Jos Buttler: ಬಟ್ಲರ್ ದಾಖಲೆಯ ಶತಕ, ಸೆಮಿ ಫೈನಲ್ಗೆ ಆಂಗ್ಲರು: ಇಂಗ್ಲೆಂಡ್-ಶ್ರೀಲಂಕಾ ಪಂದ್ಯದಲ್ಲಿ ಏನಾಯ್ತು?
England Book Semis Spot in T20 World Cup: ಇಂಗ್ಲೆಂಡ್ ಗೆಲುವಿನಲ್ಲಿ ಜೋಸ್ ಬಟ್ಲರ್ ಪಾತ್ರ ಮುಖ್ಯವಾಯಿತು. ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ ಶತಕ ಈ ಪಂದ್ಯದ ಹೈಲೈಟ್ ಆಯಿತು. ಈ ಮೂಲಕ ದಾಖಲೆ ಬರೆದ ಇವರು ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಶತಕ ದಾಖಲಿಸಿದ ಇಂಗ್ಲೆಂಡ್‌ನ ಮೊತ್ತ ಮೊದಲ ಬ್ಯಾಟರ್ ಎಂಬ ಹಿರಿಮೆಗೆ ಭಾಜನರಾದರು.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಟಿ20 ವಿಶ್ವಕಪ್ನ (T20 World Cup) ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ (England vs Sri Lanka) ತಂಡ 26 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 6ನೇ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ (Jos Buttler) ಅವರ ದಾಖಲೆಯ ಸಿಡಿಲಬ್ಬರದ ಶತಕ ಹಾಗೂ ಬೌಲರ್‌ಗಳ ಸಂಘಟಿತ ದಾಳಿ ಫಲವಾಗಿ ಹಾಲಿ ರನ್ನರ್‌ಅಪ್ ಇಂಗ್ಲೆಂಡ್ ತಂಡ (England Cricket Team) ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ 4ನೇ ಜಯ ದಾಖಲಿಸಿದೆ. ಇತ್ತ ಶ್ರೀಲಂಕಾ (Sri Lanka Cricket Team) ತಂಡ ಟೂರ್ನಿಯಿಂದ ಹೊರಬಿದ್ದಿದೆ.
ಇಂಗ್ಲೆಂಡ್ ಗೆಲುವಿನಲ್ಲಿ ಜೋಸ್ ಬಟ್ಲರ್ ಪಾತ್ರ ಮುಖ್ಯವಾಯಿತು. ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ ಶತಕ ಈ ಪಂದ್ಯದ ಹೈಲೈಟ್ ಆಯಿತು. ಈ ಮೂಲಕ ದಾಖಲೆ ಬರೆದ ಇವರು ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಶತಕ ದಾಖಲಿಸಿದ ಇಂಗ್ಲೆಂಡ್‌ನ ಮೊತ್ತ ಮೊದಲ ಬ್ಯಾಟರ್ ಎಂಬ ಹಿರಿಮೆಗೆ ಭಾಜನರಾದರು. ಈ ಹಿಂದೆ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲೂ ಶತಕ ಗಳಿಸಿದ್ದಾರೆ. ಅಂತೆಯೇ 2021ನೇ ಸಾಲಿನ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ ಮೊದಲ ಶತಕವೂ ಇದಾಗಿದೆ.
ಬಟ್ಲರ್ 67 ಎಸೆತಗಳಲ್ಲಿ ಶತಕ ಗಳಿಸಿದರು. ಇವರ ಮನಮೋಹಕ ಇನ್ನಿಂಗ್ಸ್‌ನಲ್ಲಿ ತಲಾ ಆರು ಸಿಕ್ಸರ್ ಹಾಗೂ ಬೌಂಡರಿಗಳು ಸೇರಿದ್ದವು. ಇಯಾನ್ ಮಾರ್ಗನ್ ಕೂಡ ಫಾರ್ಮ್ಗೆ ಬಂದದ್ದು ಇಂಗ್ಲೆಂಡ್ ತಂಡಕ್ಕೆ ಡಬಲ್ ಸ್ವೀಟ್ ಸಿಕ್ಕಂತಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ, ಆರಂಭಿಕ ವೈಫಲ್ಯದ ನಡುವೆಯೂ ಬಟ್ಲರ್ ಹಾಗೂ ಮಾರ್ಗನ್ ಜೋಡಿ 4ನೇ ವಿಕೆಟ್‌ಗೆ ಪೇರಿಸಿದ 112 ರನ್ ಜತೆಯಾಟದ ಫಲವಾಗಿ 20 ಓವರ್ಗೆ 4 ವಿಕೆಟ್‌ಗೆ 163 ರನ್ ಕಲೆಹಾಕಿತು. ಬಳಿಕ ಬೃಹತ್ ಮೊತ್ತವನ್ನು ಚೇಸ್ ಮಾಡಿದ ಶ್ರೀಲಂಕಾ ಕೂಡ ಆರಂಭಿಕ ಆಘಾತ ಅನುಭವಿಸಿತು. ಆದರೆ, ಇಂಗ್ಲೆಂಡ್ನಂತೆ ಚೇತರಿಸಿಕೊಳ್ಳದ ಲಂಕನ್ನರು 11ನೇ ಓವರ್ವರೆಗೂ ವಿಕೆಟ್ ಕಳೆದುಕೊಳ್ಳುತ್ತಾ ಹೋದರು.
76 ರನ್ಗೆ 5 ವಿಕೆಟ್ ಕಳೆದುಕೊಂಡ ಶ್ರೀಲಂಕಾ ಸೋಲಿನ ಸುಳಿಗೆ ಸಿಲುಕಿತು. ಆದರೆ, ನಾಯಕ ದಾಸುನ್ ಶಾನಕ ಮತ್ತು ವನಿಂದು ಹಸರಂಗ ಲಂಕಾ ಇನ್ನಿಂಗ್ಸ್ಗೆ ಚೇತರಿಕೆ ನೀಡಿದರು. ಹಸರಂಗ ಮತ್ತು ಶಾನಕ ಅವರು 6ನೇ ವಿಕೆಟ್‌ಗೆ 53 ರನ್ ಜೊತೆಯಾಟ ನೀಡಿದರು. ಈ ಪಂದ್ಯವನ್ನು ಅವರಿಬ್ಬರೂ ಇಂಗ್ಲೆಂಡ್ನಿಂದ ಕಸಿದು ಹೋಗುತ್ತಾರೆಂದು ಭಾವಿಸುವಷ್ಟರಲ್ಲಿ ಹಸರಂಗ ಔಟಾದರು. ಅಲ್ಲಿಂದ ಇಂಗ್ಲೆಂಡ್ ಕಡೆಗೆ ಪಂದ್ಯ ಮತ್ತೆ ವಾಲಿತು.
ಕೊನೆಗೆ 19 ಓವರ್‌ಗಳಲ್ಲಿ 137 ರನ್‌ಗಳಿಗೆ ಶ್ರೀಲಂಕಾ ಆಲ್‌ಔಟ್ ಆಯಿತು.ಸೂಪರ್ 12 ಹಂತದ ಮೊದಲ ಗುಂಪಿನಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆದ್ದು 8 ಅಂಕಗಳನ್ನು ಕಲೆಹಾಕಿರುವ ಇಂಗ್ಲೆಂಡ್ ತಂಡ ಸೆಮಿಫೈನಲ್‌ಗೆ ಅಧಿಕೃತವಾಗಿ ಕಾಲಿಟ್ಟ ಮೊತ್ತ ಮೊದಲ ತಂಡ ಎನಿಸಿಕೊಂಡಿದೆ. ಬಟ್ಲರ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.
Virat Kohli: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ
(Jos Buttler smashed a magnificent 101 not out England beating Sri Lanka and enterd semifinal in the T20 World Cup)