KL Rahul: ಭಾರತ ಕ್ರಿಕೆಟ್ ತಂಡದ ತಾರೆಯರ ಅದ್ಭುತ ಫೊಟೊಗಳ ಹಿಂದಿನ ಅಸಲಿಯತ್ತನ್ನು ತೆರೆದಿಟ್ಟ ಕೆ.ಎಲ್ ರಾಹುಲ್!

Virat Kohli and Anushka Sharma: ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್​ಮನ್ ಕೆ.ಎಲ್.ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ನಾಯಕ ವಿರಾಟ್ ಕೊಹ್ಲಿಯನ್ನೂ ಸೇರಿದಂತೆ ಹಲವರೊಂದಿಗೆ ಫೊಟೊವೊಂದಕ್ಕೆ ಪೋಸ್ ಕೊಟ್ಟಿದ್ದು, ಆ ಚಿತ್ರದ ಸೆರೆ ಹಿಡಿಯುವ ಸಂದರ್ಭವನ್ನೂ ಹಂಚಿಕೊಂಡೊದ್ದಾರೆ. ಅದು ಎಲ್ಲರ ಗಮನ ಸೆಳೆದಿದೆ.

KL Rahul: ಭಾರತ ಕ್ರಿಕೆಟ್ ತಂಡದ ತಾರೆಯರ ಅದ್ಭುತ ಫೊಟೊಗಳ ಹಿಂದಿನ ಅಸಲಿಯತ್ತನ್ನು ತೆರೆದಿಟ್ಟ ಕೆ.ಎಲ್ ರಾಹುಲ್!
ಕೆ.ಎಲ್.ರಾಹುಲ್ ಹಂಚಿಕೊಂಡ ಚಿತ್ರ
Edited By:

Updated on: Jul 30, 2021 | 10:14 AM

ಭಾರತ ಕ್ರಿಕೆಟ್ ತಂಡವು ಪ್ರಸ್ತುತ ಲಂಡನ್​ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಕಠಿಣ ಅಭ್ಯಾಸದಲ್ಲಿ ತೊಡಗಿದೆ. ಆದರೆ ಇದಕ್ಕೂ ಮುನ್ನ ಅವರಿಗೆ ಟೆಸ್ಟ್ ಕ್ರಿಕೆಟ್ ಚಾಂಪಿಯನ್​ಶಿಪ್ ಸರಣಿಯ ನಂತರ ಭರ್ಜರಿ ಬಿಡುವು ಸಿಕ್ಕಿತ್ತು. ಭಾರತದಲ್ಲಿರುವ ಕಠಿಣ ಕೊರೊನಾ ನಿಯಮಾವಳಿಗಳು ಮತ್ತು ಬಯೊಬಬಲ್ ಕಾರಣದಿಂದ ಬಳಲಿದ್ದ ಆಟಗಾರರಿಗೆ ಲಂಡನ್​ನಲ್ಲಿ ವಿಶ್ರಮಿಸಲು, ಸುತ್ತಾಡಿ ಪ್ರಫುಲ್ಲವಾಗಲು ಸದವಕಾಶ ಲಭ್ಯವಾಗಿತ್ತು. ಅದನ್ನು ಅದ್ಭುತವಾಗಿ ಬಳಸಿಕೊಂಡಿರುವ ಆಟಗಾರರು ತಮ್ಮ ಜೊತೆಗಾರರೊಂದಿಗೆ ಆಗಾಗ ಚಿತ್ರಗಳನ್ನು ಹಂಚಿಕೊಂಡು ಸುದ್ದಿಯಾಗುತ್ತಿದ್ದರು. ಈಗ ಕರ್ನಾಟಕ ಮೂಲದ ಕೆ.ಎಲ್ ರಾಹುಲ್(K.L.Rahul) ಎರಡು ಚಿತ್ರಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ನೈಜ ಫೊಟೊ ಮತ್ತು ಅದನ್ನು ಸುಂದರವಾಗಿ ಕಾಣಿಸುವಲ್ಲಿ ಪರಿಶ್ರಮ ವಹಿಸುವ ತಮ್ಮ ಜೊತೆಗಾರರ ಚಿತ್ರವನ್ನು ಹಂಚಿಕೊಂಡಿದ್ದಾರೆ. 

ಚಿತ್ರದಲ್ಲಿ ಕಾಣಿಸುವಂತೆ ಮೊದಲ ಚಿತ್ರದಲ್ಲಿ ಕೆ.ಎಲ್.ರಾಹುಲ್ ಅವರೊಂದಿಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ(Virat Kohli), ಬ್ಯಾಟ್ಸ್​ಮನ್​ಗಳಾದ ಮಯಾಂಕ್ ಅಗರ್ವಾಲ್(Mayank Agarwal) ಹಾಗೂ ಬೌಲರ್​ಗಳಾದ ಇಶಾಂತ್ ಶರ್ಮಾ(Ishanth Sharma), ಉಮೇಶ್ ಯಾದವ್(Umesh Yadav) ಫೊಟೊವೊಂದಕ್ಕೆ ವೃತ್ತಿಪರ ರೂಪದರ್ಶಿಗಳಂತೆ ಪೋಸ್ ನೀಡಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ರಾಹುಲ್, ಆ ಫೊಟೊದ ಹಿಂದಿನ ಅಸಲಿಯತ್ತನ್ನೂ ತೆರೆದಿಟ್ಟಿದ್ದಾರೆ.

ಎರಡನೇ ಚಿತ್ರವನ್ನು ಕ್ರಿಕೆಟ್ ತಾರೆಯರು ಪೋಸ್ ಕೊಡುತ್ತಿದ್ದರೆ ಅವರ ಜೊತೆಗಾರರು ಫೊಟೊ ತೆಗೆಯುವಾಗ ತೋರಿಸುತ್ತಿರುವ ಕಾಳಜಿ ಕಾಣುವಂತೆ ಸೆರೆಹಿಡಿಯಲಾಗಿದೆ. ಕೆ.ಎಲ್.ರಾಹುಲ್ ಜೊತೆಗಾತಿ ಆಥಿಯಾ ಶೆಟ್ಟಿ(Athiya Shetty) ಕ್ಯಾಮೆರಾವನ್ನು ಹಿಡಿದುಕೊಂಡು ಚಿತ್ರವನ್ನು ಸೆರೆಹಿಡಿಯುತ್ತಿದ್ದು, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ(Anushka Sharma), ಉಮೇಶ್ ಯಾದವ್ ಪತ್ನಿ ತಾನ್ಯಾ ವಾಧ್ವಾ ಕುತೂಹಲದಿಂದ ಆಥಿಯಾ ಸೆರೆಹಿಡಿಯುತ್ತಿರುವ ಚಿತ್ರವನ್ನು ನೋಡುತ್ತಿದ್ದಾರೆ.

ಕೆ.ಎಲ್.ರಾಹುಲ್ ಟ್ವಿಟರ್​ನಲ್ಲಿ ಹಂಚಿಕೊಂಡ ಪೋಸ್ಟ್:

ಹಾಗಾದರೆ ಎರಡನೇ ಚಿತ್ರವನ್ನು ಯಾರು ತೆಗೆದಿರಬಹುದು ಎಂಬ ಕುತೂಹಲವಿದ್ದರೆ ಅದಕ್ಕೂ ರಾಹುಲ್ ಅವರೇ ಸುಳಿವೊಂದನ್ನು ನೀಡಿದ್ದಾರೆ. ಕೆ.ಎಲ್.ರಾಹುಲ್ ಈ ಪೋಸ್ಟ್​ ಅನ್ನು ಮತ್ತೀರ್ವರಿಗೂ ಟ್ಯಾಗ್ ಮಾಡಿದ್ದು, ಮಯಾಂಕ್ ಅಗರ್ವಾಲ್ ಪತ್ನಿ ಆಶಿತಾ ಸೂದ್ ಹಾಗೂ ಇಶಾಂತ್ ಶರ್ಮಾ ಪತ್ನಿ ಪ್ರತಿಮಾ ಶರ್ಮಾ ಈ ಚಿತ್ರದ ಹಿಂದಿದ್ದಾರೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಅಂದರೆ, ಅವರೀರ್ವರಲ್ಲೇ ಯಾರೋ ಈ ಅಪರೂಪದ ಚಿತ್ರವನ್ನು ಸೆರೆಹಿಡಿದಿದ್ದಾರೆ ಎಂಬುದನ್ನು ಊಹಿಸಬಹುದು.

ಭಾರತ ತಂಡ ಪ್ರಸ್ತುತ ಬಯೋಬಬಲ್​ನಲ್ಲಿ ಇದ್ದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿದೆ. ಆಗಸ್ಟ್ ನಾಲ್ಕರಿಂದ ಪ್ರಾರಂಭವಾಗಲಿರುವ ಟೆಸ್ಟ್ ಸರಣಿ ಮುಂದಿನ ಟೆಸ್ಟ್ ಚಾಂಪಿಯನ್​ಶಿಪ್​ನ ಮೊದಲ ಸರಣಿಯಾಗಲಿದೆ. ಆದ್ದರಿಂದ ಉಭಯ ತಂಡಗಳ ಪಾಲಿಗೆ ಈ ಸರಣಿ ಬಹಳ ಮಹತ್ವದ್ದಾಗಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮಡಿಲಿಗೆ ಮತ್ತೊಂದು ಬಿಗ್​ ಆಫರ್​; ಸ್ಟಾರ್​ ನಟನ ಚಿತ್ರಕ್ಕೆ ಇವರೇ ಹೀರೋಯಿನ್​?

ಇದನ್ನೂ ಓದಿ: Tokyo Olympics: ಆರ್ಚರಿಯಲ್ಲಿ ಕೆ.ಪೆರೊವಾ ವಿರುದ್ಧ ಗೆಲುವು; ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟ ಭಾರತದ ದೀಪಿಕಾ ಕುಮಾರಿ

(KL Rahul shares the BTS of Indian Star Cricketers Photo including Virat Kohli)