AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಭುಜಬಲದ ಪರಾಕ್ರಮ: ಪಾಕ್ ಆಟಗಾರನಿಗೆ ಬಿತ್ತು ದಂಡ..!

New Zealand vs Pakistan: ಪಾಕಿಸ್ತಾನ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ನ್ಯೂಝಿಲೆಂಡ್ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡ 91 ರನ್​ಗಳಿಗೆ ಆಲೌಟ್ ಆದರೆ, ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡ 59 ಎಸೆತಗಳನ್ನು ಬಾಕಿಯಿರಿಸಿ 9 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

VIDEO: ಭುಜಬಲದ ಪರಾಕ್ರಮ: ಪಾಕ್ ಆಟಗಾರನಿಗೆ ಬಿತ್ತು ದಂಡ..!
Khushdil Shah
ಝಾಹಿರ್ ಯೂಸುಫ್
|

Updated on: Mar 18, 2025 | 11:12 AM

Share

ಕ್ರೈಸ್ಟ್​ಚರ್ಚ್​ನಲ್ಲಿ ನಡೆದ ಆತಿಥೇಯ ನ್ಯೂಝಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಭುಜಬಲದ ಪರಾಕ್ರಮ ಮೆರೆದ ಪಾಕಿಸ್ತಾನ್ ಆಟಗಾರ ಖುಷ್ದಿಲ್ ಶಾಗೆ ಐಸಿಸಿ ದಂಡ ವಿಧಿಸಿದೆ. ಈ ಪಂದ್ಯದ 8ನೇ ಓವರ್​ ವೇಳೆ ಖುಷ್ದಿಲ್ ಶಾ ಕಿವೀಸ್ ವೇಗಿ ಝಕಾರಿ ಫೌಲ್ಕ್ಸ್‌ ಅವರನ್ನು ಭುಜದಿಂದ ಗುದ್ದಿದ್ದರು. ಉದ್ದೇಶಪೂರ್ವಕವಾಗಿಯೇ ಡಿಕ್ಕಿ ಹೊಡೆದಿದ್ದ ಪಾಕ್ ಆಟಗಾರನಿಗೆ ಫೀಲ್ಡ್​ ಅಂಪೈರ್ ಐಸಿಸಿ ನೀತಿ ಸಂಹಿತೆಯ ಉಲ್ಲಂಘನೆಯ ಎಚ್ಚರಿಕೆ ನೀಡಿದ್ದರು.

ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.12 ರ ಪ್ರಕಾರ, ಆಟಗಾರ, ಸಹಾಯಕ ಸಿಬ್ಬಂದಿ, ಅಂಪೈರ್, ಪಂದ್ಯದ ಅಧಿಕಾರಿ ಅಥವಾ ಯಾವುದೇ ಇತರ ವ್ಯಕ್ತಿಯೊಂದಿಗೆ ಅನುಚಿತ ದೈಹಿಕ ಸಂಪರ್ಕದೊಂದಿಗೆ ಅಡ್ಡಿಪಡಿಸಿದರೆ ಅವರ ವಿರುದ್ಧ ಕ್ರಮ ಜರುಗಿಸಬಹುದು. ಅದರಂತೆ ಇದೀಗ ಖುಷ್ದಿಲ್ ಶಾಗೆ ಐಸಿಸಿ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಿದೆ. ಅಲ್ಲದೆ ಮೂರು ಡಿಮೆರಿಟ್ ಪಾಯಿಂಟ್​ಗಳನ್ನು ನೀಡಲಾಗಿದೆ.

ಇದನ್ನೂ ಓದಿ
Image
IPL 2025: RCB ನೂತನ ಜೆರ್ಸಿ ಫೋಟೋ ಇಲ್ಲಿದೆ
Image
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
Image
ಈ ಸಲನೂ RCB ಕಪ್ ಗೆಲ್ಲದಿರಲಿ, ಅದಕ್ಕಾಗಿ ನಾನು ಪ್ರಾರ್ಥಿಸುವೆ..!
Image
ಗಂಭೀರ್ ಅವರ ಒಂದು ದೃಢ ನಿರ್ಧಾರ ಚಾಂಪಿಯನ್ಸ್ ಟ್ರೋಫಿಯ ಚಿತ್ರಣ ಬದಲಿಸಿತು

ಖುಷ್ದಿಲ್ ಶಾ ವಿಡಿಯೋ:

ಗೆದ್ದು ಬೀಗಿದ ನ್ಯೂಝಿಲೆಂಡ್:

ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡ ನಾಯಕ ಮೈಕೆಲ್ ಬ್ರೇಸ್​ವೆಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ಪವರ್​ಪ್ಲೇನಲ್ಲೇ ರನ್​ಗಳಿಸಲು ಪರದಾಡಿದರು. ಪರಿಣಾಮ ಮೊದಲ 6 ಓವರ್​ಗಳಲ್ಲಿ ಮೂಡಿಬಂದ ಸ್ಕೋರ್ ಕೇವಲ 14 ರನ್ ಮಾತ್ರ. ಇತ್ತ 4 ವಿಕೆಟ್ ಕಬಳಿಸಿ ನ್ಯೂಝಿಲೆಂಡ್ ಬೌಲರ್​ಗಳು ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.

ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಸಲ್ಮಾನ್ ಅಲಿ ಅಘಾ 18 ರನ್​ಗಳಿಸಿದರೆ. ಖುಷ್ದಿಲ್ ಶಾ 30 ಎಸೆತಗಳಲ್ಲಿ 32 ರನ್ ಬಾರಿಸಿದರು. ಇನ್ನು 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜಹಂದಾದ್ ಖಾನ್ 17 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಪಾಕಿಸ್ತಾನ್ ತಂಡವು 18.4 ಓವರ್​ಗಳಲ್ಲಿ 91 ರನ್​ಗಳಿಸಿ ಆಲೌಟ್ ಆಯಿತು.

ನ್ಯೂಝಿಲೆಂಡ್ ಪರ ಜೇಕಬ್ ಡಫಿ 3.4 ಓವರ್​ಗಳಲ್ಲಿ 4 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಕೈಲ್ ಜೇಮಿಸನ್ 4 ಓವರ್​ಗಳಲ್ಲಿ 8 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.

120 ಎಸೆತಗಳಲ್ಲಿ 91 ರನ್​ಗಳ ಗುರಿ ಪಡೆದ ನ್ಯೂಝಿಲೆಂಡ್ ತಂಡಕ್ಕೆ ಫಿನ್ ಅಲೆನ್ ಹಾಗೂ ಟಿಮ್ ಸೀಫರ್ಟ್ ಸ್ಪೋಟಕ ಆರಂಭ ಒದಗಿಸಿದ್ದರು. ಪರಿಣಾಮ ಮೊದಲ 6 ಓವರ್​ಗಳಲೇ ತಂಡದ ಮೊತ್ತ 53 ಕ್ಕೆ ಬಂದು ನಿಂತಿತು.

ಇದನ್ನೂ ಓದಿ: IPL 2025: 8 ಆಟಗಾರರು ಎಂಟ್ರಿ: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್

ಈ ಹಂತದಲ್ಲಿ 29 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 44 ರನ್ ಬಾರಿಸಿದ್ದ ಸೀಫರ್ಟ್ ಔಟಾದರು. ಆ ಬಳಿಕ ಜೊತೆಗೂಡಿದ ಫಿನ್ ಅಲೆನ್ (29) ಹಾಗೂ ಟಿಮ್ ರಾಬಿನ್ಸನ್ (18) ಅಜೇಯರಾಗುಳಿದು 10.1 ಓವರ್​ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್​ನಲ್ಲಿ ನ್ಯೂಝಿಲೆಂಡ್ ತಂಡ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.