IPL 2022: ಲಕ್ನೋ ತಂಡದಲ್ಲಿದೆ ಜೋಡೆತ್ತು: RCBಗೆ ಇವರದ್ದೇ ಭಯ..!

IPL 2022: ಐಪಿಎಲ್​ನಲ್ಲಿ  ಆರ್​ಸಿಬಿ ವಿರುದ್ದ ಕೆಎಲ್ ರಾಹುಲ್ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಈ ಬಾರಿ ಕೂಡ ಕೆಎಲ್​ಆರ್ ಉತ್ತಮ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ರಾಹುಲ್ ಆರ್​ಸಿಬಿ ಪಾಲಿಗೆ ಕಂಟಕವಾಗಬಹುದು.

IPL 2022: ಲಕ್ನೋ ತಂಡದಲ್ಲಿದೆ ಜೋಡೆತ್ತು: RCBಗೆ ಇವರದ್ದೇ ಭಯ..!
RCB vs LSG
Follow us
TV9 Web
| Updated By: ಝಾಹಿರ್ ಯೂಸುಫ್

Updated on:May 22, 2022 | 5:31 PM

IPL 2022: ಐಪಿಎಲ್ ಸೀಸನ್​ 15 ನಲ್ಲಿ ಆರ್​ಸಿಬಿ ತಂಡವು ಪ್ಲೇಆಫ್​ ಪ್ರವೇಶಿಸಿದೆ. ಇನ್ನು ಫಾಫ್ ಡುಪ್ಲೆಸಿಸ್ ಪಡೆ ಮುಂದಿನ ಪಂದ್ಯಕ್ಕಾಗಿ ಭರ್ಜರಿ ತಯಾರಿ ನಡೆಸಬೇಕಿದೆ. ಅದರಲ್ಲೂ ಬಲಿಷ್ಠ ಲಕ್ನೋ ಸೂಪರ್ ಜೈಂಟ್ಸ್ (​LSG) ತಂಡವನ್ನು ಸೋಲಿಸುವುದು ಸುಲಭವಲ್ಲ. ಹೀಗಾಗಿ ಹೊಸ ರಣತಂತ್ರಗಳೊಂದಿಗೆ ಆರ್​ಸಿಬಿ (RCB) ತಂಡ ಕಣಕ್ಕಿಳಿಯಬೇಕಿದೆ. ಹೀಗಾಗಿಯೇ ಆರ್​ಸಿಬಿ ಲಕ್ನೋ ತಂಡದ ಇಬ್ಬರು ಆಟಗಾರರ ವಿರುದ್ದ ಭರ್ಜರಿ ಪ್ಲ್ಯಾನ್ ರೂಪಿಸಬೇಕಾಗಿರುವುದು ಅನಿವಾರ್ಯ. ಅವರಲ್ಲಿ ಮುಖ್ಯರೆಂದರೆ ಕೆಎಲ್ ರಾಹುಲ್. ಏಕೆಂದರೆ ಐಪಿಎಲ್​ನಲ್ಲಿ  ಆರ್​ಸಿಬಿ ವಿರುದ್ದ ಕೆಎಲ್ ರಾಹುಲ್ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಈ ಬಾರಿ ಕೂಡ ಕೆಎಲ್​ಆರ್ ಉತ್ತಮ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ರಾಹುಲ್ ಆರ್​ಸಿಬಿ ಪಾಲಿಗೆ ಕಂಟಕವಾಗಬಹುದು.

ಇದಾಗ್ಯೂ ಆರ್​ಸಿಬಿ ತಂಡವು ಲಕ್ನೋ ಸೂಪರ್ ಜೈಂಟ್ಸ್​ ವಿರುದ್ದ ಆಡಿದ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿತ್ತು ಎಂಬುದು ವಿಶೇಷ. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 6 ವಿಕೆಟ್‌ಗೆ 181 ರನ್ ಗಳಿಸಿತ್ತು. ನಾಯಕ ಫಾಫ್ ಡು ಪ್ಲೆಸಿಸ್ 96 ರನ್‌ಗಳ ಆಕ್ರಮಣಕಾರಿ ಇನ್ನಿಂಗ್ಸ್ ಆಡಿದ್ದರು. ಇದಕ್ಕೆ ಉತ್ತರವಾಗಿ ಲಕ್ನೋ ತಂಡ 8 ವಿಕೆಟ್‌ಗೆ 163 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನ ಮುಖ್ಯ ಕಾರಣ ಜೋಶ್ ಹ್ಯಾಝಲ್​ವುಡ್. ಏಕೆಂದರೆ ಕೇವಲ 25 ರನ್​ಗಳಿಗೆ 4 ವಿಕೆಟ್ ಕಬಳಿಸಿ ಮಿಂಚಿದ್ದರು. ಆದರೆ ಆ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡವು ಗೆಲುವಿನ ಲಯಕ್ಕೆ ಮರಳಿದೆ.

ಅದರಲ್ಲೂ ಕೊನೆಯ ಪಂದ್ಯದಲ್ಲಿ KKR ವಿರುದ್ದ ಲಕ್ನೋ ಸೂಪರ್ ಜೈಂಟ್ಸ್ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಕ್ವಿಂಟನ್ ಡಿಕಾಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಡಿಕಾಕ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ರೆ, ರಾಹುಲ್ ಉತ್ತಮ ಸಾಥ್ ನೀಡಿದ್ದರು. ಇಲ್ಲಿ ಈ ಇಬ್ಬರೇ ಆರ್​ಸಿಬಿ ತಂಡಕ್ಕೂ ಕಂಟಕವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ
Image
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು
Image
Virat Kohli: ಕೊಹ್ಲಿ ಕಡೆಯಿಂದ ರಶೀದ್ ಖಾನ್​​ಗೆ ಸ್ಪೆಷಲ್ ಗಿಫ್ಟ್​: ಸೇಫ್ ಆಗಿ ಇಟ್ಟಿರಿ ಎಂದ ಸೌತ್ ಆಫ್ರಿಕಾ ಕ್ರಿಕೆಟಿಗ
Image
KL Rahul: ಐಪಿಎಲ್​ನಲ್ಲಿ ರಾಹುಲ್ ಅಬ್ಬರ: ಸತತ 5ನೇ ಬಾರಿ ಕೆಎಲ್ ಕಿಂಗ್
Image
IPL 2022: ಬುಮ್ರಾ ದಾಖಲೆ ಮುರಿದ ಉಮ್ರಾನ್ ಮಲಿಕ್

ಇದನ್ನೂ ಓದಿ: IPL 2022: ಹೇಗಿರಲಿದೆ ಪ್ಲೇಆಫ್: ಇಲ್ಲಿ 2 ತಂಡಗಳಿಗೆ ಡಬಲ್ ಚಾನ್ಸ್​..!

ಏಕೆಂದರೆ ಡಿಕಾಕ್ ಹಾಗೂ ಕೆಎಲ್​ಆರ್​ ಆರ್​ಸಿಬಿ ವಿರುದ್ದ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಪ್ರಸ್ತಕ್ತ ಸೀಸನ್​ನಲ್ಲಿ ಇಬ್ಬರೂ 500ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ರಾಹುಲ್ 2 ಶತಕ ಮತ್ತು 3 ಅರ್ಧ ಶತಕಗಳೊಂದಿಗೆ 537 ರನ್ ಗಳಿಸಿದರೆ, ಡಿಕಾಕ್ ಒಂದು ಶತಕ ಮತ್ತು 3 ಅರ್ಧ ಶತಕಗಳ ಸಹಾಯದಿಂದ 502 ರನ್ ಕಲೆಹಾಕಿದ್ದಾರೆ. ಇತ್ತ RCB ತಂಡದ ಯಾವುದೇ ಆಟಗಾರನು 500 ರನ್ ಗಳಿಸಲು ಸಾಧ್ಯವಾಗಲಿಲ್ಲ.

ಇನ್ನು ಆರ್‌ಸಿಬಿ ವಿರುದ್ಧ ಕೆಎಲ್ ರಾಹುಲ್ ಮತ್ತು ಡಿ ಕಾಕ್ ಅವರ ಒಟ್ಟಾರೆ ಪ್ರದರ್ಶನ ಕೂಡ ಉತ್ತಮವಾಗಿದೆ. ರಾಹುಲ್ 11 ಇನ್ನಿಂಗ್ಸ್‌ಗಳಲ್ಲಿ 76 ರ ಸರಾಸರಿಯಲ್ಲಿ ಒಟ್ಟು 531 ರನ್ ಬಾರಿಸಿದ್ದಾರೆ. ಈ ವೇಳೆ ಒಂದು ಶತಕ ಮತ್ತು ಎರಡು ಅರ್ಧ ಶತಕಗಳು ಮೂಡಿಬಂದಿವೆ. ಅಷ್ಟೇ ಅಲ್ಲದೆ ಆರ್​ಸಿಬಿ ವಿರುದ್ದ ಕೆಎಲ್ ರಾಹುಲ್ ಅವರ ಸ್ಟ್ರೈಕ್ ರೇಟ್ 150 ಇದೆ.

ಹಾಗೆಯೇ ಆರ್​ಸಿಬಿ ವಿರುದ್ದ ಡಿ ಕಾಕ್ ಅಬ್ಬರಿಸುವುದರಲ್ಲಿ ಡೌಟೇ ಇಲ್ಲ ಎನ್ನಬಹುದು. ಏಕೆಂದರೆ ಡಿಕಾಕ್ 10 ಇನ್ನಿಂಗ್ಸ್‌ಗಳಲ್ಲಿ 37 ರ ಸರಾಸರಿಯಲ್ಲಿ ಒಟ್ಟು 365 ರನ್ ಗಳಿಸಿದ್ದಾರೆ. ಈ ವೇಳೆ ಒಂದು ಶತಕ ಮತ್ತು ಎರಡು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಇದೀಗ ಲಕ್ನೋ ಪರ ಈ ಇಬ್ಬರು ಆಟಗಾರರೇ ಆರಂಭಿಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಭರ್ಜರಿ ಜೋಡಿ ಆರ್​ಸಿಬಿ ವಿರುದ್ದದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಎಲಿಮಿನೇಟರ್​ ಪಂದ್ಯದಲ್ಲಿ ಈ ಜೋಡಿಯನ್ನು ಆರಂಭದಲ್ಲೇ ಕಟ್ಟಿಹಾಕಲು ಆರ್​ಸಿಬಿ ವಿಶೇಷ ರಣತಂತ್ರ ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ ಆರ್​ಸಿಬಿ ಎಡವಿದರೆ ಎಲಿಮಿನೇಟರ್ ಪಂದ್ಯದ ಮೂಲಕ ಐಪಿಎಲ್​ ಅಭಿಯಾನವನ್ನು ಅಂತ್ಯಗೊಳಿಸಬೇಕಾಗಿ ಬರಬಹುದು.

ಇದನ್ನೂ ಓದಿ: IPL 2022: ಹೇಗಿರಲಿದೆ ಪ್ಲೇಆಫ್: ಇಲ್ಲಿ 2 ತಂಡಗಳಿಗೆ ಡಬಲ್ ಚಾನ್ಸ್​..!

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:30 pm, Sun, 22 May 22

ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು