NZ vs IRE: ಜೋಶ್ವಾ ಲಿಟಲ್ ಹ್ಯಾಟ್ರಿಕ್ ವಿಕೆಟ್: ನ್ಯೂಜಿಲೆಂಡ್ ಬ್ಯಾಟರ್​ಗಳ ಹುಟ್ಟಡಗಿಸಿದ ಐರ್ಲೆಂಡ್ ಬೌಲರ್: ವಿಡಿಯೋ ನೋಡಿ

Joshua Little Hat-Trick: ಪಂದ್ಯದ 19ನೇ ಓವರ್​ನಲ್ಲಿ ಕೇನ್ ವಿಲಿಯಮ್ಸನ್, ಜೇಮ್ಸ್ ನೀಶಮ್ ಹಾಗೂ ಮಿಚೆಲ್ ಸ್ಯಾಂಟನರ್ ವಿಕೆಟ್ ಕೀಳುವ ಜೋಶ್ವಾ ಲಿಟಲ್ ಟಿ20 ವಿಶ್ವಕಪ್ 2022 ರಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡರು.

NZ vs IRE: ಜೋಶ್ವಾ ಲಿಟಲ್ ಹ್ಯಾಟ್ರಿಕ್ ವಿಕೆಟ್: ನ್ಯೂಜಿಲೆಂಡ್ ಬ್ಯಾಟರ್​ಗಳ ಹುಟ್ಟಡಗಿಸಿದ ಐರ್ಲೆಂಡ್ ಬೌಲರ್: ವಿಡಿಯೋ ನೋಡಿ
Joshua Little Hat-Trick
Edited By:

Updated on: Nov 04, 2022 | 11:47 AM

ಐಸಿಸಿ ಟಿ20 ವಿಶ್ವಕಪ್​ನಲ್ಲಿ (T20 World Cup) ಎರಡನೇ ಹ್ಯಾಟ್ರಿಕ್ ವಿಕೆಟ್ ದಾಖಲೆ ಸೃಷ್ಟಿಯಾಗಿದೆ. ಅಡಿಲೇಡ್​ನ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಹಾಗೂ ಐರ್ಲೆಂಡ್ (New Zealand vs Ireland) ನಡುವಣ ಪಂದ್ಯದಲ್ಲಿ ಐರಿಶ್ ಬೌಲರ್ ಜೋಶ್ವಾ ಲಿಟಲ್ (Joshua Little) ಈ ವಿಶೇಷ ಸಾಧನೆ ಮಾಡಿದ್ದಾರೆ. ಪಂದ್ಯದ 19ನೇ ಓವರ್​ನಲ್ಲಿ ಕೇನ್ ವಿಲಿಯಮ್ಸನ್, ಜೇಮ್ಸ್ ನೀಶಮ್ ಹಾಗೂ ಮಿಚೆಲ್ ಸ್ಯಾಂಟನರ್ ವಿಕೆಟ್ ಕೀಳುವ ಟಿ20 ವಿಶ್ವಕಪ್ 2022 ರಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಅರ್ಹತಾ ಸುತ್ತಿನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಯುಎಇ ಬೌಲರ್ ಕಾರ್ತಿಕ್ ಮೇಯಿಯಪ್ಪನ್ ಈ ಸಾಧನೆ ಮಾಡಿದ್ದರು. ಒಟ್ಟಾರೆಯಾಗಿ ಪುರುಷರ ಟಿ20 ವಿಶ್ವಕಪ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಆರನೇ ಬೌಲರ್ ಜೋಶ್ವಾ ಲಿಟಲ್ ಆಗಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ನ್ಯೂಜಿಲೆಂಡ್ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಫಿನ್ ಅಲೆನ್ ಹಾಗೂ ಡ್ವೇನ್ ಕಾನ್ವೆ ಬೊಂಬಾಟ್ ಬ್ಯಾಟಿಂಗ್ ನಡೆಸಿದರು. ಇವರಿಬ್ಬರು 5.5 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 52ಕ್ಕೆ ತಂದಿಟ್ಟರು. ಅಲೆನ್ ಕೇವಲ 18 ಎಸೆತಗಳಲ್ಲಿ 5 ಫೋರ್, 1 ಸಿಕ್ಸರ್ ಬಾರಿಸಿ 32 ರನ್ ಸಿಡಿಸಿದರು. ನಂತರ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಕಾನ್ವೆ ತಂಡದ ರನ್ ಗತಿಯನ್ನು ಏರಿಸಿದರು. ಕಾನ್ವೆ 33 ಎಸೆತಗಳಲ್ಲಿ 28 ರನ್ ಬಾರಿಸಿ ಔಟಾದರರು. ಗ್ಲೆನ್ ಫಿಲಿಪ್ಸ್ 9 ಎಸೆತಗಳಲ್ಲಿ 17 ರನ್ ಗಳಿಸಿದರು.

ಇದನ್ನೂ ಓದಿ
T20 World Cup 2022: ಟಿ20 ಸ್ಪೆಷಲಿಸ್ಟ್​ಗಳೇ ಈ ಬಾರಿಯ ವಿಶ್ವಕಪ್‌ನ ಫ್ಲಾಪ್ ಸ್ಟಾರ್‌ಗಳು..!
T20 World Cup 2022: ಐಸಿಸಿ ಟಿ20 ವಿಶ್ವಕಪ್ ಫೈನಲ್​ ತಲುಪಲಿರುವ ಎರಡು ತಂಡಗಳನ್ನು ಹೆಸರಿಸಿದ ರಿಕಿ ಪಾಂಟಿಂಗ್
NZ vs IRE: ಟಾಸ್ ಗೆದ್ದ ಐರ್ಲೆಂಡ್: ನ್ಯೂಜಿಲೆಂಡ್ ಜಯ ಸಾಧಿಸಿದರೆ ಸೆಮೀಸ್​ಗೆ ನೇರ ಪ್ರವೇಶ
IND vs ZIM: ಮೆಲ್ಬೋರ್ನ್ ತಲುಪಿದ ಟೀಮ್ ಇಂಡಿಯಾ: ಗೆಲ್ಲಲೇ ಬೇಕಾದ ಪಂದ್ಯಕ್ಕೆ ಅಭ್ಯಾಸ ಆರಂಭ

 

ಈ ಸಂದರ್ಭ ಕೇನ್ ಜೊತೆಯಾದ ಡೆರಿಯಲ್ ಮಿಚೆಲ್ ಭರ್ಜರಿ ಆಟವಾಡಿದರು. ಇವರಿಬ್ಬರು ಅರ್ಧಶತಕದ ಜೊತೆಯಾಟ ಆಡಿದರು. ಅದರಲ್ಲೂ ನಾಯಕ ಕೇನ್ 35 ಎಸೆತಗಳಲ್ಲಿ 5 ಫೋರ್, 3 ಸಿಕ್ಸರ್​ನೊಂದಿಗೆ 61 ರನ್ ಚಚ್ಚಿದರು. ಮಿಚೆಲ್ 21 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿದರು. ಪರಿಣಾಮ ನ್ಯೂಜಿಲೆಂಡ್ 20 ಓವರ್​ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 185 ರನ್ ಕಲೆಹಾಕಿತು. ಐರ್ಲೆಂಡ್ ಪರ ಜೋಶ್ವಾ ಲಿಟಲ್ 4 ಓವರ್​ಗೆ 22 ರನ್ ನೀಡಿ 3 ವಿಕೆಟ್ ಕಿತ್ತರೆ, ಗರೆಥ್ ಡೆಲಾನಿ 2 ವಿಕೆಟ್ ಪಡೆದರು.

ನ್ಯೂಜಿಲೆಂಡ್ ಗೆದ್ದರೆ ಸೆಮೀಸ್​ಗೆ ಲಗ್ಗೆ:

ಇಂದಿನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಜಯ ಸಾಧಿಸಿದರೆ ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ ಸೆಮಿ ಫೈನಲ್​ಗೆ ಪ್ರವೇಶ ಪಡೆದ ಮೊದಲ ತಂಡವಾಗಲಿದೆ. ನ್ಯೂಜಿಲೆಂಡ್ ತಂಡ ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆಡಿರುವ ನಾಲ್ಕು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯದಲ್ಲಿ ಸೋಲು ಅನುಭವಿಸಿ, ಒಂದು ಪಂದ್ಯ ಮಳೆಗೆ ಆಹುತಿಯಾಗಿದೆ. ಹೀಗಾಗಿ ನಾಲ್ಕು ಪಂದ್ಯಗಳಲ್ಲಿ 5 ಅಂಕಗಳನ್ನು ಪಡೆದುಕೊಂಡಿದ್ದು ಉತ್ತಮ ರನ್​ರೇಟ್ ಹೊಂದಿದೆ. ಇತ್ತ ಐರ್ಲೆಂಡ್ ತಂಡ ಆಡಿದ ನಾಲ್ಕು ಪಂದ್ಯಗಳ ಪೈಕಿ ಒಂದು ಗೆಲುವು ಮಾತ್ರವೇ ಸಾಧಿಸಿದ್ದು ಎರಡು ಸೋಲು ಹಾಗೂ ಒಂದು ಪಂದ್ಯ ಮಳೆಗೆ ಆಹುತಿಯಾಗಿದೆ. ಹೀಗಾಗಿ 3 ಅಂಕಗಳನ್ನು ಹೊಂದಿದ್ದು ಸೆಮಿಫೈನಲ್ ಹಂತಕ್ಕೇರುವ ರೇಸ್‌ನಿಂದ ಬಹುತೇಕ ಔಟ್ ಆಗಿದೆ.

ಉಭಯ ತಂಡಗಳ ಪ್ಲೇಯಿಂಗ್ XI:

ಐರ್ಲೆಂಡ್: ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಫಿಯಾನ್ ಹ್ಯಾಂಡ್, ಜೋಶ್ವಾ ಲಿಟಲ್.

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.