AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indonesia Open 2022: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್​ಗೆ ಭಾರತೀಯನಿಂದಲೇ ಸೋಲು..!

Indonesia Open 2022: ಈ ಪಂದ್ಯದಲ್ಲಿ ಪ್ರಣಯ್ ಅವರ ಮುಂದೆ ಲಕ್ಷ್ಯ ಸೇನ್ ಸಂಪೂರ್ಣವಾಗಿ ಮಂಕಾಗಿದ್ದರು. ಇದು ಹಲವರಿಗೆ ಅಚ್ಚರಿ ಮೂಡಿಸಿದೆ. ಲಕ್ಷ್ಯ ಸೇನ್ ಪ್ರಣಯ್ ಮೇಲೆ ಒತ್ತಡ ಹೇರಲು ಸಾಧ್ಯವಾಗಲಿಲ್ಲ.

Indonesia Open 2022: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್​ಗೆ ಭಾರತೀಯನಿಂದಲೇ ಸೋಲು..!
ಎಚ್ ಎಸ್ ಪ್ರಣಯ್
Follow us
TV9 Web
| Updated By: ಪೃಥ್ವಿಶಂಕರ

Updated on:Jun 15, 2022 | 8:44 PM

ಇಂಡೋನೇಷಿಯನ್ ಓಪನ್ 2022 (Indonesia Open 2022) ಮೊದಲ ಸುತ್ತಿನಲ್ಲಿ ವಿಶ್ವ ರ‍್ಯಾಂಕಿಂಗ್​ನಲ್ಲಿ 9ನೇ ಸ್ಥಾನದಲ್ಲಿರುವ ಲಕ್ಷ್ಯ ಸೇನ್ (Lakshya Sen) ಸೋಲನುಭವಿಸಿದ್ದಾರೆ. ಲಕ್ಷ್ಯ ಸೇನ್, ಭಾರತದ ಎಚ್.ಎಸ್.ಪ್ರಣಯ್ (HS Prannoy) ವಿರುದ್ಧ ಸೋಲನುಭವಿಸಬೇಕಾಯ್ತು. ಈ ಹೋರಾಟಕ್ಕೂ ಮುನ್ನ ಲಕ್ಷ್ಯ ಸೇನ್ ಈ ವರ್ಷ ಎರಡು ಬಾರಿ ಪ್ರಣಯ್ ಅವರನ್ನು ಸೋಲಿಸಿದ್ದರು. ಆದರೆ ಈ ಬಾರಿ ಪ್ರಣಯ್ ತಿರುಗೇಟು ನೀಡಿದ್ದಾರೆ. ಪ್ರಣಯ್ 21-10, 21-9 ನೇರ ಸೆಟ್‌ಗಳಿಂದ ಲಕ್ಷ್ಯ ಸೇನ್​ರನ್ನು ಮಣಿಸಿದರು. ಈ ಪಂದ್ಯದಲ್ಲಿ ಪ್ರಣಯ್ ಅವರ ಮುಂದೆ ಲಕ್ಷ್ಯ ಸೇನ್ ಸಂಪೂರ್ಣವಾಗಿ ಮಂಕಾಗಿದ್ದರು. ಇದು ಹಲವರಿಗೆ ಅಚ್ಚರಿ ಮೂಡಿಸಿದೆ. ಲಕ್ಷ್ಯ ಸೇನ್ ಪ್ರಣಯ್ ಮೇಲೆ ಒತ್ತಡ ಹೇರಲು ಸಾಧ್ಯವಾಗಲಿಲ್ಲ. ಥಾಮಸ್ ಕಪ್‌ (Thomas Cup)ನಲ್ಲಿ ಲಕ್ಷ್ಯ ಸೇನ್ ಮತ್ತು ಪ್ರಣಯ್ ಒಟ್ಟಿಗೆ ಆಡಿದ್ದರು. ಈ ಟೂರ್ನಿಯಲ್ಲಿ ಭಾರತ ಗೆದ್ದು ಇತಿಹಾಸ ನಿರ್ಮಿಸಿತ್ತು.

ಪ್ರಣಯ್ ಮತ್ತು ಕಿಂದಬಿ ಶ್ರೀಕಾಂತ್ ಮೇಲೆ ಭಾರತದ ಅವಲಂಬನೆ

ಪ್ರಣಯ್ ಕೆಲವು ಅದ್ಭುತ ಹೊಡೆತಗಳಿಗೆ ಸೇನ್ ಅವರ ಬಳಿ ಉತ್ತರವಿರಲಿಲ್ಲ. ಲಕ್ಷ್ಯ ಸೇನ್ ಇತ್ತೀಚಿನ ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಇಂದು ಏನೂ ಮಾಡಲು ಸಾಧ್ಯ ಆಗಲಿಲ್ಲ. ಇಂಡೋನೇಷ್ಯಾ ಓಪನ್‌ನ ಮೊದಲ ದಿನ ಸಾಯಿ ಪ್ರಣೀತ್ ಮತ್ತು ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದರು. ಹೀಗಾಗಿ ಭಾರತ ಪ್ರಣಯ್ ಮತ್ತು ಕಿಂದಬಿ ಶ್ರೀಕಾಂತ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅಲ್ಲದೆ ಈ ಇಬ್ಬರಿಂದ ಪದಕ ಗೆಲ್ಲುವ ನಿರೀಕ್ಷೆ ಹೊಂದಿದೆ.

ಇದನ್ನೂ ಓದಿ
Image
ENG vs NZ: ಕಿವೀಸ್ ಮಣಿಸಿದ ಆಂಗ್ಲರಿಗೆ ದಂಡದ ಬರೆ ಎಳೆದ ಐಸಿಸಿ! ಬೆನ್ ಸ್ಟೋಕ್ಸ್ ಬಳಗಕ್ಕೆ ಗೆಲುವಿನಲ್ಲೂ ನಿರಾಸೆ
Image
IND vs SA: 3ನೇ ಟಿ20 ಪಂದ್ಯದ ಗೆಲುವಿನೊಂದಿಗೆ ವೃತ್ತಿಜೀವನದ ವಿಶೇಷ ಶತಕ ಸಿಡಿಸಿದ ರಿಷಭ್ ಪಂತ್..!
Image
IND vs SA: 69 ಬ್ಯಾಟರ್​ಗಳನ್ನು ಹಿಂದಿಕ್ಕಿ ಟಿ20 ರ‍್ಯಾಂಕಿಂಗ್​ನಲ್ಲಿ ಟಾಪ್​ 10ರೊಳಗೆ ಸ್ಥಾನ ಪಡೆದ ಇಶಾನ್ ಕಿಶನ್

ಇದನ್ನೂ ಓದಿ: Indonesia Open: ಲಕ್ಷ್ಯ ಸೇನ್​ಗೆ ಭಾರತೀಯನೇ ಎದುರಾಳಿ; ಪಿವಿ ಸಿಂಧು, ಸೈನಾ ನೆಹ್ವಾಲ್ ಮೇಲೆ ಭಾರಿ ನಿರೀಕ್ಷೆ

ಪ್ರಣಯ್​ಗೆ ಮೊದಲ ಗೆಲುವು

ಇದುವರೆಗೆ ಲಕ್ಷ್ಯ ಸೇನ್ ಮತ್ತು ಪ್ರಣಯ್ ಮೂರು ಪಂದ್ಯಗಳನ್ನು ಆಡಿದ್ದಾರೆ. ಇದು ಇಂದು ಪ್ರಣಯ್ ಅವರ ಮೊದಲ ಗೆಲುವಾಗಿದೆ. ಪುರುಷರ ಡಬಲ್ಸ್‌ನಲ್ಲಿ ಎಂಆರ್ ಅರ್ಜುನ್ ಮತ್ತು ಧ್ರುವ ಕಪಿಲ್ ಗೆಲುವಿನ ಖಾತೆ ತೆರೆದಿದ್ದಾರೆ. ಈ ಇಬ್ಬರು ರ್ಯಾಂಕ್​ನಲ್ಲಿ ತಮಗಿಂತ ಮೇಲಿರುವ ಜಪಾನ್ ಜೋಡಿಯನ್ನು ಸೋಲಿಸಿದರು. ಈಇಬ್ಬರು 27-25, 18-25 ಮತ್ತು 21-19 ರಲ್ಲಿ ಜಪಾನ್ ಜೋಡಿಯನ್ನು ಮಣಿಸಿ ಮುಂದಿನ ಸುತ್ತಿಗೆ ಟಿಕೆಟ್ ಖಚಿತ ಪಡಿಸಿಕೊಂಡಿದೆ.

Published On - 8:44 pm, Wed, 15 June 22

ಕಾರು ಚಲಾಯಿಸುವಾಗ ನಿದ್ರೆಗೆ ಜಾರಿದ ಟೆಕ್ಕಿ, ನಡೆಯಿತು ಭಯಾನಕ ಘಟನೆ
ಕಾರು ಚಲಾಯಿಸುವಾಗ ನಿದ್ರೆಗೆ ಜಾರಿದ ಟೆಕ್ಕಿ, ನಡೆಯಿತು ಭಯಾನಕ ಘಟನೆ
ಗ್ಯಾಂಗ್​​ಸ್ಟರ್ ಜಗ್ಗು ಭಗವಾನ್​ಪುರಿಯಾ ತಾಯಿಯ ಗುಂಡಿಕ್ಕಿ ಹತ್ಯೆ
ಗ್ಯಾಂಗ್​​ಸ್ಟರ್ ಜಗ್ಗು ಭಗವಾನ್​ಪುರಿಯಾ ತಾಯಿಯ ಗುಂಡಿಕ್ಕಿ ಹತ್ಯೆ
ಆಷಾಢ ಮೊದಲ ಶುಕ್ರವಾರ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ಆಷಾಢ ಮೊದಲ ಶುಕ್ರವಾರ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ
ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ