ಹಂಡ್ರೆಡ್ ಲೀಗ್​ನಲ್ಲಿ ಜೋ ರೂಟ್ ಸಿಡಿಲಬ್ಬರದ ಬ್ಯಾಟಿಂಗ್

| Updated By: ಝಾಹಿರ್ ಯೂಸುಫ್

Updated on: Aug 13, 2023 | 6:10 PM

The Hundred 2023: 196 ರನ್​ಗಳ ಕಠಿಣ ಗುರಿ ಪಡೆದ ಟ್ರೆಂಟ್ ರಾಕೆಟ್ಸ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಅಲೆಕ್ಸ್ ಹೇಲ್ಸ್ (15) ಹಾಗೂ ಡೇವಿಡ್ ಮಲಾನ್ (1) ಬೇಗನೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋ ರೂಟ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಹಂಡ್ರೆಡ್ ಲೀಗ್​ನಲ್ಲಿ ಜೋ ರೂಟ್ ಸಿಡಿಲಬ್ಬರದ ಬ್ಯಾಟಿಂಗ್
Joe Root
Follow us on

The Hundred 2023: ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್​ನಲ್ಲಿ ಜೋ ರೂಟ್ (Joe Root) ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಲಂಡನ್ ಸ್ಪಿರಿಟ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟ್ರೆಂಟ್ ರಾಕೆಟ್ಸ್ ತಂಡ ಮೊದಲು ಬೌಲಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಲಂಡನ್ ಸ್ಪಿರಿಟ್ ತಂಡಕ್ಕೆ ಝಾಕ್ ಕ್ರಾಲಿ ಬಿರುಸಿನ ಆರಂಭ ಒದಗಿಸಿದ್ದರು.

ಆರಂಭಿಕನಾಗಿ ಕಣಕ್ಕಿಳಿದ ಕ್ರಾಲಿ ಕೇವಲ 15 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 30 ರನ್​ ಬಾರಿಸಿ ಔಟಾದರು. ಆ ಬಳಿಕ ಬಂದ ನಾಯಕ ಡೇನಿಯಲ್ ಲಾರೆನ್ಸ್ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದರು. ಕ್ರೀಸ್​ಗೆ ಆಗಮಿಸುತ್ತಿದ್ದಂತೆ ಅಬ್ಬರ ಶುರು ಮಾಡಿದ ಲಾರೆನ್ಸ್ ಟ್ರೆಂಟ್ ರಾಕೆಟ್ಸ್​ ಬೌಲರ್​ಗಳ ಬೆಂಡೆತ್ತಿದರು.

49 ಎಸೆತಗಳನ್ನು ಎದುರಿಸಿದ ಡೇನಿಯಲ್ ಲಾರೆನ್ಸ್ 3 ಭರ್ಜರಿ ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 93 ರನ್​ ಚಚ್ಚಿದರು. ಈ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಲಂಡನ್ ಸ್ಪಿರಿಟ್ ತಂಡವು ನಿಗದಿತ 100 ಎಸೆತಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್​ ಕಲೆಹಾಕಿತು.

196 ರನ್​ಗಳ ಕಠಿಣ ಗುರಿ ಪಡೆದ ಟ್ರೆಂಟ್ ರಾಕೆಟ್ಸ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಅಲೆಕ್ಸ್ ಹೇಲ್ಸ್ (15) ಹಾಗೂ ಡೇವಿಡ್ ಮಲಾನ್ (1) ಬೇಗನೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋ ರೂಟ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಬಿರುಸಿನ ಬ್ಯಾಟಿಂಗ್​ನೊಂದಿಗೆ ಅಬ್ಬರಿಸಿದ ರೂಟ್ ಮೈದಾನದ ಮೂಲೆ ಮೂಲೆಗೆ ಚೆಂಡನ್ನು ತಲುಪಿಸಿದರು. ಪರಿಣಾಮ ಕೊನೆಯ 5 ಎಸೆತಗಳಲ್ಲಿ ಟ್ರೆಂಟ್ ರಾಕೆಟ್ಸ್ ತಂಡಕ್ಕೆ 13 ರನ್​ಗಳ ಅವಶ್ಯಕತೆಯಿತ್ತು.

ನಾಥನ್ ಎಲ್ಲಿಸ್ ಎಸೆದ ಅಂತಿಮ 5 ಎಸೆತಗಳ ಮೊದಲ ಬಾಲ್​ನಲ್ಲಿ ಡೇನಿಯಲ್ ಸ್ಯಾಮ್ಸ್ ಫೋರ್ ಬಾರಿಸಿದರು. ಇನ್ನು 2ನೇ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಸ್ಯಾಮ್ಸ್ ಹೊರನಡೆದರು. 3ನೇ ಎಸೆತದಲ್ಲಿ ಗ್ರೆಗೊರಿ 2 ರನ್ ಓಡಿದರು. 4ನೇ ಎಸೆತದಲ್ಲಿ ಮತ್ತೆರಡು ರನ್. ಇನ್ನು ಕೊನೆಯ ಎಸೆತದಲ್ಲಿ 4 ರನ್​ಗಳ ಅವಶ್ಯಕತೆಯಿತ್ತು. ಆದರೆ ಗ್ರೆಗೊರಿ 2 ರನ್​ ಕಲೆಹಾಕಲಷ್ಟೇ ಶಕ್ತರಾದರು.

ಇದರೊಂದಿಗೆ ಲಂಡನ್ ಸ್ಪಿರಿಟ್ ತಂಡ 2 ರನ್​ಗಳ ರೋಚಕ ಜಯ ಸಾಧಿಸಿತು. ಇತ್ತ ಜೋ ರೂಟ್ 35 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 72 ರನ್​ ಬಾರಿಸಿ ಅಜೇಯರಾಗಿ ಉಳಿದರು.

ಲಂಡನ್ ಸ್ಪಿರಿಟ್ ಪ್ಲೇಯಿಂಗ್ 11: ಡೇನಿಯಲ್ ಲಾರೆನ್ಸ್ (ನಾಯಕ) , ಆಡಮ್ ರೋಸಿಂಗ್ಟನ್ (ವಿಕೆಟ್ ಕೀಪರ್) , ಝಾಕ್ ಕ್ರಾಲಿ , ಮ್ಯಾಥ್ಯೂ ವೇಡ್ , ಡ್ಯಾರಿಲ್ ಮಿಚೆಲ್ , ರವಿ ಬೋಪಾರಾ , ಮ್ಯಾಥ್ಯೂ ಕ್ರಿಚ್ಲಿ , ಕ್ರಿಸ್ ವುಡ್ , ಲಿಯಾಮ್ ಡಾಸನ್ , ನಾಥನ್ ಎಲ್ಲಿಸ್ , ಡೇನಿಯಲ್ ವೊರಾಲ್.

ಇದನ್ನೂ ಓದಿ: Joe Root: ಮೊದಲ ಬಾರಿ ಸ್ಟಂಪ್ ಔಟ್ ಆಗಿ ವಿಶೇಷ ದಾಖಲೆ ಬರೆದ ಜೋ ರೂಟ್

ಟ್ರೆಂಟ್ ರಾಕೆಟ್ಸ್ ಪ್ಲೇಯಿಂಗ್ 11: ಅಲೆಕ್ಸ್ ಹೇಲ್ಸ್ , ಡೇವಿಡ್ ಮಲಾನ್ , ಕಾಲಿನ್ ಮನ್ರೊ , ಟಾಮ್ ಕೊಹ್ಲರ್-ಕ್ಯಾಡ್ಮೋರ್ (ವಿಕೆಟ್ ಕೀಪರ್) , ಜೋ ರೂಟ್ , ಸ್ಯಾಮ್ ಹೈನ್ , ಡೇನಿಯಲ್ ಸ್ಯಾಮ್ಸ್ , ಲೆವಿಸ್ ಗ್ರೆಗೊರಿ (ನಾಯಕ) , ಲ್ಯೂಕ್ ವುಡ್ , ಸ್ಯಾಮ್ ಕುಕ್ , ಇಶ್ ಸೋಧಿ.