Kieron Pollard: ಮುಂಬೈ ತಂಡದಿಂದ ಹೊರಕ್ಕೆ: ಐಪಿಎಲ್​ಗೆ ದಿಢೀರ್ ನಿವೃತ್ತಿ ಘೋಷಿಸಿದ ಕೈರೊನ್ ಪೊಲಾರ್ಡ್

| Updated By: Vinay Bhat

Updated on: Nov 15, 2022 | 2:40 PM

IPL 2023: 2010ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವೇ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದ ಕೈರೊನ್ ಪೊಲಾರ್ಡ್ ಅವರನ್ನು ಇದೀಗ ಫ್ರಾಂಚೈಸಿ ಕೈಬಿಟ್ಟಿದೆ. ಇದರ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿಢೀರ್ ವಿದಾಯ ಘೋಷಿಸಿದ್ದಾರೆ.

Kieron Pollard: ಮುಂಬೈ ತಂಡದಿಂದ ಹೊರಕ್ಕೆ: ಐಪಿಎಲ್​ಗೆ ದಿಢೀರ್ ನಿವೃತ್ತಿ ಘೋಷಿಸಿದ ಕೈರೊನ್ ಪೊಲಾರ್ಡ್
Kieron Pollard and Rohit Sharma
Follow us on

ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ತೀರಾ ಕಳಪೆ ಪ್ರದರ್ಶನ ತೋರಿದ ಮುಂಬೈ ಇಂಡಿಯನ್ಸ್ (Mumbai Indians) ಇದೀಗ ಐಪಿಎಲ್ 2023 (IPl 2023) ಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದೆ. ಇದರ ಮೊದಲ ಹೆಜ್ಜೆಯಾಗಿ ಫಾರ್ಮ್​ನಲ್ಲಿದ್ದ ಆಟಗಾರರನ್ನು ತನ್ನ ತಂಡದಿಂದ ಬಿಡುಗಡೆ ಮಾಡುತ್ತಿದೆ. ಈ ಸಾಲಿನಲ್ಲಿ ವೆಸ್ಟ್ ಇಂಡೀಸ್ ದಿಗ್ಗಜ ಆಟಗಾರ ಕೈರೊನ್ ಪೊಲಾರ್ಡ್ (Kieron Pollard) ಕೂಡ ಇದ್ದಾರೆ. 2010ರಲ್ಲಿ ಮುಂಬೈ ತಂಡದ ಪರವೇ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದ ಪೊಲಾರ್ಡ್ ಅವರನ್ನು ಇದೀಗ ಫ್ರಾಂಚೈಸಿ ಕೈಬಿಟ್ಟಿದೆ. ಇದರ ಬೆನ್ನಲ್ಲೇ ಪೊಲಾರ್ಡ್ ಮಹತ್ವದ ಘೋಷಣೆ ಮಾಡಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿಢೀರ್ ವಿದಾಯ ಘೋಷಿಸಿದ್ದಾರೆ. ಇನ್ನುಮುಂದೆ ಐಪಿಎಲ್​ನಲ್ಲಿ ನಾನು ಕಣಕ್ಕಿಳಿಯುವುದಿಲ್ಲ ಎಂದಿರುವ ಪೊಲಾರ್ಡ್ ಕೇವಲ ಮುಂಬೈ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

”ನಾನು ತೆಗೆದುಕೊಂಡಿರುವುದು ಸುಲಭವಾದ ನಿರ್ಧಾರವಲ್ಲ, ಆದರೆ ತುಂಬಾ ಸಾಧಿಸಿದ ಈ ಅದ್ಭುತ ಫ್ರ್ಯಾಂಚೈಸಿಯಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಇನ್ನು ಮುಂದೆ ಮುಂಬೈಗಾಗಿ ನಾನು ಆಡಲು ಆಗದಿದ್ದರೆ ನಾನು ನಾನು ಅವರ ವಿರುದ್ಧವೂ ಆಡುವುದನ್ನು ನೋಡಲು ಸಾಧ್ಯವಿಲ್ಲ. ನಾನು ಮುಂಬೈ ಇಂಡಿಯನ್ಸ್ ತಂಡದವನೇ ಆಗಿರುತ್ತೇನೆ,” ಎಂದು ಪೊಲಾರ್ಡ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
ಇಂದು IPL 2023 Retention: ಯಾರು ಇನ್?, ಯಾರು ಔಟ್?: ಎಷ್ಟು ಗಂಟೆಗೆ?, ಲೈವ್ ವೀಕ್ಷಿಸುವುದು ಹೇಗೆ?
India vs New Zealand: ಭಾರತ ವಿರುದ್ಧದ ಟಿ20, ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ: ಇಬ್ಬರು ಸ್ಟಾರ್ ಪ್ಲೇಯರ್ಸ್​ಗೆ ಕೊಕ್
IPL 2023 Auction: ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಐಪಿಎಲ್ 2023 ಹರಾಜಿಗೆ ಹೆಸರು ಸೂಚಿಸಿದ ಇಬ್ಬರು ಸ್ಟಾರ್ ಇಂಗ್ಲೆಂಡ್ ಪ್ಲೇಯರ್ಸ್
IPL 2023: ಐಪಿಎಲ್ 2023 ಹರಾಜಿಗೂ ಮುನ್ನ ಎಲ್ಲ 10 ಫ್ರಾಂಚೈಸಿ ಬಿಡುಗಡೆ ಮಾಡಲಿರುವ ಆಟಗಾರರ ಪಟ್ಟಿ ಇಲ್ಲಿದೆ

 

ಐಪಿಎಲ್‌ 2022 ಟೂರ್ನಿಯಲ್ಲಿ ಪೊಲಾರ್ಡ್ ಕಡೆಯಿಂದ ಉತ್ತಮ ಪ್ರದರ್ಶನ ಬಂದಿರಲಿಲ್ಲ. ಹೀಗಾಗಿ ಎಂಐ ತಂಡ ಐಪಿಎಲ್ 2023 ಹರಾಜಿಗೂ ಮುನ್ನ ಇವರನ್ನು ಕೈಬಿಟ್ಟಿತ್ತು. 2010ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ್ದ ಸ್ಟಾರ್ ಆಲ್‌ರೌಂಡರ್‌ ಕೈರೊನ್ ಪೊಲಾರ್ಡ್, ಇಲ್ಲಿಯವರೆಗೂ ಈ ಫ್ರಾಂಚೈಸಿಯ ಕೀ ಆಟಗಾರರಾಗಿದ್ದರು. ಅದರಂತೆ ಅವರು ಮುಂಬೈ ಇಂಡಿಯನ್ಸ್‌ 5 ಬಾರಿ ಚಾಂಪಿಯನ್‌ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಐಪಿಎಲ್‌ ಟೂರ್ನಿಯಲ್ಲಿ 189 ಪಂದ್ಯಗಳಾಡಿರುವ ಕೈರೊನ್‌ ಪೊಲಾರ್ಡ್‌ 3412 ರನ್‌ಗಳು ಹಾಗೂ 69 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

2022ರ ಐಪಿಎಲ್‌ಗೆ ಮುಂಚಿತವಾಗಿ ಪೊಲಾರ್ಡ್ ಅವರನ್ನು ಮುಂಬೈ ಇಂಡಿಯನ್ಸ್ 6 ಕೋಟಿ ರೂ.ಗೆ ರಿಟೇನ್ ಮಾಡಿಕೊಂಡಿತ್ತು. ಆದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಪೊಲಾರ್ಡ್, ಐಪಿಎಲ್‌ನ ಯಶಸ್ವಿ ತಂಡದ ಪರ ಅಬ್ಬರಿಸಲು ವಿಫಲರಾದರು. ಕಳೆದ ಸೀಸನ್​ನಲ್ಲಿ ಆಡಿದ 11 ಪಂದ್ಯಗಳಲ್ಲಿ 107ರ ಸ್ಟ್ರೈಕ್ ರೇಟ್‌, 15ಕ್ಕಿಂತ ಕಡಿಮೆ ಸರಾಸರಿಯಲ್ಲಿ ಕೇವಲ 144 ರನ್ ಗಳಿಸಿದರು. ಇದು ಮುಂಬೈ ಇಂಡಿಯನ್ಸ್ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಗಲು ಕಾರಣವಾಯಿತು.

ಈ ಬಾರಿ ಮುಂಬೈ ಇಂಡಿಯನ್ಸ್‌ ಉಳಿಸಿಕೊಂಡಿರುವ ಆಟಗಾರರು: ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೇನಿಯಲ್ ಸ್ಯಾಮ್ಸ್, ಟಿಮ್ ಡೇವಿಡ್, ಜೋಪ್ರಾ ಆರ್ಚರ್, ಜಸ್‌ಪ್ರೀತ್ ಬುಮ್ರಾ, ಟ್ರಿಸ್ಟನ್ ಸ್ಟಬ್ಸ್, ತಿಲಕ್ ವರ್ಮಾ.

ಬಿಡುಗಡೆ ಮಾಡಿದ ಆಟಗಾರರು: ಫ್ಯಾಬಿಯನ್‌ ಆಲೆನ್‌, ಕೈರೊನ್‌ ಪೊಲಾರ್ಡ್‌, ಟೈಮಲ್‌ ಮಿಲ್ಸ್‌, ಮಯಾಂಕ್‌ ಮಾರ್ಕಂಡೆ ಹಾಗೂ ಹೃತಿಕ್‌ ಶೋಕಿನ್‌.

Published On - 2:23 pm, Tue, 15 November 22