IPL 2021, KKR vs DC: ಪ್ಲೇ ಆಫ್ ಖಚಿತ ಪಡಿಸಿರುವ ಡೆಲ್ಲಿ ತಂಡಕ್ಕೆ ಕೋಲ್ಕತ್ತಾ ಸವಾಲು: ಮಾರ್ಗನ್ ಪಡೆಗೆ ಅಗ್ನಿಪರೀಕ್ಷೆ
ಉಭಯ ತಂಡಗಳು ಈವರೆಗೆ ಐಪಿಎಲ್‌ನಲ್ಲಿ 26 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 12 ಪಂದ್ಯಗಳಲ್ಲಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 14 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.
14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು (IPL 2021) ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಇಯಾನ್ ಮಾರ್ಗನ್ (Eion Morgan) ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಿಷಭ್ ಪಂತ್ (Rishabh Pant) ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು (KKR vs DC) ಮುಖಾಮುಖಿ ಆಗುತ್ತಿದೆ. ಈಗಾಗಲೇ ಪ್ಲೇ ಆಫ್ ಖಚಿತ ಪಡಿಸಿಕೊಂಡಿರುವ ಡೆಲ್ಲಿ ನಂಬರ್ ಒನ್ ಸ್ಥಾನಕ್ಕೇರಲು ಗೆಲ್ಲುವ ಯೋಚನೆಯಲ್ಲಿದ್ದರೆ, ಇತ್ತ ಕೆಕೆಆರ್ಗೆ ಇದು ಮಹತ್ವದ್ದಾಗಿದೆ. ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಲು ಈ ಪಂದ್ಯ ಗೆಲ್ಲ ಬೇಕಾದ ಒತ್ತಡದಲ್ಲಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ (Sharjah Cricket Stadium) ಈ ಪಂದ್ಯ ನಡೆಯಲಿದ್ದು, ಪಂತ್ ಪಡೆಯ ಗೆಲುವಿನ ಓಟಕ್ಕೆ ಕೆಕೆಆರ್ ಬ್ರೇಕ್ ಹಾಕಿ ಗೆಲುವಿನ ಲಯಕ್ಕೆ ಮರಳುತ್ತಾ ಎಂಬುದು ಕುತೂಹಲ ಕೆರಳಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಈವರೆಗೆ ಒಟ್ಟು 10 ಪಂದ್ಯಗಳನ್ನು ಆಡಿದ್ದು ಎಂಟರಲ್ಲಿ ಗೆಲುವು ಕಂಡಿದೆ. ಕೇವಲ ಎರಡು ಪಂದ್ಯಗಳಲ್ಲಷ್ಟೆ ಸೋತಿದೆ. ಒಟ್ಟು 16 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ +0.711 ನೆಟ್ರೇಟ್ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಒಟ್ಟು 10 ಪಂದ್ಯಗಳನ್ನು ಆಡಿದ್ದು ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆರು ಪಂದ್ಯಗಳಲ್ಲಿ ಸೋತಿದೆ. ಒಟ್ಟು 8 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ +0.322 ನೆಟ್ರೇಟ್ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಕೋಲ್ಕತ್ತಾ ತಂಡ ಈ ಬಾರಿ ಯುಎಇನಲ್ಲಿ ಆಡಿದ ಮೂರು ಪಂದ್ಯಗಳ ಪೈಕಿ ಒಂದರಲ್ಲಷ್ಟೆ ಸೋತಿದೆ. ಆದರೂ ಸೋತ ಚೆನ್ನೈ ವಿರುದ್ಧ ಕೊನೇಯ ಎಸೆತದ ವರೆಗೂ ಹೋರಾಟ ನಡೆಸಿತ್ತು. ವೆಂಕಟೇಶ್ ಅಯ್ಯರ್, ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ ಅವರಂಥ ಭಾರತೀಯ ಬ್ಯಾಟ್ಸ್‌ಮನ್‌ಗಳು ಮಿಂಚುತ್ತಿರುವುದು ಕೆಕೆಆರ್ ಬಲ ಹೆಚ್ಚಿಸಿದೆ. ಇಯಾನ್ ಮಾರ್ಗನ್ ಹಾಗೂ ದಿನೇಶ್ ಕಾರ್ತಿಕ್ ಫಾರ್ಮ್ ಕಂಡುಕೊಂಡರೆ ಕೆಕೆಆರ್ ಮತ್ತಷ್ಟು ಬಲಿಷ್ಠವಾಗಿದೆ.
ಆಂಡ್ರೆ ರಸೆಲ್ ಸ್ನಾಯು ಸೆಳೆತದ ಸಮಸ್ಯೆಯಿಂದಾಗಿ ಕಳೆದ ಪಂದ್ಯದಲ್ಲಿ 4 ಓವರ್ ಕೋಟಾ ಪೂರ್ಣಗೊಳಿಸದೆ ಮೈದಾನ ತೊರೆದಿದ್ದರು. ಹೀಗಾಗಿ ಇವರು ಇಂದಿನ ಪಂದ್ಯಕ್ಕೆ ಲಭ್ಯವಿರುವುದು ಅನುಮಾನ. ಇವರ ಬದಲು ಶಕೀಬ್ ಅಲ್ ಹಸನ್ ಅಥವಾ ಬೆನ್ ಕಟ್ಟಿಂಗ್ ಆಡಬಹುದು. ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ಸ್ಪಿನ್ ಮ್ಯಾಜಿಕ್ ತಂಡಕ್ಕೆ ಸಹಕಾರಿಯಾಗುತ್ತಿದೆ. ವೇಗಿಗಳು ಇವರಿಗೆ ಸಾಥ್ ನೀಡಬೇಕಿದೆ.
ಇತ್ತ ಭರ್ಜರಿ ಫಾರ್ಮ್ನಲ್ಲಿರುವ ಡೆಲ್ಲಿ ತಂಡಕ್ಕೆ ಶಿಖರ್ ಧವನ್, ಪೃಥ್ವಿ ಷಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಅವರೇ ಶಕ್ತಿಯಾಗಿದ್ದಾರೆ ಎಂಬುದು ಗಮನಾರ್ಹ. ಇನ್ನು ಉಭಯ ತಂಡಗಳೂ ಬೌಲಿಂಗ್ ವಿಭಾಗದಲ್ಲಿ ವಿದೇಶಿ ಆಟಗಾರರನ್ನು ಹೆಚ್ಚು ನೆಚ್ಚಿಕೊಂಡಿವೆ. ಫಿಟ್ನೆಸ್ ಸಮಸ್ಯೆಯಿಂದ ಮಾರ್ಕಸ್ ಸ್ಟೋಯಿನಿಸ್ ಕಳೆದ ಪಂದ್ಯ ತಪ್ಪಿಸಿಕೊಂಡಾಗ ವಿದೇಶಿ ಆಟಗಾರರಿಗೆ ಬದಲಾಗಿ ಲಲಿತ್ ಯಾದವ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ 4ನೇ ವಿದೇಶಿ ಆಟಗಾರರಾಗಿ ಸ್ಯಾಮ್ ಬಿಲ್ಲಿಂಗ್ಸ್ ಕಣಕ್ಕಿಳಿಯುವ ಸಾಧ್ಯತೆ ಇದೆ.
ಉಭಯ ತಂಡಗಳು ಈವರೆಗೆ ಐಪಿಎಲ್‌ನಲ್ಲಿ 26 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 12 ಪಂದ್ಯಗಳಲ್ಲಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 14 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.
IPL 2021: ರಾಜಸ್ತಾನ ವಿರುದ್ಧದ ಪಂದ್ಯದಲ್ಲಿ ದಾಖಲೆ ಬರೆದ ಭುವನೇಶ್ವರ್! ಈ ಸಾಧನೆ ಮಾಡಿದ ಮೂರನೇ ಬೌಲರ್
ಟಿ20 ವಿಶ್ವಕಪ್ಗೆ ಆಯ್ಕೆ.. ಐಪಿಎಲ್‌ನಲ್ಲಿ ಫ್ಲಾಫ್! ಟೀಂ ಇಂಡಿಯಾಗೆ ತಲೆನೋವಾದ ಮುಂಬೈ ಆಟಗಾರರು
(KKR vs DC Kolkata Knight Riders agenda when they will square off against Delhi Capitals in the 41st match IPL 2021)
Published On - 7:06 am, Tue, 28 September 21