ಐಸಿಸಿ ಟಿ20 ವಿಶ್ವಕಪ್ 2022 ಟೂರ್ನಿ ದಿನದಿಂದ ರೋಚಕತೆ ಪಡೆಯುತ್ತಿದೆ. ಸೆಮಿ ಫೈನಲ್ ರೇಸ್ಗೆ ಕಠಿಣ ಪೈಪೋಟಿ ನಡೆಯುತ್ತಿದೆ. ರನ್ರೇಟ್ ನಡುವಣ ರೋಚಕ ಫೈಟ್ ಶುರುವಾಗಿದೆ. ಇದರ ನಡುವೆ ಆಸ್ಟ್ರೇಲಿಯಾ ತಂಡದ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ಟಿ20 ವಿಶ್ವಕಪ್ನಲ್ಲಿ ಫೈನಲ್ ತಲುಪುವ ನೆಚ್ಚಿನ ತಂಡವನ್ನು ಹೆಸರಿಸಿದ್ದಾರೆ.
ನಿಜವಾಗಿ ಹೇಳುವುದಾದರೆ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಪಂದ್ಯದಲ್ಲಿ ಯಾರು ಮುಖಾಮುಖಿ ಆಗುತ್ತಾರೆ ಎಂದು ಅಂದಾಜಿಸಲಾಗದು. ಆಸ್ಟ್ರೇಲಿಯಾ ತಂಡ 'ಎ' ಗುಂಪಿನಿಂದ ಅರ್ಹತೆ ಪಡೆದುಕೊಳ್ಳುತ್ತದೆ ಎಂದು ಆಶಿಸುತ್ತೇನೆ. ಅತ್ತ ದಕ್ಷಿಣ ಆಫ್ರಿಕಾ ಅಪಾಯದಿಂದ ಕೂಡಿದ್ದು ಬಲಿಷ್ಠವಾಗಿದೆ ಎಂದು ಹೇಳಿದ್ದಾರೆ.
ನಾನು ಮೊದಲೇ ಹೇಳಿದ್ದೆ, ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್‌ನಲ್ಲಿ ಆಡುತ್ತವೆ ಎಂದು. ಈಗಲೂ ನನ್ನ ಮಾತಿಗೆ ಬದ್ಧನಾಗಿದ್ದೇನೆ. ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿ ಆಗಲಿದೆ ಎಂದು ಪಾಂಟಿಂಗ್ ಹೇಳಿದ್ದಾರೆ.
ನಾನು ಆಸ್ಟ್ರೇಲಿಯಾ ತಂಡದ ನಾಯಕನಾಗಿದ್ದಾಗ, ಆಟಗಾರರಿಗೆ ಆ ಕ್ಷಣವನ್ನು ಅಳವಡಿಸಿಕೊಳ್ಳುವಂತೆ ಹೇಳಿದ್ದೆ. ಈ ಅವಕಾಶ ಕಳೆದುಕೊಳ್ಳಬೇಡಿ ಎನ್ನುತ್ತಿದ್ದೆ. ಇದು ಮತ್ತೊಂದು ಪಂದ್ಯ ಎಂದಷ್ಟೇ ಅಂದುಕೊಂಡು ಶ್ರೇಷ್ಠ ಆಟವಾಡಬೇಕು ಅಷ್ಟೆ. ಒತ್ತಡ ಕಡಿಮೆಯಾದಷ್ಟೂ ಉತ್ತಮ ಆಟವಾಡಲು ಸಾಧ್ಯ ಎಂಬುದು ಪಾಂಟಿಂಗ್ ಮಾತು.
ಆಸ್ಟ್ರೇಲಿಯಾ ತಂಡ ಇಂದು (ನವೆಂಬರ್ 4) ಅಫಘಾನಿಸ್ತಾನ ಎದುರು ತನ್ನ ಕೊನೇ ಸೂಪರ್-12 ಪಂದ್ಯವನ್ನು ಆಡಲಿದ್ದು, ಈ ಪಂದ್ಯದಲ್ಲಿ ಗೆಲುವಷ್ಟೇ ಅಲ್ಲ ತನ್ನ ನೆಟ್ ರನ್‌ರೇಟ್‌ನಲ್ಲಿ ಭಾರಿ ಸುಧಾರಣೆ ತಂದುಕೊಳ್ಳುವ ಕಡೆಗೂ ರಣತಂತ್ರ ರೂಪಿಸಬೇಕಿದೆ.
ನವೆಂಬರ್ 6 ಭಾನುವಾರದಂದು ಭಾರತ ತಂಡ ಜಿಂಬಾಬ್ವೆ ವಿರುದ್ಧ ಸೂಪರ್ 12 ಹಂತದ ಕೊನೆಯ ಪಂದ್ಯವನ್ನು ಆಡಲಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಈ ಪಂದ್ಯ ಆಯೋಜಿಸಲಾಗಿದ್ದು, ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ.
ಪಾಯಿಂಟ್ ಟೇಬಲ್ ಗಮನಿಸುವುದಾದರೆ ಗ್ರೂಪ್ 2 ರಲ್ಲಿ ಎಲ್ಲ ತಂಡಗಳು ನಾಲ್ಕು ಪಂದ್ಯಗಳನ್ನು ಆಡಿದೆ. ಇದರಲ್ಲಿ ಭಾರತ ಮೂರು ಪಂದ್ಯದಲ್ಲಿ ಗೆದ್ದರೆ ಒಂದು ಪಂದ್ಯ ಸೋತು 6 ಅಂಕ ಸಂಪಾದಿಸಿದೆ. +0.730 ರನ್ರೇಟ್ ಹೊಂದಿದೆ. ಎರಡು ಸೋಲಿನೊಂದಿಗೆ ದಕ್ಷಿಣ ಆಫ್ರಿಕಾ 5 ಪಡೆದುಕೊಂಡಿದೆ. ಆದರೆ, ರನ್‌ರೇಟ್‌ನಲ್ಲಿ (+1.441) ಭಾರತಕ್ಕಿಂತ ಮುಂದಿದೆ.
Published On - 11:08 am, Fri, 4 November 22