
ನ್ಯೂಜಿಲೆಂಡ್‌ನ ಮಾಜಿ ನಾಯಕ ಕೇನ್ ವಿಲಿಯಮ್ಸನ್ (Kane Williamson) ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕಳೆಪ ಫಾರ್ಮ್‌ನಿಂದ ಬಳಲುತ್ತಿದ್ದ ವಿಲಿಯಮ್ಸನ್ ತಮ್ಮ 35 ನೇ ವಯಸ್ಸಿನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಆಟದ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದಾರೆ. ಕಳೆದ ವರ್ಷ ಅಂದರೆ 2025 ರಲ್ಲಿ ಟಿ20 ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದ ಕೇನ್, ಬಹಳ ಸಮಯದಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇದೀಗ ತಮ್ಮ 16 ವರ್ಷಗಳ ವೃತ್ತಿಜೀವನಕ್ಕೆ ಪೂರ್ಣವಿರಾಮವನ್ನಿಟ್ಟಿರುವ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡದ ಪರ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಕಿವೀಸ್ ಪರ ಅತ್ಯಧಿಕ ರನ್ ಕಲೆಹಾಕಿರುವ ಆಟಗಾರನೆನಿಸಿಕೊಂಡಿರುವ ಕೇನ್, ಇದುವರೆಗೆ ಆಡಿರುವ 378 ಪಂದ್ಯಗಳಲ್ಲಿ 19,346 ರನ್ ಗಳಿಸಿದ್ದಾರೆ. ಇದರಲ್ಲಿ 48 ಶತಕಗಳು ಸೇರಿವೆ. ಆಟಗಾರನಾಗಿ ಮಾತ್ರವಲ್ಲದೆ ನಾಯಕನಾಗಿಯೂ ತಂಡವನ್ನು ಮುನ್ನಡೆಸಿರುವ ವಿಲಿಯಮ್ಸನ್, ತಮ್ಮ ನಾಯಕತ್ವದಲ್ಲಿ ತಂಡವನ್ನು ಎರಡು ಐಸಿಸಿ ಪಂದ್ಯಾವಳಿಗಳ ಫೈನಲ್‌ಗೆ ಕೊಂಡೊಯ್ದಿದ್ದರು. ಅದರಲ್ಲಿ ಒಮ್ಮೆ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು.
ವಾಸ್ತವವಾಗಿ ಕೇನ್ ವಿಲಿಯಮ್ಸನ್ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದಲ್ಲಿ ಉಭಯ ತಂಡಗಳು 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿವೆ. ಸರಣಿಯ ಮೊದಲನೇ ಪಂದ್ಯ ಈಗಾಗಲೇ ಮುಗಿದಿದ್ದು, ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಹೀನಾಯ ಸೋಲು ಕಂಡಿತ್ತು. ಅನುಭವಿ ವಿಲಿಯಮ್ಸನ್ ಎರಡೂ ಇನ್ನಿಂಗ್ಸ್ಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ ಸೊನ್ನೆ ಸುತ್ತಿದ್ದ ಕೇನ್, ಎರಡನೇ ಇನ್ನಿಂಗ್ಸ್ನಲ್ಲಿ 18 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಇದೀಗ ನಿವೃತ್ತಿ ಘೋಷಿಸಿರುವ ವಿಲಿಯಮ್ಸನ್ ಇನ್ನು ಮುಂದೆ ತಂಡದ ಭಾಗವಾಗಿರುವುದಿಲ್ಲ. ಹೀಗಾಗಿ ಅವರ ಬದಲಿಯಾಗಿ ತಂಡಕ್ಕೆ ಬದಲಿ ಆಟಗಾರನ ಆಯ್ಕೆಯಾಗಬೇಕಿದೆ.
One of our greatest ever, signing off.
Kane Williamson has announced his retirement from international cricket effective immediately.
Head to https://t.co/Pm8RiU65zt to read more. pic.twitter.com/e22MeZ410e
— BLACKCAPS (@BLACKCAPS) June 12, 2026
2010 ರ ನವೆಂಬರ್‌ನಲ್ಲಿ ಅಹಮದಾಬಾದ್‌ನಲ್ಲಿ ಭಾರತ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಕೇನ್, ಮೂರು ತಿಂಗಳ ನಂತರ ಇದೇ ಟೀಂ ಇಂಡಿಯಾ ವಿರುದ್ಧ ಏಕದಿನ ಕ್ರಿಕೆಟ್‌ಗೂ ಪಾದಾರ್ಪಣೆ ಮಾಡಿದರು. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ತಂಡದ ಪರ 110 ಟೆಸ್ಟ್ ಪಂದ್ಯಗಳನ್ನಾಡಿರುವ ವಿಲಿಯಮ್ಸನ್, 9515 ರನ್ ಬಾರಿಸಿದ್ದಾರೆ. ಇದರಲ್ಲಿ 38 ಅರ್ಧಶತಕಗಳು ಮತ್ತು 33 ಶತಕಗಳು ಸೇರಿವೆ. ಹಾಗೆಯೇ 175 ಏಕದಿನ ಪಂದ್ಯಗಳಲ್ಲಿ 48.69 ಸರಾಸರಿಯಲ್ಲಿ 7256 ರನ್ ಬಾರಿಸಿರುವ ಕೇನ್, ಇದರಲ್ಲಿ 47 ಅರ್ಧಶತಕಗಳು ಮತ್ತು 15 ಶತಕಗಳನ್ನು ಬಾರಿಸಿದ್ದರು.
AUS vs NZ: 12 ವರ್ಷಗಳ ನಂತರ ಹೀಗೊಂದು ಬೇಡದ ದಾಖಲೆ ಬರೆದ ಕೇನ್ ವಿಲಿಯಮ್ಸನ್
ಆಟಗಾರನಾಗಿ ಮಾತ್ರವಲ್ಲದೆ ವಿಲಿಯಮ್ಸನ್, 2016 ರಿಂದ 2024 ರವರೆಗೆ ಕಿವೀಸ್ ತಂಡದ ನಾಯಕತ್ವ ವಹಿಸಿದ್ದರು. ಅವರ ನಾಯಕತ್ವದಲ್ಲಿ ನ್ಯೂಜಿಲೆಂಡ್, ಭಾರತವನ್ನು ಸೋಲಿಸಿ 2021 ರಲ್ಲಿ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದಿತು. ಇದರ ಜೊತೆಗೆ ಕೇನ್, ತಂಡವನ್ನು 2019 ರ ಏಕದಿನ ವಿಶ್ವಕಪ್ ಮತ್ತು 2021 ರ ಟಿ20 ವಿಶ್ವಕಪ್‌ನ ಫೈನಲ್‌ಗೂ ಮುನ್ನಡೆಸಿದ್ದರು. ಹಾಗೆಯೇ 2019 ರ ಏಕದಿನ ವಿಶ್ವಕಪ್‌ನಲ್ಲಿ ಟೂರ್ನಮೆಂಟ್ ಆಟಗಾರ ಪ್ರಶಸ್ತಿ ಗೆದ್ದಿದ್ದ ಕೇನ್, 2019 ರಲ್ಲಿ ಐಸಿಸಿ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದರು.
Published On - 4:18 pm, Fri, 12 June 26