ವೆಸ್ಟ್ ಇಂಡೀಸ್ನ ಬ್ಯಾಟಿಂಗ್ ದೈತ್ಯ ಕೀರನ್ ಪೊಲಾರ್ಡ್ ತಮ್ಮ ಆಟದ ಮೂಲಕ ಎಷ್ಟು ಸುದ್ದಿಯಾಗುತ್ತಾರೋ, ನಡವಳಿಕೆಯಿಂದಲೂ ಅಷ್ಟೇ ಸುದ್ದಿಯಾಗುತ್ತಾರೆ. ಮೈದಾನದಲ್ಲಿ ಅಂಪೈರ್ ವಿರುದ್ಧ ಅಸಮಾಧಾನವನ್ನು ತೋರಿಸಲು ಕೂಡ ಅವರು ಹಿಂದೆ ಮುಂದೆ ನೋಡುವುದಿಲ್ಲ. ಈ ಹಿಂದೆ ಐಪಿಎಲ್ಗಳಲ್ಲೂ ಅವರು ಹೀಗೆ ವರ್ತಿಸಿ ಸುದ್ದಿಯಾಗಿದ್ದಿದೆ. ಪ್ರಸ್ತುತ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್)ನಲ್ಲೂ, ಕೆಟ್ಟ ಅಂಪೈರಿಂಗ್ ವಿರುದ್ಧ ವಿಭಿನ್ನವಾಗಿ ಆಕ್ರೋಶ ವ್ಯಕ್ತಪಡಿಸಿ ಸುದ್ದಿಯಾಗಿದ್ದಾರೆ.
ಸಿಪಿಎಲ್ನಲ್ಲಿ ಪೊಲಾರ್ಡ್ ಟ್ರಿನ್ಬಾಗೋ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸುತ್ತಾರೆ. ಸರಣಿಯ ಒಂಬತ್ತನೇ ಪಂದ್ಯದಲ್ಲಿ ನೈಟ್ ರೈಡರ್ಸ್ ಹಾಗೂ ಲೂಸಿಯಾ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದಿದ್ದ ನೈಟ್ ರೈಡರ್ಸ್, 12ನೇ ಓವರ್ ಮುಕ್ತಾಯದ ವೇಳೆಗೆ 68 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಜೊತೆಯಾದ ಕಪ್ತಾನ ಕೀರನ್ ಪೊಲಾರ್ಡ್ ಹಾಗೂ ಟಿಮ್ ಸೈಫರ್ಟ್ ತಂಡವನ್ನು ಆಧರಿಸಿದರು.
ಡೆತ್ ಓವರ್ನಲ್ಲಿ ಸಾಧ್ಯವಾದಷ್ಟು ರನ್ ಪೇರಿಸಲು ಪೊಲಾರ್ಡ್, ಸೈಫರ್ಟ್ ಪ್ರಯತ್ನಿಸುತ್ತಿದ್ದರು. 19ನೇ ಓವರ್ ಬೌಲ್ ಮಾಡಿದ ವಹಾಬ್ ರಿಯಾಜ್ ತಮ್ಮ ಐದನೇ ಎಸೆತದಲ್ಲಿ ವೈಡ್ ಯಾರ್ಕರ್ ಬೌಲ್ ಮಾಡಲು ಯತ್ನಿಸಿದರು. ಅದು ವೈಡ್ ಲೈನ್ಗಿಂತ ಆಚೆ ಬಿತ್ತು. ಬ್ಯಾಟಿಂಗ್ ಮಾಡುತ್ತಿದ್ದ ಸೈಫರ್ಟ್ ಬಿದ್ದು, ಅದನ್ನು ಹೊಡೆಯಲು ಪ್ರಯತ್ನಿಸಿದರೂ ಅವರಿಗೆ ಬಾಲ್ ಸಿಗಲಿಲ್ಲ. ಆದರೆ ಅಂಪೈರ್ ಅದನ್ನು ವೈಡ್ ಎಂದು ಘೋಷಿಸಲಿಲ್ಲ. ಇದು ನಾನ್ ಸ್ಟ್ರೈಕರ್ ಎಂಡ್ನಲ್ಲಿದ್ದ ಪೊಲಾರ್ಡ್ರನ್ನು ಕೆರಳಿಸಿತು. ಅಸಮಾಧಾನಗೊಂಡ ಪೊಲಾರ್ಡ್ ನೇರವಾಗಿ ಹೋಗಿ 30 ಯಾರ್ಡ್ ಸರ್ಕಲ್ನ ಸಮೀಪ ನಿಂತುಕೊಂಡರು. ಸದ್ಯ, ಪೊಲಾರ್ಡ್ ಅವರ ಈ ವಿಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಪೊಲಾರ್ಡ್ ಅಸಮಾಧಾನ ವ್ಯಕ್ತಪಡಿಸಿದ ವಿಡಿಯೊ:
Polly : Are you blind?
Umpire : Yes
Pollard walks away ??? #TKRvSLK #CPL2021 @KieronPollard55 pic.twitter.com/NGjSdMqmYu— Thakur (@hassam_sajjad) August 31, 2021
ಪಂದ್ಯದಲ್ಲಿ ಪೊಲಾರ್ಡ್ ಹಾಗೂ ಸೈಫರ್ಟ್ ಆಟದಿಂದಾಗಿ ನೈಟ್ ರೈಡರ್ಸ್ ತಂಡ ಅಂತಿಮವಾಗಿ 158 ರನ್ ಕಲೆ ಹಾಕಿತು. ನಾಯಕ ಪೊಲಾರ್ಡ್ 29 ಎಸೆತಗಳಲ್ಲಿ 41 ರನ್ ಸಿಡಿಸಿದರೆ, ಸೈಫರ್ಟ್ 25 ಎಸೆತಗಳಲ್ಲಿ 37 ರನ್ ಗಳಿಸಿದರು. ಇವರೀವರ್ವರೂ ಐದನೇ ವಿಕೆಟ್ ಜೊತೆಯಾಟದಲ್ಲಿ 78 ರನ್ ಪೇರಿಸಿದರು.
ಇದನ್ನೂ ಓದಿ:
Afghanistan Cricket: ಅಫ್ಘಾನಿಸ್ತಾನದ ಕ್ರಿಕೆಟ್ ಕುರಿತಾಗಿ ಹೊಸ ಆದೇಶ ಹೊರಡಿಸಿದ ತಾಲಿಬಾನ್
Viral Video: ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗೆ ಎಚ್ಚರಿಕೆ ನೀಡಿದ ಪೊಲಾರ್ಡ್
(Kieron Pollard walks away when umpire denies to give wide in CPL)
Published On - 12:33 pm, Wed, 1 September 21