‘ಪಿಚ್​ನಲ್ಲಿ ನಿದ್ದೆ ಮಾಡಿದ್ರೆ ಹೀಗೆ ಆಗೋದು’; ಅನುಭವಿ ಇಫ್ತಿಕರ್ ವಿರುದ್ಧ ಮುನಿದ ಪಾಕ್ ಮಾಜಿ ನಾಯಕ

T20 World Cup 2022: ವಾಸ್ತವವಾಗಿ ರನೌಟ್ ಆಗುವ ಮೊದಲು ಅಂಪೈರ್ ಎಲ್‌ಬಿಡಬ್ಲ್ಯೂ ಔಟ್ ನೀಡಿದ್ದರಿಂದ ಈ ಬಾಲ್ ಡೆಡ್ ಬಾಲ್ ಆಗಿತ್ತು. ಹೀಗಾಗಿ ನವಾಜ್​ ರನ್ ಔಟ್ ಆಗಿದ್ದರಿಂದ ಪಾರಾಗಬಹುದಿತ್ತು.

‘ಪಿಚ್​ನಲ್ಲಿ ನಿದ್ದೆ ಮಾಡಿದ್ರೆ ಹೀಗೆ ಆಗೋದು’; ಅನುಭವಿ ಇಫ್ತಿಕರ್ ವಿರುದ್ಧ ಮುನಿದ ಪಾಕ್ ಮಾಜಿ ನಾಯಕ
ನವಾಜ್ ಔಟ್ ಪ್ರಕರಣ
Follow us
| Updated By: ಪೃಥ್ವಿಶಂಕರ

Updated on: Nov 04, 2022 | 1:00 PM

2022ರ ಟಿ20 ವಿಶ್ವಕಪ್‌ನಲ್ಲಿ (T20 World Cup 2022) ಪಾಕಿಸ್ತಾನದ ಪ್ರದರ್ಶನ ಅಷ್ಟೇನೂ ವಿಶೇಷವೇನಿಸಿಲ್ಲ. ಮೊದಲೆರಡು ಪಂದ್ಯಗಳಲ್ಲಿ ಸೋತಿರುವ ಬಾಬರ್ ಪಡೆ ಕೊನೆಯ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆದರೂ ಈ ತಂಡ ಸದ್ಯಕ್ಕೆ ಸೆಮಿಫೈನಲ್ ತಲುಪುವುದು ಬಹಳ ಕಷ್ಟ. ಅಂದಹಾಗೆ, ಗುರುವಾರ ಪಾಕಿಸ್ತಾನ (Pakistan) ಉತ್ತಮ ಆಟ ಪ್ರದರ್ಶಿಸಿ ದಕ್ಷಿಣ ಆಫ್ರಿಕಾವನ್ನು ಮಣಿಸಿತು. ಇದರೊಂದಿಗೆ ಸೇಮಿಸ್ ತಲುಪಲು ಕೊನೆಯ ಅವಕಾಶ ಪಡೆದುಕೊಂಡಿದೆ. ಆದರೆ, ಈ ಗೆಲುವಿನ ನಂತರ ಪಾಕಿಸ್ತಾನದ ಮಾಜಿ ನಾಯಕ ವಕಾರ್ ಯೂನಿಸ್ (Waqar Younis), ತಂಡದ ಹಿರಿಯ ಆಟಗಾರ ಇಫ್ತಿಕರ್ ಅಹ್ಮದ್ (Iftikhar Ahmed) ಅವರ ಮೇಲೆ ವಾಕ್​ ಪ್ರಹಾರ ನಡೆಸಿದ್ದಾರೆ. ಇಫ್ತಿಕಾರ್ ಅಹಮದ್ ಬ್ಯಾಟಿಂಗ್​ ವೇಳೆ ಪಿಚ್​ನಲ್ಲಿ ಮಲಗಿದ್ದರು ಅನ್ನಿಸುತ್ತದೆ ಎಂದು ಹೇಳಿದ್ದಾರೆ.

ವಾಸ್ತವವಾಗಿ, ವಾಕರ್ ಅವರ ಈ ಹೇಳಿಕೆಗೂ ಅರ್ಥವಿದ್ದು, ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಆರಂಭದಲ್ಲೇ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಇದರ ಜೊತೆಗೆ ಮೊಹಮ್ಮದ್ ನವಾಜ್ ನಾಟೌಟ್ ಇದ್ದರೂ ರಿವ್ಯೂ ತೆಗೆದುಕೊಳ್ಳದಿರುವುದು ಮಾಜಿ ನಾಯಕನ ಅಸಮಾದಾನಕ್ಕೆ ಕಾರಣವಾಗಿದೆ. ಪಾಕ್ ಇನ್ನಿಂಗ್ಸ್​ನ 13ನೇ ಓವರ್​ನಲ್ಲಿ ಶಂಸಿ ಎಸೆದಲ್ಲಿ ನವಾಜ್ ಎದುರು ಎಲ್‌ಬಿಡಬ್ಲ್ಯೂ ಮನವಿ ಮಾಡಲಾಯಿತು. ಇದನ್ನು ಪುರಸ್ಕರಿಸಿದ ಅಂಫೈರ್ ಕೂಡ ಎಲ್‌ಬಿಡಬ್ಲ್ಯೂ ಔಟ್ ನೀಡಿದರು. ಈ ವೇಳೆ ರನ್​ಗಾಗಿ ಓಡಲಾರಂಭಿಸಿದ ನವಾಜ್​ರನ್ನು ರನೌಟ್ ಕೂಡ ಮಾಡಲಾಯಿತು.

ಇಫ್ತಿಕರ್ ಪಿಚ್‌ನಲ್ಲಿ ಮಲಗಿದ್ದರು

ಹೀಗಾಗಿ ಬಾಲ್​ಗೆ ಬ್ಯಾಟ್ ತಾಗಿರುವುದು ಗೊತ್ತಿದ್ದರೂ, ನವಾಜ್ ತಾನು ರನ್ ಔಟ್ ಆಗಿದ್ದೇನೆ ಎಂದು ಭಾವಿಸಿ ಮೈದಾನದಿಂದ ಹೊರನಡೆದಿದ್ದರು. ಈ ಬಗ್ಗೆ ಪಂದ್ಯದ ನಂತರ ಸಾಕಷ್ಟು ಚರ್ಚೆ ನಡೆದಿತ್ತು. ಪಾಕಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಪಾಕ್ ಮಾಜಿ ನಾಯಕ ವಕಾರ್ ಯೂನಿಸ್, ‘ಅಂಪೈರ್ ಎಲ್​ಬಿಡಬ್ಲ್ಯೂ ನೀಡಿದಾಗ ಮೊಹಮ್ಮದ್ ನವಾಜ್ ಅವರು ರನ್ ಔಟ್ ಆಗಿದ್ದೇನೆ ಎಂದು ಭಾವಿಸಿ ಪೆವಿಲಿಯನ್​ಗೆ ತೆರಳಿದ್ದಾರೆ.

ಇದನ್ನೂ ಓದಿ: ‘ಯಾರಿಂದಲೂ ಅವರ ಸ್ಥಾನ ತುಂಬಲಾಗುವುದಿಲ್ಲ’; ಜಡೇಜಾಗಾಗಿ ಸಿಎಸ್‌ಕೆ ಜೊತೆ ಜಿದ್ದಿಗೆ ಬಿದ್ದ ಧೋನಿ..!

ಆದರೆ ವಾಸ್ತವವಾಗಿ ರನೌಟ್ ಆಗುವ ಮೊದಲು ಅಂಪೈರ್ ಎಲ್‌ಬಿಡಬ್ಲ್ಯೂ ಔಟ್ ನೀಡಿದ್ದರಿಂದ ಈ ಬಾಲ್ ಡೆಡ್ ಬಾಲ್ ಆಗಿತ್ತು. ಹೀಗಾಗಿ ನವಾಜ್​ ರನ್ ಔಟ್ ಆಗಿದ್ದರಿಂದ ಪಾರಾಗಬಹುದಿತ್ತು. ಆದರೆ ನವಾಜ್ ರಿವ್ಯೂ ತೆಗೆದುಕೊಳ್ಳಲಿಲ್ಲ, ಜೊತೆಗೆ ನಾನ್ ಸ್ಟ್ರೈಕ್​ನಲ್ಲಿ ನಿಂತಿದ್ದ ಅನುಭವಿ ಆಟಗಾರ ಇಫ್ತಿಕಾರ್ ಕೂಡ ಈ ಬಗ್ಗೆ ನವಾಜ್​ಗೆ ವಿವರಿಸಲಿಲ್ಲ. ಇದರಿಂದ ನನಗನಿಸುತ್ತದೆ ಇಫ್ತಿಕಾರ್ ಅವರು ಪಿಚ್‌ನಲ್ಲಿ ಮಲಗಿದ್ದರು ಎಂದು. ಅನುಭವಿ ಇಫ್ತಿಕರ್, ಪೆವಿಲಿಯನ್​ಗೆ ತೆರಳುತ್ತಿದ್ದ ನವಾಜ್​ರನ್ನು ನಿಲ್ಲಿಸಿ, ಡೆಡ್ ಬಾಲ್ ಬಗ್ಗೆ ಮಾಹಿತಿ ನೀಡಬೇಕಿತ್ತು ಎಂದಿದ್ದಾರೆ.

ನವಾಜ್ ವಿಕೆಟ್​ನಿಂದ ಪಾಕಿಸ್ತಾನಕ್ಕೆ ಲಾಭ

ನವಾಜ್ ದುರದೃಷ್ಟಕರ ರೀತಿಯಲ್ಲಿ ಔಟಾಗಿರಬಹುದು ಆದರೆ ಈ ವಿಕೆಟ್​ನಿಂದ ಪಾಕಿಸ್ತಾನಕ್ಕೆ ಹೆಚ್ಚು ಲಾಭವಾಯಿತು. ಏಕೆಂದರೆ ನವಾಜ್ ನಂತರ ಕ್ರೀಸ್​ಗೆ ಬಂದ ಶಾದಾಬ್, ಕೇವಲ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಕೇವಲ 22 ಎಸೆತಗಳನ್ನು ಎದುರಿಸಿದ ಶಾದಾಬ್ 4 ಸಿಕ್ಸರ್ ಸಹಿತ 52 ರನ್ ಬಾರಿಸಿದರು. ಜೊತೆಗೆ ಶಾದಾಬ್ ಮತ್ತು ಇಫ್ತಿಕರ್ ಜೊತೆಗೂಡಿ 36 ಎಸೆತಗಳಲ್ಲಿ 82 ರನ್‌ಗಳನ್ನು ಹಂಚಿಕೊಂಡರು. ಇದರಿಂದಾಗಿ ಪಾಕಿಸ್ತಾನ 20 ಓವರ್‌ಗಳಲ್ಲಿ 185 ರನ್‌ಗಳ ಬೃಹತ್ ಮೊತ್ತ ಗಳಿಸಿತು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಗದೀಶ್​ಗೆ ಸೀರೆ ಕೊಡೋಕೆ ಮುಂದಾದ ಮನೆ ಮಂದಿ; ‘ಹೆಂಗಸಾಗೋಕೂ ಯೋಗ್ಯತೆ ಇಲ್ಲ’
ಜಗದೀಶ್​ಗೆ ಸೀರೆ ಕೊಡೋಕೆ ಮುಂದಾದ ಮನೆ ಮಂದಿ; ‘ಹೆಂಗಸಾಗೋಕೂ ಯೋಗ್ಯತೆ ಇಲ್ಲ’
ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ, ಅರ್ಚಕರ ತಂಡದಿಂದ ಪೂಜೆ
ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ, ಅರ್ಚಕರ ತಂಡದಿಂದ ಪೂಜೆ
Cauvery Tirthodbhava Live: ಕಾವೇರಿ ತೀರ್ಥೋದ್ಭವ ಲೈವ್​ ನೋಡಿ
Cauvery Tirthodbhava Live: ಕಾವೇರಿ ತೀರ್ಥೋದ್ಭವ ಲೈವ್​ ನೋಡಿ
Daily Devotional: ದಿನ ನಿತ್ಯ ದೇವರನಾಮ ಜಪದ ಫಲ ತಿಳಿಯಿರಿ
Daily Devotional: ದಿನ ನಿತ್ಯ ದೇವರನಾಮ ಜಪದ ಫಲ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಇಂದು ಧನಯೋಗ, ಆರು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಇಂದು ಧನಯೋಗ, ಆರು ಗ್ರಹಗಳ ಶುಭ ಫಲವಿದೆ
ಆಂಧ್ರಪ್ರದೇಶದಲ್ಲಿ 16ನೇ ಶತಮಾನದ ಆಂಜನೇಯ ದೇವಾಲಯಕ್ಕೆ ಹಾನಿ
ಆಂಧ್ರಪ್ರದೇಶದಲ್ಲಿ 16ನೇ ಶತಮಾನದ ಆಂಜನೇಯ ದೇವಾಲಯಕ್ಕೆ ಹಾನಿ
ಚೆನ್ನೈನಲ್ಲಿ ಭಾರೀ ಮಳೆ; ಪ್ರವಾಹದ ನೀರಿನಿಂದ ಎಂಜಿನಿಯರಿಂಗ್ ಕಾಲೇಜು ಜಲಾವೃತ
ಚೆನ್ನೈನಲ್ಲಿ ಭಾರೀ ಮಳೆ; ಪ್ರವಾಹದ ನೀರಿನಿಂದ ಎಂಜಿನಿಯರಿಂಗ್ ಕಾಲೇಜು ಜಲಾವೃತ
ಮಿತಿ ಮೀರಿದ ದರ್ಶನ್ ಬೆನ್ನು ನೋವು; ಬಳ್ಳಾರಿ ಜೈಲಿಗೆ ಬಂತು ಮೆಡಿಕಲ್ ಬೆಡ್
ಮಿತಿ ಮೀರಿದ ದರ್ಶನ್ ಬೆನ್ನು ನೋವು; ಬಳ್ಳಾರಿ ಜೈಲಿಗೆ ಬಂತು ಮೆಡಿಕಲ್ ಬೆಡ್
ಬಿಜೆಪಿ, ಜೆಡಿಎಸ್ ಸಂಸದರು ಕೇಂದ್ರದ ಮುಂದೆ ತುಟಿಬಿಚ್ಚಲ್ಲ: ಸಿದ್ದರಾಮಯ್ಯ
ಬಿಜೆಪಿ, ಜೆಡಿಎಸ್ ಸಂಸದರು ಕೇಂದ್ರದ ಮುಂದೆ ತುಟಿಬಿಚ್ಚಲ್ಲ: ಸಿದ್ದರಾಮಯ್ಯ
ನೂರೈವತ್ತು ಜನಕ್ಕೆ ತಯಾರಿಸಿದ ಬಾಡೂಟ ಸೀಜ್ ಮಾಡಿದ ಚುನಾವಣಾಧಿಕಾರಿಗಳು
ನೂರೈವತ್ತು ಜನಕ್ಕೆ ತಯಾರಿಸಿದ ಬಾಡೂಟ ಸೀಜ್ ಮಾಡಿದ ಚುನಾವಣಾಧಿಕಾರಿಗಳು