ಡರ್​ನ ಮೊದಲ ಸ್ಪರ್ಶವು ಅವರನ್ನು ಬೌಂಡರಿಯ ಹೊರಗಿದ್ದರೆ, ಅವರ ಎರಡನೇ ಸ್ಪರ್ಶವು ಅವರನ್ನು ಮತ್ತೆ ಮೈದಾನದ ಒಳಗೆ ಕೊಂಡೊಯ್ಯಬೇಕು. ಇದರ ಹೊರತಾಗಿ ಬೌಂಡರಿ ಲೈನ್​ನ ಹೊರಗೆ ನಿಂತು ಗಾಳಿಯಲ್ಲಿ ಚೆಂಡನ್ನು ಮೈದಾನದ ಒಳಕ್ಕೆ ಎಸೆಯುವಂತಿಲ್ಲ.

ಇಂತಹದೊಂದು ನಿಯಮವನ್ನು ಜಾರಿಗೊಳಿಸಲು ಮುಖ್ಯ ಕಾರಣ 2023ರ ಬಿಗ್ ಬ್ಯಾಷ್ ಲೀಗ್​ನಲ್ಲಿ ಕಂಡು ಬಂದ ವಿವಾದ. ಸಿಡ್ನಿ ಸಿಕ್ಸರ್ಸ್ ವಿರುದ್ಧದ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ತಂಡದ ಮೈಕೆಲ್ ನೆಸರ್ ಬೌಂಡರಿ ಲೈನ್ ಹೊರಗೆ ಹೋಗಿ ಗಾಳಿಯಲ್ಲಿ ಹಾರಿ ಚೆಂಡನ್ನು ಹಿಡಿದು, ಮತ್ತೆ ಮೈದಾನಕ್ಕೆ ಎಸೆದು ಕ್ಯಾಚ್ ಹಿಡಿದಿದ್ದರು. ಅದನ್ನು ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.

ಹೀಗೆ ಕ್ಯಾಚ್ ಹಿಡಿಯಲು ಅವಕಾಶವಿದ್ದ ಕಾರಣ, ಹಲವು ಲೀಗ್​ಗಳಲ್ಲಿ ಬನ್ನಿ ಹಾಪ್ ಕ್ಯಾಚ್​ಗಳ ಪ್ರಯತ್ನಗಳು ಸಹ ನಡೆದಿದ್ದವು. ಇದರ ಬೆನ್ನಲ್ಲೇ ಐಸಿಸಿಯ ಈ ನಿಯಮದ ಬಗ್ಗೆ ಅಪಸ್ವರಗಳು ಕೇಳಿ ಬಂದಿತ್ತು. ಹೀಗಾಗಿ ಇದೀಗ ಬನ್ನಿ ಹಾಪ್ ಕ್ಯಾಚ್​ಗಳಿಗೆ ಬ್ರೇಕ್ ಹಾಕಲು ಐಸಿಸಿ ನಿರ್ಧರಿಸಿದೆ. ಅದರಂತೆ ಮುಂದಿನ ದಿನಗಳಲ್ಲಿ ಫೀಲ್ಡರ್​ಗಳು ಮೈದಾನದ ಹೊರಗೆ ನಿಂತು ಗಾಳಿಯಲ್ಲಿ ಚೆಂಡನ್ನು ಹೊರಕ್ಕೆ ಎಸೆಯುವಂತಿಲ್ಲ.

ಅಲ್ಲದೆ ಬೌಂಡರಿ ಲೈನ್ ದಾಟಿ ಹಿಡಿದ ಕ್ಯಾಚ್ ಕಾನೂನು ಬದ್ಧವಾಗಬೇಕಿದ್ದರೆ, ಚೆಂಡಿನ ಮೇಲಿನ ಫೀಲ್ಡರ್​ನ ಮೊದಲ ಸ್ಪರ್ಶವು ಬೌಂಡರಿ ಲೈನ್​ ಆಚೆಯಿದ್ದರೆ, ಚೆಂಡನ್ನು ಎರಡನೇ ಬಾರಿ ಸ್ಪರ್ಶಿಸಬೇಕಿದ್ದರೆ ಫೀಲ್ಡರ್ ಮೈದಾನದ ಒಳಗಿರಬೇಕು. ಅಂದರೆ ಇಲ್ಲಿ ಬೌಂಡರಿ ಲೈನ್​ ಆಚೆ ನಿಂತು ಫೀಲ್ಡರ್ ಎರಡು ಬಾರಿ ಚೆಂಡನ್ನು ಸ್ಪರ್ಶಿಸುವಂತಿಲ್ಲ. ಅಲ್ಲದೆ ಫೀಲ್ಡರ್‌ಗಳು ಬಯಸಿದಷ್ಟು ಸಮಯ ಬೌಂಡರಿಯ ಹೊರಗೆ ಚೆಂಡಿಗಾಗಿ ಕಾಯಲು ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಈ ಕ್ಯಾಚ್ ವಿಡಿಯೋ ನೋಡಿದ್ರೆ ಹೊಸ ನಿಯಮ ಅರ್ಥವಾಗಬಹುದು:

ಈ ಮೇಲಿನ ವಿಡಿಯೋದಲ್ಲಿ ತೋರಿಸಲಾದ ಕ್ಯಾಚ್​ಗಳನ್ನು ಮುಂಬರುವ ದಿನಗಳಲ್ಲಿ ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಬವುಮಾ ಭರ್ಜರಿ ಬ್ಯಾಟಿಂಗ್​ಗೆ ಬಾಬರ್ ವಿಶ್ವ ದಾಖಲೆಯೇ ಬ್ರೇಕ್

ಹೊಸ ನಿಯಮ ಯಾವಾಗ ಜಾರಿ?

ಹೊಸ ಕ್ಯಾಚ್ ನಿಯಮವನ್ನು ಜೂನ್ 17 ರಂದು ಗಾಲೆಯಲ್ಲಿ ನಡೆಯಲಿರುವ ಶ್ರೀಲಂಕಾ vs ಬಾಂಗ್ಲಾದೇಶ್ ನಡುವಣ ಪಂದ್ಯದಲ್ಲಿ ಪರಿಚಯಿಸಲು ಐಸಿಸಿ ನಿರ್ಧರಿಸಿದೆ. ಅಲ್ಲದೆ ಅಕ್ಟೋಬರ್ 2026 ರಲ್ಲಿ ಈ ನಿಯಮ ಅಧಿಕೃತವಾಗಿ ಜಾರಿಗೊಳ್ಳಲಿದೆ ಎಂದು ತಿಳಿಸಲಾಗಿದೆ. ಅದರಂತೆ ಮುಂಬರುವ ದಿನಗಳಲ್ಲಿ ಈ ನಿಯಮಗಳನ್ನು ಲೀಗ್​ ಕ್ರಿಕೆಟ್​ನಲ್ಲಿ ಬಳಸಿಕೊಳ್ಳಬಹುದಾಗಿದೆ.

Published On - 1:18 pm, Sat, 14 June 25