Jonny Bairstow: ಜಾನಿ ಬೈರ್​ಸ್ಟೋಗೆ ನ್ಯೂಜಿಲೆಂಡ್ ವಿರುದ್ಧ ಸ್ಫೋಟಕ ಶತಕ ಸಿಡಿಸಲು ಕಾರಣವಾಗಿದ್ದು ಐಪಿಎಲ್ ಟೂರ್ನಿ

| Updated By: Vinay Bhat

Updated on: Jun 16, 2022 | 9:14 AM

England vs New Zealand: ಟ್ರೆಂಟ್‌ ಬ್ರಿಡ್ಜ್‌ ಅಂಗಣದಲ್ಲಿನ ಬ್ಯಾಟಿಂಗ್‌ ವೈಭವದ ಬಳಿಕ ಮಾತನಾಡಿರುವ ಜಾನಿ, ಟೆಸ್ಟ್‌ ಸರಣಿಗೂ ಮುನ್ನ ಕೌಂಟಿ ಕ್ರಿಕೆಟ್‌ ಆಡುವ ಬದಲು ಭಾರತದಲ್ಲಿ ಇಂಡಿಯನ್ ಪ್ರೀಮಿಯರ್‌ ಲೀಗ್‌ ಆಡಿದ್ದು ಸಹಕಾರಿ ಆಯಿತು ಎಂದಿದ್ದಾರೆ.

Jonny Bairstow: ಜಾನಿ ಬೈರ್​ಸ್ಟೋಗೆ ನ್ಯೂಜಿಲೆಂಡ್ ವಿರುದ್ಧ ಸ್ಫೋಟಕ ಶತಕ ಸಿಡಿಸಲು ಕಾರಣವಾಗಿದ್ದು ಐಪಿಎಲ್ ಟೂರ್ನಿ
Jonny Bairstow
Follow us on

ಜಾನಿ ಬೈರ್​​ಸ್ಟೋ (Jonny Bairstow) ಸ್ಫೋಟಕ ಶತಕ ಹಾಗೂ ನಾಯಕ ಬೆನ್‌ ಸ್ಟೋಕ್ಸ್‌ (Ben Stokes) ಅವರ ಜವಾಬ್ದಾರಿಯ ಬ್ಯಾಟಿಂಗ್‌ ನೆರವಿನಿಂದ ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಅತಿಥೇಯ ಇಂಗ್ಲೆಂಡ್‌ (England vs New Zealand) ತಂಡ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಟೆಸ್ಟ್‌ನಲ್ಲಿ ಗೆಲ್ಲಲು 299 ರನ್‌ಗಳ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್, ಸ್ಕೋರ್ ಬೋರ್ಡ್‌ನಲ್ಲಿ 93 ರನ್‌ಗಳಾಗಿದ್ದಾಗ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ 32 ವರ್ಷದ ಇಂಗ್ಲೆಂಡ್ ಬ್ಯಾಟರ್ ಜಾನಿ ಬೈರ್‌ಸ್ಟೋ ಕಿವೀಸ್ ಬೌಲಿಂಗ್ ಪಡೆಯ ಯೋಜನೆಯನ್ನು ತಲೆಕೆಳಗಾಗಿ ಆಡಿದರು. 14 ಬೌಂಡರಿಗಳು ಮತ್ತು 7 ಸಿಕ್ಸರ್‌ಗಳ ಸಹಿತ 136 ರನ್ ಬಾರಿಸಿ ಬೃಹತ್ ಸ್ಕೋರ್ ಬೆನ್ನಟ್ಟಿ ಗೆಲ್ಲಲು ಸಹಾಯ ಮಾಡಿದರು. ಈ ಗೆಲುವಿನಿಂದ ಇಂಗ್ಲೆಂಡ್‌ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ಜಯಿಸಿತು.

ಮೊದಲು 50 ಎಸೆತಗಳಲ್ಲಿ 50 ರನ್ ದಾಖಲಿಸಿದ್ದ ಬೈರ್​ಸ್ಟೋ, ನಂತರದ 50 ರನ್‌ಗಳನ್ನು ಕೇವಲ 27 ಎಸೆತಗಳಲ್ಲಿ ದಾಖಲಿಸಿರುವುದು ವಿಶೇಷ. ಈ ಮೂಲಕ ಅಬ್ಬರಿಸಿದ ವಿಕೆಟ್ ಕೀಪರ್ ಬ್ಯಾಟರ್ ಸ್ವಲ್ಪದರಲ್ಲೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗದ ಶತಕ ದಾಖಲಿಸಿದ ಬ್ಯಾಟರ್ ಎಂಬ ಸಾಧನೆಯನ್ನ ಮಿಸ್ ಮಾಡಿಕೊಂಡರು. ಟ್ರೆಂಟ್‌ ಬ್ರಿಡ್ಜ್‌ ಅಂಗಣದಲ್ಲಿನ ಬ್ಯಾಟಿಂಗ್‌ ವೈಭವದ ಬಳಿಕ ಮಾತನಾಡಿರುವ ಜಾನಿ, ಟೆಸ್ಟ್‌ ಸರಣಿಗೂ ಮುನ್ನ ಕೌಂಟಿ ಕ್ರಿಕೆಟ್‌ ಆಡುವ ಬದಲು ಭಾರತದಲ್ಲಿ ಇಂಡಿಯನ್ ಪ್ರೀಮಿಯರ್‌ ಲೀಗ್‌ ಆಡಿದ್ದು ಸಹಕಾರಿ ಆಯಿತು ಎಂದಿದ್ದಾರೆ.

IND vs IRE: ಐರ್ಲೆಂಡ್ ವಿರುದ್ಧದ ಸರಣಿಗೂ ಆಯ್ಕೆಯಾಗಿಲ್ಲ: ರಾಹುಲ್ ತೇವಾಟಿಯ ಟ್ವೀಟ್ ವೈರಲ್

ಇದನ್ನೂ ಓದಿ
IND vs IRE: 6 ಎಸೆತಗಳಲ್ಲಿ 6 ಸಿಕ್ಸರ್! ಐಪಿಎಲ್​ನಲ್ಲಿ 413 ರನ್ ಚಚ್ಚಿದ ಬ್ಯಾಟರ್​ಗೆ ಟೀಂ ಇಂಡಿಯಾದಲ್ಲಿ ಸ್ಥಾನ
IND vs IRE: ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ; ಹಾರ್ದಿಕ್​ಗೆ ನಾಯಕತ್ವ! ಹೊಸಬರಿಗೆ ಅವಕಾಶ
Indonesia Open 2022: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್​ಗೆ ಭಾರತೀಯನಿಂದಲೇ ಸೋಲು..!
Ranji Trophy: ಸಂಕಷ್ಟದಲ್ಲಿದ್ದ ತಂಡಕ್ಕೆ ಕ್ರೀಡಾ ಸಚಿವರ ನೆರವು; ರಣಜಿ ಸೆಮಿಫೈನಲ್​ನಲ್ಲಿ ಮನೋಜ್ ಅಬ್ಬರ

“ಐಪಿಎಲ್‌ ವಿಶ್ವಶ್ರೇಷ್ಠ ಟೂರ್ನಿ, ಅಲ್ಲಿ ಆಡಿದ ಕಾರಣಕ್ಕೆ ಒತ್ತಡದ ನಿಭಾಯಿಸುವ ಕಲೆ ಕರಗತವಾಗಿದೆ. ಟೆಸ್ಟ್‌ ಸರಣಿಗೂ ಮುನ್ನ ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ನಾಲ್ಕೈದು ಪಂದ್ಯಗಳನ್ನು ಆಡಿದರೆ ಉತ್ತಮ ಎಂದು ಹೇಳಲಾಗುತ್ತದೆ. ಆದರೆ, ಈಗಿನ ವೇಳಾಪಟ್ಟಿಗಳಿಂದ ಇದು ಸಾಧ್ಯವಾಗದ ಮಾತು. ಈ ಸಂದರ್ಭದಲ್ಲಿ ವಿಶ್ವದ ಶ್ರೇಷ್ಠ ಲೀಗ್‌ನಲ್ಲಿ ಆಡುವ ಅವಕಾಶ ಸಿಕ್ಕಿರುವುದು ಬಹಳಾ ಸಂತಸದ ಸಂಗತಿ. ಐಪಿಎಲ್‌ ಆಡಿದ್ದರಿಂದಲೇ ಒತ್ತಡದ ಸಮಯಗಳನ್ನು ನಿಭಾಯಿಸುವ ಕಲೆ ಕರಗತವಾಗಿದೆ,” ಎಂದು ಬೈರ್‌ಸ್ಟೋವ್‌ ತಿಳಿಸಿದ್ದಾರೆ.

“ಐಪಿಎಲ್‌ನಲ್ಲಿ ವಿಶ್ವದ ಶ್ರೇಷ್ಠ ಆಟಗಾರರ ಜೊತೆ ಅವಕಾಶ ಸಿಗುತ್ತದೆ. ನಮ್ಮ ಆಟದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವಲ್ಲಿ ಸಹಾಯಮಾಡುತ್ತದೆ, ಆಟದ ಹೊಸ ವಿಧಾನಗಳನ್ನು ಕಲಿಯುವ ಮತ್ತು ಬದಲಾಯಿಸಲು ಐಪಿಎಲ್ ಟೂರ್ನಿ ಸಹಾಯ ಮಾಡುತ್ತದೆ ಎಂದಿದ್ದಾರೆ. ಎಲ್ಲಾ ಟೂರ್ನಿಗಳಿಗಾಗಿ ನಮ್ಮ ವೇಳಾಪಟ್ಟಿಯನ್ನು ಹೊಂದಿಸಿಕೊಳ್ಳಲಾಗದು, ವಿಶ್ವದ ಅತ್ಯುತ್ತಮ ಆಟಗಾರರ ವಿರುದ್ಧ ಕೆಲವು ಅತ್ಯುತ್ತಮ ಟೂರ್ನಿಗಳಲ್ಲಿ ಆಡಲು ನಾನು ಅದೃಷ್ಟ ಮಾಡಿದ್ದೇನೆ,” ಎಂದು ಹೇಳಿದ್ದಾರೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:14 am, Thu, 16 June 22