ಆಮ್ ಆದ್ಮಿ ಪಕ್ಷ ಸೇರಿದ್ರಾ ಕಪಿಲ್ ದೇವ್? ಸೋಶಿಯಲ್ ಮೀಡಿಯಾದಲ್ಲಿ ವಿಶ್ವಕಪ್ ಹೀರೋ ಕೊಟ್ಟ ಉತ್ತರವಿದು

| Updated By: ಪೃಥ್ವಿಶಂಕರ

Updated on: May 22, 2022 | 6:17 PM

Kapil Dev: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿರುವ ಫೋಟೋ ವೈರಲ್​ ಆಗಿದ್ದು, ಈಗ ಕಪಿಲ್ ರಾಜಕೀಯ ಸೇರಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ.

ಆಮ್ ಆದ್ಮಿ ಪಕ್ಷ ಸೇರಿದ್ರಾ ಕಪಿಲ್ ದೇವ್? ಸೋಶಿಯಲ್ ಮೀಡಿಯಾದಲ್ಲಿ ವಿಶ್ವಕಪ್ ಹೀರೋ ಕೊಟ್ಟ ಉತ್ತರವಿದು
ಕಪಿಲ್ ದೇವ್
Follow us on

ಭಾರತದ ವಿಶ್ವ ಚಾಂಪಿಯನ್ ನಾಯಕ ಕಪಿಲ್ ದೇವ್ (Kapil Dev) ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬ ಚರ್ಚೆ ಕಳೆದ ಕೆಲ ದಿನಗಳಿಂದ ನಡೆಯುತ್ತಿತ್ತು. ಆದಾಗ್ಯೂ, ಅವರು ಅಂತಹ ಸಾಧ್ಯತೆಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಈ ಮಹಾನ್ ಆಲ್‌ರೌಂಡರ್ ಅವರು ಆಮ್ ಆದ್ಮಿ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿರುವ ಎಲ್ಲಾ ವರದಿಗಳನ್ನು ತಳ್ಳಿಹಾಕಿದ್ದಾರೆ. ಕಪಿಲ್ ಬಗ್ಗೆ ಇಂತಹ ವದಂತಿ ಹಬ್ಬಿದ್ದು ಇದೇ ಮೊದಲಲ್ಲ. ಆದರೆ ಕಪಿಲ್ ದೇವ್ ಮತ್ತೊಮ್ಮೆ ಈ ವರದಿಗಳನ್ನು ಕೇವಲ ವದಂತಿಗಳು ಎಂದಿದ್ದಾರೆ.

1983 ರಲ್ಲಿ ಭಾರತವನ್ನು ವಿಶ್ವ ಚಾಂಪಿಯನ್ ಮಾಡಿದ ಕಪಿಲ್ ಅವರು ದೇಶದ ಅತ್ಯಂತ ಯಶಸ್ವಿ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದರು. ಇಂದು ಅವರು ಕ್ರಿಕೆಟ್ ತೊರೆದು ಬಹಳ ದಿನಗಳಾಗಿದ್ದರೂ ಅಭಿಮಾನಿಗಳಲ್ಲಿ ಅವರ ಮೇಲಿನ ಪ್ರೀತಿಗೆ ಕೊರತೆಯಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು ಅವರ ಜನಪ್ರಿಯತೆಯ ಲಾಭ ಪಡೆಯಲು ಅವಕಾಶಗಳನ್ನು ಹುಡುಕುತ್ತಿವೆ.

ಇದನ್ನೂ ಓದಿ:IND vs SL: ಪಂತ್ ಬ್ಯಾಟಿಂಗ್ ಅಬ್ಬರಕ್ಕೆ ಕಪಿಲ್ ದೇವ್ ಅವರ 40 ವರ್ಷದ ಹಳೆಯ ದಾಖಲೆ ಉಡೀಸ್..!

ಇದನ್ನೂ ಓದಿ
Mumbai Indians Report Card: ಮುಂಬೈ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವದರೊಳಗೆ ಪ್ಲೇ ಆಫ್ ಬಾಗಿಲು ಮುಚ್ಚಿ ಹೋಗಿತ್ತು
Chennai Super Kings Report card: ಧೋನಿ ಎಡವಟ್ಟಿನಿಂದ ತಂಡ ಮುಗ್ಗರಿಸಿತಾ? ಇದು ಸಿಎಸ್​ಕೆ ತಂಡದ ಕಂಪ್ಲೀಟ್ ರಿಪೋರ್ಟ್

ಹರಿಯಾಣದಲ್ಲಿ ಚುನಾವಣೆ ನಡೆಯಲಿದೆ
2024ರಲ್ಲಿ ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಅರವಿಂದ್ ಕೇಜ್ರಿವಾಲ್ ಕೆಲ ದಿನಗಳ ಹಿಂದೆ ಹರ್ಯಾಣಕ್ಕೆ ಭೇಟಿ ನೀಡಿದ್ದರು. ಜೊತೆಗೆ ಅವರು ಕಪಿಲ್ ದೇವ್ ಅವರನ್ನು ಸಹ ಭೇಟಿ ಮಾಡಿದ್ದರು. ಕೇಜ್ರಿವಾಲ್ ಜೊತೆ ಕಪಿಲ್ ದೇವ್ ಅವರ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಹೀಗಾಗಿ ಕಪಿಲ್ ದೇವ್ ಆಮ್ ಆದ್ಮಿ ಪಕ್ಷ ಸೇರಬಹುದು ಎಂಬ ಊಹಾಪೋಹಗಳು ಹಬ್ಬಿದ್ದವು. ಕುರುಕ್ಷೇತ್ರದಲ್ಲಿ ಕೇಜ್ರಿವಾಲ್​ರ ರ್ಯಾಲಿಯಲ್ಲಿ ಕಪಿಲ್ ದೇವ್ ಭಾಗವಹಿಸಲಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ ಕಪಿಲ್ ದೇವ್ ಎಲ್ಲಾ ಸುದ್ದಿಗಳನ್ನು ಸಾರಾಸಗಟಾಗಿ ಅಲ್ಲಗಳೆದಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಸತ್ಯ ಹೇಳಿದ ಕಪಿಲ್ ದೇವ್
ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿರುವ ಕಪಿಲ್, ‘ನಾನು ರಾಜಕೀಯ ಪಕ್ಷಕ್ಕೆ ಸೇರಲಿದ್ದೇನೆ ಎಂಬ ಸುದ್ದಿ ನನಗೆ ಬಂದಿದೆ. ಈ ಸುದ್ದಿ ಸಂಪೂರ್ಣ ಸುಳ್ಳು. ನಾನು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ಈ ವದಂತಿಯಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ. ನನ್ನನ್ನು ನಂಬಿ, ನಾನು ಅಂತಹ ದೊಡ್ಡ ಹೆಜ್ಜೆ ಇಟ್ಟರೆ, ನಾನು ಅದನ್ನು ಸಾರ್ವಜನಿಕವಾಗಿ ಘೋಷಿಸುತ್ತೇನೆ. ಇಲ್ಲಿಯವರೆಗೆ, ಹರಿಯಾಣದಿಂದ ಯಾವುದೇ ದೊಡ್ಡ ಆಟಗಾರರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ, ಆದರೆ ಹರಿಯಾಣವು ಆಟಗಾರರ ಪ್ರಾಬಲ್ಯ ಹೊಂದಿದೆ.

ವರದಿಗಳನ್ನು ನಂಬುವುದಾದರೆ, ಕಪಿಲ್ ದೇವ್ ಹೊರತುಪಡಿಸಿ, ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದಾರೆ. ಇದಲ್ಲದೇ ಆಮ್ ಆದ್ಮಿ ಪಕ್ಷ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರನ್ನು ಪಂಜಾಬ್​ನಿಂದ ರಾಜ್ಯಸಭಾ ಸಂಸದರನ್ನಾಗಿಸಿದೆ. ಆದ್ದರಿಂದ ಅವರ ಉದ್ದೇಶಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಪ್ರಸ್ತುತ ಹರಿಯಾಣದ ಬಿಜೆಪಿ-ಜೆಜೆಪಿ ಸರಕಾರದಲ್ಲಿ ಹಾಕಿ ದಿಗ್ಗಜರಾಗಿದ್ದ ಸಂದೀಪ್ ಸಿಂಗ್ ಕ್ರೀಡಾ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.