
ಕೋಲ್ಕತ್ತಾ ನೈಟ್ ರೈಡರ್ಸ್ ಈ ಬಾರಿ ಐಪಿಎಲ್‌ನಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಕೊನೆಯ ಎಸೆತದವರೆಗೂ ರೋಚಕತೆ ಸೃಷ್ಟಿಸಿದ ಈ ಪಂದ್ಯದಲ್ಲಿ ಕೊನೆಗೂ ಲಕ್ನೋ ತಂಡ 1 ರನ್ಗಳಿಂದ ರೋಚಕ ಗೆಲುವು ಸಾಧಿಸಿ ಪ್ಲೇ ಆಫ್ಗೆ ಟಿಕೆಟ್ ಖಚಿತಪಡಿಸಿಕೊಂಡಿತು. ಕೆಕೆಆರ್ ಪರ ಏಕಾಂಗಿ ಹೋರಾಟ ನಡೆಸಿದ ರಿಂಕು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಪೂರನ್ ಅವರ ಅರ್ಧಶತಕದ ನೆರವಿನಿಂದ 176 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ಪರ ರಿಂಕು ಅರ್ಧಶತಕದ ಏಕಾಂಗಿ ಹೋರಾಟ ನಡೆಸಿತ್ತಾದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಇದೀಗ ಕೊನೆಯ ಪಂದ್ಯ ಗೆದ್ದ ಲಕ್ನೋ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.
20ನೇ ಓವರ್ನಲ್ಲಿ 19 ರನ್ ಬಂದವು
ಈ ಓವರ್ನಲ್ಲಿ ರಿಂಕು 2 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರಾದರೂ ಕೆಕೆಆರ್ಗೆ ಗೆಲುವು ಸಿಗಲಿಲ್ಲ
ಇನ್ನು 1 ರನ್ಗಳಿಂದ ಗೆದ್ದ ಲಕ್ನೋ ಪ್ಲೇ ಆಫ್ಗೆ ಟಿಕೆಟ್ ಖಚಿತ ಪಡಿಸಿಕೊಂಡಿದೆ.
19ನೇ ಓವರ್‌ನ ಐದನೇ ಎಸೆತದಲ್ಲಿ ರಿಂಕು ಸಿಂಗ್ ಸಿಕ್ಸರ್ ಬಾರಿಸಿ ಅರ್ಧಶತಕ ಪೂರೈಸಿದರು.
18ನೇ ಓವರ್‌ನ ಕೊನೆಯ ಎಸೆತದಲ್ಲಿ ಕೋಲ್ಕತ್ತಾಗೆ ಏಳನೇ ಹೊಡೆತ ಬಿದ್ದಿತು. ಸುನಿಲ್ ನರೈನ್ ರನೌಟ್ ಆದರು.
18ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಶಾರ್ದೂಲ್ ಠಾಕೂರ್ ಅವರನ್ನು ಔಟ್ ಮಾಡುವ ಮೂಲಕ ಯಶ್ ಠಾಕೂರ್ ಕೋಲ್ಕತ್ತಾಗೆ ಆರನೇ ಹೊಡೆತ ನೀಡಿದರು. ಶಾರ್ದೂಲ್ ಠಾಕೂರ್ ಡೀಪ್ ಸ್ಕ್ವೇರ್ ಲೆಗ್ನಲ್ಲಿ ಪ್ರೇರಕ್ ಮಂಕಡ್ಗೆ ಕ್ಯಾಚ್ ನೀಡಿದರು.
ಶಾರ್ದೂಲ್ ಠಾಕೂರ್ – 3 ರನ್, 7 ಎಸೆತಗಳು
16ನೇ ಓವರ್‌ನ 3ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ರಸೆಲ್, ಮುಂದಿನ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಇದರೊಂದಿಗೆ ಕೆಕೆಆರ್ 5ನೇ ವಿಕೆಟ್ ಕಳೆದುಕೊಂಡಿತು.
16 ಓವರ್ ಅಂತ್ಯಕ್ಕೆ 120/5
15ನೇ ಓವರ್ನಲ್ಲಿ 6 ರನ್ ಬಂದವು
ಓವರ್‌ನ 6ನೇ ಎಸೆತದಲ್ಲಿ ರಿಂಕು ಡೀಪ್ ಪಾಯಿಂಟ್ನಲ್ಲಿ ಬೌಂಡರಿ ಬಾರಿಸಿದರು.
15 ಓವರ್ ಅಂತ್ಯಕ್ಕೆ 114/4
ಕೆಕೆಆರ್ 4ನೇ ವಿಕೆಟ್ ಕಳೆದುಕೊಂಡಿದೆ.
14ನೇ ಓವರ್‌ನ 4ನೇ ಎಸೆತದಲ್ಲಿ ಗುರ್ಬಾಜ್ ಕ್ಯಾಚಿತ್ತು ಔಟಾದರು.
ಗುರ್ಬಾಜ್ 10 (15)
ಕೆಕೆಆರ್ 108/4
12ನೇ ಓವರ್‌ನ 2ನೇ ಎಸೆತವನ್ನು ರಿಂಕು ಲಾಂಗ್ ಆಫ್ನಲ್ಲಿ ಬೌಂಡರಿಗಟ್ಟಿದರು.
ಇದರೊಂದಿಗೆ ಕೆಕೆಆರ್ ಶತಕ ಕೂಡ ಪೂರೈಸಿತು.
12 ಓವರ್ ಅಂತ್ಯಕ್ಕೆ ಕೆಕೆಆರ್ 103/3
ಕೆಕೆಆರ್ 3ನೇ ವಿಕೆಟ್ ಪತನವಾಗಿದೆ
ಕೃನಾಲ್ ಬೌಲ್ ಮಾಡಿದ 10ನೇ ಓವರ್‌ನ ಕೊನೆಯ ಎಸೆತದಲ್ಲಿ ರಾಯ್ ಕ್ಲೀನ್ ಬೌಲ್ಡ್ ಆದರು.
ರಾಯ್ 45 (28)
ಕೆಕೆಆರ್ 2ನೇ ವಿಕೆಟ್ ಪತನವಾಗಿದೆ.
ಬಿಷ್ಣೋಯಿ ಬೌಲ್ ಮಾಡಿದ 8ನೇ ಓವರ್‌ನ 2ನೇ ಎಸೆತದಲ್ಲಿ ರಾಣಾ ಕ್ಯಾಚಿತ್ತು ಔಟಾದರು.
ಕೆಕೆಆರ್ 78/2
ಕೃನಾಲ್ ಬೌಲ್ ಮಾಡಿದ 7ನೇ ಓವರ್‌ನ 5ನೇ ಎಸೆತವನ್ನು ರಾಣಾ ಫೈನ್ ಲೆಗ್ ಮೇಲೆ ಬೌಂಡರಿ ಬಾರಿಸಿದರು.
7 ಓವರ್ ಅಂತ್ಯಕ್ಕೆ 69/1
ಕೆಕೆಆರ್ ಮೊದಲ ವಿಕೆಟ್ ಪತನವಾಗಿದೆ.
6ನೇ ಓವರ್‌ನ 5ನೇ ಎಸೆತದಲ್ಲಿ ವೆಂಕಿ ರವಿಗೆ ಕ್ಯಾಚಿತ್ತು ಔಟಾದರು.
ಇದರೊಂದಿಗೆ ಕೆಕೆಆರ್ನ ಪವರ್ ಪ್ಲೇ ಕೂಡ ಮುಗಿದಿದೆ.
ಕೃನಾಲ್ ಬೌಲ್ ಮಾಡಿದ 5ನೇ ಓವರ್ನಲ್ಲಿ 3 ಬೌಂಡರಿ ಬಂದವು
ಈ ಮೂರು ಬೌಂಡರಿಗಳನ್ನು ರಾಯ್ ಬಾರಿಸಿದರು
5 ಓವರ್ ಅಂತ್ಯಕ್ಕೆ 59/0
2ನೇ ಓವರ್ನಲ್ಲೂ ಬೌಂಡರಿ ಮಳೆಗರೆಯಿತು
ಓವರ್‌ನ 2,3,4 ನೇ ಎಸೆತದಲ್ಲಿ ರಾಯ್ 1 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿದರು.
ಕೆಕೆಆರ್ 30/0
ಮೊದಲ ಓವರ್ನಲ್ಲೇ ವೆಂಕಿ ಅಬ್ಬರ ಶುರುವಾಗಿದೆ.
ಮೌಹ್ಸಿನ್ ಎಸೆದ ಮೊದಲ ಓವರ್ನಲ್ಲಿ 2 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ಬಂತು
ಕೆಕೆಆರ್ 15/0
ರಸೆಲ್ ಬೌಲ್ ಮಾಡಿದ 20ನೇ ಓವರ್ನಲ್ಲಿ 13 ರನ್ ಬಂದವು
ಈ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಗೌತಮ್ 1 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು.
ಇದರೊಂದಿಗೆ ಲಕ್ನೋ 176 ರನ್ ಟಾರ್ಗೆಟ್ ಸೆಟ್ ಮಾಡಿದೆ.
ಪೂರನ್ ವಿಕೆಟ್ ಬಳಿಕ ಬಂದಿದ್ದ ಬಿಷ್ಣೋಯಿ ಕೂಡ 19ನೇ ಓವರ್‌ನ 5ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಲಕ್ನೋ 162/8
19ನೇ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ ಪೂರನ್ 3ನೇ ಎಸೆತವನ್ನು ಸಿಕ್ಸರ್ಗಟ್ಟುವ ಯತ್ನದಲ್ಲಿ ಕ್ಯಾಚಿತ್ತು ಔಟಾದರು.
ಲಕ್ನೋ 159/7
19ನೇ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್ಗಟ್ಟಿದ ಪೂರನ್ ತಮ್ಮ ಅರ್ಧಶತಕ ಪೂರೈಸಿದರು.
18ನೇ ಓವರ್‌ನ 4 ಮತ್ತು 5ನೇ ಎಸೆತವನ್ನು ಬೌಂಡರಿಗಟ್ಟಿದ ಬದೋನಿ, ಕೊನೆಯ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿ ಕ್ಯಾಚಿತ್ತು ಔಟಾದರು.
ಲಕ್ನೋ 147/6
18ನೇ ಓವರ್‌ನ 4ನೇ ಎಸೆತವನ್ನು ಬೌಂಡರಿಗಟ್ಟಿದ ಬದೋನಿ 5ನೇ ಎಸೆತವನ್ನು ಸಿಕ್ಸರ್ಗಟ್ಟಿದರು.
17ನೇ ಓವರ್ನಲ್ಲಿ 11 ರನ್ ಬಂದವು
ಈ ಓವರ್‌ನ 5ನೇ ಎಸೆತವನ್ನು ಪೂರನ್ ಬೌಂಡರಿಗಟ್ಟಿದರು.
17 ಓವರ್ ಅಂತ್ಯಕ್ಕೆ ಲಕ್ನೋ 133/5
15ನೇ ಓವರ್ನಲ್ಲಿ 12 ರನ್ ಬಂದವು
ಈ ಓವರ್‌ನ ಮೊದಲ ಮತ್ತು ಕೊನೆಯ ಎಸೆತದಲ್ಲಿ ಪೂರನ್ ಬೌಂಡರಿ ಬಾರಿಸಿದರು.
15 ಓವರ್ ಅಂತ್ಯಕ್ಕೆ 119/5
ವರುಣ್ ಬೌಲ್ ಮಾಡಿದ 13ನೇ ಓವರ್‌ನ ಮೊದಲ ಎಸೆತವನ್ನು ಪೂರನ್ ಸಿಕ್ಸರ್ಗಟ್ಟಿದರು.
ಅಲ್ಲದೆ ಇದೇ ಓವರ್ನಲ್ಲಿ ಲಕ್ನೋ ಶತಕ ಕೂಡ ಪೂರೈಸಿತು.
13 ಓವರ್ ಅಂತ್ಯಕ್ಕೆ ಲಕ್ನೋ 100/5
ಡಿ ಕಾಕ್ ವಿಕೆಟ್ ಬಳಿಕ ಬಂದ ಪೂರನ್ 11ನೇ ಓವರ್ನಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು.
ಲಕ್ನೋದ ಸ್ಥಿತಿ ಹದಗೆಟ್ಟಿದೆ. ಕ್ವಿಂಟನ್ ಡಿಕಾಕ್ ರೂಪದಲ್ಲಿ ಐದನೇ ವಿಕೆಟ್ ಕಳೆದುಕೊಂಡಿದೆ.
11ನೇ ಓವರ್‌ನ ಮೊದಲ ಎಸೆತದಲ್ಲಿ ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಆಂಡ್ರೆ ರಸೆಲ್ಗೆ ಕ್ಯಾಚಿತ್ತು ಡಿ ಕಾಕ್ ಔಟಾದರು.
ಕ್ವಿಂಟನ್ ಡಿಕಾಕ್ – 28 ರನ್, 27 ಎಸೆತಗಳು 2×6
ಲಕ್ನೋ 4ನೇ ವಿಕೆಟ್ ಪತನವಾಗಿದೆ.
ನರೈನ್ ಬೌಲ್ ಮಾಡಿದ 10ನೇ ಓವರ್ 4ನೇ ಎಸೆತದಲ್ಲಿ ಕೃನಾಲ್ ಕ್ಯಾಚಿತ್ತು ಔಟಾದರು.
ಕೃನಾಲ್ 9 (8)
ಕೆಕೆಆರ್ 74/4
ಪ್ರಮುಖ 3 ವಿಕೆಟ್ ಕಳೆದುಕೊಂಡಿರುವ ಲಕ್ನೋ 9 ಓವರ್ ಮುಕ್ತಾಯಕ್ಕೆ 69 ರನ್ ಗಳಿಸಿದೆ.
ಶಾರ್ದೂಲ್ ಬೌಲ್ ಮಾಡಿದ ಈ ಓವರ್ನಲ್ಲಿ 11 ರನ್ ಬಂದವು
ಈ ಓವರ್‌ನ 3ನೇ ಎಸೆತವನ್ನು ಕೃನಾಲ್ ಲಾಂಗ್ ಆಫ್ನಲ್ಲಿ ಸಿಕ್ಸರ್ಗಟ್ಟಿದರು.
ಲಕ್ನೋಗೆ ದೊಡ್ಡ ಹೊಡೆತ ಬಿದ್ದಿದೆ. ಮಾರ್ಕಸ್ ಸ್ಟೊಯಿನಿಸ್ ಔಟಾಗಿದ್ದಾರೆ.
ಏಳನೇ ಓವರ್‌ನ ಐದನೇ ಎಸೆತದಲ್ಲಿ ಅರೋರಾ ಅವರಿಗೆ ಕ್ಯಾಚ್ ನೀಡಿದರು.
ಸ್ಟೊಯಿನಿಸ್‌ಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ.
ಏಳನೇ ಓವರ್‌ನ ಮೂರನೇ ಎಸೆತದಲ್ಲಿ ಪ್ರೇರಕ್ ಮಂಕಡ್ ಔಟಾದರು.
ಇದರೊಂದಿಗೆ ಕೋಲ್ಕತ್ತಾ ಎರಡನೇ ವಿಕೆಟ್ ಕಳೆದುಕೊಂಡಿದೆ.
ವೈಭವ್ ಅರೋರಾ ಎಸೆತದಲ್ಲಿ ಹರ್ಷಿತ್ ಕ್ಯಾಚ್ ಹಿಡಿದರು.
ಪ್ರೇರಕ್ ಮಂಕಡ್: 26 ರನ್, 20 ಎಸೆತಗಳು 5×4
ವರುಣ್ ಬೌಲ್ ಮಾಡಿದ 6ನೇ ಓವರ್ನಲ್ಲೂ 2 ಬೌಂಡರಿ ಬಂದವು
ಈ 2ಬೌಂಡರಿಗಳನ್ನು ಮಂಕಡ್ ಬಾರಿಸಿದರು.
ಇದೇ ಓವರ್ನಲ್ಲಿ ಲಕ್ನೋ ಅರ್ಧಶತಕ ಕೂಡ ಪೂರೈಸಿತು.
6 ಓವರ್ ಅಂತ್ಯಕ್ಕೆ 54/1
5ನೇ ಓವರ್ ಬೌಲ್ ಮಾಡಿದ ರಾಣಾ 12 ರನ್ ಬಿಟ್ಟುಕೊಟ್ಟರು.
ಈ ಓವರ್ನಲ್ಲಿ 3 ಬೌಂಡರಿ ಬಂದವು.
ಲಕ್ನೋ 39/1
ಅರೋರಾ ಬೌಲ್ ಮಾಡಿದ 4ನೇ ಓವರ್‌ನ ಕೊನೆಯ ಎಸೆತವನ್ನು ಡಿ ಕಾಕ್ ಫೈನ್ ಲೆಗ್ ಮೇಲೆ ಸಿಕ್ಸರ್ಗಟ್ಟಿದರು.
ಲಕ್ನೋ 27/1
ಲಕ್ನೋದ ಮೊದಲ ವಿಕೆಟ್ ಪತನ, ಕರಣ್ ಶರ್ಮಾ 3 ರನ್ ಗಳಿಸಿ ಔಟಾದರು.
2.3 ಓವರ್‌ಗಳ ನಂತರ ಲಕ್ನೋ ಸ್ಕೋರ್ – 14/1.
ಹರ್ಷಿತ್ ರಾಣಾ ಕೋಲ್ಕತ್ತಾಗೆ ಮೊದಲ ಯಶಸ್ಸನ್ನು ನೀಡಿದರು.
ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಆರಂಭ, ಕರಣ್ ಶರ್ಮಾ ಮತ್ತು ಡಿ ಕಾಕ್ ಲಕ್ನೋ ಸೂಪರ್ ಜೈಂಟ್ಸ್‌ಗೆ ಓಪನಿಂಗ್ ಮಾಡಲು ಬಂದಿದ್ದಾರೆ. 1 ಓವರ್‌ನ ನಂತರ ಲಕ್ನೋ ಸ್ಕೋರ್ – 1/0
ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ
ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕರಣ್ ಶರ್ಮಾ, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ (ನಾಯಕ), ಆಯುಷ್ ಬದೋನಿ, ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಮೊಹ್ಸಿನ್ ಖಾನ್
ಡೆಲ್ಲಿ ತಂಡವನ್ನು 78 ರನ್ಗಳಿಂದ ಮಣಿಸಿದ ಚೆನ್ನೈ ಸುಲಭವಾಗಿ ಪ್ಲೇ ಆಫ್ಗೆ ಎಂಟ್ರಿಕೊಟ್ಟಿದೆ. ಚೆನ್ನೈ ನೀಡಿದ 223 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ 20 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 146 ರನ್ಗಳಿಸಲಷ್ಟೇ ಶಕ್ತವಾಯಿತು.
ಟಾಸ್ ಗೆದ್ದ ಕೆಕೆಆರ್ ನಾಯಕ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 7:01 pm, Sat, 20 May 23