ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 31ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ರಾಜಸ್ಥಾನ್ ರಾಯಲ್ಸ್ (RR) ತಂಡ ರೋಚಕ ಜಯ ಸಾಧಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 6 ವಿಕೆಟ್ ಕಳೆದುಕೊಂಡು 223 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡದ ಪರ ಜೋಸ್ ಬಟ್ಲರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕನಾಗಿ ಕಣಕ್ಕಿಳಿದ ಬಟ್ಲರ್ (107) ಅಜೇಯ ಶತಕ ಸಿಡಿಸುವ ಮೂಲಕ ಕೊನೆಯ ಎಸೆತದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಜಯ ತಂದುಕೊಟ್ಟರು. ಈ ಮೂಲಕ ಆರ್ಆರ್ ತಂಡವು 2 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಕುಲ್ದೀಪ್ ಸೇನ್, ಯುಜ್ವೇಂದ್ರ ಚಹಲ್.
ಕೊಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ XI): ಫಿಲಿಪ್ ಸಾಲ್ಟ್, ಸುನಿಲ್ ನರೈನ್, ಅಂಗ್ಕ್ರಿಶ್ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣ್ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣ.
ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಇದುವರೆಗೆ 29 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ವೇಳೆ ಕೆಕೆಆರ್ ತಂಡ 14 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಆರ್ಆರ್ ತಂಡ 14 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಈ ಪಂದ್ಯವು ಫಲಿತಾಂಶ ರಹಿತವಾಗಿತ್ತು.
ರಾಜಸ್ಥಾನ ರಾಯಲ್ಸ್ ತಂಡ: ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ತನುಷ್ ಕೋಟ್ಯಾನ್, ಕೇಶವ್ ಮಹಾರಾಜ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಕುಲದೀಪ್ ಸೇನ್, ಯುಜ್ವೇಂದ್ರ ಚಹಲ್, ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕಾಡ್ಮೊರೆ, ಶುಭಂ ದುಬೆ, ನವದೀಪ್ ಸೈನಿ, ಅಬಿದ್ ಮುಷ್ತಾಕ್, ರವಿಚಂದ್ರನ್ ಅಶ್ವಿನ್, ಜೋಸ್ ಬಟ್ಲರ್, ಸಂದೀಪ್ ಶರ್ಮಾ, ನಾಂಡ್ರೆ ಬರ್ಗರ್, ಡೊನೊವನ್ ಫೆರೇರಾ, ಕುನಾಲ್ ಸಿಂಗ್ ರಾಥೋಡ್.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ: ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ಅಂಗ್ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ರಮಣ್ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಸುಯಶ್ ಶರ್ಮಾ, ಅನುಕುಲ್ ರಾಯ್, ಮನೀಶ್ ಪಾಂಡೆ, ರಹಮಾನುಲ್ಲಾ ಗುರ್ಬಾಝ್, ರಿಂಕು ಸಿಂಗ್, ಅಲ್ಲಾ ಗಜನ್ಫರ್, ಸಾಕಿಬ್ ಹುಸೇನ್, ಶೆರ್ಫಾನೆ ರುದರ್ಫೋರ್ಡ್, ಚೇತನ್ ಸಕರಿಯಾ, ನಿತೀಶ್ ರಾಣಾ, ಶ್ರೀಕರ್ ಭರತ್, ದುಷ್ಮಂತ ಚಮೀರಾ.
ಕೊನೆಯ ಓವರ್ನಲ್ಲಿ ಸಿಕ್ಸ್ನೊಂದಿಗೆ 9 ರನ್ ಬಾರಿಸಿದ ಜೋಸ್ ಬಟ್ಲರ್.
ಆರಂಭಿಕನಾಗಿ ಕಣಕ್ಕಿಳಿದು 60 ಎಸೆತಗಳಲ್ಲಿ ಅಜೇಯ 107 ರನ್ ಬಾರಿಸಿದ ಬಟ್ಲರ್.
ಕೊನೆಯ ಎಸೆತದಲ್ಲಿ 1 ರನ್ ಕಲೆಹಾಕುವ ಮೂಲಕ 2 ವಿಕೆಟ್ಗಳ ರೋಚಕ ಜಯ ಸಾಧಿಸಿ ರಾಜಸ್ಥಾನ್ ರಾಯಲ್ಸ್.
ಹರ್ಷಿತ್ ರಾಣ ಎಸೆದ 19ನೇ ಓವರ್ನಲ್ಲಿ 2 ಸಿಕ್ಸ್ ಹಾಗೂ 1 ಫೋರ್ನೊಂದಿಗೆ 19 ರನ್ ಚಚ್ಚಿದ ಜೋಸ್ ಬಟ್ಲರ್.
ಕೊನೆಯ ಓವರ್ನಲ್ಲಿ 9 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಜೋಸ್ ಬಟ್ಲರ್ ಹಾಗೂ ಅವೇಶ್ ಖಾನ್ ಬ್ಯಾಟಿಂಗ್.
ಕೊನೆಯ 2 ಓವರ್ಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲ್ಲಲು 28 ರನ್ಗಳ ಅವಶ್ಯಕತೆ.
18ನೇ ಓವರ್ನಲ್ಲಿ ಸ್ಟ್ರೈಕ್ ಬದಲಿಸದೇ ಏಕಾಂಗಿಯಾಗಿ ಆಡಿದ ಬಟ್ಲರ್.
ಕೊನೆಯ 12 ಎಸೆತಗಳಲ್ಲಿ ಅಬ್ಬರಿಸುವ ನಿರೀಕ್ಷೆಯಲ್ಲಿ ಜೋಸ್ ಬಟ್ಲರ್.
ಕ್ರೀಸ್ನಲ್ಲಿ ಜೋಸ್ ಬಟ್ಲರ್ ಹಾಗೂ ಅವೇಶ್ ಖಾನ್ ಬ್ಯಾಟಿಂಗ್.
ಸುನಿಲ್ ನರೈನ್ ಎಸೆದ 17ನೇ ಓವರ್ನ ಮೊದಲ ಎಸೆತದಲ್ಲಿ ಫೋರ್, 2ನೇ ಮತ್ತು 3ನೇ ಎಸೆತದಲ್ಲಿ ಸಿಕ್ಸ್ ಸಿಡಿಸಿದ ಪೊವೆಲ್.
5ನೇ ಎಸೆತದಲ್ಲಿ ರೋವ್ಮನ್ ಪೊವೆಲ್ನ ಎಲ್ಬಿಡಬ್ಲ್ಯೂ ಮಾಡಿದ ಸುನಿಲ್ ನರೈನ್.
18 ಎಸೆತಗಳಲ್ಲಿ 46 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಜೋಸ್ ಬಟ್ಲರ್ ಹಾಗೂ ಟ್ರೆಂಟ್ ಬೌಲ್ಟ್ ಬ್ಯಾಟಿಂಗ್.
ರಸೆಲ್ ಎಸೆದ 16ನೇ ಓವರ್ನ ಮೊದಲ ಎಸೆತದಲ್ಲಿ ಲೆಗ್ ಸೈಡ್ನತ್ತ ಸಿಕ್ಸ್ ಸಿಡಿಸಿದ ರೋವ್ಮನ್ ಪೊವೆಲ್.
5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಬಾರಿಸಿದ ಬಟ್ಲರ್.
16ನೇ ಓವರ್ನಲ್ಲಿ 17 ರನ್ ಕಲೆಹಾಕಿದ ಆರ್ಆರ್ ಬ್ಯಾಟರ್ಗಳು.
ಕ್ರೀಸ್ನಲ್ಲಿ ಜೋಸ್ ಬಟ್ಲರ್ ಹಾಗೂ ರೋವ್ಮನ್ ಪೊವೆಲ್ ಬ್ಯಾಟಿಂಗ್.
ವರುಣ್ ಚಕ್ರವರ್ತಿ ಎಸೆದ 15ನೇ ಓವರ್ನ 2ನೇ ಮತ್ತು 3ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಜೋಸ್ ಬಟ್ಲರ್.
ಈ ಫೋರ್ಗಳೊಂದಿಗೆ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಜೋಸ್ ಬಟ್ಲರ್.
ಆರ್ಆರ್ ತಂಡಕ್ಕೆ 30 ಎಸೆತಗಳಲ್ಲಿ 79 ರನ್ಗಳ ಅವಶ್ಯಕತೆ
14ನೇ ಓವರ್ನಲ್ಲಿ ಕೇವಲ 3 ರನ್ ಮಾತ್ರ ನೀಡಿದ ಸುನಿಲ್ ನರೈನ್.
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 6 ಓವರ್ಗಳಲ್ಲಿ 96 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಜೋಸ್ ಬಟ್ಲರ್ ಹಾಗೂ ರೋವ್ಮನ್ ಪೊವೆಲ್ ಬ್ಯಾಟಿಂಗ್.
ವರುಣ್ ಚಕ್ರವರ್ತಿ ಎಸೆದ 13ನೇ ಓವರ್ನ ಮೊದಲ ಎಸೆತದಲ್ಲಿ ಅಂಗ್ಕ್ರಿಶ್ಗೆ ಕ್ಯಾಚ್ ನೀಡಿದ ಅಶ್ವಿನ್.
11 ಎಸೆತಗಳಲ್ಲಿ 8 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ರವಿಚಂದ್ರನ್ ಅಶ್ವಿನ್.
2ನೇ ಎಸೆತದಲ್ಲಿ ಫ್ರಂಟ್ ಫೀಲ್ಡರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ ಶಿಮ್ರಾನ್ ಹೆಟ್ಮೆಯರ್ (0).
12 ಓವರ್ಗಳಲ್ಲಿ 121 ರನ್ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್.
8 ಓವರ್ಗಳಲ್ಲಿ 103 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಜೋಸ್ ಬಟ್ಲರ್ ಹಾಗೂ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್.
ಮಿಚೆಲ್ ಸ್ಟಾರ್ಕ್ ಎಸೆದ 10ನೇ ಓವರ್ನ ಮೊದಲ ಎಸೆತದಲ್ಲಿ ಲಾಂಗ್ ಆನ್ನತ್ತ ಫೋರ್ ಬಾರಿಸಿದ ಜೋಸ್ ಬಟ್ಲರ್.
10 ಓವರ್ಗಳ ಮುಕ್ತಾಯದ ವೇಳೆಗೆ 109 ರನ್ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್.
ಕ್ರೀಸ್ನಲ್ಲಿ ಜೋಸ್ ಬಟ್ಲರ್ ಹಾಗೂ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್.
ಹರ್ಷಿತ್ ರಾಣ ಎಸೆದ 8ನೇ ಓವರ್ನಲ್ಲಿ ಕ್ಯಾಚ್ ನೀಡಿದ ರಿಯಾನ್ ಪರಾಗ್.
14 ಎಸೆತಗಳಲ್ಲಿ 34 ರನ್ ಬಾರಿಸಿ ಔಟಾದ ಪರಾಗ್.
ಸುನಿಲ್ ನರೈನ್ ಎಸೆದ 9ನೇ ಓವರ್ನ 4 ಎಸೆತದಲ್ಲಿ ಧ್ರುವ್ ಜುರೇಲ್ (2) ಎಲ್ಬಿಡಬ್ಲ್ಯೂ.
ಕ್ರೀಸ್ನಲ್ಲಿ ಜೋಸ್ ಬಟ್ಲರ್ ಹಾಗೂ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್.
ಪವರ್ಪ್ಲೇನಲ್ಲಿ 76 ರನ್ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್.
7 ಓವರ್ಗಳ ಮುಕ್ತಾಯದ ವೇಳೆಗೆ 85 ರನ್ ಬಾರಿಸಿದ ಆರ್ಆರ್.
ಕ್ರೀಸ್ನಲ್ಲಿ ಜೋಸ್ ಬಟ್ಲರ್ ಹಾಗೂ ರಿಯಾನ್ ಪರಾಗ್ ಭರ್ಜರಿ ಬ್ಯಾಟಿಂಗ್.
ಹರ್ಷಿತ್ ರಾಣ ಎಸೆದ 5ನೇ ಓವರ್ನ 2ನೇ ಎಸೆತದಲ್ಲಿ ನರೈನ್ಗೆ ಕ್ಯಾಚ್ ನೀಡಿದ ಸಂಜು ಸ್ಯಾಮ್ಸನ್.
8 ಎಸೆತಗಳಲ್ಲಿ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್.
ಕ್ರೀಸ್ನಲ್ಲಿ ಜೋಸ್ ಬಟ್ಲರ್ ಹಾಗೂ ರಿಯಾನ್ ಪರಾಗ್ ಬ್ಯಾಟಿಂಗ್.
4 ಓವರ್ಗಳಲ್ಲಿ 46 ರನ್ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್.
ಕ್ರೀಸ್ನಲ್ಲಿ ಜೋಸ್ ಬಟ್ಲರ್ ಹಾಗೂ ಸಂಜು ಸ್ಯಾಮ್ಸನ್ ಬ್ಯಾಟಿಂಗ್.
9 ಎಸೆತಗಳಲ್ಲಿ 19 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಯಶಸ್ವಿ ಜೈಸ್ವಾಲ್.
ಮಿಚೆಲ್ ಮಾರ್ಷ್ ಎಸೆದ 3ನೇ ಓವರ್ನ 2ನೇ ಮತ್ತು 3ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಜೋಸ್ ಬಟ್ಲರ್.
3 ಓವರ್ಗಳ ಮುಕ್ತಾಯದ ವೇಳೆಗೆ 36 ರನ್ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್.
ಕ್ರೀಸ್ನಲ್ಲಿ ಜೋಸ್ ಬಟ್ಲರ್ ಹಾಗೂ ಸಂಜು ಸ್ಯಾಮ್ಸನ್ ಬ್ಯಾಟಿಂಗ್.
ವೈಭವ್ ಅರೋರ ಎಸೆದ 2ನೇ ಓವರ್ನ 3ನೇ ಎಸೆತದಲ್ಲಿ ಸಿಕ್ಸ್ ಸಿಡಿಸಿದ ಯಶಸ್ವಿ ಜೈಸ್ವಾಲ್.
5ನೇ ಎಸೆತದಲ್ಲಿ ಸ್ಲಿಪ್ ಫೀಲ್ಡರ್ಗೆ ಕ್ಯಾಚ್ ನೀಡಿ ಹೊರ ನಡೆದ ಯಶಸ್ವಿ ಜೈಸ್ವಾಲ್ (19).
ಕ್ರೀಸ್ನಲ್ಲಿ ಜೋಸ್ ಬಟ್ಲರ್ ಹಾಗೂ ಸಂಜು ಸ್ಯಾಮ್ಸನ್ ಬ್ಯಾಟಿಂಗ್.
ಕುಲ್ದೀಪ್ ಸೇನ್ ಎಸೆದ 20ನೇ ಓವರ್ನ 5ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರಿಂಕು ಸಿಂಗ್.
20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 223 ರನ್ ಕಲೆಹಾಕಿದ ಕೊಲ್ಕತ್ತಾ ನೈಟ್ ರೈಡರ್ಸ್.
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 224 ರನ್ಗಳ ಗುರಿ ನೀಡಿದ ಕೆಕೆಆರ್.
ಅವೇಶ್ ಖಾನ್ ಎಸೆದ 19ನೇ ಓವರ್ನ 2ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರಿಂಕು ಸಿಂಗ್.
19ನೇ ಓವರ್ನಲ್ಲಿ 16 ರನ್ ಕಲೆಹಾಕಿದ ರಿಂಕು ಸಿಂಗ್ – ವೆಂಕಟೇಶ್ ಅಯ್ಯರ್.
ಕ್ರೀಸ್ನಲ್ಲಿ ವೆಂಕಟೇಶ್ ಅಯ್ಯರ್ ಹಾಗೂ ರಿಂಕು ಸಿಂಗ್ ಬ್ಯಾಟಿಂಗ್.
ಟ್ರೆಂಟ್ ಬೌಲ್ಟ್ ಎಸೆದ 18ನೇ ಓವರ್ನ 3ನೇ ಎಸೆತದಲ್ಲಿ ಸುನಿಲ್ ನರೈನ್ ಕ್ಲೀನ್ ಬೌಲ್ಡ್.
56 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಮತ್ತು 13 ಫೋರ್ಗಳೊಂದಿಗೆ 109 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ನರೈನ್.
ಕ್ರೀಸ್ನಲ್ಲಿ ವೆಂಕಟೇಶ್ ಅಯ್ಯರ್ ಹಾಗೂ ರಿಂಕು ಸಿಂಗ್ ಬ್ಯಾಟಿಂಗ್.
ಅವೇಶ್ ಖಾನ್ ಎಸೆದ 17ನೇ ಓವರ್ನ ಮೊದಲ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಕ್ಯಾಚ್ ನೀಡಿದ ರಸೆಲ್.
10 ಎಸೆತಗಳಲ್ಲಿ 13 ರನ್ ಬಾರಿಸಿ ಔಟಾದ ಆ್ಯಂಡ್ರೆ ರಸೆಲ್.
ಕ್ರೀಸ್ನಲ್ಲಿ ಸುನಿಲ್ ನರೈನ್ ಹಾಗೂ ರಿಂಕು ಸಿಂಗ್ ಬ್ಯಾಟಿಂಗ್.
ಯುಜ್ವೇಂದ್ರ ಚಹಲ್ ಎಸೆದ 16ನೇ ಓವರ್ನಲ್ಲಿ 23 ರನ್ ಚಚ್ಚಿದ ಸುನಿಲ್ ನರೈನ್.
2 ಸಿಕ್ಸ್, 2 ಫೋರ್ಗಳೊಂದಿಗೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ನರೈನ್.
ಈ ಸಿಡಿಲಬ್ಬರದೊಂದಿಗೆ ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದ ಸುನಿಲ್ ನರೈನ್.
15ನೇ ಓವರ್ನ ಕೊನೆಯ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ರಸೆಲ್.
ಕುಲ್ದೀಪ್ ಸೇನ್ ಎಸೆದ 15ನೇ ಓವರ್ನಲ್ಲಿ 15 ರನ್ ಕಲೆಹಾಕಿದ ರಸೆಲ್-ನರೈನ್.
15 ಓವರ್ಗಳ ಮುಕ್ತಾಯದ ವೇಳೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೊತ್ತ 161 ರನ್ಗಳು.
ಕೊನೆಯ 5 ಓವರ್ಗಳಲ್ಲಿ ಬೃಹತ್ ಮೊತ್ತ ಪೇರಿಸುವ ವಿಶ್ವಾಸದಲ್ಲಿ ಕೆಕೆಆರ್.
ಕ್ರೀಸ್ನಲ್ಲಿ ಸುನಿಲ್ ನರೈನ್ ಹಾಗೂ ಆ್ಯಂಡ್ರೆ ರಸೆಲ್ ಬ್ಯಾಟಿಂಗ್.
ಯುಜ್ವೇಂದ್ರ ಚಹಲ್ ಎಸೆದ 13ನೇ ಓವರ್ನ 4ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶ್ರೇಯಸ್ ಅಯ್ಯರ್.
5ನೇ ಎಸೆತದಲ್ಲಿ ಶ್ರೇಯಸ್ ಅಯ್ಯರ್ (11) ಅನ್ನು ಎಲ್ಬಿಡಬ್ಲ್ಯೂ ಮಾಡಿದ ಯುಜ್ವೇಂದ್ರ ಚಹಲ್.
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮೂರನೇ ಯಶಸ್ಸು.
ರವಿಚಂದ್ರನ್ ಅಶ್ವಿನ್ ಎಸೆದ 12ನೇ ಓವರ್ನ 2ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಸುನಿಲ್ ನರೈನ್.
3ನೇ ಎಸೆತದಲ್ಲಿ ನೇರವಾಗಿ ಫೋರ್ ಬಾರಿಸಿದ ನರೈನ್.
ಕೊನೆಯ ಎಸೆತದಲ್ಲಿ ಡೀಪ್ ಕವರ್ನತ್ತ ಆಕರ್ಷಕ ಫೋರ್.
ಅಶ್ವಿನ್ ಓವರ್ನಲ್ಲಿ 15 ರನ್ ಕಲೆಹಾಕಿದ ಸುನಿಲ್ ನರೈನ್.
ಕುಲ್ದೀಪ್ ಸೇನ್ ಎಸೆದ 11ನೇ ಓವರ್ನ 4ನೇ ಎಸೆತದಲ್ಲಿ ಥರ್ಡ್ ಮ್ಯಾನ್ ಬೌಂಡರಿಯತ್ತ ಭರ್ಜರಿ ಶಾಟ್ ಬಾರಿಸಿದ ಅಂಗ್ಕ್ರಿಶ್.
ಚೆಂಡು ನೇರವಾಗಿ ಫೀಲ್ಡರ್ ರವಿಚಂದ್ರನ್ ಅಶ್ವಿನ್ ಕೈಗೆ ಕ್ಯಾಚ್… ಅಂಗ್ಕ್ರಿಶ್ ರಘುವಂಶಿ ಔಟ್.
18 ಎಸೆತಗಳಲ್ಲಿ 30 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅಂಗ್ಕ್ರಿಶ್ ರಘುವಂಶಿ.
ಕ್ರೀಸ್ನಲ್ಲಿ ಸುನಿಲ್ ನರೈನ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
ಅಶ್ವಿನ್ ಎಸೆದ 10ನೇ ಓವರ್ನ 5ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಸುನಿಲ್ ನರೈನ್.
ಈ ಸಿಕ್ಸ್ನೊಂದಿಗೆ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ನರೈನ್.
10 ಓವರ್ಗಳಲ್ಲಿ ಶತಕ ಪೂರೈಸಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ.
ಕ್ರೀಸ್ನಲ್ಲಿ ಸುನಿಲ್ ನರೈನ್ (51) ಹಾಗೂ ಅಂಗ್ಕ್ರಿಶ್ ರಘುವಂಶಿ (30) ಬ್ಯಾಟಿಂಗ್.
ಯುಜ್ವೇಂದ್ರ ಚಹಲ್ ಎಸೆದ 9ನೇ ಓವರ್ನ ಮೊದಲ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಅಂಗ್ಕ್ರಿಶ್.
ಕೊನೆಯ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸುನಿಲ್ ನರೈನ್.
ಕ್ರೀಸ್ನಲ್ಲಿ ಸುನಿಲ್ ನರೈನ್ ಹಾಗೂ ಅಂಗ್ಕ್ರಿಶ್ ರಘುವಂಶಿ ಬ್ಯಾಟಿಂಗ್.
ರವಿಚಂದ್ರನ್ ಅಶ್ವಿನ್ ಎಸೆದ 8ನೇ ಓವರ್ನ 4ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಫೋರ್ ಬಾರಿಸಿದ ಸುನಿಲ್ ನರೈನ್.
5ನೇ ಎಸೆತದಲ್ಲಿ ನರೈನ್ ಬ್ಯಾಟ್ನಿಂದ ಆಫ್ ಸೈಡ್ನತ್ತ ಮತ್ತೊಂದು ಬೌಂಡರಿ.
8 ಓವರ್ಗಳಲ್ಲಿ 74 ರನ್ ಕಲೆಹಾಕಿದ ಕೆಕೆಆರ್.
ಕ್ರೀಸ್ನಲ್ಲಿ ಸುನಿಲ್ ನರೈನ್ ಹಾಗೂ ಅಂಗ್ಕ್ರಿಶ್ ರಘುವಂಶಿ ಬ್ಯಾಟಿಂಗ್.
ಕುಲ್ದೀಪ್ ಸೇನ್ ಎಸೆದ 6ನೇ ಓವರ್ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸುನಿಲ್ ನರೈನ್.
6ನೇ ಎಸೆತದಲ್ಲಿ ನರೈನ್ ಬ್ಯಾಟ್ನಿಂದ ಲಾಂಗ್ ಆನ್ನತ್ತ ಫೋರ್.
ಪವರ್ಪ್ಲೇನಲ್ಲಿ 56 ರನ್ ಕಲೆಹಾಕಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ.
ಕ್ರೀಸ್ನಲ್ಲಿ ಸುನಿಲ್ ನರೈನ್ ಹಾಗೂ ಅಂಗ್ಕ್ರಿಶ್ ರಘುವಂಶಿ ಬ್ಯಾಟಿಂಗ್.
ಟ್ರೆಂಟ್ ಬೌಲ್ಟ್ ಎಸೆದ 5ನೇ ಓವರ್ನ ಮೊದಲ ಎಸೆತದಲ್ಲೇ ಆಕರ್ಷಕ ಬೌಂಡರಿ ಬಾರಿಸಿದ ಅಂಗ್ಕ್ರಿಶ್ ರಘುವಂಶಿ.
5ನೇ ಮತ್ತು 6ನೇ ಎಸೆತಗಳಲ್ಲಿ ರಘುವಂಶಿ ಬ್ಯಾಟ್ನಿಂದ ಬ್ಯಾಕ್ವರ್ಡ್ ಪಾಯಿಂಟ್ನತ್ತ ಬ್ಯಾಕ್ ಟು ಬ್ಯಾಕ್ ಬೌಂಡರಿ.
ಅವೇಶ್ ಖಾನ್ ಎಸೆದ 4ನೇ ಓವರ್ನ 3ನೇ ಎಸೆತದಲ್ಲಿ ನೇರವಾಗಿ ಬೌಲರ್ಗೆ ಕ್ಯಾಚ್ ನೀಡಿದ ಫಿಲ್ ಸಾಲ್ಟ್.
ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಅವೇಶ್ ಖಾನ್. 13 ಎಸೆತಗಳಲ್ಲಿ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸಾಲ್ಟ್.
ಕ್ರೀಸ್ನಲ್ಲಿ ಸುನಿಲ್ ನರೈನ್ ಹಾಗೂ ಅಂಗ್ಕ್ರಿಶ್ ರಘುವಂಶಿ ಬ್ಯಾಟಿಂಗ್.
ಟ್ರೆಂಟ್ ಬೌಲ್ಟ್ ಎಸೆದ 3ನೇ ಓವರ್ನ 5ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಫಿಲ್ ಸಾಲ್ಟ್.
3 ಓವರ್ಗಳಲ್ಲಿ 20 ರನ್ ಕಲೆಹಾಕಿದ ಕೊಲ್ಕತ್ತಾ ನೈಟ್ ರೈಡರ್ಸ್ ಆರಂಭಿಕರು.
ಕ್ರೀಸ್ನಲ್ಲಿ ಫಿಲ್ ಸಾಲ್ಟ್ ಹಾಗೂ ಸುನಿಲ್ ನರೈನ್ ಬ್ಯಾಟಿಂಗ್.
ಅವೇಶ್ ಖಾನ್ ಎಸೆದ 2ನೇ ಓವರ್ನ 4ನೇ ಎಸೆತವು ವಿಕೆಟ್ ಕೀಪರ್ನ ವಂಚಿಸಿ ಬೌಂಡರಿ ಲೈನ್ಗೆ… 4 ಬೈಸ್ ರನ್.
5ನೇ ಎಸೆತದಲ್ಲಿ ಓವರ್ ಮಿಡ್ ಆನ್ನತ್ತ ಫೋರ್ ಬಾರಿಸಿದ ಸುನಿಲ್ ನರೈನ್.
ಕ್ರೀಸ್ನಲ್ಲಿ ಫಿಲ್ ಸಾಲ್ಟ್ ಹಾಗೂ ಸುನಿಲ್ ನರೈನ್ ಬ್ಯಾಟಿಂಗ್.
ಟ್ರೆಂಟ್ ಬೌಲ್ಟ್ ಎಸೆದ ಮೊದಲ ಓವರ್ನ 2ನೇ ಎಸೆತದಲ್ಲಿ ಸ್ಕ್ವೇರ್ನಲ್ಲಿದ್ದ ರಿಯಾನ್ ಪರಾಗ್ಗೆ ಸುಲಭ ಕ್ಯಾಚ್ ನೀಡಿದ ಫಿಲ್ ಸಾಲ್ಟ್.
ಅತ್ಯಂತ ಸುಲಭ ಕ್ಯಾಚ್ ಕೈಚೆಲ್ಲಿದ ರಿಯಾನ್ ಪರಾಗ್… ಫಿಲ್ ಸಾಲ್ಟ್ಗೆ ಮೊದಲ ಓವರ್ನಲ್ಲೇ ಜೀವದಾನ.
ಮೊದಲ ಓವರ್ನಲ್ಲಿ ಕೇವಲ 2 ರನ್ ನೀಡಿದ ಟ್ರೆಂಟ್ ಬೌಲ್ಟ್.
ಕ್ರೀಸ್ನಲ್ಲಿ ಫಿಲ್ ಸಾಲ್ಟ್ ಹಾಗೂ ಸುನಿಲ್ ನರೈನ್ ಬ್ಯಾಟಿಂಗ್.
ಕೆಕೆಆರ್ ಪರ ಆರಂಭಿಕರು: ಸುನಿಲ್ ನರೈನ್, ಫಿಲ್ ಸಾಲ್ಟ್.
ರಾಜಸ್ಥಾನ್ ರಾಯಲ್ಸ್ ಪರ ಮೊದಲ ಓವರ್: ಟ್ರೆಂಟ್ ಬೌಲ್ಟ್.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿರುವ ರಾಜಸ್ಥಾನ್ ರಾಯಲ್ಸ್.
ಕೊಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ XI): ಫಿಲಿಪ್ ಸಾಲ್ಟ್, ಸುನಿಲ್ ನರೈನ್, ಅಂಗ್ಕ್ರಿಶ್ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣ್ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣ.
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಕುಲ್ದೀಪ್ ಸೇನ್, ಯುಜ್ವೇಂದ್ರ ಚಹಲ್.
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 31ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಹಾಗೂ ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಮುಖಾಮುಖಿಯಾಗಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
ಟಾಸ್ ಪ್ರಕ್ರಿಯೆ: 7 ಗಂಟೆಗೆ
ಪಂದ್ಯ ಶುರು: 7. 30 ರಿಂದ
ಸ್ಥಳ: ಈಡನ್ ಗಾರ್ಡನ್ಸ್ ಮೈದಾನ, ಕೊಲ್ಕತ್ತಾ.
The Royals and the Knight Riders battle for the top spot ⚔
Watch them LIVE in action only with #IPLonJioCinema#KKRvRR #TATAIPL pic.twitter.com/JMUhWWcXaI
— JioCinema (@JioCinema) April 16, 2024
ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಇದುವರೆಗೆ 28 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ವೇಳೆ ಕೆಕೆಆರ್ ತಂಡ 14 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಆರ್ಆರ್ ತಂಡ 13 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಈ ಪಂದ್ಯವು ಫಲಿತಾಂಶ ರಹಿತವಾಗಿತ್ತು. ಅಂದರೆ ಉಭಯ ತಂಡಗಳ ಮುಖಾಮುಖಿಯಲ್ಲಿ ಎರಡೂ ತಂಡಗಳು ಸಮಬಲ ಹೊಂದಿದೆ ಎನ್ನಬಹುದು. ಹೀಗಾಗಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ರಣರೋಚಕ ಹೋರಾಟವನ್ನು ಎದುರು ನೋಡಬಹುದಾಗಿದೆ.
Published On - 6:08 pm, Tue, 16 April 24